For Quick Alerts
ALLOW NOTIFICATIONS  
For Daily Alerts

ಹೂದಾನಿಯಲ್ಲಿ ಹೂಗಳು ಬೇಗ ಬಾಡದಿರಲು ಈ ಟಿಪ್ಸ್‌ ಸಹಕಾರಿ

|

ಹೂವು ಎಂದರೆ ಎಂಥವರ ಮನಸ್ಸು ಸಹ ಅರಳುತ್ತದೆ. ಅದರ ಸುವಾಸನೆ, ಬಣ್ಣಗಳು, ಸೊಬಗು ಸುತ್ತಲೂ ಹರಡಿರುವ ನಕಾರಾತ್ಮಕತೆಯನ್ನು ದೂರ ಮಾಡಿ ಸಕಾರಾತ್ಮಕತೆ ಹರಡುತ್ತದೆ. ಮನೆ ಅಥವಾ ನಿಮ್ಮ ಕಛೇರಿಯಲ್ಲಿ ಹೂವುಗಳನ್ನು ಹೊಂದಿದ್ದರೆ ಅದೂ ವಾತಾವರಣಕ್ಕೆ ಉಲ್ಲಾಸಕರ ಸೌಂದರ್ಯವನ್ನು ಸೇರಿಸುತ್ತದೆ.

ಆದ್ದರಿಂದಲೇ ಹೂ ಪ್ರಿಯರು ಎಲ್ಲರೂ ಮನೆ, ಕಚೇರಿಗಳಲ್ಲಿ ಹೂದಾನಿಯನ್ನು ತಪ್ಪದೆ ಇಡುತ್ತಾರೆ. ಆದರೆ ತಾಜಾ ಹೂಗಳ ಜೀವಿತಾವಧಿ ಹೆಚ್ಚು ಇರುವುದಿಲ್ಲ. ಬಹಳ ಬೇಗ ಬಾಡುತ್ತದೆ. ಒಂದು ದಿನ ಅಥವಾ ಎರಡು ಮತ್ತು ನಂತರ ನೀವು ಹೊಸ ತಾಜಾ ಹೂವುಗಳನ್ನು ಬದಲಾಯಿಸಬೇಕು.

ಆದರೆ ನಿಮ್ಮ ಹೂವುಗಳು ಸಾಮಾನ್ಯವಾಗಿ ಇರುವ ಅವಧಿಗಿಂತ ಹೆಚ್ಚು ಕಾಲ ಉಳಿಯುವಂತೆ ಮಾಡಲು ನಿಮಗೆ ಈ ಅತ್ಯುತ್ತಮ ಸಲಹೆಗಳನ್ನು ನಾವು ನೀಡಲಿದ್ದೇವೆ. ಹೆಚ್ಚೇನು ಖರ್ಚಿಲ್ಲದೆ ಹೂಗಳನ್ನು ಹೆಚ್ಚೂ ಕಾಲ ತಾಜಾ ಅಗಿಡಲು ಈ ಸಲಹೆಗಳನ್ನು ಅನುಸರಿಸಿ ಮತ್ತು ನಿಮ್ಮ ಸುಂದರವಾದ ಹೂವಿನ ಹೂದಾನಿಯು ಹೆಚ್ಚು ದಿನಗಳವರೆಗೆ ತನ್ನ ಸೊಬಗು, ಸೌಂದರ್ಯ ಸೂಸುವಂತೆ ನೋಡಿ ಕಣ್ತುಂಬಿಕೊಳ್ಳಬಹುದು:

1. ಸೋಡಾ

1. ಸೋಡಾ

ಅಡುಗೆ ಮನೆಯ ಮನೆಮದ್ದು ಸೋಡಾ ಖಾದ್ಯದ ರುಚಿ ಹೆಚ್ಚಿಸುವುದಲ್ಲದೆ, ಸೌಂದರ್ಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತ ಆದರೆ ನಿಮ್ಮ ಹೂವಿನ ಹೂದಾನಿಗೆ 1/4 ಕಪ್ ಸೋಡಾವನ್ನು ಸೇರಿಸುವುದರಿಂದ ನಿಮ್ಮ ಹೂವುಗಳು ಹೆಚ್ಚು ಕಾಲ ಅರಳುತ್ತವೆ ಎಂದು ನಿಮಗೆ ತಿಳಿದಿದೆಯೇ?. ಅಡುಗೆ ಸೋಡಾ ಬದಲಾಗಿ ನೀವು ಸ್ಪ್ರೈಟ್ ಅಥವಾ 7-ಅಪ್ ನಂತಹ ಸೋಡಾವನ್ನು ಸಹ ಸೇರಿಸಬಹುದು.

2. ಹೇರ್ ಸ್ಪ್ರೇ

2. ಹೇರ್ ಸ್ಪ್ರೇ

ಹೇರ್ ಸ್ಪ್ರೇಗಳು ನಿಮ್ಮ ಕೇಶವಿನ್ಯಾಸವನ್ನು ಸರಿಪಡಿಸಲು ಸಹಾಯ ಮಾಡುವುದಲ್ಲದೆ, ನಿಮ್ಮ ಸುಂದರವಾದ ಹೂವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸಹ ಬಳಸಬಹುದು. ಪುಷ್ಪಗುಚ್ಛದ ಮೇಲೆ, ವಿಶೇಷವಾಗಿ ದಳಗಳು ಮತ್ತು ಎಲೆಗಳ ಮೇಲೆ ಸ್ವಲ್ಪ ಪ್ರಮಾಣದ ಹೇರ್ ಸ್ಪ್ರೇ ಅನ್ನು ಸಿಂಪಡಿಸಿದರೆ ಅದು ದೀರ್ಘಕಾಲ ಹೂಗಳು ತಾಜಾ ಆಗಿಯೇ ಇಡುತ್ತದೆ.

3. ಆಪಲ್ ಸೈಡರ್ ವಿನೆಗರ್

3. ಆಪಲ್ ಸೈಡರ್ ವಿನೆಗರ್

ಹೂದಾನಿಯಲ್ಲಿರುವ ನೆಚ್ಚಿನ ಗುಲಾಬಿಗಳು, ಲಿಲ್ಲಿಗಳು ಅಥವಾ ಆರ್ಕಿಡ್‌ಗಳಾಗಿರಲಿ ಹೆಚ್ಚು ದಿನ ತಾಜಾ ಆಗಿ ಕಾಣಲು ಹೂದಾನಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಮತ್ತು 1 ಚಮಚ ನೀರನ್ನು ಸೇರಿಸಿ. ಇದರಿಂದ ನೀವು ಅವುಗಳನ್ನು ಹೆಚ್ಚು ಕಾಲ ಅರಳುವಂತೆ ಮಾಡಬಹುದು, ಅಲ್ಲದೆ, ಪ್ರತಿ ಕೆಲವು ದಿನಗಳಿಗೊಮ್ಮೆ ನೀವು ವಿನೆಗರ್ ಮತ್ತು ಸಕ್ಕರೆಯೊಂದಿಗೆ ನೀರನ್ನು ಬದಲಾಯಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

4. ವೋಡ್ಕಾ

4. ವೋಡ್ಕಾ

ಹೂವುಗಳಿಗೂ ಸ್ವಲ್ಪ ವೋಡ್ಕಾ ಒಳ್ಳೆಯದೇ. ನಿಮ್ಮ ಹೂವುಗಳನ್ನು ಹೆಚ್ಚುವರಿ ದಿನಗಳವರೆಗೆ ಜೀವಂತವಾಗಿಡಲು ಇದು ಒಂದು ಉತ್ತಮ ಟ್ರಿಕ್ ಆಗಿದೆ. ವೋಡ್ಕಾ ನೀರಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಹೂವುಗಳಿಗೆ ಸೂಕ್ತವಾದ ಪೋಷಣೆಯನ್ನು ಒದಗಿಸುತ್ತದೆ. ಆದರೆ, ಪ್ರತಿ ದಿನವೂ ನೀರನ್ನು ಬದಲಾಯಿಸುವುದನ್ನು ಖಚಿತಪಡಿಸಿಕೊಳ್ಳಿ, ಅದಕ್ಕೆ ಸಕ್ಕರೆ ಮತ್ತು ವೋಡ್ಕಾವನ್ನು ಸೇರಿಸಿ.

5. ಆಸ್ಪಿರಿನ್

5. ಆಸ್ಪಿರಿನ್

ತಲೆನೋವಿನಿಂದ ದೂರವಿರಿಸಲು ವ್ಯಾಪಕವಾಗಿ ಬಳಸಲಾಗುವ ಔಷಧಿ, ಆಸ್ಪಿರಿನ್ ಅನ್ನು ಪುಡಿಮಾಡಿ ನಿಮ್ಮ ಹೂದಾನಿಗಳಿಗೆ ಸೇರಿಸಿದಾಗ ಹೂವುಗಳು ಇನ್ನೂ ಕೆಲವು ದಿನಗಳವರೆಗೆ ಜೀವಂತವಾಗಿರಲು ಅನುವು ಮಾಡಿಕೊಡುತ್ತದೆ.

English summary

Ways To Keep Flowers Fresh For Long in Kannada

Here we are discussing about Ways To Keep Flowers Fresh For Long in Kannad.Read more.
X
Desktop Bottom Promotion