For Quick Alerts
ALLOW NOTIFICATIONS  
For Daily Alerts

ಕಿಚನ್ ಟಿಪ್ಸ್‌: ಈ ಸಿಂಪಲ್ ಟ್ರಿಕ್ಸ್ ಬಳಸಿದರೆ ಕೈಯಲ್ಲಿ ಈರುಳ್ಳಿ-ಬೆಳ್ಳುಳ್ಳಿ ವಾಸನೆ ಇರಲ್ಲ

|

ಯಾವುದೇ ಖಾರದ ರುಚಿಕರ ಖಾದ್ಯಗಳಿಗೆ ಈರುಳ್ಳಿ ಅಥವಾ ಬೆಳ್ಳುಳ್ಳಿ ಬೇಕೆ ಬೇಕು. ಇದಿಲ್ಲದೇ ಅದೆಷ್ಟೋ ಅಡುಗೆಗಳು ರುಚಿಸುವುದೇ ಇಲ್ಲ. ಎಲ್ಲರ ಮನೆಯಲ್ಲೂ ನಿತ್ಯ ಕತ್ತರಿಸುವ ಸಾಮಾನ್ಯ ತರಕಾರಿಗಳಲ್ಲಿ ಈರುಳ್ಳಿ ಆಥವಾ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಆದರೆ ಈ ಇವುಗಳನ್ನು ಕತ್ತರಿಸಿದ ನಂತರ ದೀರ್ಘಕಾಲ ಉಳಿಯುವ ಇದರ ಗಾಢವಾದ ವಾಸನೆ ಕಿರಿಕಿರಿ ಎನಿಸದೇ ಇರದು.

Tips And Tricks

ನಿಮಗೆ ಗೊತ್ತೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಸಲ್ಫರ್ ಇರುವಿಕೆಯಿಂದಾಗಿ ಈ ವಾಸನೆ ಸಂಭವಿಸುತ್ತದೆ. ಆದರೆ ನಿಮಗೆ ಈ ವಾಸನೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸುಲಭ ಮನೆಮದ್ದುಗಳೇ ಸಾಕು. ಇವುಗಳಿಂದ ಸುಲಭವಾಗಿ ಈರುಳ್ಳಿ, ಬೆಳ್ಳುಳ್ಳಿ ವಾಸನೆಯನ್ನು ನಿವಾರಿಸಿಕೊಳ್ಳಿ:

ನಿಂಬೆ ರಸ

ನಿಂಬೆ ರಸ

ನಿಮ್ಮ ಕೈಗಳಿಂದ ಬೆಳ್ಳುಳ್ಳಿ ಮತ್ತು ಈರುಳ್ಳಿಯ ವಾಸನೆಯನ್ನು ಹೋಗಲಾಡಿಸಲು ಕೈಗಳಿಗೆ ಕೆಲವು ಹನಿ ನಿಂಬೆ ರಸವನ್ನು ಹಾಕಿ ಮತ್ತು ತಣ್ಣನೆಯ ನೀರಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ. ಇದು ವಾಸನೆಯನ್ನು ಸುಲಭವಾಗಿ ಮತ್ತು ಶೀಘ್ರದಲ್ಲೆ ತೊಡೆದುಹಾಕುತ್ತದೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ಹೋಗಲಾಡಿಸಲು ನೀವು ಆಪಲ್ ಸೈಡರ್ ವಿನೆಗರ್ ಅನ್ನು ಸಹ ಬಳಸಬಹುದು. ನೀವು ಆಪಲ್ ಸೈಡರ್ ವಿನೆಗರ್‌ನ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಕೈಗೆ ಅನ್ವಯಿಸಿ ಚೆನ್ನಾಗಿ ಉಜ್ಜಿಕೊಳ್ಳಿ. ವಾಸನೆಯನ್ನು ತೊಡೆದುಹಾಕಲು ನಂತರ ನಿಮ್ಮ ಕೈಗಳನ್ನು ನೀರಿನಿಂದ ತೊಳೆಯಿರಿ.

ಉಪ್ಪು ನೀರು

ಉಪ್ಪು ನೀರು

ನಿಮ್ಮ ಕೈಗಳಿಂದ ಬೆಳ್ಳುಳ್ಳಿ ಮತ್ತು ಈರುಳ್ಳಿಯ ವಾಸನೆಯನ್ನು ತೆಗೆದುಹಾಕಲು, ನಿಮ್ಮ ಕೈಗಳಿಗೆ ಹ್ಯಾಂಡ್ ವಾಶ್ ಜೊತೆಗೆ ಸ್ವಲ್ಪ ಉಪ್ಪನ್ನು ಒಟ್ಟಿಗೆ ಸೇರಿಸಿ ತೊಳೆದುಕೊಳ್ಳಿ. ಇದು ಸ್ಕ್ರಬ್‌ನಂತೆ ಕಾರ್ಯನಿರ್ವಹಿಸುತ್ತದೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ತೆಗೆದುಹಾಕುತ್ತದೆ.

ಸ್ಟೇನ್ಲೆಸ್ ಸ್ಟೀಲ್

ಸ್ಟೇನ್ಲೆಸ್ ಸ್ಟೀಲ್

ಈ ಸಲಹೆಯು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕತ್ತರಿಸಿದ ನಂತರ, ಯಾವುದೇ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಯನ್ನು ತೆಗೆದುಕೊಂಡು ತಣ್ಣೀರಿನಲ್ಲಿ ನಿಮ್ಮ ಕೈಗಳನ್ನು ಉಜ್ಜುವ ಮೂಲಕ ಅದರ ವಾಸನೆಯನ್ನು ತೆಗೆದುಹಾಕಬಹುದು. ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿರುವ ಸಲ್ಫರ್ ಯಾವುದೇ ಲೋಹದೊಂದಿಗೆ ಪ್ರತಿಕ್ರಿಯಿಸುತ್ತದೆ, ನಂತರ ಅದರ ವಾಸನೆ ಕಡಿಮೆಯಾಗುತ್ತದೆ.

English summary

Tips And Tricks to remove smell of garlic and onion from your hands in Kannada

Here we are discussing about Tips And Tricks to remove smell of garlic and onion from your hands in Kannada. Read more.
X
Desktop Bottom Promotion