For Quick Alerts
ALLOW NOTIFICATIONS  
For Daily Alerts

ದಿನ ನಿತ್ಯದ ಹಲವು ಕೆಲಸಗಳಿಗೆ ಆಯಸ್ಕಾಂತ ಎಷ್ಟು ಸಹಕಾರಿ ನಿಮಗೆ ಗೊತ್ತೆ?

|

ಮ್ಯಾಗ್ನೆಟ್ (ಆಯಸ್ಕಾಂತ) ಯಾರಿಗೆ ತಾನೇ ಗೊತ್ತಿಲ್ಲ. ತನ್ನ ಸುತ್ತಮುತ್ತ ಇರುವ ಆಯಸ್ಕಾಂತೀಯ ಆಕರ್ಷಣೆಗೆ ಒಳಗಾಗುವ ಎಲ್ಲವನ್ನು ತನ್ನತ್ತ ಕ್ಷಣಾರ್ಧದಲ್ಲೇ ಸೆಳೆಯುತ್ತದೆ. ಇಂತಹ ಮ್ಯಾಗ್ನೆಟ್ ಅನ್ನು ನಾವು ಕೇವಲ ಸೀಮಿತ ಕೆಲಸಗಳಿಗೆ ಮಾತ್ರ ಬಳಸುತ್ತಿತ್ತೇವೆ. ಹಲವರ ಮನೆಗಳಲ್ಲಿ ಮ್ಯಾಗ್ನೆಟ್ ಇಲ್ಲವೇ ಇಲ್ಲ ಎಂದರೂ ಅಚ್ಚರಿ ಪಡಬೇಕಿಲ್ಲ.

ನಿಮಗೆ ಗೊತ್ತೆ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಮ್ಯಾಗ್ನೆಟ್ 22 ಅಡಿ ಎತ್ತರ ಮತ್ತು 34 ಟನ್ ತೂಕವಿದೆ. ಈ ಮ್ಯಾಗ್ನೆಟ್ ಎಷ್ಟು ಶಕ್ತಿಶಾಲಿ ಎಂದರೆ ನಮ್ಮ ಭೂಮಿಗಿಂತ ಬರೋಬ್ಬರಿ 45 ಸಾವಿರ ಪಟ್ಟು ಶಕ್ತಿಸಾಮರ್ಥ್ಯವನ್ನು ಈ ಮ್ಯಾಗ್ನೆಟ್ ಹೊಂದಿದೆ.

Magnets

ಅದೆನೇ ಇರಲಿ, ಇಷ್ಟೆಲ್ಲಾ ಸಾಮರ್ಥ್ಯವಿರುವ ಮ್ಯಾಗ್ನೆಟ್ ನಮ್ಮ ದಿನ ನಿತ್ಯದ ಹಲವು ಕೆಲಸಗಳಿಗೆ ಎಷ್ಟು ಸಹಕಾರಿ ನಿಮಗೆ ಗೊತ್ತೆ. ಮನೆಯಲ್ಲಿ ಮ್ಯಾಗ್ನೆಟ್ ಇರುವುದರಿಂದ ಏನೆಲ್ಲಾ ಪ್ರಯೋಜನವಿದೆ, ಮ್ಯಾಗ್ನೆಟ್ ಅನ್ನು ಹೇಗೆಲ್ಲಾ ಬಳಸಬಹುದು ಕೆಲವು ಟಿಪ್ಸ್ ಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ.

ಉತ್ತರ ದಿಕ್ಕನ್ನು ಪತ್ತೆ ಮಾಡಲು

ಉತ್ತರ ದಿಕ್ಕನ್ನು ಪತ್ತೆ ಮಾಡಲು

ದಿಕ್ಕು ತೋಚದಂಥ ಸ್ಥಳದಲ್ಲಿ ನೀವಿದ್ದೀರಾ. ಹಾಗಿದ್ದರೆ ಮ್ಯಾಗ್ನೆಟ್ ಸಹಾಯದಿಂದ ನಿಮ್ಮ ದಿಕ್ಕನ್ನು ಅರಿಯಿರಿ. ಮ್ಯಾಗ್ನೆಟ್, ಒಂದು ಮರದ ತುಂಡು, ಒಂದು ಬಟ್ಟಲು ನೀರು, ನೇರವಾದ ಪಿನ್ ಇದ್ದರೆ ಸಾಕು ನಿಮಗೆ ಸುಲಭವಾಗಿ ದಿಕ್ಕು ತಿಳಿಯಬಹುದು.

ಪಿನ್ ಅನ್ನು ಮ್ಯಾಗ್ನೆಟ್ ಗೆ ಕನಿಷ್ಠ 50 ಬಾರಿ ಒಂದೇ ದಿಕ್ಕಿನಲ್ಲಿ ಉಜ್ಜಿ ನಂತರ ಮರದ ತುಂಡಿಗೆ ಪಿನ್ ಅನ್ನು ಚುಚ್ಚಿ. ಕೊನೆಯದಾಗಿ ಪಿನ್ ಅನ್ನು ನೀರಿನ ಬಟ್ಟಲಿನಲ್ಲಿ ಇಟ್ಟರೆ ಪಿನ್ ಹಲವು ಬಾರಿ ತಿರುಗಿ ಸೂಚಿಸುವ ಮಾರ್ಗವೇ ಉತ್ತರ ದಿಕ್ಕು.

ಗೋಡೆಯ ಒಳಗಿರುವ ಮೊಳೆ ಪತ್ತೆ ಮಾಡಲು

ಗೋಡೆಯ ಒಳಗಿರುವ ಮೊಳೆ ಪತ್ತೆ ಮಾಡಲು

ಮನೆಯ ಗೋಡೆಗೆ ಬಳಿದಿರುವ ಬಣ್ಣದ ನಡುವೆ ಗೋಡೆಯ ಒಳಗೆ ಇರುವ ಮೊಳೆಗಳನ್ನು ಪತ್ತೆ ಮಾಡುವುದು ಬಹಳ ತ್ರಾಸದ ಕೆಲಸ. ಹಲವು ಬಾರಿ ಮೊಳೆಗಳನ್ನು ಪತ್ತೆ ಮಾಡುವ ಎಲೆಕ್ಟ್ರಾನಿಕ್ ಉಪಕರಣ ಸಹ ವಿಫಲವಾಗಬಹುದು ಅಥವಾ ನಮ್ಮ ಬಳಿ ಇಲ್ಲದಿರಬಹುದು. ಆದರೆ ಮ್ಯಾಗ್ನೆಟ್ ಬಳಸಿ ಸುಲಭವಾಗಿ ಗೋಡೆಯಲ್ಲಿರುವ ಮೊಳೆಯನ್ನು ಪತ್ತೆ ಮಾಡಬಹುದು. ಗೋಡೆಯ ಎಲ್ಲಾ ಭಾಗದಲ್ಲೂ ಮ್ಯಾಗ್ನೆಟ್ ಅನ್ನು ಸವರುತ್ತಾ ಬನ್ನಿ ಮ್ಯಾಗ್ನೆಟ್ ಅಂಟಿಕೊಂಡ ಜಾಗದಲ್ಲಿ ಮೊಳೆ ಇದೆ ಎಂದರ್ಥ.

ಚಿಪ್ಸ್ ಮೆತ್ತಾಗಗದಿರಲು ಮ್ಯಾಗ್ನೆಟ್

ಚಿಪ್ಸ್ ಮೆತ್ತಾಗಗದಿರಲು ಮ್ಯಾಗ್ನೆಟ್

ಚಿಪ್ಸ್ ಪ್ಯಾಕೆಟ್ ಅನ್ನು ಒಮ್ಮೆ ತೆಗೆದ ನಂತರ ಪೂರ್ಣ ಖಾಲಿಯಾಗದೆ ಮತ್ತೆ ಮುಚ್ಚಿಟ್ಟರೆ ಚಿಪ್ಸ್ ಪೂರ್ಣ ಮೆತ್ತಗಾಗಿ ಅದರ ರುಚಿಯೇ ಇರುವುದಿಲ್ಲ. ಮನೆಯಲ್ಲಿ ಕ್ಲಿಪ್ ಇದ್ದರೆ ಪ್ಯಾಕ್ ಮಾಡಿ ಇಡಬಹುದು, ಇಲ್ಲವಾದರೆ ಹೀಗೆ ಮಾಡಿ. ಚಿಪ್ಸ್ ಪ್ಯಾಕೆಟ್ ನ ಮೇಲ್ಭಾಗವನ್ನು ಮೂರು, ನಾಲ್ಕು ಬಾರಿ ಸುತ್ತಿ ಮ್ಯಾಗ್ನೆಟ್ ಅನ್ನು ವಿರುದ್ಧ ದಿಕ್ಕಿನಲ್ಲಿ ಅಂಟಿಸಿ. ಕಲೆವು ಗಂಟೆ ಅಥವಾ ದಿನಗಳ ಬಳಿಕವೂ ಚಿಪ್ಸ್ ಅದೇ ರುಚಿಯಲ್ಲಿ, ಕ್ರಿಸ್ಪಿಯಾಗಿಯೇ ಇರುತ್ತದೆ.

ವೆಂಟಿಲೇಷನ್ ಮುಚ್ಚಲು ಮ್ಯಾಗ್ನೆಟಿಕ್ ಶೀಟ್

ವೆಂಟಿಲೇಷನ್ ಮುಚ್ಚಲು ಮ್ಯಾಗ್ನೆಟಿಕ್ ಶೀಟ್

ನಿಮ್ಮ ಮನೆಯಲ್ಲಿ ಬಳಕೆ ಮಾಡದ ಕೊಠಡಿಯ ವೆಂಟಿಲೇಷನ್ ನಿಂದ ಅನಗತ್ಯವಾದ ಬಿಸಿ ಅಥವಾ ತಂಪಾದ ಗಾಳಿ ಬರುತ್ತಿದ್ದೆಯೇ, ಚಿಂತೆ ಬೇಡ. ಈ ಟ್ರಿಕ್ಸ್ ಬಳಸಿ ಹಣವೂ ಉಳಿತಾಯ ಗಾಳಿಯನ್ನು ತಡೆಯಬಹುದು. ಮ್ಯಾಗ್ನೆಟಿಕ್ ಶೀಟ್ ಬಳಸಿ ವೆಂಟಿಲೇಷನ್ ಅನ್ನು ಮುಚ್ಚಿ, ಅಗತ್ಯವೆನಿಸಿದಾಗ ಸುಲಭವಾಗಿ ತೆಗೆಯಬಹುದು.

ಸಿಕ್ಕಿಕೊಂಡಿರುವ ಬ್ಯಾಟರಿ ತೆಗೆಯಲು

ಸಿಕ್ಕಿಕೊಂಡಿರುವ ಬ್ಯಾಟರಿ ತೆಗೆಯಲು

ರಿಮೋಟ್, ರೇಡಿಯೋ, ಗಡಿಯಾರ ಅಥವಾ ಯಾವುದೇ ವಸ್ತುಗಳಲ್ಲಿ ಬ್ಯಾಟರಿಗಳು ಸಿಕ್ಕಿಕೊಂಡಿದೆಯೇ?. ತೆಗೆಯಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ. ಮ್ಯಾಗ್ನೆಟ್ ಬಳಸಿ ಸಿಲುಕಿರುವ ಬ್ಯಾಟರಿಯನ್ನು ನಿಮಿಷದಲ್ಲಿ ತೆಗೆಯಿರಿ.

ಮ್ಯಾಗ್ನೆಟ್ ಕ್ಲಿಪ್

ಮ್ಯಾಗ್ನೆಟ್ ಕ್ಲಿಪ್

ಅಂದುಕೊಂಡಿದ್ದು ಕೂಡಲೆ ಪಟ್ಟಿ ಮಾಡಿ ಅದನ್ನು ನೆನಪಾಗುವಂತೆ ಇಡಲು ಸಮಸ್ಯೆ ಯಾಗುತ್ತಿದೆಯೇ, ಈ ಟ್ರಿಕ್ಸ್ ಬಳಸಿ. ಅಗತ್ಯವಿರುವ ವಿಷಯ ಅಥವಾ ಕಿರಾಣಿ ಪಟ್ಟಿಯನ್ನು ಒಂದು ಹಾಳೆಯಲ್ಲಿ ಬರೆದುಕೊಂಡು ಲೋಹದ ಪೆನ್ ನ ಕ್ಯಾಪ್ ಗೆ ಮ್ಯಾಗ್ನೆಟ್ ಮೂಲಕ ಫ್ರಿಡ್ಡ ಗೆ ಅಂಟಿಸಿ. ನೆನಪಾದದ್ದನ್ನು ಆಗಾಗ್ಗೆ ಬರೆದುಕೊಳ್ಳಬಹುದು ಅಲ್ಲದೇ ಸದಾ ನೆನಪಿನಲ್ಲುಳಿಯುತ್ತದೆ. ಇದೇ ರೀತಿ ಹಲವು ಪಟ್ಟಿಯನ್ನು ಸಹ ಸಿದ್ಧಪಡಿಸಿಕೊಳ್ಳಬಹುದು.

ಸಣ್ಣ ವಸ್ತುಗಳನ್ನು ಸೆಳೆಯಲು

ಸಣ್ಣ ವಸ್ತುಗಳನ್ನು ಸೆಳೆಯಲು

ಒಂದೇ ಬುಟ್ಟಿಯಲ್ಲಿರುವ ಅಥವಾ ನೆಲದ ಮೇಲೆ ಚೆಲ್ಲಾಡಿದ ಸಣ್ಣ ಸಣ್ಣ ಲೋಹದ ತುಂಡುಗಳು, ಪಿನ್, ಸೂಜಿ, ಸ್ಕ್ರೂಗಳು ಕೈಯಿಂದ ಎತ್ತಿಕೊಳ್ಳಲು ಕಷ್ಟವಾಗುತ್ತದೆ ಅಥವಾ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ ಮುಂದಿನ ಬಾರಿ ಮ್ಯಾಗ್ನೆಟ್ ಬಳಸಿ ನೋಡಿ ಕ್ಷಣಾರ್ಧದಲ್ಲೇ ಸಣ್ಣ ವಸ್ತುಗಳನ್ನು ಮ್ಯಾಗ್ನೆಟ್ ನಲ್ಲಿ ಸಿಲುಕಿ ನಮ್ಮ ಕೈ ಸೇರಿರುತ್ತದೆ.

ಕಸದಲ್ಲಿ ಬಿದ್ದಿರುವ ವಸ್ತು ಸೆಳೆಯಲು

ಕಸದಲ್ಲಿ ಬಿದ್ದಿರುವ ವಸ್ತು ಸೆಳೆಯಲು

ದುಬಾರಿಯಾದ ಅಥವಾ ಬಹಳ ಮುಖ್ಯವಾದ ಲೋಹದ ವಸ್ತು ಕಸದಲ್ಲಿ ಸಿಲುಕಿದೆಯೇ. ನಿಮ್ಮ ಕೈಗಳನ್ನು ಬಳಸಿ ಎತ್ತುವ ಗೋಜಿಗೆ ಹೋಗಬೇಡಿ, ನಿಮ್ಮ ಕೈಗೂ ಹಾನಿಯಾಗಬಹುದು. ಅದರ ಬದಲಾಗಿ ಮ್ಯಾಗ್ನೆಟ್ ಗೆ ಉದ್ದದ ದಾರ ಹಾಕಿ ಸುಲಭವಾಗಿ ಕಸದಲ್ಲಿ ಪತ್ತೆ ಮಾಡಬಹುದು.

ಏಕದಳದ ಖನಿಜಾಂಶ ತಿಳಿಯಲು

ಏಕದಳದ ಖನಿಜಾಂಶ ತಿಳಿಯಲು

ನೀವು ಸೇವಿಸುವ ಪೌಷ್ಠಿಕ ಆಹಾರ ಏಕದಳ ಧಾನ್ಯಗಳು ಎಷ್ಟು ಖನಿಜಾಂಶಗಳನ್ನು ಹೊಂದಿದೆ ಎಂಬ ಬಗ್ಗೆ ನಿಮಗೆ ಅರಿವಿದೆಯೇ. ಇದನ್ನು ಕೇಳಿದರೆ ನಿಮಗೆ ವಿಚಿತ್ರ ಎನಿಸಬಹುದು. ಹೌದು, ನಾವೆಲ್ಲಾ ನಿತ್ಯ ಸೇವಿಸುವ ಏಕದಾಳ ಧಾನ್ಯಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿ ಒಮ್ಮೆ ಮ್ಯಾಗ್ನೆಟ್ ಬಳಿ ಇಟ್ಟು ನೋಡಿ, ಮ್ಯಾಗ್ನೆಟ್ ಕಾಣದಂತೆ ಪುಡಿ ಸಂಪೂರ್ಣ ಅದನ್ನು ಆವರಿಸಿಬಿಡುತ್ತದೆ. ಈ ಪ್ರಯತ್ನ ಕೇವಲ ನಿಮ್ಮ ಆಸಕ್ತಿಗಷ್ಟೇ!.

English summary

Super-Helpful Ways to Use Magnets

There are many practical uses for magnets that we see everyday, but there are so many more ways to use magnets that the maker nerd in all of us will appreciate. a simple permanent magnet will be quite enough to find us true north, fashion a fridge pen, pick up pointy metal objects, and get iron out of our cereal.
Story first published: Saturday, September 14, 2019, 12:37 [IST]
X
Desktop Bottom Promotion