For Quick Alerts
ALLOW NOTIFICATIONS  
For Daily Alerts

ಕಡಲೆಹಿಟ್ಟು ಅಸಲಿಯೇ ಅಥವಾ ಕಲಬೆರಕೆಯೇ ತಿಳಿಯುವುದು ಹೇಗೆ? ಇಲ್ಲಿದೆ ಟಿಪ್ಸ್‌?

|

ಲಾಭಧ ದೃಷ್ಟಿಯಿಂದ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ಕಲಬೆರಕೆ ಮಾಡಲಾಗುತ್ತಿದೆ. ದುರಂತವೆಂದರೆ ಇದರಲ್ಲಿ ಆಹಾರ ಪದಾರ್ಥಗಳೂ ಸೇರಿದೆ. ಕಲಬೆರಕೆ ಮಾಡುವವರಿಗೆ ಕೇವಲ ಲಾಭವಷ್ಟೇ ಬೇಕು, ಇವರು ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲ.

Real vs Fake Gram Flour: how to identify genuine Gram Flour in Kannada

ಇಂಥಾ ಕಲಬೆರಕೆ ಆಹಾರ ಪದಾರ್ಥಗಳ ಸಾಲಿಗೆ ಕಡಲೆಹಿಟ್ಟು ಸಹ ಸೇರಿದೆ. ರುಚಿಕರ ಬಜ್ಜಿ, ಪಕೋಡ, ಸಿಹಿಖಾದ್ಯಗಳು, ಮಿಕ್ಚರ್‌ ಸೇರಿದಂತೆ ಬಾಯಿಯ ರುಚಿ ತಣಿಸುವ ಕಡಲೆಹಿಟ್ಟನ್ನು ಜೋಳದ ಹಿಟ್ಟು, ಗೋಧಿಹಿಟ್ಟು, ಮೈದಾ ಸೇರಿದಂತೆ ಕಡಿಮೆ ಬೆಲೆಗೆ ಲಭ್ಯವಿರುವ ಹಿಟ್ಟಿನೊಂದಿಗೆ ಮಿಶ್ರಣ ಮಾಡಿಬಿಡುತ್ತಾರೆ.

ಹಲವು ಅನಿಸಿರಬಹುದು, ಕಡಲೆಹಿಟ್ಟು ತಾಜಾ ಇದ್ದರೂ ಬಜ್ಜಿ ಏಕೆ ರುಚಿ ಇಲ್ಲ ಎಂದು, ಇದಕ್ಕೆ ಕಾರಣವೇ ಈ ಕಲಬೆರಕೆ. ಆದರೆ ನಾವು ತಿನ್ನುವ ಕಡಲೆ ಹಿಟ್ಟು ಕೂಡ ಕಲಬೆರಕೆಯಾಗಿರಬಹುದು ಎಂದು ತಿಳಿಯುವುದು ಹೇಗೆ?

ಅಸಲಿ ಮತ್ತು ನಕಲಿ ಕಡಲೆ ಹಿಟ್ಟನ್ನು ಹೇಗೆ ಗುರುತಿಸುವುದು?

1. ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಪರೀಕ್ಷೆ

ನೋಟದಿಂದ ಕಡಲೆಹಿಟ್ಟಿನ ಗುಣಮಟ್ಟವನ್ನು ಗುರುತಿಸುವುದು ಅಸಾಧ್ಯ ಮತ್ತು ಇತ್ತೀಚಿನ ದಿನಗಳಲ್ಲಿ ಪ್ಯಾಕ್ ಮಾಡಿದ ಮತ್ತು ಲೂಸ್‌ ಕಡಲೆಹಿಟ್ಟು ಎರಡೂ ಮಾರಾಟಕ್ಕಿದೆ, ನೋಡಲು ಎರಡೂ ಒಂದೇ ರೀತಿ ಕಾಣುತ್ತದೆ. ಆದರೆ ಕಡಲೆಹಿಟ್ಟನ್ನು ಹೈಡ್ರೋಕ್ಲೋರಿಕ್ ಆಮ್ಲದಿಂದ ಅಸಲಿಯೇ ನಕಲಿಯೇ ಎಂದು ಪತ್ತೆ ಮಾಡಬಹುದು.

ಒಂದು ಬಟ್ಟಲಿನಲ್ಲಿ 2 ರಿಂದ 3 ಚಮಚ ಕಡಲೆಹಿಟ್ಟನ್ನು ತೆಗೆದುಕೊಂಡು ಅದನ್ನು ನೀರಿನಿಂದ ಪೇಸ್ಟ್ ರೀತಿ ಮಿಶ್ರಣ ಮಾಡಿ. ಅದರಲ್ಲಿ 2 ಚಮಚ ಹೈಡ್ರೋಕ್ಲೋರಿಕ್ ಆಮ್ಲವನ್ನು ಮಿಶ್ರಣ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಬಿಡಿ. ಕಡಲೆ ಹಿಟ್ಟಿನ ಮಿಶ್ರಣದ ಬಣ್ಣವು ಕೆಂಪು ಬಣ್ಣಕ್ಕೆ ತಿರುಗಿದರೆ, ಇದು ಕಲಬೆರಕೆ ಪರಿಣಾಮ ಎಂದು ಅರ್ಥಮಾಡಿಕೊಳ್ಳಿ.

2. ನಿಂಬೆ ಹಣ್ಣಿನಿಂದ ಪತ್ತೆ ಮಾಡಬಹುದು

ನಿಂಬೆಹಣ್ಣುಗಳನ್ನು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ, ಅದರ ಸಹಾಯದಿಂದ ನೀವು ಕಡಲೆಹಿಟ್ಟನ್ನು ನೈಜ ಮತ್ತು ನಕಲಿ ಎಂದು ಸುಲಭವಾಗಿ ಗುರುತಿಸಬಹುದು.

ಒಂದು ಪಾತ್ರೆಯಲ್ಲಿ 3 ಚಮಚ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸಮಾನ ಪ್ರಮಾಣದ ನಿಂಬೆ ರಸವನ್ನು ಮಿಶ್ರಣ ಮಾಡಿ. ಈಗ ಅದಕ್ಕೆ ಹೈಡ್ರೋಕ್ಲೋರಿಕ್ ಆಮ್ಲವನ್ನೂ ಸೇರಿಸಿ. ಒಂದು ವೇಳೆ ಸುಮಾರು 5 ನಿಮಿಷಗಳ ಕಾಲ ಹಿಟ್ಟು ಕಂದು ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆಯಾಗಿದೆ ಎಂದರ್ಥ.

English summary

Real vs Fake Gram Flour: how to identify genuine Gram Flour in Kannada

Here we are discussing about Real vs Fake Gram Flour: how to identify genuine Gram Flour in Kannada. Read more.
X
Desktop Bottom Promotion