For Quick Alerts
ALLOW NOTIFICATIONS  
For Daily Alerts

ಮೊಟ್ಟೆ ಬೇಯಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

|

ದೇಹದಲ್ಲಿ ಪೌಷ್ಟಿಕಾಂಶ ಕಡಿಮೆಯಾದರೆ ವೈದ್ಯರು ಮೊದಲು ಹೇಳುವ ಸಲಹೆ ದಿನಕ್ಕೊಂದು ಮೊಟ್ಟೆ. ಇಷ್ಟು ಚಿಕ್ಕ ಗಾತ್ರದ ಮೊಟ್ಟೆ ನಮ್ಮ ದೇಹಕ್ಕೆ ಎಷ್ಟೆಲ್ಲಾ ಶಕ್ತಿಯನ್ನು ತುಂಬುತ್ತದೆ ಎಂದರೆ ನಂಬಲಸಾಧ್ಯ.

Mistakes You Might Be Making With Eggs

ಆಹಾರ ತಜ್ಞರ ಪ್ರಕಾರ, ಮೊಟ್ಟೆಯ ಬಿಳಿಭಾಗ ಶೇಕಡಾ 10ರಷ್ಟು ನೀರಿನಂಶ ಮತ್ತು ಶೇಕಡಾ 10ರಷ್ಟು ಪ್ರೋಟೀನ್‌ ಅನ್ನು ಹೊಂದಿದೆ. ಇದರಲ್ಲಿ ಯಾವುದೇ ರೀತಿಯ ಕೊಬ್ಬಿನ ಅಂಶ ಇಲ್ಲ ಮತ್ತು ಶೇಕಡಾ 1ರಷ್ಟು ಮಾತ್ರ ಕಾರ್ಬೋಹೈಡ್ರೇಟ್‌ ಅಂಶ ಇದೆ ಎನ್ನಲಾಗಿದೆ.

ಅದರಂತೆ ಇತ್ತೀಚಿನ ದಿನಗಳಲ್ಲಿ ದೈಹಿಕ ಕಸರತ್ತು ಮಾಡುವವರು, ಸಸ್ಯಹಾರಿಗಳು ಸೇರಿದಂತೆ ಮೊಟ್ಟೆ ಬಹುತೇಕರ ನೆಚ್ಚಿನ ತಿಂಡಿಯಾಗಿದೆ ಎಂಬುದರಲ್ಲಿ ಸಂಶಯವಿಲ್ಲ.
ಆದರೆ ನಾವು ನಿತ್ಯ ಸೇವಿಸುವ ಮೊಟ್ಟೆಯನ್ನು ಬಳಸುವ ವಿಧಾನದಲ್ಲೇ ಎಡವುತ್ತೇವೆ. ನಿತ್ಯ ಹೀಗೆ ತಪ್ಪಾದ ಕ್ರಮದಲ್ಲಿ ಮೊಟ್ಟೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ಅಪಾಯವೇ ಹೆಚ್ಚು ಅಥವಾ ಸಾಕಷ್ಟು ಮೊಟ್ಟೆ ಬಳಸದೇ ಶೆಲ್‌ನಲ್ಲೇ ಉಳಿಯಬಹುದು.

ಹಾಗಿದ್ದರೆ ಮೊಟ್ಟೆ ಬಳಸುವಾಗ ಮಾಡುವ ತಪ್ಪುಗಳಾದರೂ ಏನು ಬನ್ನಿ ನೋಡೋಣ:

1. ಬೌಲ್‌ ಅಥವಾ ಪಾತ್ರೆಯ ಅಂಚಿನಲ್ಲಿ ಮೊಟ್ಟೆಗಳನ್ನು ಒಡೆಯುವುದು

1. ಬೌಲ್‌ ಅಥವಾ ಪಾತ್ರೆಯ ಅಂಚಿನಲ್ಲಿ ಮೊಟ್ಟೆಗಳನ್ನು ಒಡೆಯುವುದು

ಮೊಟ್ಟ ಮೊದಲಿಗೆ ಮಾಡುವುದು ಮೊಟ್ಟೆಯನ್ನು ಹೊಡೆಯುವ ಕೆಲಸ. ಪ್ರಾರಂಭಿಕ ಹಂತದಲ್ಲೇ ನಾವು ಎಡವುತ್ತೇವೆ. ಸಾಮಾನ್ಯವಾಗಿ ಬಹುತೇಕರು ಮೊಟ್ಟೆಯನ್ನು ಪಾತ್ರೆಯ ಅಂಚಿನಲ್ಲಿ ಹೊಡೆದು ಹಾಕುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಮಾಡುವುದರಿಂದ ಕಣ್ತಪ್ಪಿನಿಂದಾದರೂ ಮೊಟ್ಟೆಯ ಸಣ್ಣ ಸಣ್ಣ ಶೆಲ್‌ಗಳು ಪಾತ್ರೆಗೆ ಬೀಳಬಹುದು. ಆದ್ದರಿಂದ ಮೊಟ್ಟೆಯನ್ನು ನಿಧಾನವಾಗಿ ಸ್ಪೂನ್‌ ಅಥವಾ ಚಾಕುವಿನಲ್ಲಿ ಹೊಡೆದು ಹಾಕುವುದು ಸೂಕ್ತಕರ.

2. ಸಾಕಷ್ಟು ಮಿಕ್ಸ್ ಮಾಡುವುದು ಅತ್ಯಗತ್ಯ

2. ಸಾಕಷ್ಟು ಮಿಕ್ಸ್ ಮಾಡುವುದು ಅತ್ಯಗತ್ಯ

ಮೊಟ್ಟೆಗಳನ್ನು ಹೊಡೆದು ಆಮ್ಲೆಟ್‌ ಅಥವಾ ಇತರ ಖಾದ್ಯಗಳನ್ನು ಮಾಡುವಾಗ ಮೊಟ್ಟೆಯನ್ನು ಸಾಕಷ್ಟು ಮಿಕ್ಸ್ ಮಾಡಲೇಬೇಕು. ಬಿಳಿ ಹಾಗೂ ಹಳದಿ ಬಣ್ಣ ಸಮನಾಗಿ ಮಿಶ್ರಣಗೊಂದು ಸಂಪೂರ್ಣ ಮೊಟ್ಟೆಯ ಲೋಳೆ ಒಂದೇ ತೆರನಾದ ಹಳದಿ ಬಣ್ಣವನ್ನು ಹೊಂದಿರಬೇಕು. ಬದಲಾಗಿ ಬಿಳಿಯ ಲೋಳೆ ಅತವಾ ಹಳದಿ ಅಲ್ಲಲ್ಲಿ ಹಾಗೇ ಉಳಿಯದಂತೆ ನೋಡಿಕೊಳ್ಳಿ. ಮೊಟ್ಟೆಯನ್ನು ಸರಿಯಾಗಿ ಮಿಶ್ರಣ ಮಾಡಲು ಸ್ಪೂನ್‌ ಅಥವಾ ಮಿಶ್ರಣ ಮಾಡುವ ಪ್ರತ್ಯೇಕ ಪರಿಕರವನ್ನು ಚೆನ್ನಾಗಿ ಬಾಡಿಸಿ. ಮೊಟ್ಟೆ ಚೆನ್ನಾಗಿ ಸಮಪ್ರಮಾಣದಲ್ಲಿ ಮಿಶ್ರಣವಾಗುವುದರಿಂದ ಇದು ಖಾದ್ಯಕ್ಕೆ ರುಚಿಯನ್ನು ಹೆಚ್ಚಿಸುತ್ತದೆ.

3. ಮೊಟ್ಟೆಗಳನ್ನು ಅತಿಯಾದ ಉರಿಯಲ್ಲಿ ವೇಗವಾಗಿ ಬೇಯಿಸುವುದು

3. ಮೊಟ್ಟೆಗಳನ್ನು ಅತಿಯಾದ ಉರಿಯಲ್ಲಿ ವೇಗವಾಗಿ ಬೇಯಿಸುವುದು

ತುಂಬಾ ಅವಸರದಲ್ಲಿದದ್ದಾಗ ಬೇಯಿಸಿದ ಮೊಟ್ಟೆಗಳ ಖಾದ್ಯ ಬಹಳ ಸುಲಭ ಎಂದು ಎನಿಸಬಹುದು, ಬಹುಶಃ ನೀವು ಸಹ ಇದನ್ನು ನಿತ್ಯ ಮಾಡುತ್ತಿರಬಹುದು. ಆದರೆ ನಿಮಗಿದು ತಿಳಿದಿರಲಿ ಮೊಟ್ಟೆಯನ್ನು ಅವಸರದಲ್ಲಿ ಬೇಯಿಸುವ ಸಲುವಾಗಿ ಗ್ಯಾಸ್ ಉರಿಯನ್ನು ಹೆಚ್ಚು ಇಟ್ಟು ಬೇಯಿಸುವ ಪ್ರಕ್ರಿಯೆ ತಪ್ಪು.

ನೀವು ಮೊಟ್ಟೆಯನ್ನು ಶೀಘ್ರವಾಗಿ ಬೇಯಿಸುವುದರಿಂದ ಮೊಟ್ಟೆಯ ಸತ್ವಗಳು ಕಳೆದುಹೋಗುವ ಸಾಧ್ಯತೆ ಇದೆ ಮತ್ತು ಮೊಟ್ಟೆ ಒಣಗಿ ಹೋಗುತ್ತದೆ. ಆದ್ದರಿಂದ ಕಡಿಮೆ ಉರಿಯಲ್ಲಿ ಮೊಟ್ಟೆ ಬೆಂದರೆ ಮೊಸರಿನಂತೆ ಪ್ಲಫಿ ಆಗಿ ಮೊಟ್ಟೆ ಇರುತ್ತದೆ. ಇದರ ಸತ್ವಗಳು ಸಹ ಹಾಗೇ ಉಳಿದು ಒಣಗದಂತೆ ಮಾಡುತ್ತದೆ. ತಿಂದಾಗಲೂ ಇದರ ರುಚಿ ಹೆಚ್ಚಿಸುತ್ತದೆ. ಕಡಿಮೆ ಉರಿಯಲ್ಲಿ ಮೊಟ್ಟೆ ಬೆಂದರೂ ಹೆಚ್ಚೇನು ಸಮಯ ಇದು ತೆಗೆದುಕೊಳ್ಳುವುದಿಲ್ಲ.

4. ಬೇಯಿಸಿದ ಮೊಟ್ಟೆಗಳಿಗೆ ಹಾಲು ಸೇರಿಸುವುದು

4. ಬೇಯಿಸಿದ ಮೊಟ್ಟೆಗಳಿಗೆ ಹಾಲು ಸೇರಿಸುವುದು

ಬೇಯಿಸಿದ ಮೊಟ್ಟೆಗಳಿಗೆ ಹಾಲನ್ನು ಬೆರೆಸಿ ಕೆನೆ ವಿನ್ಯಾಸದ ಮೊಟ್ಟೆ ಖಾದ್ಯವನ್ನು ಸೇವಿಸುತ್ತೀರಾ? ಆದರೆ ಇದು ಸರಿಯಾದ ಕ್ರಮವಲ್ಲ. ಜತೆಗೇ ಇಂಥಾ ಖಾದ್ಯ ರಬ್ಬರ್ ನಂತಾಗುತ್ತದೆ ಮತ್ತು ಮೊಟ್ಟೆಯ ನಿಜವಾದ ರುಚಿಯೇ ಬದಲಾಗುತ್ತದೆ. ನೀವು ಸಿಂಪಲ್‌ ಆಗಿ ಬೇಯಿಸಿದ ಮೊಟ್ಟೆಯ ಸ್ಕ್ರಂಬಲ್‌ ಮಾಡಲು ಬಯಸಿದರೆ, ಮೊಟ್ಟೆಯನ್ನು ಪ್ಯಾನ್‌ ಮೇಲೆ ಹಾಕಿ ನಿಧಾನವಾಗಿ ಪ್ಯಾನ್‌ ಅನ್ನು ಚಲಿಸಿ. ಈ ರೀತಿ ಮಾಡಿದರೆ ಕೆನೆಯಂಥ ಮೊಟ್ಟೆಯ ಖಾದ್ಯ ಯಾವುದೇ ಮಿಶ್ರಣ ಇಲ್ಲದೆ ಮೊಟ್ಟೆಯ ರುಚಿಯಲ್ಲೇ ಸೇವಿಸಬಹುದು.

5. ಮೊಟ್ಟೆಗಳು ಪ್ಯಾನ್‌ಗೆ ಅಂಟಿಕೊಳ್ಳದಂಥ ಪಾತ್ರೆ ಸೂಕ್ತ

5. ಮೊಟ್ಟೆಗಳು ಪ್ಯಾನ್‌ಗೆ ಅಂಟಿಕೊಳ್ಳದಂಥ ಪಾತ್ರೆ ಸೂಕ್ತ

ಮೊಟ್ಟೆಯನ್ನು ಖಾದ್ಯಗಳನ್ನು ಮಾಡುವಾಗ ಪಾತ್ರೆಗಳಿಗೆ ಮೊಟ್ಟೆಯ ಅಂಟಿಕೊಳ್ಳುವುದು ಸಾಮಾನ್ಯ. ಆದ್ದರಿಂದ ಮೊಟ್ಟೆಯ ಯಾವುದೇ ಖಾದ್ಯವನ್ನು ಮಾಡುವಾಗ ನಾನ್‌ ಸ್ಟಿಕ್‌ ಪ್ಯಾನ್‌ ಅನ್ನು ಬಳಸಲು ಮರೆಯದಿರಿ.

6. ಕುದಿಯುವ ನೀರಿನಲ್ಲಿ ಮೊಟ್ಟೆ ಹಾಕುವುದು ಕೆಟ್ಟ ಅಭ್ಯಾಸ

6. ಕುದಿಯುವ ನೀರಿನಲ್ಲಿ ಮೊಟ್ಟೆ ಹಾಕುವುದು ಕೆಟ್ಟ ಅಭ್ಯಾಸ

ಸಾಮಾನ್ಯವಾಗಿ ಈ ಅನುಭವ ಎಲ್ಲರಿಗೂ ಆಗಿರುತ್ತದೆ. ಮೊಟ್ಟೆ ಬೇಯಿಸುವಾಗ ಮೊಟ್ಟೆಯ ಶೆಲ್‌ ಬಿರುಕು ಬಿಟ್ಟು ಬಿಳಿಯ ಭಾಗ ಹೊರ ಬರುವುದು. ಇದಕ್ಕಿಂತ ಕೆಟ್ಟ ಅಭ್ಯಾಸ ಇನ್ಯಾವುದೂ ಇಲ್ಲ ಎನ್ನಬಹುದು. ಇದು ಮೊಟ್ಟೆಯ ವಿನ್ಯಾಸವನ್ನೇ ಬದಲಾಯಿಸಿ ಬಿಡುತ್ತದೆ. ಆದ್ದರಿಂದ ಮೊಟ್ಟೆಗಳನ್ನು ಯಾವಾಗಲೂ ಬಿಸಿ ಅಥವಾ ಕುದಿಯುವ ನೀರಿನಲ್ಲಿ ಹಾಕಬೇಡಿ, ತಂಪಾದ ನೀರಿನಲ್ಲಿ ಹಾಕಿ ಮೊಟ್ಟೆಯನ್ನು ಬೇಯಿಸಲು ಇಡಿ. ಇದು ಮೊಟ್ಟೆ ಹೊಡೆಯದಂತೆ ತಡೆಯುತ್ತದೆ.

7. ಸಣ್ಣ ಪಾತ್ರೆಯಲ್ಲಿ ಮೊಟ್ಟೆಗಳನ್ನು ಬೇಯಿಸುವುದು

7. ಸಣ್ಣ ಪಾತ್ರೆಯಲ್ಲಿ ಮೊಟ್ಟೆಗಳನ್ನು ಬೇಯಿಸುವುದು

ಮೊಟ್ಟೆಗಳನ್ನು ಬೇಯಿಸುವಾಗ ಅದಕ್ಕೆ ಉಸಿರಾಟದ ಸ್ಥಳವಿರುಷ್ಟು ದೊಡ್ಡ ಪಾತ್ರೆಯಲ್ಲಿ ಕುದಿಸಿ. ಸಣ್ಣ ಪಾತ್ರೆಯಲ್ಲಿ ಸಾಕಷ್ಟು ಮೊಟ್ಟೆಗಳನ್ನು ಹಾಕುವ ಪ್ರಯತ್ನ ಬೇಡ. ಕನಿಷ್ಠ 3 ಇಂಚುಗಳಷ್ಟು ನೀರಿನಲ್ಲಿ ಮೊಟ್ಟೆಯನ್ನು ಮುಳುಗಿಸಿ, ಆಳವಾದ ಬಾಣಲೆ ಬಳಸಿ.

English summary

Mistakes You Might Be Making With Eggs

Here we are discussing about mistakes you might be making with eggs. We love eggs for breakfast, lunch and dinner. But is your scramble a bit watery? Is your sunny side down? Learn how to correct the mistakes you might be making with eggs so they turn out perfectly every time. Read more.
X
Desktop Bottom Promotion