Just In
- 1 hr ago
ಮಳೆಗಾಲದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ: ಈ ಅಪಾಯಕಾರಿ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ
- 3 hrs ago
ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಇತಿಹಾಸ ಬರೆದ ಅಪ್ಪ-ಮಗಳು
- 4 hrs ago
ಮಾನ್ಸೂನ್ನಲ್ಲಿ ಕಾಡುವ ಈ ತ್ವಚೆಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
- 6 hrs ago
ಕಾಂಟಾಕ್ಟ್ ಲೆನ್ಸ್ ಹಾಕಿಯೇ ಮಲಗೋದ್ರಿಂದ ಏನಾಗುತ್ತೆ ಗೊತ್ತಾ..? ಈ ತಪ್ಪು ಮಾಡಲೇಬೇಡಿ..!
Don't Miss
- Finance
Gold Rate Today: ಚಿನ್ನದ ಬೆಲೆ ಇಳಿಕೆ: ಪ್ರಮುಖ ನಗರಗಳಲ್ಲಿ ಜು.6ರ ದರ ಎಷ್ಟಿದೆ?
- Movies
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶರ್ಟ್ ಬಿಚ್ಚಿಸಿದ ಕಮೀಷನರ್
- Sports
ಅತಿಯಾದ ನಾಯಕತ್ವ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ
- News
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ಮೂರೇ ದಿನದಲ್ಲಿ 2 ಲಕ್ಷ ರುಪಾಯಿ ದಂಡ ಸಂಗ್ರಹಿಸಿದ ಬಿಬಿಎಂಪಿ
- Automobiles
ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ
- Education
DC Office Tumakuru Recruitment 2022 : 7 ಲೋಡರ್ಸ್ ಮತ್ತು ಕ್ಲೀನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಪ್ರೈಮ್ ಡೇ ಸೇಲ್ 2022 ಡೇಟ್ ಫಿಕ್ಸ್! ಡಿಸ್ಕೌಂಟ್ ಏನಿದೆ?
- Travel
ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ
ಒಳ್ಳೆಯ ಕಡೆ ಕೆಲಸ ಸಿಗುವಂತಾಗಲು ಫೆಂಗ್ಶುಯಿ ಶಾಸ್ತ್ರ ಏನು ಹೇಳಿದೆ?
ಒಂದು ಒಳ್ಳೆಯ ಉದ್ಯೋಗ ಬೇಕೆಂದು ಬಯಸುವವರು ಒಳ್ಳೆಯ ಕಂಪನಿ ಸಿಗಬೇಕೆಂದು ಬಯಸುತ್ತಾರೆ. ಒಂದು ಒಳ್ಳೆಯ ಕಡೆಯ ಕೆಲಸ ಸಿಗಲು ಪ್ರತಿಭೆ ಜೊತೆಗೆ ಸ್ವಲ್ಪ ಅದೃಷ್ಟನೂ ಬೇಕಾಗುವುದು. ಫೆಂಗ್ಶುಯಿ ಎಂಬುವುದು ಚೀನೀ ವಾಸ್ತು ಶಾಸ್ತ್ರ. ಇದನ್ನು ಚೀನಾದವರೂ ಮಾತ್ರವಲ್ಲ ಇತರರು ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಾರೆ.
ಫೆಂಗ್ಶುಯಿಯಲ್ಲಿ ಅನೇಕ ವಿಷಯಗಳಿಗೆ ಪರಿಹಾರವಿರುತ್ತದೆ. ಒಂದು ಒಳ್ಳೆಯ ಕಡೆಯ ಕೆಲಸ ಸಿಗಲು ಫೆಂಗ್ಶುಯಿನಲ್ಲಿ ಏನು ಹೇಳಲಾಗಿದೆ ಎಂದು ನೋಡೋಣ ಬನ್ನಿ:

ಮನೆಯ ಉತ್ತರದ ಕಡೆ ಇವುಗಳು ಇರಬೇಕು
* ಮನೆಯ ಉತ್ತರ ಭಾಗದಲ್ಲಿ ವಿಶ್ವದ ಭೂಪಟ ಇರಲಿ.
* ಉತ್ತರ ಭಾಗದಲ್ಲಿ ಯಶಸ್ವಿ ಜನರ ಫೋಟೋಗಳನ್ನು ಇಡಿ. ಅವರನ್ನು ನೋಡುವುದರಿಂದ ಸ್ಪೂರ್ತಿ ಸಿಗುವುದು.
* ಉತ್ತರ ಭಾಗದಲ್ಲಿ ಕನ್ನಡಿ ಅಥವಾ ನೀರು ಬೀಳುವಂಥ ಚಿತ್ರವಿರಲಿ.
* ಆ ಭಾಗದಲ್ಲಿ ಕಪ್ಪು, ನೀಲಿ ಬಣ್ಣವನ್ನು ಸೇರಿಸಿ.
* ಮನೆಯ ಅಕ್ವೇರಿಯಂ ಅನ್ನು ಉತ್ತರ ಭಾಗದಲ್ಲಿ ಇಡಿ. ಅದರಲ್ಲಿ ಒಂದು ಕಪ್ಪು 8 ಕೆಂಪು ಮೀನುಗಳಿರಲಿ, ಅಕ್ವೇರಿಯಂ ಸ್ವಚ್ಛವಾಗಿಡಿ.
* ನಿಮಗೆ ಸಾಧ್ಯವಾದರೆ ಗೋಡೆಯಲ್ಲಿ ನೀರು ಬೀಳುವ ರೀತಿಯಲ್ಲಿ ಫೌಂಟೇನ್ ಮಾಡಿ.

ವಸ್ತುಗಳನ್ನು, ಬಟ್ಟೆಗಳನ್ನು ಜೋಡಿಸಿಡಿ
ನಿಮ್ಮ ಮನೆಯಲ್ಲಿ ವಸ್ತುಗಳನ್ನು ಒಪ್ಪವಾಗಿ ಜೋಡಿಸಿ ಇಡಿ. ನಿಮ್ಮ ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿರದಂತೆ ಎಚ್ಚರವಹಿಸಿ. ಮನೆಯ ಮುಂಭಾಗ ಸ್ವಚ್ಛವಾಗಿರಲಿ.

ಕುದುರೆಯ ಚಿತ್ರ ಇಡಿ
ನೀವು ಫೆಂಗ್ಶುಯಿಯಲ್ಲಿ ನಂಬಿಕೆ ಇಡುವುದಾದರೆ ಉತ್ತರದಲ್ಲಿ ಕುದುರೆಯ ಚಿತ್ರವನ್ನು ಇಡಿ. ಇದು ಯಶಸ್ಸು, ಸ್ವಾತಂತ್ರ್ಯ, ವೇಗ, ಶಕ್ತಿಯನ್ನು ಸೂಚಿಸುತ್ತದೆ.
ರು ಯಿ
ರು ಯಿ ಎಂದರೆ ನಿಮಗೆ ಅದೃಷ್ಟ ಎಂದು ನೀವು ನಂಬುವ ವ್ಯಕ್ತಿ. ಇದರಿಂದ ಧನಾತ್ಮಕ ಶಕ್ತಿ ದೊರೆಯುವುದಾದರೆ ಅದನ್ನು ನಿಮ್ಮ ಜೊತೆ ಇಡಿ.

ಮನೆಯ ಹಬ್ಬದ ಅಲಂಕಾರ ಹಾಗೇ ಬಿಡಬೇಡಿ
ಮನೆಯಲ್ಲಿ ಕೆಲವೊಂದು ಹಬ್ಬಗಳಿಗೆ ಮನೆಯನ್ನು ಅಲಂಕಾರ ಮಾಡುತ್ತೇವೆ, ನಂತರ ಚೆನ್ನಾಗಿದೆ ಅಂತ ಹಾಗೇ ಬಿಡುತ್ತೇವೆ. ಫೆಂಗ್ ಶುಯಿ ಪ್ರಕಾರ ಹಾಗೇ ಮಾಡುವುದರಿಂದ ಋಣಾತ್ಮಕ ಶಕ್ತಿಗಳನ್ನು ಆಕರ್ಷಿಸುವುದು ಅಂತೆ. ಆದ್ದರಿಂದ ಹಬ್ಬಗಳು, ಫಂಕ್ಷನ್ಗಳು ಕಳೆದ ಬಳಿಕ ಆ ಅಲಂಕಾರಗಳನ್ನು ತೆಗೆಯಿರಿ.