For Quick Alerts
ALLOW NOTIFICATIONS  
For Daily Alerts

ಖಾರ ಪ್ರಿಯರು ತಪ್ಪದೇ ಈ ಮೆಣಕಾಯಿಗಳ ರುಚಿ ನೋಡಲೇಬೇಕು

|

ಖಾರಾ ಪ್ರಿಯರು ತಪ್ಪದೇ ಓದಬೇಕಾದ ಲೇಖನವಿದು. ಭಾರತದ ಸಾಂಬಾರ ಪದಾರ್ಥಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿರುವ ಪದಾರ್ಥ ಮೆಣಸಿನಕಾಯಿ. ಮೂಲತಃ ಅಮೆರಿಕಾ ಮೂಲದ ಕ್ಯಾಪ್ಸಿಕಂ ಜಾತಿಯ ಮೆಣಸಿನಕಾಯಿಯನ್ನು 400 ವರ್ಷಗಳ ಹಿಂದೆ 17ನೇ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದರು. ಅಡುಗೆಗೆ ಮಾತ್ರ ಮೀಸಲಾಗದ ಮೆಣಸಿನಕಾಯಿ ಹಲವಾರು ಔಷಧಗಳಲ್ಲೂ ಬಳಸುತ್ತಾರೆ.

ಇದೀಗ ಭಾರತ ವಿಶ್ವವನ್ನೇ ಮೀರಿಸಿ ಮೆಣಸಿನಕಾಯಿ ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಇಷ್ಟೇ ಅಲ್ಲದೇ, ಭಾರತದಲ್ಲಿ ಮೆಣಸಿನಕಾಯಿಯ ನೂರಾರು ವಿಭಿನ್ನ ತಳಿಗಳನ್ನು ಸಹ ಬೆಳೆಸಲಾಗುತ್ತಿದೆ. ಇವುಗಳಲ್ಲಿ ಖಾರವೇ ಇಲ್ಲದ ಮೆಣಸಿನಕಾಯಿ, ಕಡಿಮೆ ಖಾರ ಮತ್ತು ಅತೀ ಹೆಚ್ಚು ಖಾರ ಹೊಂದಿರುವ ಹಲವಾರು ಜಾತಿಗಳಿವೆ.

ಈ ಲೇಖನದಲ್ಲಿ ನೀವು ಅದರಲ್ಲೂ ಖಾರ ಪ್ರಿಯರು ತಪ್ಪದೇ ಸೇವಿಸಲೇಬೇಕಾದ ಅತ್ಯಂತ ಖಾರ ಇರುವ ಮೆಣಸಿನಕಾಯಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ನೀವು ತಿನ್ನಲೇಬೇಕಾದ 8 ಬಗೆಯ ಭಾರತೀಯ ಮೆಣಸಿನಕಾಯಿಗಳು ಇದೇ ನೋಡಿ:

1. ಕಾಶ್ಮೀರಿ ಮೆಣಸಿನಕಾಯಿ

1. ಕಾಶ್ಮೀರಿ ಮೆಣಸಿನಕಾಯಿ

ಹೆಸರೇ ಸೂಚಿಸುವಂತೆ ಈ ಮೆಣಸಿನಕಾಯಿಯನ್ನು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಬೆಳೆಯಲಾಗುತ್ತದೆ. ಇದು ಗಾಢ ಕೆಂಪು ಬಣ್ಣಕ್ಕೆ ಹೆಸರುವಾಸಿಯಾಗಿದೆ. ಕಾಶ್ಮೀರಿ ಮೆಣಸಿನಕಾಯಿಯ ಪ್ರಮುಖ ಲಕ್ಷಣವೆಂದರೆ ಇದು ರುಚಿಗೆ ಹೆಚ್ಚು ಖ್ಯಾತಿ ಪಡೆದಿಲ್ಲ, ಬದಲಾಗಿ ಇದರ ಬಣ್ಣವೇ ಹೆಚ್ಚು ಪ್ರಖ್ಯಾತಿ. ಇದಕ್ಕಾಗಿಯೇ ಬಹುತೇಕ ಅಡುಗೆಗಳಿಗೆ ಹೆಚ್ಚು ಮಸಾಲೆಯುಕ್ತವಾಗದಂತೆ ಬಣ್ಣವನ್ನು ಸೇರಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕಾಶ್ಮೀರಿ ಖಾರದಪುಡಿ ಸಿಗುತ್ತದೆ.

2. ಬ್ಯಾಡಗಿ ಮೆಣಸಿನಕಾಯಿ

2. ಬ್ಯಾಡಗಿ ಮೆಣಸಿನಕಾಯಿ

ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಿಈ ಮೆಣಸಿನಕಾಯಿಯನ್ನು ಹೆಚ್ಚು ಬೆಳೆಸುತ್ತಾರೆ. ಮೂಲತಃ ಹಾವೇರಿ ಜಿಲ್ಲೆಯ ಬೈಡಾಗಿ ಪಟ್ಟಣದ ಬ್ಯಾಡಗಿ ಮೆಣಸಿನಕಾಯಿ ಭಾರತದ ಅತ್ಯಂತ ಜನಪ್ರಿಯ ಮೆಣಸಿನಕಾಯಿಗಳಲ್ಲಿ ಒಂದಾಗಿದೆ. ಕರಾವಳಿ, ಉಡುಪಿ ಪ್ರದೇಶಗಳಲ್ಲಿ ಈ ಮೆಣಸಿಕಾಯಿ ಇಲ್ಲದೆ ಅಡುಗೆಯೇ ಇಲ್ಲ ಎಂದಾದರೆ ತಪ್ಪಾಗದು. ಇದು ಅಷ್ಟೇನೂ ಖಾರ ಇಲ್ಲದಿದ್ದರೂ ಅಡುಗೆಗೆ ಉತ್ತಮ ಬಣ್ಣವನ್ನು ನೀಡುತ್ತದೆ.

3. ಭುತ್ ಜೋಲಿಕಿಯಾ

3. ಭುತ್ ಜೋಲಿಕಿಯಾ

ಗಿನ್ನೆಸ್ ಪುಸ್ತಕದಲ್ಲಿ ದಾಖಲೆ ಹೊಂದಿರುವ ಭೂತ್ ಜೊಲಿಕಿಯಾ ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದೇ ಹೆಸರುವಾಸಿ. ಇದನ್ನು ‘ಭೂತ ಮೆಣಸು' ಎಂದೂ ಕರೆಯುತ್ತಾರೆ ಮತ್ತು ಇದನ್ನು ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರಗಳಲ್ಲಿ ಹೆಚ್ಚು ಬೆಳೆಸಲಾಗುತ್ತದೆ. ಮಾಂಸಾಹಾರ ಖಾದ್ಯಗಳಿಗೆ ಅದರಲ್ಲೂ ಮೀನು, ಹಂದಿ ಖಾದ್ಯಗಳಿಗೆ ಈ ಮೆಣಸಿನಕಾಯಿ ಹಾಗೂ ಇದರ ಖಾರ ಪುಡಿಯನ್ನು ಹೆಚ್ಚು ಬಳಸುತ್ತಾರೆ.

4. ಗುಂಟೂರು ಮೆಣಸಿನಕಾಯಿ

4. ಗುಂಟೂರು ಮೆಣಸಿನಕಾಯಿ

ಆಂಧ್ರಪ್ರದೇಶ ಅತೀ ಹೆಚ್ಚು ಖಾರದ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ಇದಕ್ಕೆ ಮುಖ್ಯ ಕಾರಣವೇ ಇಲ್ಲಿ ಬೆಳೆಯುವ ಗುಂಟೂರು ಮೆಣಸಿನಕಾಯಿ. ಗುಂಟೂರು ಮೆಣಸಿನಕಾಯಿಯಲ್ಲಿ ಹಲವಾರು ಪ್ರಭೇದಗಳಿದ್ದು ಇದರ ಒಂದು ತಳಿಯನ್ನು ಮಧ್ಯಪ್ರದೇಶದಲ್ಲಿ ಸಹ ಬೆಳೆಯುತ್ತಾರೆ. ಗುಂಟೂರು ಎಷ್ಟು ಜನಪ್ರಿಯವಾದ ಮೆಣಸಿನಕಾಯಿ ಎಂದರೆ ಇದಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇದ್ದು, ವಿದೇಶಗಳಿಗೆಲ್ಲಾ ರಫ್ತು ಮಾಡಲಾಗುತ್ತದೆ.

5. ಜ್ವಾಲಾ ಮೆಣಸಿನಕಾಯಿ

5. ಜ್ವಾಲಾ ಮೆಣಸಿನಕಾಯಿ

ಸಣ್ಣ ಹಾಗೂ ಉದ್ದವಾಗಿರುವ ಜ್ವಾಲಾ ಮೆಣಸಿನಕಾಯಿ ಅದರ ಖಾರದಿಂದಲೇ ತನ್ನ ರುಚಿಯನ್ನು ಹೆಚ್ಚಿಸಿಕೊಂಡಿದೆ. ಮೂಲತಃ ಗುಜರಾತ್‌ನ ದಕ್ಷಿಣ ಭಾಗಗಳಾದ ಮೆಹ್ಸಾನಾ ಮತ್ತು ಖೇಡಾ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದು ರುಚಿಯಲ್ಲಿ ಬಹಳ ಖಾರವಾದ ಇದನ್ನು ಈ ಪ್ರದೇಶಗಳಲ್ಲಿ ಹೆಚ್ಚು ಪ್ರಖ್ಯಾತಿಯಾದ ಆಹಾರ ಸಮೋಸಾ, ವಡಾ ಪಾವ್ ಇತ್ಯಾದಿಗಳ ಜೊತೆ ಉರಿದ ಮೆಣಸಿನಕಾಯಿಯನ್ನು ನೀಡುತ್ತಾರೆ. ಜ್ವಾಲಾ ಮೆಣಸಿನಕಾಯಿ ಭಾರತೀಯ ಮನೆಗಳಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಇದನ್ನು ಉಪ್ಪಿನಕಾಯಿಯಲ್ಲಿಯೂ ಬಳಸಲಾಗುತ್ತದೆ. ಇದು ಆರಂಭದಲ್ಲಿ ಹಸಿರು ಬಣ್ಣದ್ದಾಗಿದ್ದರೂ, ಪಕ್ವವಾದ ನಂತರ ಕೆಂಪು ಬಣ್ಣಕ್ಕೆ ತಿರುಗುತ್ತದೆ.

6. ಮುಂಡು ಮೆಣಸಿನಕಾಯಿ

6. ಮುಂಡು ಮೆಣಸಿನಕಾಯಿ

ಅತೀ ಚಿಕ್ಕ ಹಾಗೂ ದುಂಡನೆಯ ಈ ಮೆಣಸಿನಕಾಯಿಯನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದು ತನ್ನ ವಿಶಿಷ್ಟವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಇದು ಅಷ್ಟೇನೂ ಖಾರ ಇಲ್ಲದಿದ್ದರೂ, ವಿಭಿನ್ನ ಪರಿಮಳದಿಂದಲೇ ಅನೇಕ ಭಕ್ಷ್ಯಗಳಿಗೆ ರುಚಿಯನ್ನು ಸಹ ಹೆಚ್ಚಿಸುತ್ತದೆ.

7. ಖೋಲಾ ಮೆಣಸಿನಕಾಯಿ

7. ಖೋಲಾ ಮೆಣಸಿನಕಾಯಿ

ಖೋಲಾ ಮೆಣಸಿನಕಾಯಿಯನ್ನು ಗೋವಾದ ಕೆನಕೋನಾದ ಬೆಟ್ಟದ ಇಳಿಜಾರಿನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಇದು ರುಚಿ ಮತ್ತು ಬಣ್ಣಕ್ಕೆ ಹೆಸರುವಾಸಿಯಾಗಿದೆ. ಇದರ ಗಾಢ ಕೆಂಪು ಇಡುವುದರಿಂದ ಇದರ ಖಾರದ ಪುಡಿಯನ್ನು ಹೆಚ್ಚಿನ ಮನೆಗಳಲ್ಲಿ ಬಳಕೆ ಮಾಡುತ್ತಾರೆ. ಮಾವಿನ ಉಪ್ಪಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಸಾಸ್‌ಗೆ ಇದನ್ನೇ ಹೆಚ್ಚು ಬಳಸಲಾಗುತ್ತದೆ.

8. ಕಾಂತರಿ ಮೆಣಸಿನಕಾಯಿ

8. ಕಾಂತರಿ ಮೆಣಸಿನಕಾಯಿ

ಕೇರಳದಲ್ಲಿ ಹೆಚ್ಚು ಬೆಳಯುವ ಕಾಂತರಿ ಮೆಣಸಿನಕಾಯಿಯನ್ನು ಕರ್ನಾಟಕದ ಕರಾವಳಿ ಭಾಗಗಳಲ್ಲಿಯೂ ಸಹ ಮನೆಯ ಮುಂದೆಯೇ ಬೆಳೆಯುತ್ತಾರೆ. ಸಣ್ಣದಾದ ಬಿಳಿಯ ಬಣ್ಣದ ಈ ಮೆಣಸಿನಕಾಯಿ ಹೆಚ್ಚಿನ ಚುರುಕುತನವನ್ನು ಹೊಂದಿರುತ್ತದೆ ಎನ್ನಲಾಗುತ್ತದೆ. ಇದನ್ನು ಬರ್ಡ್ಸ್‌ ಮೆಣಸಿನಕಾಯಿ ಎಂದೂ ಕರೆಯುತ್ತಾರೆ. ಇದು ಅತೀ ಖಾರದ ಮೆಣಸಿನಕಾಯಿಯಾಗಿದ್ದು ಅಡುಗೆಗೆ ಉತ್ತಮ ಪರಿಮಳವನ್ನು ಸಹ ನೀಡುತ್ತದೆ.

English summary

Different Varieties of Indian Chillies

Here we are discussing about Different Varieties of Indian Chillies. Indian dishes are incomplete without chillies. Apart from adding flavour to food, chillies benefit the digestive tracts, promote healthy heart, relieve joint pains, promote weight loss, mitigate migraine, reduce cancer risk, prevents allergies etc. Read more.
Story first published: Wednesday, September 2, 2020, 18:30 [IST]
X