For Quick Alerts
ALLOW NOTIFICATIONS  
For Daily Alerts

ಆಯುರಾರೋಗ್ಯಕ್ಕೆ ಅಡುಗೆಮನೆ ಸ್ವಚ್ಛವಾಗಿಡುವುದು ಹೇಗೆ?

|

ಅಡುಗೆಮನೆ ಅನ್ನುವುದು ಗೃಹಿಣಿಯರ ಪಾಲಿನ ಸ್ವರ್ಗ. ಇದನ್ನು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಮನುಷ್ಯನ ಜೀವನದ ಮೂಲಾಧಾರವಾಗಿರುವ ಆಹಾರ ಸಿದ್ಧವಾಗುವುದು ಇಲ್ಲಿಯೇ! ಇದೇ ಶುದ್ಧರೂಪದಲ್ಲಿ ಲಭಿಸದಿದ್ದರೆ, ಆರೋಗ್ಯ ಹದಗೆಡುವಲ್ಲಿ ಅನುಮಾನವೇ ಇಲ್ಲ.

ದಿನ ಬಳಕೆಯ ಪ್ರಮುಖ ಭಾಗ ಅಡುಗೆಮನೆ. ಆದರೆ ಇದು ಸ್ವಚ್ಛವಾಗಿಲ್ಲದಿದ್ದರೆ, ನಿರ್ವಹಣೆಯಲ್ಲಿ ಕೊಂಚ ಲೋಪವಾದರೂ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳು ತುಂಬಿಕೊಳ್ಳಬಹುದು. ಇದರ ದುಷ್ಪರಿಣಾಮ ನಿಮ್ಮ ಊಹೆಗೂ ನಿಲುಕದ್ದಾಗಿರುತ್ತದೆ. ಈ ಕೀಟಾಣುಗಳು ಅತ್ಯಂತ ಸುಲಭವಾಗಿ ಅಡುಗೆಮನೆಯ ತರಕಾರಿ ಹೆಚ್ಚುವ ಸಾಧನ, ಡ್ರಾವರ್‌ನ ಹಿಡಿಕೆಗಳು, ತಟ್ಟೆ, ಬಟ್ಟಲು, ಲೋಟ, ಚಮಚೆ ಹಾಗೂ ಪಾತ್ರೆಗಳಿಗೂ ಸೇರಿಕೊಳ್ಳಬಹುದು. ಇವು ಬೆರೆತ ಆಹಾರ ಸೇವನೆಯಿಂದ ಸಮಸ್ಯೆ ಎದುರಾಗಿ ಆಹಾರ ಸುಲಭವಾಗಿ ಜೀರ್ಣವಾಗದೇ ಹೋಗಬಹುದು. ಜೀರ್ಣಕ್ರಿಯೆಗೇ ಇದು ನೇರವಾಗಿ ಕುತ್ತು ತಂದಿಡುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವುದು ನಿಶ್ಚಿತ.

ಅತ್ಯಂತ ಸೂಕ್ಷ್ಮ ಕೀಟಾಣುಗಳಾಗಿರುವ ಇವು ಬರಿಗಣ್ಣಿಗೆ ಕಾಣಿಸುವುದಿಲ್ಲ. ಯಾವಾಗ ನೀವು ಅನಾರೋಗ್ಯಕ್ಕೆ ಬೀಳುತ್ತೀರೋ, ಆಗಲೇ ಅಡುಗೆ ಮನೆಯಲ್ಲಿ ಬ್ಯಾಕ್ಟೀರಿಯಾ ತುಂಬಿಕೊಂಡಿರುವುದು ಅರಿವಿಗೆ ಬರುತ್ತದೆ. ಇದಕ್ಕೆ ಹೆಚ್ಚು ಆತಂಕಪಡುವ ಅಗತ್ಯವೇನು ಇಲ್ಲ. ಆಹಾರ ಸಿದ್ಧಪಡಿಸುವ ಮುನ್ನ ಅಡುಗೆಮನೆಯನ್ನು ಕೊಂಚ ಸ್ವಚ್ಛವಾಗಿಸಿಕೊಂಡರಾಯಿತು. ನಿಮ್ಮ ಅಡುಗೆಮನೆ ಹಾಗೂ ಅಲ್ಲಿರುವ ಸಾಧನಗಳ ಬ್ಯಾಕ್ಟೀರಿಯಾ ರಹಿತವಾಗಿಸಿಕೊಂಡರೆ ಸಮಸ್ಯೆ ದೂರಾಗುತ್ತದೆ ಎನ್ನುತ್ತಾರೆ ತಜ್ಞರು. ಇದಕ್ಕೆ ಕೆಲ ಟಿಪ್ಸ್‌ಗಳು ಇಲ್ಲಿವೆ.

1. ಫ್ರಿಜ್‌ ಬಾಗಿಲಿನ ಹ್ಯಾಂಡಲ್‌

1. ಫ್ರಿಜ್‌ ಬಾಗಿಲಿನ ಹ್ಯಾಂಡಲ್‌

ಸೂಕ್ಷ್ಮ ಕೀಟಾಣುಗಳು ಅಡುಗೆಮನೆಯಲ್ಲಿ ನೆಲೆಸಿರುತ್ತವೆ. ಪೋಕ್‌F ಹಾಗೂ ಬೀಫ್‌ಗಳು ಸಾಮಾನ್ಯವಾಗಿ ಫ್ರಿಜ್‌ನ ಹ್ಯಾಂಡಲ್‌ನಲ್ಲಿ ಕಂಡುಬರುತ್ತವೆ. ದಿನವಿಡೀ ಅಡುಗೆಮನೆಯಲ್ಲೇ ಇದ್ದರೂ, ಬಹುತೇಕ ಮಂದಿಗೆ ಇದರ ಅರಿವು ಆಗುವುದಿಲ್ಲ. ಉದಾಹರಣೆಗೆ ಹಸಿಯಾದ ಕೋಳಿಮಾಂಸವನ್ನು ಸಂಸ್ಕರಿಸುವಾಗ ಒಮ್ಮೊಮ್ಮೆ ಡ್ರಾವರ್‌ ಒಳಗಿರುವ ಚಾಕು ಹಾಗೂ ಪೋಕ್‌F ತೆಗೆದುಕೊಳ್ಳಬೇಕಾಗಿ ಬರುತ್ತದೆ. ಆ ಸಂದರ್ಭದಲ್ಲಿ ಚಿಕನ್‌ನಿಂದ ನಿಮ್ಮ ಕೈಗೆ ಅಂಟಿಕೊಂಡ ಕೀಟಾಣು ಡ್ರಾವರ್‌ನ ಒಳಗೆ ಹಾಗೂ ಅದರ ಹ್ಯಾಡಲ್‌ನಲ್ಲಿ ಸೇರಿಕೊಳ್ಳಬಹುದು. ಬೇಯಿಸಿದ ಆಹಾರದಲ್ಲಿ ಸಿಗದ ಬ್ಯಾಕ್ಟೀರಿಯಾ ಅದಕ್ಕೂ ಮುನ್ನವೇ ಕಿಚನ್‌ನ ಆಯಕಟ್ಟಿನ ಸ್ಥಳ ಸೇರಿ, ನಂತರ ರೋಗ ಹರಡುವ ಕಾರ್ಯ ಮಾಡಬಹುದು.

ಉಜ್ಜಿ ಸ್ವಚ್ಛಗೊಳಿಸುವುದು ಇದಕ್ಕೆ ಸರಳ ಹಾಗೂ ಸುಲಭ ಪರಿಹಾರವಾಗಿದೆ. ಇದಲ್ಲದೇ ಸದಾ ಹೈಜೀನ್‌ ಕಾಪಾಡಲು ಕೈಗೊಳ್ಳುವ ಉಪಾಯವೆಂದರೆ ಹ್ಯಾಂಡಲ್‌ಗಳು, ಎಲ್ಬೋಗಳ ಮೇಲೆ ಸೋಪಿನ ನೀರು ಬಳಿದು 15ರಿಂದ 20 ಸೆಕೆಂಡ್‌ ಬಿಟ್ಟು ಪೇಪರ್‌ ಟವೆಲ್‌ ಬಳಸಿ ಉಜ್ಜಿಬಿಡಿ. ಕೈಲಿ ಸ್ವಚ್ಛಗೊಳಿಸುವುದು ಎಲ್ಲಕ್ಕಿಂತ ಉತ್ತಮ ವಿಧಾನ.

2. ನಲ್ಲಿಗಳು

2. ನಲ್ಲಿಗಳು

ಆಹಾರ ಸಿದ್ಧಪಡಿಸುವಾಗ ಶುದ್ಧ ನೀರಿನ ಅಗತ್ಯ ಬಹಳ ಇರುತ್ತದೆ. ಅಭಿವ್ರದ್ಧಿತ ರಾಷ್ಟ್ರಗಳಲ್ಲಿ ಇದಕ್ಕೆ ಹೆಚ್ಚಿನ ಒತ್ತು ಸಿಗುತ್ತದೆ. ಶುದ್ಧ ಹಾಗೂ ನಿರ್ಮಲ ನೀರನ್ನು ಪಡೆಯುವುದು ಅತಿಮುಖ್ಯ. ನೀರು ಬಳಸುವಾಗ ಸೆಪ್ಟಿಕ್‌ ಹಾಗೂ ಗಂಟಲು ಬೇನೆ ಇತರೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಪ್ರಮುಖವಾಗಿ ವಿಪರೀತ ಮಳೆ ಬೀಳುತ್ತಿರುವ ಸಂದರ್ಭದಲ್ಲಿ. ಮಳೆಯಿಂದಾಗಿ ನೀರು ನಿಂತ ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ಕುಡಿಯುವ ನೀರು ಕಲುಶಿತಗೊಳ್ಳುವ ಸಾಧ್ಯತೆ ಹೆಚ್ಚು. ಇದರಿಂದ ಆಹಾರ ಸಿದ್ಧಪಡಿಸುವ ಮುನ್ನ ನೀರನ್ನು ತಪಾಸಣೆಗೆ ಒಳಪಡಿಸಿ ಬಳಸುವುದು ಉತ್ತಮ. ಇದಕ್ಕಿಂತ ಉತ್ತಮ ಅಂದರೆ ಬಾಟಲಿಗಳಲ್ಲಿ ಸಿಗುವ ಅಥವಾ ಫಿಲ್ಟರ್‌ ಆದ ನೀರು ಬಳಸುವುದು ಉತ್ತಮ. ಯಾವುದೇ ಕಾರಣಕ್ಕೂ ನೀರನ್ನು ನೇರವಾಗಿ ಬಳಸುವುದು ಉಚಿತವಲ್ಲ. ನೀರನ್ನು ಬಳಸಿ ಆಹಾರ ಸಿದ್ಧಪಡಿಸುವ ಸಂದರ್ಭದಲ್ಲಿ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ. ನೀರಿನೊಂದಿಗೆ ಯಾವುದೇ ರೀತಿಯ ಸಮಸ್ಯೆಯೂ ಬರಬಹುದು.

3. ಒರೆಸುವ ಬಟ್ಟೆ

3. ಒರೆಸುವ ಬಟ್ಟೆ

ತಾವು ಆಗತಾನೆ ತೊಳೆದುಕೊಂಡ ಕೈ ಹಾಗೂ ತೊಳೆದಿಟ್ಟ ಪಾತ್ರೆಗಳನ್ನು ಒರೆಸಲು ಮಾತ್ರ ಡಿಶ್‌ ಟವೆಲ್‌ ಬಳಸುತ್ತೇವೆ. ಅದು ಸದಾ ಒಣಗಿಯೇ ಇರುತ್ತದೆ. ಇದರಿಂದ ಇದು ಬ್ಯಾಕ್ಟೀರಿಯಾ ಹಾಗೂ ಕೀಟಾಣು ಮುಕ್ತ ಎಂದು ಭಾವಿಸುತ್ತಾರೆ. ಒಮ್ಮೆ ಪಾತ್ರೆ ಅಥವಾ ಕೈ ಒರೆಸಿಕೊಂಡ ನಂತರದ ಕೆಲಹೊತ್ತು ಅದು ಒದ್ದೆಯಾಗಿಯೇ ಇರುತ್ತದೆ. ಈ ಒದ್ದೆಯಾದ ಬಟ್ಟೆಯ ತೇವಾಂಶ ಹಾಗೂ ಕಿಚನ್‌ನ ಉಷ್ಣತೆ ಕೀಟಾಣುಗಳ ವೃದ್ಧಿಗೆ ಉತ್ತಮ ಸಹಕಾರ ನೀಡುತ್ತದೆ.

ತಜ್ಞರ ಸಲಹೆಯೇನೆಂದರೆ, ಡಿಶ್‌ ಟವೆಲ್‌ಗಳನ್ನು ಆಗಾಗ ಬ್ಲೀಚ್‌ ಬಳಸಿ ತೊಳೆಯುವುದು ಉತ್ತಮ. ಮನೆಗೆ ಅತಿಥಿಗಳು ಬಂದಾಗ ಬಳಸಲು ಪ್ರತ್ಯೇಕ ಬಟ್ಟೆಯನ್ನು ಬಳಸುವುದು ಯೋಗ್ಯ. ಅತಿಥಿಗಳು ತೆರಳಿದ ನಂತರ ಪಾತ್ರೆ ಒರೆಸಲು ಸಾಮಾನ್ಯ ಟವೆಲ್‌ನ್ನು ಬಳಸಬಹುದು. ಇದೊಂದು ವಿನೂತನ ಆಲೋಚನೆಯಾಗಿದ್ದು, ನಿತ್ಯ ಹೊಸದೊಂದು ಸೆಟ್‌ ಬಳಸಿದಂತೆ ಆಗುತ್ತದೆ. ಜತೆಗೆ ಮುಡುಕು ಮುಡುಕಾದ, ಹಿಂಡಿದ ಬಟ್ಟೆಯನ್ನೇ ಬಳಸುವ ಅಗತ್ಯ ಇರುವುದಿಲ್ಲ.

ಸ್ಪಾಂಜ್‌ಗಳನ್ನು ಬಳಸಿ ಸ್ವಚ್ಛಗೊಳಿಸಿ

ಸ್ಪಾಂಜ್‌ಗಳನ್ನು ಬಳಸಿ ಸ್ವಚ್ಛಗೊಳಿಸಿ

4. ಸ್ಪಾಂಜ್‌ಗಳನ್ನು ಬಳಸಿ ಸ್ವಚ್ಛಗೊಳಿಸಿದರೆ ಅದರಿಂದ ಸಂಪೂರ್ಣ ಸ್ಚಚ್ಛತೆ ಸಿಗುತ್ತದೆ ಎಂದು ಭಾವಿಸಬೇಡಿ. ಬಹುತೇಕ ಸಂದರ್ಭದಲ್ಲಿ ಜನರು ಮನೆಯ ವಾಶ್‌ಬೇಸಿನ್‌ನ್ನು ಸ್ಪಾಂಜ್‌ನಿಂದ ಸ್ವಚ್ಛಗೊಳಿಸಿ, ತದನಂತರ ಅದರಿಂದಲೇ ಕಿಚನ್‌ ಕೌಂಟರ್‌ಗಳನ್ನೂ ಒರೆಸುತ್ತಾರೆ. ಇದು ಜನ ಮಾಡುವ ದೊಡ್ಡ ತಪ್ಪು. ಕಿಚನ್‌ ಇಡೀ ಮನೆಯ ಅತ್ಯಂತ ಅಸ್ವಚ್ಚ ಸ್ಥಳವಾಗಿರುತ್ತದೆ. ಇಲ್ಲಿ ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳು ನೆಲೆಸಿರುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಯಾವುದೇ ಸಂದರ್ಭದಲ್ಲೂ ಸಿಂಕ್‌ ಉತ್ಪನ್ನವಾದ ಇವು ಅಡುಗೆ ಮನೆಯ ಯಾವುದೇ ಭಾಗಕ್ಕೂ ಸುಲಭವಾಗಿ ಹರಡಬಲ್ಲವು. ಮುಖ್ಯವಾಗಿ ಆಹಾರ ಸಿದ್ಧಪಡಿಸುವ ಸ್ಥಳಕ್ಕೂ ಸೇರಿಕೊಳ್ಳಬಹುದು.

ಇದರಿಂದ ತಪ್ಪಿಸಿಕೊಳ್ಳಲು ಸದಾ ಹೊಸ ಸ್ಪಾಂಜ್‌ಗಳನ್ನೇ ಬಳಸಿ. ಇವು ದುಬಾರಿಯಾಗಿರುವುದಿಲ್ಲ. ನಿಮ್ಮಿಂದ ಅದರ ನಿರ್ವಹಣೆ ಸಾಧ್ಯವಾಗದಿದ್ದಲ್ಲಿ, ಅವನ್ನು ಬಿಸಿಯೊಂದಿಗೆ ಬಳಸಿ. ಇವನ್ನು ಬಿಸಿನೀರಲ್ಲಿ ಕುದಿಸುವುದು ಅಥವಾ ಅದ್ದಿ ಎತ್ತುವುದರಿಂದ ಕೀಟಾಗಳು ನಾಶವಾಗುತ್ತವೆ.

5.ಸಿಂಕ್‌ ಪೈಪ್‌

5.ಸಿಂಕ್‌ ಪೈಪ್‌

ನಿಮ್ಮ ಕಣ್ಣಿಗೆ ಕಾಣದಿದ್ದರೂ ಸರಿ, ಸಿಂಕ್‌ನ ನೀರು ಹರಿದು ಹೋಗುವ ಮಾರ್ಗ (ಪೈಪ್‌) ಅಷ್ಟಾಗಿ ಯಾರ ಗಮನಕ್ಕೂ ಬರುವುದೇ ಇಲ್ಲ. ಕಾಣದ ವಸ್ತು ಸ್ವಚ್ಛವಾಗಿಯೇ ಇದೆ ಅನ್ನುವ ಭಾವನೆ ಇರುತ್ತದೆ. ಆದರೆ ಇವು ಅತ್ಯಂತ ಅಪಾಯಕಾರಿ ನಿರ್ಧಾರ.

ಇಲ್ಲಿ ಉತ್ಪನ್ನವಾಗುವ ಪ್ಯಾಥೋಜಿನ್‌ಗಳು ಸಿಂಕ್‌ ಬೇಸಿನ್‌ಗೆ ಬಂದು, ತೊಳೆದಿಟ್ಟ ಪಾತ್ರೆಗಳಿಗೆ ಅಂಟಿಕೊಳ್ಳಬಹುದು. ಇವು ಸಾಕಷ್ಟು ಅಲರ್ಜಿ ಉಂಟು ಮಾಡಬಹುದು. ಇಲ್ಲಿನ ವಸ್ತುಗಳಿಗೆ ಇರುವೆ ಹಾಗೂ ಜಿರಲೆಗಳು ಇವಕ್ಕೆ ಆಕರ್ಷಿತವಾಗುತ್ತವೆ. ತೇವಾಂಶಯುಕ್ತ ಹಾಗೂ ಕತ್ತಲಿರುವಕಾರಣ ಸಿಂಕ್‌ ಪೈಪ್‌ಗಳಲ್ಲಿ ಇವು ಸುಲಭವಾಗಿ ನೆಲೆಸುತ್ತವೆ.

6. ಪೈಪ್ ಕ್ಲೀನಿಂಗ್

6. ಪೈಪ್ ಕ್ಲೀನಿಂಗ್

ಪೈಪ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಿದ್ದರೂ ಕೂಡ, ತಜ್ಞರ ಪ್ರಕಾರ ಆಗಾಗ ಕುದಿಯುವ ನೀರನ್ನು ಈ ಪೈಪ್‌ಗಳಲ್ಲಿ ಸುರಿಯುವುದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬರುತ್ತದೆ. ಇವು ಈ ಸೂಕ್ಷ್ಮ ಜೀವಿಗಳನ್ನು ನಾಶ ಪಡಿಸುತ್ತದೆ ಎನ್ನುತ್ತಾರೆ.

English summary

The 5 Dirtiest Secrets of Your Kitchen | Tips For Home Improvements | ಅಡುಗೆ ಮನೆ ಗಲೀಜಾಗಿಸುವ 5 ರಹಸ್ಸಗಳು | ಮನೆ ಅಭಿವೃದ್ಧಿಗೆ ಕೆಲ ಸಲಹೆಗಳು

Cleaning up the kitchen is part of cooking. Not only is it easier to cook and bake in a clean kitchen, but clean surfaces and storage containers will keep your family healthier and safer.
X