For Quick Alerts
ALLOW NOTIFICATIONS  
For Daily Alerts

ಕೈತೋಟದಲ್ಲಿ ಬೆಳ್ಳುಳ್ಳಿ ಬೆಳೆಯಲು ಟಿಪ್ಸ್

|

ಮನೆಯ ಹಿತ್ತಲಲ್ಲೇ ಬೆಳೆದುಕೊಳ್ಳಬಹುದಾದ ಅತ್ಯದ್ಭುತವಾಗಿರುವ ಗಿಡವೆಂದರೆ ಅದು ಬೆಳ್ಳುಳ್ಳಿ. ಹಲವು ರೀತಿಯ ಅಡುಗೆಗಳಲ್ಲಿ ನಾವು ಬೆಳ್ಳುಳ್ಳಿಯನ್ನು ಬಳಕೆ ಮಾಡುತ್ತೇವೆ. ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಉಪಯೋಗಕಾರಿಯಾಗಿರುವ ಬೆಳ್ಳುಳ್ಳಿಯನ್ನು ನಿಜಕ್ಕೂ ಆಗಾಗ ಸೇವಿಸುತ್ತಲೇ ಇರಬೇಕು.

ಒಂದು ವೇಳೆ ಮನೆಯಲ್ಲೇ ನೀವು ಬೆಳ್ಳುಳ್ಳಿಯನ್ನು ಬೆಳೆದುಕೊಳ್ಳಬೇಕು ಎಂದು ಆಲೋಚಿಸುತ್ತಿದ್ದರೆ ಖಂಡಿತ ಅದು ಬಹಳ ಸುಲಭ ಮತ್ತು ಅಗ್ಗವೂ ಆಗಿದೆ. ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೆ ಬೆಳ್ಳುಳ್ಳಿಯಲ್ಲಿ ಪಾಟ್ ನಲ್ಲಿ ಅಥವಾ ಯಾವುದಾದರೂ ಒಂದು ಸಣ್ಣ ಮಡಕೆ, ಬಕೆಟ್ ನಲ್ಲಿ ಹೇಗೆ ಬೆಳೆಯಬಹುದು ಎಂಬ ಬಗ್ಗೆ ಟಿಪ್ಸ್ ನೀಡುತ್ತಿದೆ. ಆ ಟಿಪ್ಸ್ ಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮುಂದೆ ಓದಿ.

Tips To Grow Garlic At Home

ಬೆಳ್ಳುಳ್ಳಿ ಬೆಳೆಯುವುದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಸೂರ್ಯನ ಬೆಳಕು ಜೊತೆಗೆ ತಿಳಿಯಾದ ಮಣ್ಣು ಮತ್ತು ಅದರಲ್ಲಿ ಹೀರಿಹೋಗುವಂತಹ ನೀರಿನಂಶ. ಬೆಳ್ಳುಳ್ಳಿಯ ಬಲ್ಬ್ ಗಳು ಅಂದರೆ ಬೆಳ್ಳುಳ್ಳಿಯ ಗಡ್ಡೆಗಳು ಅತಿಯಾದ ನೀರಿನಂಶವನ್ನು ಸಹಿಸುವುದಿಲ್ಲ. ನೀರಿನಂಶದ ಸರಿಯಾದ ಹೀರುವಿಕೆಯನ್ನು ಮಾಡುವುದಕ್ಕಾಗಿ ನೀವು ಸಾವಯವ ಗೊಬ್ಬರವನ್ನು ಬಳಸಬೇಕಾಗುತ್ತದೆ. ಉತ್ತಮ ಗೊಬ್ಬರದ ಬಳಕೆಯು ಮನೆಯ ಪಾಟ್ ನಲ್ಲಿ ಬೆಳ್ಳುಳ್ಳಿ ಬೆಳೆಯುವುದಕ್ಕೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಪಾಟ್ ಅಥವಾ ಕಂಟೈನರ್ ನಲ್ಲಿ ಬೆಳ್ಳುಳ್ಳಿಯನ್ನು ನೀವೇ ಸ್ವತಃ ಮನೆಯಲ್ಲೇ ಬೆಳೆದುಕೊಳ್ಳುವುದಕ್ಕಾಗಿ ಹೀಗೆ ಮಾಡಿ

ಮನೆಯ ಪಾಟ್ ನಲ್ಲಿ ಬೆಳ್ಳುಳ್ಳಿ ಬೆಳೆಯುವುದು

ಮನೆಯ ಪಾಟ್ ನಲ್ಲಿ ಬೆಳ್ಳುಳ್ಳಿ ಬೆಳೆಯುವುದು

ಈಗಾಗಲೇ ಮೇಲೆ ತಿಳಿಸಿರುವಂತೆ ಬೆಳ್ಳುಳ್ಳಿ ಬೆಳೆಯುವುದಕ್ಕೆ ಸಾಕಷ್ಟು ಸೂರ್ಯನ ಬೆಳಕಿನ ಅಗತ್ಯವಿರುತ್ತದೆ. ಪಾಟ್ ನಲ್ಲಿರುವ ಮಣ್ಣು ಸಡಿಲವಾಗಿರಬೇಕು. ತೀರಾ ಗಟ್ಟಿಯಾಗಿರುವ ಮಣ್ಣಿನಲ್ಲಿ ಬೆಳ್ಳುಳ್ಳಿ ಹುಟ್ಟುವುದು ಮತ್ತು ಬೆಳೆಯುವುದು ಬಹಳ ಕಷ್ಟವಾಗುತ್ತದೆ. ಮರಳು, ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಬೆಳ್ಳುಳ್ಳಿ ಅತ್ಯುತ್ತಮವಾಗಿ ಬೆಳೆಯುತ್ತದೆ.

ಪಾಟ್ ಆಯ್ಕೆ ಹೀಗಿರಲಿ

ಪಾಟ್ ಆಯ್ಕೆ ಹೀಗಿರಲಿ

ಮನೆಯ ಪಾಟ್ ನಲ್ಲೇ ಬೆಳ್ಳುಳ್ಳಿ ಬೆಳೆಯುವುದಕ್ಕಾಗಿ 20 ಸೆಂಟೀಮೀಟರ್ ಅಥವಾ 8 ಇಂಚು ವ್ಯಾಸದಲ್ಲಿರುವ ಪಾಟ್ ಅನ್ನು ನೀವು ಬಳಕೆ ಮಾಡಬೇಕಾಗುತ್ತದೆ. ಇದೇ ಮೇಲಿನ ಅಳತೆಯ ಆಳದ ಪಾಟ್ ಆಗಿದ್ದರೆ ಬೆಳ್ಳುಳ್ಳಿ ಗಿಡದ ಬೇರುಗಳು ಬಲವಾಗಿ ಬೆಳೆಯುವುದಕ್ಕೆ ನೆರವಾಗುತ್ತದೆ. ಒಮ್ಮೆ ನೀವು ಬೆಳ್ಳುಳ್ಳಿ ಬೀಜಗಳನ್ನು ಬಿತ್ತಿದ ನಂತರ ಬಹುಪಯೋಗಿ ಕಾಂಪೋಸ್ಟ್ ಮತ್ತು ಸ್ವಲ್ಪವೇ ಸ್ವಲ್ಪ ಸಾವಯವ ಗೊಬ್ಬರವನ್ನು ಮೇಲಿನಿಂದ ಸೇರಿಸಿ.

ಬೆಳ್ಳುಳ್ಳಿ ನೆಡುವ ವಿಧಾನ

ಬೆಳ್ಳುಳ್ಳಿ ನೆಡುವ ವಿಧಾನ

ಪ್ರತಿಯೊಂದು ಬೆಳ್ಳುಳ್ಳಿಯ ಬೀಜಗಳನ್ನು ಒಂದು ಇಂಚಿನಷ್ಟು ದೂರದಲ್ಲಿ ನೆಡಬೇಕು. ಈ ಜಾಗವು ಬೆಳ್ಳುಳ್ಳಿ ಬೀಜಗಳನ್ನು ಅತ್ಯುತ್ತಮವಾಗಿ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಡುವಂತಿರಬೇಕು. ನೀವು ತಳಿದಿರುವ ಕಾಂಪೋಸ್ಟ್ ಎಲ್ಲಾ ಸಮಯದಲ್ಲೂ ತೇವವಾಗಿರುವುದು ಒಳ್ಳೆಯದು. ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ತೇವಾಂಶದ ಪ್ರಮಾಣವು ಸಮತೋಲನದಲ್ಲಿದ್ದರೆ ಬೆಳ್ಳುಳ್ಳಿ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ.

ಮನೆಯಲ್ಲಿರುವ ಪ್ಲಾಸ್ಟಿಕ್ ಕಂಟೈನರ್ ನಲ್ಲಿ ಬೆಳ್ಳುಳ್ಳಿ ಬೆಳೆಯುವುದು

ಮನೆಯಲ್ಲಿರುವ ಪ್ಲಾಸ್ಟಿಕ್ ಕಂಟೈನರ್ ನಲ್ಲಿ ಬೆಳ್ಳುಳ್ಳಿ ಬೆಳೆಯುವುದು

ಮನೆಯಲ್ಲೇ ಬೆಳ್ಳುಳ್ಳಿ ಬೆಳೆಯುವುದಕ್ಕಾಗಿ ದೊಡ್ಡ ಪ್ಲಾಸ್ಟಿಕ್ ಪಾಟ್ ಗಳ ಅಗತ್ಯತೆ ಇರುತ್ತದೆ. ಮಣ್ಣಿನಲ್ಲಿ ವಿಸ್ತಾರ ಹೊಂದಿ ಬೆಳೆಯುವುದಕ್ಕಾಗಿ ಬೆಳ್ಳುಳ್ಳಿ ಸಾಕಷ್ಟು ಜಾಗದ ಅವಶ್ಯಕತೆ ಇರುತ್ತದೆ. ಬೆಳ್ಳುಳ್ಳಿಯ ಗಾತ್ರ ಅತ್ಯುತ್ತಮವಾಗಬೇಕು ಎಂದರೆ ನೀವು ಮಣ್ಣಿನಲ್ಲಿ ಸರಿಯಾಗಿ ಸ್ಥಳಾವಕಾಶವನ್ನು ಸರಿಯಾಗಿ ಒದಗಿಸಬೇಕು. ಹಾಗಾಗಿ 18 ಇಂಚು ಆಳ ಮತ್ತು 12 ಇಂಚು ಅಗಲವಾಗಿರುವ ಪ್ಲಾಸ್ಟಿಕ್ ಪಾಟ್ ನ್ನು ನೀವು ಆಯ್ಕೆ ಮಾಡಿಕೊಂಡರೆ ಒಳ್ಳೆಯದು.

ಪಾಟ್ ನಲ್ಲಿ ಬೆಳ್ಳುಳ್ಳಿ ಬೆಳೆಯುವುದಕ್ಕೆ ನೀವು ನಿರ್ಧರಿಸಿದಾಗ ಪಾಟಿನ ತಳಭಾಗದಲ್ಲಿ ರಂಧ್ರಗಳನ್ನು ಮಾಡುವುದನ್ನು ಮರೆಯಬೇಡಿ. ಈ ರಂಧ್ರಗಳು ಹೆಚ್ಚುವರಿ ನೀರಿನಂಶವನ್ನು ಪಾಟ್ ನಿಂದ ಹೊರಹಾಕುವುದರಿಂದಾಗಿ ನೀರಿನ ಸಮತೋಲನದಿಂದ ಬೆಳ್ಳುಳ್ಳಿ ಬೆಳೆಯಲು ಅನುಕೂಲವಾಗುತ್ತದೆ. ಆರು ತಾಸುಗಳು ಸೂರ್ಯನ ಅತ್ಯುತ್ತಮ ಬೆಳಕು ಲಭ್ಯವಾಗುವ ಜಾಗದಲ್ಲಿ ಪಾಟ್ ಇರಿಸುವುದನ್ನು ಮರೆಯಬೇಡಿ.

Read more about: ಮನೆ home garden
English summary

Tips To Grow Garlic At Home

One of the best plants to grow at home is garlic. This erotic vegetable is used to make a variety of dishes. The best thing about garlic is its wonderful health benefits. If you want to grow garlic at home, it is easy and inexpensive too. In this article, Boldsky shares with you tips on how to grow garlic in a pot or container.
Story first published: Friday, December 20, 2019, 11:53 [IST]
X
Desktop Bottom Promotion