For Quick Alerts
ALLOW NOTIFICATIONS  
For Daily Alerts

ಇದಕ್ಕೆ ಹೇಳೋದು ಮನೆಯಲ್ಲಿ ಸಾವಯವ ಕೈತೋಟ ಇರಬೇಕು ಎಂದು

|

ನಮ್ಮ ಬೇಡಿಕೆಗಳು ಹೆಚ್ಚಾದಂತೆ ಅದರ ಪೂರೈಕೆಯೂ ಹೆಚ್ಚಾಗಬೇಕು. ಅಂತಹ ಬೇಡಿಕೆಯಲ್ಲಿ ಮುಖ್ಯವಾದದ್ದು ಆಹಾರ. ಜನರ ಬೇಡಿಕೆಯನ್ನು ಪೂರೈಸಲು, ಅಧಿಕ ರಾಸಾಯನಿಕಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ಬೆಳೆಸಲಾಗುತ್ತದೆ. ಇಂತಹ ಹಣ್ಣು, ತರಕಾರಿಗಳು ದಿನದಿಂದ ದಿನಕ್ಕೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತವೆಯೇ ಹೊರತು ಒಳಿತನ್ನಲ್ಲ.

Organic Gardening Benefits and Tips

ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಸಾವಯವ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ನಮ್ಮ ಅಗತ್ಯಕ್ಕೆ ತಕ್ಕಂತೆ ಸಾವಯವ ಉತ್ಪನ್ನಗಳು ನಮಗೆ ದೊರೆಯುತ್ತವೆಯೇ? ಉತ್ತರ ಇಲ್ಲ ಎಂದಾದರೆ ನೀವೇ ಯಾಕೆ ನಿಮ್ಮ ಅಗತ್ಯಕ್ಕೆ ತಕ್ಕ ತರಕಾರಿ ಹಣ್ಣುಗಳನ್ನು ನಿಮ್ಮ ಉದ್ಯಾನದಲ್ಲಿಯೇ ಬೆಳೆಯಬಾರದು?!

ಪರಿಸರ ಸ್ನೇಹಿಯಾಗಿ ಉದ್ಯಾನವನ್ನು ಬೆಳೆಸುವುದು ಒಂದು ಅದ್ಭುತ ಕಾರ್ಯ. ಇದರಿಂದ ನೀವು ರುಚಿಕರವಾದ, ರಾಸಾಯನಿಕ ಮುಕ್ತ ಆಹಾರವನ್ನು ಪಡೆಯುತ್ತೀರಿ, ಜೊತೆಗೆ ಈ ಭೂಮಿ ತಾಯಿಗೆ ಆಕೆ ಅರ್ಹವಾದ ಗೌರವವನ್ನು (ರಕ್ಷಣೆಯನ್ನು) ಪಡೆಯುತ್ತಾಳೆ. ನಿಮ್ಮ ತೋಟದಲ್ಲಿ ಸಾವಯವ ರೀತಿಯಲ್ಲಿ ಗಿಡಗಳನ್ನು ಬೆಳೆಸುವುದು ಒಂದು ಸುಲಭ ಪ್ರಕ್ರಿಯೆ.

ಸಂಪೂರ್ಣ ನೈಸರ್ಗಿಕ

ಸಂಪೂರ್ಣ ನೈಸರ್ಗಿಕ

ಸಾವಯವ ತೋಟಗಾರಿಕೆಯಿಂದ ಅನೇಕ ಪ್ರಯೋಜನಗಳಿವೆ. ಇದು ರಾಸಾಯನಿಕ ಮುಕ್ತ ಪರಿಸರದ ಕೊಡುಗೆಯನ್ನು ನೀಡುವುದು ಮಾತ್ರವಲ್ಲ ನೀವು ಮತ್ತು ನಿಮ್ಮ ಕುಟುಂಬದವರು ತಿನ್ನುವ ರುಚಿಕರವಾದ ಆಹಾರವು ಸಂಪೂರ್ಣ ನೈಸರ್ಗಿಕವಾಗಿದೆ ಎಂದು ನಿಮ್ಮ ಮನಸ್ಸಿನ ಶಾಂತಿ ತೊರೆಯುತ್ತದೆ ಅಲ್ಲವೇ?.

ಹೌದು, ರುಚಿಕರವಾದ ಆಹಾರವನ್ನು ಬೆಳೆಸುವುದರಿಂದ ಸಾವಯವ ತೋಟಗಾರಿಕೆ ನಿಮ್ಮ ಸಮಯ, ಹಣ ಮತ್ತು ನೀರನ್ನು ಸಹ ಉಳಿಸುತ್ತದೆ. ಸಾವಯವ ತೋಟಗಾರಿಕೆ ನೀಡುವ ಬಹು ಪ್ರಯೋಜನಗಳ ವಿವರಗಳನ್ನು ಇಲ್ಲಿ ನೋಡೋಣ.

ತಾಜಾ, ರುಚಿಯಾದ ಸಾವಯವ ಆಹಾರ

ತಾಜಾ, ರುಚಿಯಾದ ಸಾವಯವ ಆಹಾರ

ಅಂಗಡಿಯಲ್ಲಿ ಖರೀದಿಸಿದ ಯಾವುದೇ ಹಣ್ಣು ಅಥವಾ ತರಕಾರಿಗಳಿಗಿಂತ ನೀವೇ ನಿಮ್ಮ ಕೈಯಾರ ನಿಮ್ಮ ತೋಟದಲ್ಲಿ ಬೆಳೆಸಿದ ಪೊದೆ, ಬಳ್ಳಿ ಮರಗಳ ಫಲಗಳೇ ನಿಮಗೆ ಹೆಚ್ಚು ರುಚಿಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವೇ ಬೆಳೆಸಿದ ತರಕಾರಿ, ಹಣ್ಣುಗಳು ನೀವು ಖರೀದಿಸಿ ತರುವ ಉತ್ಪನ್ನಗಳಷ್ಟು ಗಾತ್ರ, ಬಣ್ಣಗಳಲ್ಲಿ ಏಕರೂಪವಾಗಿಲ್ಲದೇ ಇರಬಹುದು ಆದರೆ ನೀವು ಅದರ ರುಚಿಯಲ್ಲಿ ಮಾತ್ರ ತೃಷ್ತಿಯನ್ನು ಕಂಡುಕೊಳ್ಳುವಿರಿ. ಅದರಲ್ಲೂ ನೀವೇ ಸಾವಯವ ಉತ್ಪನ್ನಗಳನ್ನು ಬೆಳೆಯುತ್ತಿದ್ದೀರಿ ಎನ್ನುವ ಹೆಮ್ಮೆಗಿಂತ ಹೆಚ್ಚಾಗಿ ಬೇರೆ ಯಾವುದೇ ಅಭಿರುಚಿ ಇಲ್ಲ.

ಸಾವಯವ ತೋಟಗಾರಿಕೆಯ ಆರೋಗ್ಯ ಪ್ರಯೋಜನಗಳು

ಸಾವಯವ ತೋಟಗಾರಿಕೆಯ ಆರೋಗ್ಯ ಪ್ರಯೋಜನಗಳು

ಸಾವಯವ ತೋಟಗಾರಿಕೆಗೆ ನೀವು ಆರಂಭದಿಂದಲೇ ಕಡಿಮೆ ರಾಸಾಯನಿಕಗಳನ್ನು ಬಳಸಿದರೆ, ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರ ಬಳಕೆಯನ್ನು ತಡೆಗಟ್ಟಬಹುದು. ರಾಸಾಯನಿಕಗಳ ಸಿಂಪಡನೆಯನ್ನು ಮಾಡದಿರುವುದು ಒಳಿತು. ನೀವು ನೈಟ್ರೇಟ್ ಆಧಾರಿತ ರಸಗೊಬ್ಬರಗಳನ್ನು ಬಳಸದಿದ್ದರೆ ನಿಮ್ಮ ಆಹಾರ ಹೀರಿಕೊಳ್ಳುವ ನೈಟ್ರೇಟ್ಗಳ ಪ್ರಮಾಣವೂ ಸಹ ಕಡಿಮೆಯಾಗುತ್ತದೆ.

ಸಾವಯವ ತೋಟಗಾರಿಕೆಯ ಇನ್ನೊಂದು ಪ್ರಯೋಜನವೆಂದರೆ, ಸಾವಯವವಾಗಿ ಬೆಳೆದ ಉತ್ಪನ್ನವು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತದೆ ಇದು ಕ್ಯಾನ್ಸರ್ ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಇವೆಲ್ಲವುಗಳ ಜೊತೆಗೆ ಅತಿದೊಡ್ಡ ಆರೋಗ್ಯ ವರ್ಧನೆ ಪ್ರಯೋಜನವೂ ಇದೆ. ನಿಮ್ಮ ತೋಟದಲ್ಲಿಯೇ ನೀವೇ ಬೆಳೆಸಿದ ಹಣ್ಣುಗಳು ಮತ್ತು ತರಕಾರಿಗಳನ್ನು ನೀವು ಹೆಚ್ಚೆಚ್ಚು ಸೇವಿಸಬಹುದು ಮತ್ತು ಅವುಗಳು ಅತ್ಯಂತ ರುಚಿಕರವೂ ಆಗಿರುತ್ತವೆ.

ಸಾವಯವ ತೋಟಗಾರಿಕೆಯ ಪರಿಸರ ಪ್ರಯೋಜನಗಳು

ಸಾವಯವ ತೋಟಗಾರಿಕೆಯ ಪರಿಸರ ಪ್ರಯೋಜನಗಳು

ಸಾವಯವ ಗೊಬ್ಬರಗಳನ್ನು ಸಸ್ಯ ಮತ್ತು ಪ್ರಾಣಿ ಮೂಲಗಳಾದ ಗೊಬ್ಬರ ಮತ್ತು ಕಾಂಪೋಸ್ಟ್ನಿಂದ ತಯಾರಿಸಲಾಗುತ್ತದೆ. ಕಾಂಪೋಸ್ಟ್ ಮತ್ತು ಹಸಿಗೊಬ್ಬರವನ್ನು ಬಳಸುವುದರಿಂದ ಮೇಲ್ಮಣ್ಣು ಸವೆತ ಕಡಿಮೆಯಾಗುತ್ತದೆ. ಮತ್ತು ಅವು ನಿಧಾನವಾಗಿ ಒಡೆಯುವಾಗ ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ.

ಉತ್ತಮ ಮಣ್ಣನ್ನು ಬಳಸಿದ ನಂತರ, ನಿಮಗೆ ಕಡಿಮೆ ಗೊಬ್ಬರ, ಮತ್ತು ಸಮಯ ಸಾಕು. ಸುಧಾರಿತ ಮಣ್ಣು ನೀರನ್ನು ಉತ್ತಮವಾಗಿ ಹಿಡಿದಿಟ್ಟುಕೊಳ್ಳುತ್ತದೆ, ಇದರಿಂದ ನೀರು ಕಡಿಮೆ ನೀರು ಸಾಕಾಗುತ್ತದೆ ಮತ್ತು ನೀರು ಮಣ್ಣಿನಿಂದ ಹರಿದು ಹೋಗುವುದಿಲ್ಲ. ಇದಕ್ಕಿಂತ ಹೆಚ್ಚು ಪ್ರಯೋಜನವೆಂದರೆ ಯಾವುದೇ ರಾಸಾಯನಿಕವೂ ನೀರಿನ ಮೂಲವನ್ನು ಸೇರುವುದಿಲ್ಲ. ಇದರಿಂದ ಅತ್ಯಂತ ಉತ್ತಮವಾದ ರಾಸಾಯನಿಕ ಮುಕ್ತ ಫಲಗಳನ್ನು ಪಡೆಯಬಹುದು.

ಜೊತೆಗೆ ನೀವು ನಿಮ್ಮ ಅಡುಗೆ ಮನೆಯ ತ್ಯಾಜ್ಯ ಮತ್ತು ತೋಟದ ತ್ಯಾಜ್ಯಗಳನ್ನೇ ತೋಟಕ್ಕೆ ಬಳಸಿದರೆ ಸುತ್ತಲಿನ ಪರಿಸರವೂ ಸ್ವಚ್ಛವಾಗಿರುತ್ತದೆ. ಕೆಲವು ಸಾವಯವ ಸಸ್ಯನಾಶಕಗಳು ಮತ್ತು ಕೀಟನಾಶಕಗಳು (ಉದಾ: ವಿನೆಗರ್, ಎಪ್ಸಮ್ ಲವಣಗಳು, ಕ್ಯಾಸ್ಟೈಲ್ ಸೋಪ್) ನಿಮ್ಮ ತೋಟಕ್ಕೆ ಬರುವ ಜೇನುನೊಣಗಳು, ಚಿಟ್ಟೆಗಳು ಮತ್ತು ಪಕ್ಷಿಗಳಿಂದ ನಿಮ್ಮ ಬೆಳೆಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತವೆ ಇದರಿಂದ ಪರಾಗಸ್ಪರ್ಶಕಗಳು, ಪ್ರಯೋಜನಕಾರಿ ಕೀಟಗಳು ತೋಟದಲ್ಲಿಯೇ ಉಳಿಯುವಂತಾಗುತ್ತದೆ.

ಸಾವಯವ ತೋಟಗಾರಿಕೆ ನೀರನ್ನು ಸಂರಕ್ಷಿಸಲು ಹೇಗೆ ಸಹಾಯ ಮಾಡುತ್ತದೆ?

ಸಾವಯವ ತೋಟಗಾರಿಕೆ ನೀರನ್ನು ಸಂರಕ್ಷಿಸಲು ಹೇಗೆ ಸಹಾಯ ಮಾಡುತ್ತದೆ?

ಸಾವಯವ ತೋಟಗಾರಿಕೆಯಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳು, ಅದರಲ್ಲೂ ವಿಶೇಷವಾಗಿ ನೀರು ಕಡಿಮೆ ಸಾಕಾಗುತ್ತದೆ ಹಾಗಾಗಿ ಈ ನೀರನ್ನು ನಿಮ್ಮ ಹಿತ್ತಲ ಗಿಡಗಳಿಗೂ ಬಳಸಬಹುದು. ಸಾವಯವ ಸಂಯುಕ್ತಗಳಲ್ಲಿ ಸಮೃದ್ಧವಾಗಿರುವ ಮಣ್ಣು ತೇವಾಂಶವನ್ನು ಉತ್ತಮವಾಗಿ ಹಿಡಿದಿಟ್ಟುಕೊಳ್ಳುತ್ತದೆ, ಅಂದರೆ ಕಡಿಮೆ ನೀರು ಸಾಕಾಗುತ್ತದೆ. ಮಣ್ಣಿನ ಮೇಲೆ ದಪ್ಪವಾಗಿ ಸಾವಯವ ಹಸಿಗೊಬ್ಬರವನ್ನು ಸೇರಿಸುವುದರಿಂದ ನೀರು ಆವಿಯಾಗುವಿಕೆ ಕಡಿಮೆಯಾಗುತ್ತದೆ. ಜೊತೆಗೆ, ಹಸಿಗೊಬ್ಬರ, ತೇವಾಂಶವನ್ನು ಉಳಿಸಿಕೊಂಡು ಸಸ್ಯಗಳಿಗೆ ಹೆಚ್ಚುವರಿ ಆರ್ದ್ರತೆ ಸಿಗುವಂತಾಗುತ್ತದೆ.

ಸಾವಯವ ತೋಟಗಾರಿಕೆಯಿಂದ ಹಣವನ್ನು ಹೇಗೆ ಉಳಿಸಬಹುದು?

ಸಾವಯವ ತೋಟಗಾರಿಕೆಯಿಂದ ಹಣವನ್ನು ಹೇಗೆ ಉಳಿಸಬಹುದು?

ನೀವು ಸಾವಯವವಾಗಿ ತೋಟಗಾರಿಕೆ ಮಾಡುವಾಗ ಕಡಿಮೆ ಹಣವನ್ನು ವ್ಯಯಿಸಿದರೆ ಸಾಕು ಏಕೆಂದರೆ ನೀವು ರಾಸಾಯನಿಕ ಗೊಬ್ಬರಗಳನ್ನು ಖರೀದಿಸದಿದ್ದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ರಾಸಾಯನಿಕಗಳಿಗೆ ಬದಲಾಗಿ ನೀವು ಬಳಸುವ ಅಡಿಗೆ ತ್ಯಾಜ್ಯ ಹಾಗೂ ಮತ್ತಿತರ ತ್ಯಾಜ್ಯಗಳು ಮಣ್ಣಿನ ಫಲವತ್ತತೆಯನ್ನೂ ಉಳಿಸಿ ನಿಮಗೆ ಉತ್ತಮ ಫಸಲನ್ನು ನೀಡುತ್ತದೆ.

ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಕೀಟನಾಶಕಗಳನ್ನಾಗಿ ಬಳಸಬಹುದು. ಇದರಿಂದ ನೀವು ಕೀಟನಾಶಕಗಳ ಖರೀದಿಗೆ ವ್ಯಯಿಸುವ ಹಣವನ್ನು ಉಳಿಸಬಹುದು. ನೀವು ಉತ್ತಮ ಫಸಲನ್ನು ಹೊಂದಿದ್ದರೆ ಅದನ್ನು ಉಳಿತಾಯ ಮಾಡುವುದನ್ನೂ ಕಲಿತಿದ್ದರೆ ಚಳಿಗಾಲದಲ್ಲಿ ಹಸಿರುಮನೆಯಲ್ಲಿ ಬೆಳೆದ ಬೆಳೆಗಳನ್ನು ಬಳಸದೇ ಹಣವನ್ನು ಉಳಿತಾಯ ಮಾಡಬಹುದು.

ನಿಮ್ಮ ತೋಟವನ್ನು ಸಾವಯವ ತೋಟವನ್ನಾಗಿಸಲು ಸುಲಭ ಮಾರ್ಗಗಳು

ನಿಮ್ಮ ತೋಟವನ್ನು ಸಾವಯವ ತೋಟವನ್ನಾಗಿಸಲು ಸುಲಭ ಮಾರ್ಗಗಳು

ಮಣ್ಣಿಗೆ ಕಾಂಪೋಸ್ಟ್ (ಜೈವಿಕ ಗೊಬ್ಬರ) ಬೆರೆಸಿ

ಕಾಂಪೋಸ್ಟ್, ಇದು ಒಂದು ನಾಮಪದ ಹಾಗೂ ಕ್ರಿಯಾಪದ ಎರಡೂ ಆಗಿದೆ ಎನ್ನಬಹುದು, ಹೇಗೆ ಅಂತಿರಾ? ನಾಮಪದವಾಗಿ ನೋಡುವುದಾದರೆ, ಕಾಂಪೋಸ್ಟ್ ನೈಸರ್ಗಿಕ ಗೊಬ್ಬರವಾಗಿದ್ದು ಪೋಶಕಾಂಶಗಳಿಂದ ಸಮೃದ್ಧವಾದ ಗೊಬ್ಬರವಾಗಿದೆ. ಇದು ಸಾಮಯವ ವಸ್ತುಗಳಿಂದ ಕೂಡಿದ್ದು ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ. ಇನ್ನು ಕ್ರಿಯಾಪದವಾಗಿ ನೋಡುವುದಾದರೆ, ಕಾಂಪೋಸ್ಟ್, ಇದು ಅಡುಗೆ ಮನೆಯ ತ್ಯಾಜ್ಯ ಮತ್ತು ತೋಟದಲ್ಲಿನ ತ್ಯಾಜ್ಯ (ಹುಲ್ಲುಗಳು, ಉದುರಿದ ಎಲೆಗಳು, ಕೊಳೆದ ಹೂವುಗಳು) ದ ಮೂಲಕ ತಯಾರಾಗುವಂತದ್ದು.

ಸಾವಯವ ಹಸಿಗೊಬ್ಬರವನ್ನು ಹಾಕಿ

ಸಾವಯವ ಹಸಿಗೊಬ್ಬರವನ್ನು ಹಾಕಿ

ನಿಮ್ಮ ಸಾವಯವ ಉದ್ಯಾನದಲ್ಲಿ, ಸಸ್ಯಗಳ ಸುತ್ತಲೂ ಸಾವಯವ ಗೊಬ್ಬರವನ್ನು ಮಣ್ಣಿನ ಮೇಲ್ಪದರಕ್ಕೆ ಹಾಕಿದರೆ ಎರಡು ಉದ್ದೇಶಗಳನ್ನು ಪೂರೈಸಬಹುದು: ಇದು ಕಳೆ ಬೆಳೆಸುವ ಬೀಜಗಳು ಮೊಳಕೆಯೊಡೆಯುವುದನ್ನು ತಪ್ಪಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ಸಂರಕ್ಷಿಸುತ್ತದೆ. ಆದ್ದರಿಂದ ನಿಮಗೆ ಹೆಚ್ಚು ಕಳೆ ಕೀಳುವ ಮತ್ತು ಹೆಚ್ಚು ನೀರುಣಿಸುವ ಕಷ್ಟ ಇರುವುದಿಲ್ಲ. ಜೊತೆಗೆ ಹಸಿಗೊಬ್ಬರವು ನಿಮ್ಮ ತೋಟವನ್ನು ಸಸ್ಯಗಳ ಬುಡವನ್ನು ಸುಂದರವಾಗಿ ಹಾಗೂ ಸಮೃದ್ಧವಾಗಿ ಕಾಣುವಂತೆ ಮಾಡಿ ಕಣ್ಣಿಗೆ ಆಹ್ಲಾದಕರ ನೋಟವನ್ನು ಒದಗಿಸುತ್ತದೆ.

ಸುರಕ್ಷಿತ ಕೀಟ ನಿಯಂತ್ರಕಗಳನ್ನು ಬಳಸಿ

ಸುರಕ್ಷಿತ ಕೀಟ ನಿಯಂತ್ರಕಗಳನ್ನು ಬಳಸಿ

ನಿಮ್ಮ ಸಾವಯವ ತೂಟದಲ್ಲಿ ಕೀಟಗಳು ಬೆಳೆಗಳನ್ನು ಹಾಳುಮಾಡುತ್ತಿವೆ ಎಂದಾದರೆ ಅದಕ್ಕೆ ಔಷಧಿಗಳನ್ನು ಸಿಂಪಡಿಸುವ ಮುನ್ನ ಸಂಶೋಧನೆಯನ್ನು ಮಾಡಿ. ಕೀಟಗಳಿಗೆ ಸರಿಯಾದ ಔಷಧಿಯನ್ನು ಬಳಸುವುದು ಅತ್ಯಂತ ಮುಖ್ಯ. ಇಲ್ಲವಾದಲ್ಲಿ ಇದು ಸಸ್ಯಗಳಿಗೆ ತೊಂದರೆಯಾಗಬಹುದು. ಉದಾ: ನೀವು ಬೆಳೆಸಿದ ಟೊಮೆಟೊ ಗಿಡಕ್ಕೆ ಕೀಟಗಳು ಹಾನಿಯುಂಟು ಮಾಡುತ್ತಿದ್ದರೆ, ಆ ಸಸ್ಯವನ್ನು ಸೋಪಿನ ನೀರಿನಲ್ಲಿ ಅದ್ದಿ. ಸೋಪು, ಮತ್ತು ಬೇವಿನ ಎಲೆ ಕೀಟಗಳನ್ನು ತೆಗೆಯುವ ಪರಿಣಾಮಕಾರಿ ಮಾರ್ಗವಾಗಿದೆ.

ಸೂಕ್ತವಾದ ಆರೈಕೆ ಹಾಗೂ ಸರಿಯಾದ ಪೋಷಣೆಯಿಂದ ನಿಮ್ಮ ಕೈತೋಟದಲ್ಲಿ ಅಧಿಕ ಆರೋಗ್ಯಕರ ಫಲ ಪಡೆಯಲು ಸಾಧ್ಯ.

English summary

Organic Gardening Benefits and Tips

Here we are duscussing about Organic Gardening Benefits and Tips. raising delicious food, organic gardening will save you time, money, and even water. Let's dig into the details on the multiple benefits that organic gardening has to offer read more.
X
Desktop Bottom Promotion