For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಈ ಗಿಡಗಳಿದ್ದರೆ ಸೊಳ್ಳೆಗಳು ಬರುವುದೇ ಇಲ್ಲ!

|

ಸೊಳ್ಳೆಗಳು ಯಾವುದೇ ಕಾಲಮಾನಕ್ಕೆ ಸೀಮಿತವಾಗದೇ ಎಲ್ಲಾ ಹವಾಮಾನದಲ್ಲೂ ಕಾಡುವ ಮಾರಣಾಂತಿಕ ಕೀಟವಾಗಿದೆ. ಯಕಶ್ಚಿತ್‌ ಸೊಳ್ಳೆ ಎಂದು ನಿರ್ಲಕ್ಷಿಸಿದರೆ ಅತ್ಯಂತ ಭೀಕರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

Mosquito Repellent Plants to Grow In Your Balcony

ಮಲೇರಿಯಾ, ಡೆಂಗ್ಯೂ, ಚಿಕನ್‌ ಗುನ್ಯಾ, ಜಿಕಾ ವೈರಸ್‌, ಜ್ವರ, ಎನ್ಸೆಫಾಲಿಟಿಸ್‌ಗಳಂತಹ ಗಂಭೀರ ಕಾಯಿಲೆಗಳನ್ನು ಇದು ಹರಡುತ್ತವೆ. ಇನ್ನು ನೀವೇನಾದರೂ ಸಾಕುಪ್ರಾಣಿಗಳನ್ನು ಸಾಕಿದ್ದರೆ ಅದರಲ್ಲೂ ನಾಯಿಗಳ ಹೃದಯದ ಹುಳುಗಳಿಗೆ ಸೊಳ್ಳೆಗಳೇ ಕಾರಣವಾಗುತ್ತದೆ. ಆದ್ದರಿಂದ ಇದು ಕೇವಲ ಕಿರಿಕಿರಿ ಅಥವಾ ಕಡಿತದ ಬಗ್ಗೆ ಅಷ್ಟಕ್ಕೇ ಸೀಮಿತಗೊಳಿಸದೇ ಇದು ಮನೆಗೇ ನುಸುಳದಂತೆ ಎಚ್ಚರಿಕೆ ವಹಿಸಬೇಕಿದೆ.

ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಗಳು, ರಿಪೆಲ್ಲೆಂಟ್‌ ಸ್ಪ್ರೇಗಳು ಲಭ್ಯವಿದ್ದರೂ ಬಹುತೇಕ ರಾಸಾಯನಿಕಗಳಿಂದ ಕೂಡಿರುತ್ತದೆ, ಇವು ಮತ್ತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿ ಇಂದಿನ ಲೇಖನದಲ್ಲಿ ನೈಸರ್ಗಿಕವಾಗಿಯೇ ಯಾವುದೇ ರಾಸಾಯನಿಕ ಇಲ್ಲದೇ, ಮನೆಯಲ್ಲೇ ಕೆಲವು ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ನಿವಾರಣೆ ಮಾಡಬಹುದು. ಈ ಗಿಡಗಳಿದ್ದರೆ ಸೊಳ್ಳೆಗಲು ಮನೆಗೆ ಬರುವುದೇ ಇಲ್ಲ, ಯಾವೆಲ್ಲಾ ಗಿಡಗಳು, ಹೇಗೇ ಇದು ಸೊಳ್ಳೆ ನಿವಾರಣೆಗೆ ಸಹಕಾರಿ ಎಂಬುದನ್ನು ಮುಂದೆ ತಿಳಿಯೋಣ.

ಚೆಂಡು ಹೂ ಸಸ್ಯ

ಚೆಂಡು ಹೂ ಸಸ್ಯ

ಚೆಂಡು ಹೂ ಅಥವಾ ಸಸ್ಯ ನಮಗೆ ಹೊಸತೇನಲ್ಲ. ಬಹುತೇಕರ ಮನೆಗಳಲ್ಲಿ ಸುಲಭವಾಗಿಯೇ ಬೆಳೆಯಬಹುದಾದ ಸಸ್ಯಇದಾಗಿದೆ, ಇದರ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಇದು ಸುಲಭವಾಗಿ ಬೆಳೆಯುವ ಹೂವಾಗಿದ್ದು, ಇದು ಸೊಳ್ಳೆಗಳನ್ನು ತಡೆಯುವ ವಾಸನೆಯನ್ನು ಪಸರಿಸುತ್ತದೆ. ಸೊಳ್ಳೆಗಳು ಮನೆಗ ಬರದಂತೆ ತಡೆಯಲು ಅವುಗಳನ್ನು ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಸಹ ಇಡಬಹುದು. ಚೆಂಡು ಹೂ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವುದಲ್ಲದೆ, ಅವು ವೈಟ್‌ಫ್ಲೈಸ್, ಗಿಡಹೇನುಗಳು, ಥ್ರೈಪ್ಸ್ ಮತ್ತು ಟೊಮೆಟೊ ಹಾರ್ನ್‌ವರ್ಮ್‌ಗಳನ್ನು ಸಹ ತಡೆಯುತ್ತವೆ.

ತುಳಸಿ

ತುಳಸಿ

ಸೊಳ್ಳೆ ನಿವಾರಿಸುವ ಸಸ್ಯಗಳ ಪಟ್ಟಿಯಲ್ಲಿ ತುಳಸಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಇದಕ್ಕೆ ವಿಶೇಷ ಮಹತ್ವವಿದೆ, ಪ್ರತಿಯೊಬ್ಬರ ಬೆಳೆಯುವ ಪೂಜ್ಯನೀಯ ಗಿಡ ಇದಾಗಿದೆ. ಇದು ಕೀಟ ನಿವಾರಕವಾಗಿ ಕಾರ್ಯನಿರ್ವಹಿಸುವ ಸಸ್ಯವಾಗಿದೆ. ತುಳಸಿ ಎಲೆಗಳ ಬಲವಾದ ವಾಸನೆಯು ಸೊಳ್ಳೆಗಳನ್ನು ನಿಮ್ಮ ಮನೆಯಿಂದ ದೂರವಿರಿಸಲು ಸಹಾಯ ಮಾಡುತ್ತದೆ. ತುಳಸಿಯನ್ನು ತೇವಾಂಶವನ್ನು ಬಯಸುತ್ತದೆ, ಅದಕ್ಕಾಗಿ ಹೇರಳವಾದ ನೀರು ಮತ್ತು ಸಾಕಷ್ಟು ಸೂರ್ಯನ ಬೆಳಕು ಬೇಕು. ಸಸ್ಯವನ್ನು ಪಾತ್ರೆಗಳಲ್ಲಿ ಅಥವಾ ಪಾಟ್‌ಗಳಲ್ಲಿ ಬೆಳೆಸಬಹುದು. ಅಲ್ಲದೆ ಇದು ಗಿಡಮೂಲಿಕೆಯ ಇತರ ಅನೇಕ ಪ್ರಯೋಜನಕಾರಿ ಅಂಶ ಹೊಂದಿದೆ.

ನಿಂಬೆ ಹುಲ್ಲು

ನಿಂಬೆ ಹುಲ್ಲು

ಮತ್ತೊಂದು ಸೊಳ್ಳೆ ನಿವಾರಕ ಸಸ್ಯ ನಿಂಬೆ ಹುಲ್ಲು, ಇದನ್ನು ಸಿಂಬೊಪೊಗನ್ ಸಿಟ್ರೇಟ್ ಎಂದೂ ಕರೆಯುತ್ತಾರೆ. ಇದರ ಹೂವು ಸಿಟ್ರೊನೆಲ್ಲಾವನ್ನು ಹೊಂದಿದ್ದು, ಇದು ಕೀಟವನ್ನು ಹಿಮ್ಮೆಟ್ಟಿಸುವ ನೈಸರ್ಗಿಕ ತೈಲವಾಗಿದೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಶಾಖಾಹಾರಿ ಭಕ್ಷ್ಯಗಳಲ್ಲಿ ಪರಿಮಳವನ್ನು ತರಲು ಲೆಮನ್‌ಗ್ರಾಸ್ ಅನ್ನು ಬಳಸಲಾಗುತ್ತದೆ. ಭಾರತದಲ್ಲಿ ಈ ಸಸ್ಯವನ್ನು ಉರಿಯೂತದ ಔಷಧಿಯಾಗಿ ಬಳಸಲಾಗುತ್ತದೆ. ನಿಂಬೆ ಹುಲ್ಲು ಸುಂದರವಾದ ಸುವಾಸನೆಯನ್ನು ಹೊಂದಿದ್ದು ಇದನ್ನು ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ.

ರೋಸ್ಮರಿ

ರೋಸ್ಮರಿ

ನೈಸರ್ಗಿಕ ಸೊಳ್ಳೆ ನಿವಾರಕವೆಂದರೆ ರೋಸ್ಮರಿ ಸಸ್ಯ. ರೋಸ್ಮರಿ ಎಂಬುದು ನಿಮಗೆ ಪರಿಚಿತವಾಗಿರುವ ಆರೊಮ್ಯಾಟಿಕ್ ಸಸ್ಯವಾಗಿದೆ ಮತ್ತು ಅವುಗಳ ಸುವಾಸನೆಯು ಸೊಳ್ಳೆಗಳನ್ನು ನಿಮ್ಮ ಮನೆಯಿಂದ ದೂರವಿರಿಸುತ್ತದೆ. ರೋಸ್ಮರಿ ಗಿಡಗಳು ಬೆಚ್ಚಗಿನ ಮತ್ತು ಶುಷ್ಕ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುವುದರಿಂದ ಅದನ್ನು ಸುಲಭವಾಗಿ ಪಾತ್ರೆಗಳಲ್ಲಿ ಬೆಳೆಸಬಹುದು. ರೋಸ್ಮರಿ ನೋಡಲು ಸಹ ಅಲಂಕಾರಿಕವಾಗಿದ್ದು, ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ನಿಮ್ಮ ತೋಟದಲ್ಲಿ ರೋಸ್ಮರಿಯನ್ನು ಇಟ್ಟುಕೊಳ್ಳುವುದರ ಮೂಲಕ ಸೊಳ್ಳೆಗಳು ಮಾತ್ರವಲ್ಲದೆ ಅನೇಕ ಕೀಟಗಳನ್ನು ಸಹ ನೀವು ನಿವಾರಿಸಬಹುದು ಅಲ್ಲದೇ, ಗಿಡಮೂಲಿಕೆಗಳ ಸುಂದರವಾದ ಸುಗಂಧವನ್ನು ಆನಂದಿಸಬಹುದು.

ಕ್ಯಾಟ್ನಿಪ್ / ನೇಪೆಟಾ ಕ್ಯಾಟರಿಯಾ

ಕ್ಯಾಟ್ನಿಪ್ / ನೇಪೆಟಾ ಕ್ಯಾಟರಿಯಾ

ಕ್ಯಾಟ್ನಿಪ್ ಅಥವಾ ನೇಪೆಟಾ ಕ್ಯಾಟರಿಯಾ ಜಾತಿಯ ಸಸ್ಯಗಳು ಸಹ ಸೊಳ್ಳೆ ನಿವಾರಕವಾಗಿದೆ. ನೇಪೆಟಾ ಕ್ಯಾಟರಿಯಾ ಸಸ್ಯ ಸಾಂಪ್ರದಾಯಿಕ ರಾಸಾಯನಿಕ ದ್ರವೌಷಧವಾಗಿದ್ದು, ವಿಷಕಾರಿಯಲ್ಲದ ವಾತಾವರಣವನ್ನು ಶುದ್ಧಗೊಳಿಸುವ ಸಸ್ಯವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಸೊಳ್ಳೆಗಳಿಂದ ದೂರವಿರಲು ಬೆಳ್ಳುಳ್ಳಿ ಮತ್ತೊಂದು ನೈಸರ್ಗಿಕ ಮೂಲವಾಗಿದೆ. ನಿಮ್ಮ ತೋಟದಲ್ಲಿ ಬೆಳ್ಳುಳ್ಳಿ ಸಸ್ಯವನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ತಡೆಯಬಹುದು. ಅಲ್ಲದೇ, ಬೆಳ್ಳುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮನೆಯ ಸುತ್ತಮುತ್ತ ಹರಡಬಹುದು. ಮನೆಯ ಒಳಗೆ ಸಹ ಇದನ್ನು ಪ್ರಯೋಗಿಸಬಹುದು. ಸೊಳ್ಳೆಯನ್ನು ಹಿಮ್ಮೆಟ್ಟಿಸುವ ಬಾಡಿ ಸ್ಪ್ರೇ ಮಾಡಲು ಇದನ್ನು ನೈಸರ್ಗಿಕ ಆರೊಮ್ಯಾಟಿಕ್ ಎಣ್ಣೆಗಳೊಂದಿಗೆ ಬೆರೆಸಬಹುದು.

English summary

Mosquito Repellent Plants to Grow In Your Balcony

Here we are discussing about few mosquito repellent plants that you can easily grow in your balcony or garden area. Mosquitoes are also responsible for heartworm in your pets specially dogs. So it isn’t just about the irritation or the itchy bites they give us but it’s about your health. Read more.
X
Desktop Bottom Promotion