For Quick Alerts
ALLOW NOTIFICATIONS  
For Daily Alerts

ಬಾತ್ ರೂಮ್ ನಲ್ಲಿ ಇಡೋಕೆ ಗಿಡಗಳನ್ನ ಹುಡುಕ್ತಾ ಇದೀರಾ? ಇಲ್ಲಿದೆ ಪಟ್ಟಿ

|

ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಗಿಡ ನೆಡುವುದು, ಗಿಡ ಇಡುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಈ ಗಿಡಗಳು ಮನೆಗಳಿಗೆ ವಿಭಿನ್ನ ಲುಕ್ ನೀಡುವುದಲ್ಲದೇ, ಮನೆಯೊಳಗಿರುವ ಮನಸ್ಸುಗಳಿಗೆ ಪಾಸಿಟಿವಿಟಿ ಫೀಲ್ ಕೊಡುತ್ತೆ. ಆದರೆ ಕೆಲವರು ಇನ್ನೂ ಒಂದು ಸ್ಟೆಪ್ ಮುಂದೆ ಹೋಗಿ ಬಾತ್ ರೂಮ್ ಗೂ ಹಸಿರು ಸ್ಪರ್ಶ ನೀಡ್ತಾ ಇದ್ದಾರೆ.

ಮನೆಯೊಳಗೆ ಇಡಲು ಬೇಕಾದಷ್ಟು ಗಿಡಗಳು ಲಭ್ಯವಿವೆ. ಆದರೆ ಬಾತ್ ರೂಮ್ಗೆ ಸೂಕ್ತವಾದ ಸಸ್ಯಗಳನ್ನು ಆರಿಸುವುದು ಕಷ್ಟದ ಕೆಲಸ.ಯಾಕಂದ್ರೆ ಆ ಸಸ್ಯಗಳು ಕಡಿಮೆ ಬೆಳಕು ಮತ್ತು ತೇವಾಂಶಕ್ಕೆ ಹೊಂದಿಕೊಳ್ಳಬೇಕು. ಈ ವಿಚಾರದಲ್ಲಿ ನಿಮಗೆ ಸಹಾಯ ಮಾಡಲೆಂದು ನಾವು ಬಾತ್ ರೂಮಗೆ ಸರಿಹೊಂದುವಂತಹ ಸಸ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬಾತ್ ರೂಮ್ಗೆ ಸರಿಹೊಂದುವಂತಹ ಗಿಡಗಳ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ:

1) ಪೊಥೋಸ್ ಅಥವಾ ಮನಿ ಪ್ಲಾಂಟ್:

1) ಪೊಥೋಸ್ ಅಥವಾ ಮನಿ ಪ್ಲಾಂಟ್:

ಸದಾ ಹಸಿರಾಗಿರುವ ಈ ಸಸ್ಯಗಳನ್ನು ಗುಂಡಿಗಳನ್ನು ತೆರೆದು ಅಥವಾ ಒಂದು ಪಾಟ್ ನಲ್ಲಿ ಹಾಕಿ ಯಾವುದಾದರೂ ಮೂಲೆಯಲ್ಲಿ ಇಡಬಹುದು. ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಇದನ್ನು ಹೂದಾನಿಗಳು ಅಥವಾ ಗಾಜಿನ ಲೋಟದಲ್ಲಿ ಹಾಕಿ ವಾಶ್ ಬೇಸಿನ್ ಬಳಿಯೂ ಇಡಬಹುದು. ಇದು ಬಹಳ ಬೇಗನೆ ಹರಡುತ್ತದೆ ಮತ್ತು ಎಂತಹ ಕಷ್ಟಕರ ವಾತಾವರಣದಲ್ಲಿಯೂ ಸಹ ಬದುಕಬಲ್ಲದು.

2) ಪೀಸ್ ಲಿಲಿ:

2) ಪೀಸ್ ಲಿಲಿ:

ತೇವಾಂಶ ಅಥವಾ ಕಡಿಮೆ ಬೆಳಕಿನಲ್ಲಿ ಯಾವುದೇ ತೊಂದರೆ ಇಲ್ಲದೇ ಬದುಕುವ ಸಸ್ಯ ಇದಾಗಿದೆ. ಕಡು ಹಸಿರು ಎಲೆಗಳ ಮಧ್ಯೆ ಬಿಳಿ ಬಣ್ಣದ ಹೂವುಗಳಂತೆ ಇರುವ ಈ ಲಿಲ್ಲಿಗಳು ಜಾಗದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದು ಗಾಳಿಯನ್ನು ಸಹ ಶುದ್ಧೀಕರಿಸುತ್ತದೆ. ಆದ್ದರಿಂದ ಇದನ್ನು ನಿಮ್ಮ ಬಾತ್ ರೂಮ್ ಸೇರಿದಂತೆ ಮನೆಯ ಇನ್ನಾವುದೇ ಭಾಗದಲ್ಲಿಯೂ ಸಹ ಇಡಬಹುದು.

3) ಬೋಸ್ಟನ್ ಫರ್ನ್:

3) ಬೋಸ್ಟನ್ ಫರ್ನ್:

ಇದು ಮತ್ತೊಂದು ವಿಭಿನ್ನ ಸಸ್ಯವಾಗಿದ್ದು, ತುಂಬಾ ಗಟ್ಟಿಮುಟ್ಟಾಗಿರುತ್ತದೆ. ಇದು ಬಾತ್ ರೂಮ್ ನಲ್ಲಿ ಸೃಷ್ಠಿಯಾಗುವ ತೇವಾಂಶವನ್ನು ಸುಲಭವಾಗಿ ಸಹಿಸಿಕೊಳ್ಳುತ್ತದೆ. ಇದನ್ನು ಕಿಟಕಿಯ ಬಳಿ ಮಡಕೆಗಳ ಸಹಾಯದಿಂದ ನೇತುಹಾಕಬಹುದು ಅಥವಾ ಬಾತ್ ಟಬ್ ಬಳಿ ಅಥವಾ ಬಾತ್ ರೂಮ್ ಬಾಗಿಲ ಬಳಿ ಮಡಕೆಗಳಲ್ಲಿ ಇಡಬಹುದು.

4) ಬೆಗೊನಿಯಾಸ್:

4) ಬೆಗೊನಿಯಾಸ್:

ವರ್ಣರಂಜಿತ ಎಲೆಗಳನ್ನು ಹೊಂದಿರುವ ಈ ಸಸ್ಯಗಳನ್ನು ನೋಡಿಕೊಳ್ಳುವುದು ತುಂಬಾ ಸುಲಭ. ಇದಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ. ಇದು ಸುಂದರವಾದ ಎಲೆಗಳನ್ನು ಹೊಂದಿದ್ದು, ಎಲ್ಲಾ ಪರಿಸ್ಥಿತಿಗಳನ್ನು ಸಹಿಸಿಕೊಂಡು ಬೆಳೆಯುತ್ತವೆ. ಅವುಗಳನ್ನು ನೆಟ್ಟ ಕೋಣೆಗೆ ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆ. ಇದನ್ನು ನೀವು ಮಲಗುವ ಕೋಣೆಯಲ್ಲಿಯೂ ಇಡಬಹುದು.

5) ಸ್ಪೈಡರ್ ಪ್ಲಾಂಟ್:

5) ಸ್ಪೈಡರ್ ಪ್ಲಾಂಟ್:

ಈ ಸಸ್ಯವನ್ನು ಹಾಳು ಮಾಡುವುದು ಅಥವಾ ಸಾಯಿಸುವುದು ತುಂಬಾ ಕಷ್ಟ, ನಿರ್ವಹಣೆಯಲ್ಲಿ ತುಂಬಾ ಸುಲಭ. ಇದು ಇರುವ ಜಾಗದ ಸುತ್ತಲಿನ ಗಾಳಿಯನ್ನು ಉಸಿರಾಡಲು ಉತ್ತಮವಾಗುವಂತೆ ಮಾಡುತ್ತದೆ. ಈ ಸಸ್ಯ ಸಾಕುಪ್ರಾಣಿಗಳಿಗೆ ಸಹ ಸುರಕ್ಷಿತವಾಗಿದೆ. ಇದರ ಆಕರ್ಷಣೀಯ ನೋಟವು ನಿಮ್ಮ ಬಾತ್ ರೂಮ್ ಗೆ ಹೇಳಿ ಮಾಡಿಸಿದಂತಿರುತ್ತದೆ.

6) ಲೋಳೆರಸ:

6) ಲೋಳೆರಸ:

ನಮ್ಮ ಜೀವನದಲ್ಲಿ ನಮಗೆ ಎಲ್ಲಾ ರೀತಿಯಲ್ಲಿ ಅಲೋವೆರಾ ಜೆಲ್ ಅಗತ್ಯವಾಗಿದೆ. ಆದ್ದರಿಂದ ಸಸ್ಯವನ್ನು ಏಕೆ ಹೊಂದಿರಬಾರದು? ಮಡಕೆಯಲ್ಲಿ ನೆಡಲು ಸುಲಭ, ಹಾಗೆಯೇ ನಿರ್ವಹಣೆಯೂ ಸುಲಭ. ಕೌಂಟರ್‌ಟಾಪ್‌ಗಳಲ್ಲೂ ಅವು ಉತ್ತಮವಾಗಿ ಕಾಣುತ್ತವೆ. ಕೇವಲ ಒಂದು ಎಲೆಯನ್ನು ತೆಗೆದುಕೊಂಡು ಕೂದಲು ಅಥವಾ ಮುಖಕದ ಸೌಂದರ್ಯಕ್ಕಾಗಿ ಬಳಕೆ ಮಾಡಿಕೊಳ್ಳಬಹುದು.

English summary

Houseplants That Are Well Suited For Bathrooms in Kannada

Here we talking about Houseplants that are well suited for bathrooms in Kannada, read on
X
Desktop Bottom Promotion