For Quick Alerts
ALLOW NOTIFICATIONS  
For Daily Alerts

ಅಂದದ ಕೈತೋಟಕ್ಕೆ ಈ ಟಿಪ್ಸ್ ತುಂಬಾ ಸಹಕಾರಿ

|

ತೋಟಗಾರಿಕೆ ಅಥವಾ ಮನೆಯಲ್ಲಿ ಕೈತೋಟವನ್ನು ನಿರ್ಮಿಸುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇತ್ತೀಚಿಗಂತೂ ಇಷ್ಟು ಸಣ್ಣ ಬಾಲ್ಕನಿ ಇದ್ದರೂ ಸಾಕು ಅದರಲ್ಲೇ ತರಾವರಿ ಹೂ ಗಿಡಗಳನ್ನೋ ತರಕಾರಿಗಳನ್ನೋ ನೆಟ್ಟು ಸಂಭ್ರಮಿಸುವವರಿದ್ದಾರೆ. ವಿವಿಧ ರೀತಿಯ ಹೂಕುಂಡಗಳಲ್ಲಿ ಮನೆಯ ಹೊರಗೂ ಒಳಗೂ ಹೂಗಿಡಗಳನ್ನು ಬೆಳೆಸುತ್ತಾರೆ, ಅದರಲ್ಲೂ ಮನೆಯ ಮುಂದೆ ಸ್ವಲ್ಪ ಜಾಗವಿದ್ದರಂತೂ ಒಂದು ಸುಂದರವಾದ ಕೈತೋಟ ರೆಡಿ!.

Every Gardener Should Know These Easy Gardening Tips

ನಿಮಗೂ ಇಂಥಹ ತೋಟಗಾರಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎಂದು ಅನ್ನಿಸುತ್ತಿದೆಯೇ? ಆದರೆ ಹೇಗೆ ಎಲ್ಲಿಂದ ಆರಂಭಮಾಡಬೇಕೆಂಬ ಗೊಂದಲವೇ? ಹಾಗಾದರೆ ನಾವಿಲ್ಲಿ ಆರಂಭಿಕ ತೋಟಗಾರರಿಗಾಗಿ ಕೊಡುವ ಸಲಹೆಗಳು ಖಂಡಿತವಾಗಿಯೂ ನಿಮಗೆ ಉಪಯೋಗವಾಗಬಲ್ಲದು!

ಗಿಡಗಳನ್ನು ನೆಡುವುದಕ್ಕಾಗಿ ನೆಲ ಅಗೆಯಬೇಕಲ್ಲವೇ? ಆದರೆ ಎಲ್ಲಿ? ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ನಿಮ್ಮೆಲ್ಲಾ ತೋಟಗಾರಿಕೆ ಪ್ರಶ್ನೆಗಳಿಗೆ ಉತ್ತರಗಳಿಗಾಗಿ ತೋಟಗಾರಿಕೆಗೆಯ ಈ ಮಾರ್ಗದರ್ಶಿಯನ್ನು ಬಳಸಿ. ನೀವು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಮೂಲ ತೋಟಗಾರಿಕೆ ಸಲಹೆಗಳು ಮತ್ತು ತಂತ್ರಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

1. ನಿಮ್ಮ ಯುಎಸ್ಡಿಎ ಗಡಸುತನ ವಲಯವನ್ನು ತಿಳಿಯಿರಿ. (ನೆಲದ ಗಡಸುತನವನ್ನು ಅಳೆಯುವ ನಕ್ಷೆ) ಇದನ್ನು ಮಾರ್ಗದರ್ಶಿಯಾಗಿ ಬಳಸಿ, ಈ ಮೂಲಕ ನಿಮ್ಮ ನೆಲದ ಗಡಸುತನವನ್ನು ಅರಿತು, ನೀವು ಮರಗಳು, ಪೊದೆಗಳು ಮತ್ತು ಮೂಲಿಕಾಸಸ್ಯಗಳು ನಿಮ್ಮ ಸ್ಥಳದಲ್ಲಿ ಬೆಳೆಯುವ ಸಾಧ್ಯತೆ ಇಲ್ಲದಿದ್ದಲ್ಲಿ ಅವುಗಳನ್ನು ನೆಡಬೇಡಿ. ಆದರೆ ನಿಮ್ಮ ಪ್ರದೇಶದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಯಾವಾಗ ನೆಡಬೇಕು ಎಂಬುದರ ಕುರಿತು ಕೂಡ ಈ ನಕ್ಷೆಯ ಮೂಲಕ ನಿಮಗೆ ತಿಳಿಯುತ್ತದೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

2. ಗಿಡಗಳನ್ನು ಕತ್ತರಿಸುವುದು ಯಾವಾಗ ಎಂದು ಖಚಿತವಾಗಿಲ್ಲವೇ? ಹೂವುಗಳು ಮಸುಕಾದ ತಕ್ಷಣ ಅಂದರೆ, ವಸಂತ-ಹೂಬಿಡುವ ಪೊದೆಸಸ್ಯಗಳಾದ ನೀಲಕ ಮತ್ತು ಗುಲಾಬಿ ಗಿಡಗಳನ್ನು ಗಿಡ ವಸಂತಕ್ಕೂ ಮೊದಲು ಕತ್ತರಿಸಬೇಕು. ಕಳೆದ ವರ್ಷದ ಬೆಳವಣಿಗೆಯ ಮೇಲೆ ಶರತ್ಕಾಲದ ಕೊನೆಯಲ್ಲಿ ತಮ್ಮ ಮೊಗ್ಗುಗಳನ್ನು ಗಿಡಗಳು ಬಿಡಲು ಪ್ರಾರಂಭಿಸುತ್ತವೆ. ಆದರೆ ಶರತ್ಕಾಲ ಅಥವಾ ಚಳಿಗಾಲದಲ್ಲಿ ನೀವು ಅವುಗಳನ್ನು ಕತ್ತರಿಸಿದರೆ, ಮುಂದಿನ ವಸಂತಕಾಲದಲ್ಲಿ ಹೂವಿನ ಮೊಗ್ಗುಗಳನ್ನು ಬಿಡುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಸರಿಯಾದ ಕಾಲಕ್ಕೆ ಸರಿಯಾದ ಸಮಯಕ್ಕೆ ಹೂ ಗಿಡಗಳನ್ನು ಕತ್ತರಿಸಬೇಕಾಗುತ್ತದೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

3. ನಿಮ್ಮ ಮಣ್ಣಿಗೆ ಕನಿಷ್ಠ ಆರು ತಿಂಗಳವರೆಗೆ ಮಣ್ಣನ್ನು ಸುರಕ್ಷಿತವಾಗಿರಿಸುವ ಕಾಂಪೋಸ್ಟ್, ಕೊಳೆತ ಗೊಬ್ಬರವನ್ನು ಮಾತ್ರ ಹಾಕಿ. ತಾಜಾ ಗೊಬ್ಬರವು ಸಾರಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು ಇವು ಸಸ್ಯಗಳನ್ನು ಹಾಳು ಮಾಡಬಹುದು. ಅಲ್ಲದೇ ಈ ಗೊಬ್ಬರವು ರೋಗಕಾರಕಗಳು ಅಥವಾ ಪರಾವಲಂಬಿಗಳನ್ನು ಸಹ ಒಳಗೊಂಡಿರಬಹುದು. ಹಂದಿಗಳು, ನಾಯಿಗಳು ಮತ್ತು ಬೆಕ್ಕುಗಳ ತ್ಯಾಜ್ಯದ ಗೊಬ್ಬರವನ್ನು ಎಂದಿಗೂ ತೋಟಗಳಲ್ಲಿ ಅಥವಾ ಕಾಂಪೋಸ್ಟ್ ರಾಶಿಯಲ್ಲಿ ಬಳಸಬಾರದು ಏಕೆಂದರೆ ಅವು ಮಾನವರಿಗೆ ಸೋಂಕು ತರುವ ಪರಾವಲಂಬಿಗಳನ್ನು ಹೊಂದಿರುವ ಸಾಧ್ಯತೆಗಳಿರುತ್ತವೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

4. ಮೂಲಿಕಾಸಸ್ಯಗಳು ಪ್ರಬುದ್ಧ ಬೆಳವಣಿಗೆಯನ್ನು ಸಾಧಿಸಲು ಸಾಮಾನ್ಯವಾಗಿ ಮೂರು ವರ್ಷಗಳು ಬೇಕಾಗುತ್ತದೆ. ಈ ಮೂರು ವರ್ಷಗಳ ಅವಧಿಯಲ್ಲಿ ಅವು "ಮಲಗುವುದು, ತೆವಳುವುದು ಮತ್ತು ಜಿಗಿಯುವುದು" ಎಂಬ ಮಾತಿನಂತೆ ಬೆಳವಣಿಗೆ ಹೊಂದುತ್ತವೆ ಎಂಬುದನ್ನು ನೆನಪಿಡಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

5. ಗಿಡಗಳ ಬೆಳವಣಿಗೆಯ ಋತುಮಾನ ಎಷ್ಟು ಅವಧಿಯದ್ದು ಎಂದು ಮೊದಲು ತಿಳಿಯಿರಿ. ವಸಂತಕಾಲದ ಕೊನೆ ಅಥವಾ ಶರತ್ಕಾಲದ ಆರಂಭ, ಗಿಡಗಳನ್ನು ಬೆಳೆಸಲು ಅಥವಾ ಬೆಳವಣಿಗೆಯನ್ನು ನಿಲ್ಲಿಸುವ ಸಮಯ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

6. ಗಿಡಗಳಲ್ಲಿ ಸತ್ತ ಹೂವುಗಳನ್ನು ಕತ್ತರಿಸುವುದು ಬಹುವಾರ್ಷಿಕ ಮತ್ತು ವಾರ್ಷಿಕ ಬೆಳೆಗಳ ಉತ್ತಮ ಅಭ್ಯಾಸವಾಗಿದೆ. ವಾರ್ಷಿಕ ಸಸ್ಯಗಳನ್ನು ಬೆಳೆಸುವ ರೀತಿ ಮೊದಲು ಹೂವು, ನಂತರ ಬೀಜವನ್ನು ಹೊಂದಿಸುವುದು ಮತ್ತು ಹೂವು ಸತ್ತ ನಂತರ, ಹಳೆಯ ಹೂವುಗಳನ್ನು ತೆಗೆದುಹಾಕುವುದು ಇದು ವಾರ್ಷಿಕ ಸಸ್ಯಗಳಲ್ಲಿ ಹೆಚ್ಚಿನ ಹೂವುಗಳನ್ನು ಉತ್ಪಾದಿಸಲು ಸಹಾಯಮಾಡುತ್ತದೆ. ಬೀಜ ಉತ್ಪಾದನೆಗೆ ಬದಲಾಗಿ, ಗಿಡಗಳಲ್ಲಿ ಒಣಗಿದ ಹೂವುಗಳನ್ನು ತೆಗೆದುಹಾಕುವುದರಿಂದ ಗಿಡದ ಶಕ್ತಿಯನ್ನು, ಬಲವಾದ ಎಲೆಗಳು ಮತ್ತು ಬೇರುಗಳನ್ನು ಹೊಂದಲು ಪ್ರೋತ್ಸಾಹಿಸಿದಂತಾಗುತ್ತದೆ. ಮನಿ ಪ್ಲಾಂಟ್ (ಲುನೇರಿಯಾ) ನಂತಹ ಗಿಡಗಳಲ್ಲಿ ಅನಗತ್ಯವಾಗಿ ಬೆಳೆಯುವ ಕಾಂಡಗಳನ್ನು ಕತ್ತರಿಸಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

7. ಸಸ್ಯಗಳಿಗೆ ಎಷ್ಟು ಬೆಳಕು ಬೇಕು? ಪ್ರತಿದಿನ ಕನಿಷ್ಠ 8 ಗಂಟೆಗಳ ನೇರ ಸೂರ್ಯನ ಬೆಳಕನ್ನು ಪಡೆಯುವ ಸ್ಥಳದಲ್ಲಿ ತರಕಾರಿಗಳನ್ನು ಬೆಳೆಯಿರಿ. ಹೆಚ್ಚಿನ ತರಕಾರಿಗಳಿಗೆ ಉತ್ತಮವಾಗಿ ಬೆಳೆಯಲು ಪೂರ್ಣ ಸೂರ್ಯನ ಬೆಳಕಿನ ಅಗತ್ಯವಿದೆ. ನಿಮ್ಮ ಸ್ಥಳದಲ್ಲಿ ಸ್ವಲ್ಪ ನೆರಳು ಹೊಂದಿದ್ದರೆ, ಲೆಟಿಸ್, ಪಾಲಕ, ಮೂಲಂಗಿ ಮತ್ತು ಎಲೆಕೋಸುಗಳಂತಹ ತಂಪಾದ ಋತುಮಾನದ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

8. ಕಳೆ ಕೀಳುವ ಅತ್ಯಂತ ಉತ್ತಮ ವಿಧಾನವೆಂದರೆ ಕೈಯಿಂದ ಕಳೆ ಕೀಳುವುದು ಮತ್ತು ಹೂಯಿಂಗ್ (ಗಿಡದ ಬುಡದ ಮಣ್ಣು ಬಿಡಿಸಿ ಕಳೆ ಕೀಳುವುದು). ಹೂಯಿಂಗ್ ಮಾಡುವಾಗ ಬಹಳ ಆಳವಾಗಿ ಹೂಯಿಂಗ್ ಮಾಡುವುದು ಅಥವಾ ಗಿಡ ನೆಡುವಾಗ ಬಹಳ ಆಳದ ವರೆಗೆ ಗಿಡ ನೆಟ್ಟರೆ ಕಳೆ ಗಿಡಗಳಿಗೆ ಮೇಲ್ಮೈ ಗೆ ಬರುವ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕಳೆಯನ್ನು ಆರಂಭದಿಂದಲೇ ತೆಗೆದು ಮತ್ತು ಆಗಾಗ ತೆಗೆಯುತ್ತಾ ಇದ್ದರೆ ಗಿಡದ ಬಳಿ ಕಳೆ ಗಿಡಗಳು ಹೋಗುವುದನ್ನು ತಪ್ಪಿಸಬಹುದು.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

9. ನಿಮಗೆ ಹಳೆಯ ಗಿಡವನ್ನು ಪುನಃ ಬೆಳೆಸುವ ಇಚ್ಛೆ ಇದ್ದಲ್ಲಿ ಅಥವಾ ಗಿಡಗಳ ಸಂಖ್ಯೆಗಳನ್ನು ಹೆಚ್ಚಿಸುವ ಆಸಕ್ತಿ ಇದ್ದಲ್ಲಿ ಅಥವಾ ಒಂದೇ ಗಿಡದ ತರಹ ಗಿಡವನ್ನು ಕಾಣಬೇಕಾದಲ್ಲಿ ಮಾತ್ರ ಹೋಸ್ಟಾ ಗಳನ್ನು ವಿಭಜಿಸಬೇಕು. ಇಲ್ಲದಿದ್ದಲ್ಲಿ ಹಾಗೆಯೇ ಬಿಟ್ಟು ಬಿಡುವುದು ಉತ್ತಮ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

10. ಎಲ್ಲಾ ಹೈಡ್ರೆಂಜಸ್ ಗಳು ನೆರಳಲ್ಲೇ ಬೆಳೆಯುವುದಿಲ್ಲ. ಪ್ಯಾನಿಕಲ್ ಹೈಡ್ರೆಂಜಸ್ ಗಳು (ಹೈಡ್ರೆಂಜಿಯಾ ಪ್ಯಾನಿಕುಲಾಟಾ) ಗೆ ಸೂರ್ಯನ ಬೆಳಕು ಬಿದ್ದಲ್ಲಿ ಚೆನ್ನಾಗಿ ಬೆಳೆದು ಹೂ ಬಿಡುತ್ತದೆ. 'ಲೈಮ್ ಲೈಟ್', ಲಿಟಲ್ ಲೈಮ್, ವೆನಿಲ್ಲಾ ಸ್ಟಾಬೆರಿ ಮತ್ತು ಬಾಂಬ್ ಶೆಲ್ ಮುಂತಾದವು ಕೆಲವು ಪ್ಯಾನಿಕಲ್ ತಳಿಗಳಾಗಿವೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

11. ಶರತ್ಕಾಲದಲ್ಲಿ ಗಾರ್ಡನ್ ನಲ್ಲಿರುವ ಎಲ್ಲವನ್ನೂ ಸ್ವಚ್ಛಗೊಳಿಸಬೇಡಿ. ಅಂದಗಾಣುವ ಹುಲ್ಲನ್ನು ಹಾಗೆಯೇ ಬಿಡಿ ಮತ್ತು ಹಕ್ಕಿಗಳಿಗೆ ಆಹಾರವಾಗುವ ಕೋನ್ ಫ್ಲವರ್ ನಂತಹ ಗಿಡಗಳ ಬೀಜಗಳನ್ನು ಬಿಡಿ. ತೀವ್ರವಾದ ಚಳಿಗಾಲವನ್ನು ಎದುರಿಸಲು ನೆರವಾಗುವಂತೆ ಗಟ್ಟಿಮುಟ್ಟಾದ ಗಿಡಗಳಾದ ಗಾರ್ಡನ್ ಮಮ್ಸ್ ಮುಂತಾದುವುಗಳನ್ನು ಹಾಗೆಯೇ ನೆಲದಲ್ಲಿಯೇ ಉಳಿಸುವುದು ಒಳ್ಳೆಯದು.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

12. ತರಕಾರಿ ತೋಟಗಾರಿಕೆ ಒಂದು ಸಲಹೆ: ಟೊಮಾಟೋ ಹಣ್ಣಾಗಲು ಬೇಕಾಗಿರುವ ಉಷ್ಣಾಂಶ ಎಂದರೆ ೬೮ ರಿಂದ ೭೭ ಡಿಗ್ರಿ ಫ್ಯಾರನ್ ಹೀಟ್. ಅದೇ ರೀತಿ ೮೫ ಡಿಗ್ರಿ ಫ್ಯಾರನ್ ಹೀಟ್ ನಲ್ಲಿ ಹಣ್ಣಿನ ಬಣ್ಣಕ್ಕೆ ಕಾರಣವಾಗುವ ಲೈಕೋಪಿನ್ ಮತ್ತು ಕ್ಯಾರೋಟಿನ್ ನ ಉತ್ಪಾದನೆ ಸಾಧ್ಯವಾಗುವುದಿಲ್ಲ. ತಾಪಮಾನ ೫೦ ಡಿಗ್ರಿ ಫ್ಯಾರನ್ ಹೀಟ್ ಗಿಂತ ಕಡಿಮೆ ನಿರಂತರವಾಗಿದ್ದರೆ ಕಾಯಿಗಳು ಹಣ್ಣಾಗುವುದಿಲ್ಲ. ಸ್ವಲ್ಪ ಪ್ರಮಾಣದ ಬಣ್ಣ ಬದಲಾವಣೆ ಹೊಂದಿದ ಟೊಮಾಟೋ ಗಳನ್ನು ಹಣ್ಣಾಗಿಸಲು ಒಳಗಡೆ ತರಬಹುದು.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

13. ನೆಲವು ಹೆಪ್ಪುಗಟ್ಟುವ ಮೊದಲು ಶರತ್ಕಾಲದಲ್ಲಿ ಹೂ ಬಿಡುವ ಗಿಡಗಳಾದ ಟ್ಯೂಲಿಪ್ಸ್, ಡಾಫೋಡಿಲ್ಸ್, ಕ್ರೋಕಸ್ ಗಳು, ಹೈಸಿಂತ್ಸ್ ಮುಂತಾದುವುದಗಳನ್ನು ನೆಡಬೇಕು. ಗಡ್ಡೆಗಿಂತ ಎರಡು - ಮೂರು ಪಟ್ಟು ಆಳವಾಗಿರುವ ರಂಧ್ರದಲ್ಲಿ ಗಡ್ಡೆಯನ್ನು ನೆಡಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

14. ಗೆಡ್ಡೆಗಳ ಮೇಲೆ ಬೇಡವಾದ ಹೂವುಗಳನ್ನು ತೆಗೆಯಿರಿ ಇದರಿಂದ ಗೆಡ್ಡೆಗಳ ಬೆಳವಣಿಗೆ ಆಗುತ್ತದೆಯೇ ಹೊರತು ಬೀಜಗಳ ಬೆಳವಣಿಗೆಗೆ ಶಕ್ತಿ ವ್ಯರ್ಥವಾಗುವುದನ್ನು ತಡೆಯಬಹುದು. ಎಲೆಗಳು ಕಂದು ಬಣ್ಣಕ್ಕೆ ತಿರುಗುವ ತನಕ ಬಿಡಿ ಮತ್ತು ನಂತರ ನಿಧಾನವಾಗಿ ಅದನ್ನು ತೆಗೆಯಿರಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

15. ಚೆನ್ನಾಗಿ ಗಿಡ ಬೆಳೆಯಬೇಕಾದರೆ ರಸಗೊಬ್ಬರ ಒಂದೇ ಪರಿಹಾರವಲ್ಲ. ಮಣ್ಣಿನ ಗುಣ ಬಹಳ ಮುಖ್ಯ. ಮಣ್ಣಿಗೆ ಕಾಂಪೋಸ್ಟ್ ಗೊಬ್ಬರ ಮತ್ತು ಸಂಗ್ರಹಿಸಿಟ್ಟ ಗೊಬ್ಬರವನ್ನು ಸೇರಿಸಿ. ಮಣ್ಣಿನ ರಚನೆ ಬಿಡಿಯಾಗಿ ಪುಡಿ ಪುಡಿ ಆಗಿದ್ದರೆ ಆಗ ಮಣ್ಣಲ್ಲಿ ನೀರು ಸುಲಭವಾಗಿ ಸೇರುತ್ತದೆ ಮತ್ತು ಗಿಡದ ಬೇರುಗಳಿಗೆ ಆಮ್ಲಜನಕ ಸಮರ್ಪಕವಾಗಿ ತಲುಪುತ್ತದೆ. ಗೊಬ್ಬರ ಹಾಕುವುದಿದ್ದರೂ ನೈಸರ್ಗಿಕವಾಗಿ ದೊರಕುವ ಗೊಬ್ಬರವನ್ನೇ ಬಳಸಿ ಅದರಲ್ಲಿ ನೈಟ್ರೋಜನ್, ಫಾಸ್ಪೇಟ್ ಮತ್ತು ಪೊಟಾಶ್ ಇರುವಂತೆ ನೋಡಿಕೊಳ್ಳಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

16. ಬೇಸಗೆಯ ಕೊನೆಯಲ್ಲಿ ಮತ್ತು ಶರತ್ಕಾಲದ ಆರಂಭದಲ್ಲಿ ವಸಂತ ಕಾಲದಲ್ಲಿ ಹೂಬಿಡುವ ಸಸ್ಯಗಳನ್ನು ಬೇರ್ಪಡಿಸಿ ನೆಡಲು ಸರಿಯಾದ ಸಮಯವಾಗಿದೆ. ಇವುಗಳಲ್ಲಿ ಮುಖ್ಯವಾಗಿ ಐರಿಸ್ ಗಳು, ಪಿಯೋನಿಸ್ ಗಳು, ಹೋಸ್ಟಾ ಗಳು ಮತ್ತು ಡೇಲಿಲಿಸ್ ಗಳು.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

17. ೠಬರ್ಬ್ (ಬೇಯಿಸಿ ತಿನ್ನುವಂತಹ ಸಸ್ಯ) ಗಳು ಹೂವುಗಳನ್ನು ಬಿಡಲು ಆರಂಭಿಸಿದರೆ ಅದನ್ನು ಕಿತ್ತು ಬಿಡಿ. ಇದರಿಂದ ಬೀಜಗಳ ಉತ್ಪಾದನೆ ಇಲ್ಲವಾಗಿ ಎಲೆಗಳ ಬೆಳವಣಿಗೆ ಸರಿಯಾಗಿ ಆಗುತ್ತದೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

18. ಕಂಟೈನರ್ ನಲ್ಲಿ ಬೆಳೆದ ಸಸ್ಯಗಳನ್ನು ನೆಲದಲ್ಲಿ ನೆಡುವಾಗ ಕಂಟೈನರ್ ನ ಗಾತ್ರದಿಂದ ದೊಡ್ಡ ಗುಂಡಿ ತೋಡಿ ಗಿಡವನ್ನು ಅದರಲ್ಲಿ ನೆಡಿ ಇದರಿಂದ ಬೇರುಗಳ ಬೆಳವಣಿಗೆ ಸುಲಭವಾಗುತ್ತದೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

19. ಆಲೂಗಡ್ಡೆಯ ಗಿಡವನ್ನು ನೆಲದ ಆಳದಲ್ಲಿ ನೆಡಿ ಮತ್ತು ಕೊಯ್ದ ಆಲೂಗಡ್ಡೆಗಳನ್ನು ಬೆಳಕು ಬೀಳದಂತೆ ಸಂಗ್ರಹಿಸಿ ಇಡಿ. ಬೆಳಕು ಬಿದ್ದ ಆಲೂಗಡ್ಡೆಯ ಮೇಲ್ಮೈ ಹಸಿರು ಬಣ್ಣಕ್ಕೆ ಬದಲಾಗುತ್ತದೆ. ಹೀಗಾದಲ್ಲಿ ಅಲ್ಲಿ ಬಣ್ಣರಹಿತ ಆಲ್ಕೋಲೈಡ್ ಸೊಲಾನೈನ್ ನ ಉತ್ಪಾದನೆ ಆಗಿದೆ ಎಂಬ ಸೂಚನೆ! ಸೊಲಾನೈನ್ ಒಂದು ಬಗೆಯ ಕಹಿ ರುಚಿಯ ವಿಷ ಪದಾರ್ಥವಾಗಿದ್ದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಅನಾರೋಗ್ಯಕ್ಕೆ ಕಾರಣವಾಗಬಹುದು.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

20. ನೆಲದಲ್ಲಿ ಬೆಳೆಯುವ ಸಸ್ಯಗಳು ವಾರದಲ್ಲಿ ಒಂದರಿಂದ ಎರಡು ಇಂಚು ಆಳದ ವರೆಗೆ ನೀರು ತಲುಪಿದಾಗ ಮಾತ್ರ ಚೆನ್ನಾಗಿ ಬೆಳೆಯುತ್ತವೆ. ಚೆನ್ನಾಗಿ ಮಳೆ ಬಾರದೇ ಇದ್ದಲ್ಲಿ ಪ್ರತಿದಿನ ಸ್ವಲ್ಪ ನೀರು ಹಾಕುವ ಬದಲು ವಾರಕ್ಕೊಮ್ಮೆ ಚೆನ್ನಾಗಿ ನೀರು ಹಾಕಿ. ಆಗಾಗ ಸ್ವಲ್ಪ ನೀರು ಹಾಕಿದಾಗ ಮಣ್ಣಿನ ಮೇಲ್ಮೆ ಯಲ್ಲಿ ಮಾತ್ರ ನೀರು ಇರುತ್ತದೆ. ಇದರಿಂದ ಗಿಡದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯುವ ಬದಲು ಮೇಲ್ಮುಖವಾಗಿ ಬೆಳೆಯುತ್ತವೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

21.ಶರತ್ಕಾಲದ ಎಲೆಗಳನ್ನು ಹಾಗೆಯೇ ಎಸೆಯಬೇಡಿ. ಅವುಗಳನ್ನು ಗಿಡಕ್ಕೆ ಕಾಂಪೋಸ್ಟ್ ಗೊಬ್ಬರದ ಹಾಗೆ ಉಪಯೋಗಿಸಿ. ಪಲ್ವರೈಸ್ ಮಾಡಿದ ಎಲೆಗಳನ್ನು ನಿಮ್ಮ ಸುಂದರ ಲಾನ್ ಗಾಗಿ ಬಳಸಬಹುದು. ಹಲವಾರು ಬಾರಿ ಹೆಪ್ಪುಗಟ್ಟಿದ ಮೇಲೆ ಸಸ್ಯಗಳು ಸಂಪೂರ್ಣವಾಗಿ ಸುಪ್ತವಾದ ನಂತರ ಎರಡು- ಮೂರು ಇಂಚುಗಳಷ್ಟು ಎಲೆಗಳನ್ನು ಹರಡಿ, ಇದರಿಂದ ಚಳಿಗಾಲದಲ್ಲಿ ಸುಪ್ತವಾಗಿರಲು ಅಂದರೆ ನೆಲ ಹಾಸಿಗೆ ನೆರವಾಗುತ್ತದೆ. ಈ ಹರಡಿದ ಎಲೆಗಳನ್ನು ಬೇಸಗೆಯಲ್ಲಿ ತೆಗೆಯಿರಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

22. ಒದ್ದೆ ಮಣ್ಣನ್ನು ಅಗೆಯುವುದು ಮತ್ತು ಅಲ್ಲಿ ಗಿಡ ನೆಡುವುದನ್ನು ಮಾಡಬೇಡಿ. ಇದರಿಂದ ಮಣ್ಣಿನ ಸಂರಚನೆಗೆ ಹಾನಿಯಾಗುತ್ತದೆ. ಮಣ್ಣು ಪುಡಿಪುಡಿಯಾಗುವ ತನಕ ಹಾಗೂ ಕೈಯಲ್ಲಿ ಚೆಂಡಿನಾಕಾರ ಮಾಡಲು ಆಗುವ ತನಕ ಕಾಯಿರಿ. ಮಣ್ಣು ಸಂಪೂರ್ಣ ಗಟ್ಟಿಆಗಬೇಕೆಂದೇನಿಲ್ಲ. ಮಣ್ಣಿನಲ್ಲಿ ತೇವವಿದ್ದರೆ ಅದು ಒಳ್ಳೆಯದೆ!

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

23. ಮಣ್ಣಿನ ಒಳರಚನೆಯನ್ನು ಗಮನಿಸಬೇಕು. ಬೇರುಗಳಿಗೆ ಆಮ್ಲಜನಕ ಬೇಕು. ಮಣ್ಣು ನಿರಂತರವಾಗಿ ಒದ್ದೆಯಾಗಿದ್ದರೆ ಅಲ್ಲಿ ಗಾಳಿಯಾಡಲು ಹಾಗೂ ಬೇರುಗಳ ತನಕ ತಲುಪಲು ಯಾವುದೇ ಮಾರ್ಗ ಇರುವುದಿಲ್ಲ. ಹಲವು ಸಸ್ಯಗಳಿಗೆ ಒಳ್ಳೆಯ ಬರಿದಾದ ಮಣ್ಣು ಬೇಕಾಗುತ್ತದೆ. ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಸಾವಯವ ಗೊಬ್ಬರದ ಬಳಕೆ ಮಾಡಿ. ಇದರಿಂದ ಗಿಡವೂ ಕೂಡ ಸೊಂಪಾಗಿ ಬೆಳೆಯುತ್ತದೆ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

24. ಕೆಲವು ಸಸ್ಯಗಳು ಹಗಲಿನ ಅವಧಿಗೆ ತಕ್ಕಂತೆ ಹೂ ಬಿಡುತ್ತದೆ. ಕ್ರೈಸಾಂಥೆಮ್ಸ್, ಪೊಯೆನ್ಸಿಟ್ಯಾಸ್, ಸ್ಟ್ರಾಬೆರಿಗಳು ಮತ್ತಿತರ ಗಿಡಗಳು ಹೂ ಬಿಡಲು ದೀರ್ಘವಾದ ರಾತ್ರಿಯ ಅವಶ್ಯಕತೆ ಇರುತ್ತದೆ. ತಾಪಮಾನ ೩೫ ರಿಂದ ೮೫ ಡಿಗ್ರಿ ಫ್ಯಾರನ್ ಹೀಟ್ ಇದ್ದು, ಚೆನ್ನಾಗಿ ಹೂಬಿಟ್ಟು ಹಣ್ಣು ನೀಡುವ ಸ್ಟ್ರಾಬೆರಿಗಳು ನಿಮಗೆ ಬೇಕಾದರೆ 'ಡೇ-ನ್ಯೂಟ್ರಲ್' ಎನ್ನುವ ತಳಿಯ ಸ್ಟ್ರಾಬೆರಿಯನ್ನು ಆರಿಸಿಕೊಳ್ಳಿ.

ಗಾರ್ಡನಿಂಗ್ ಟಿಪ್ಸ್

ಗಾರ್ಡನಿಂಗ್ ಟಿಪ್ಸ್

25. ಆಕ್ರೋಡ್ ಮರದ ಬೇರುಗಳು ಜಗ್ಲೋನ್ ಎಂಬ ಪದಾರ್ಥವನ್ನು ಉತ್ಪಾದಿಸುತ್ತದೆ. ಇದು ಸೂರ್ಯನ ಬೆಳಕು ಪಡೆದು ಬೆಳೆಯುವ ಟೋಮಾಟೋ, ಆಲೂಗಡ್ಡೆ ಮುಂತಾದ ಹಲವು ಸಸ್ಯಗಳಿಗೆ ವಿಷ ಪದಾರ್ಥವಾಗಿದೆ. (ಕಪ್ಪು ಆಕ್ರೋಡ್ ಹಲವು ನೆರಳನ್ನು ಆಶ್ರಯಿಸುವ ಸಸ್ಯಗಳಿಗೆ ಹಾನಿಕಾರಕವಲ್ಲ.) ದೊಡ್ಡ ಮರದ ವಿಷಕಾರಿ ವಲಯವು ಕಾಂಡದಿಂದ ೫೦-೮೦ ಅಡಿ ದೂರದ ತನಕ ವ್ಯಾಪಿಸಿ ಇರಬಹುದು. ಅಕ್ರೋಡ್ ನ ಎಲೆಗಳನ್ನು ಅಥವಾ ಕಾಯಿಗಳನ್ನು ನೀವು ಕಾಂಪೋಸ್ಟ್ ಗೆ ಸೇರಿಸಿದರೆ ಜಗ್ಲೋನ್ ರಾಸಾಯಾನಿಕ ಕಾಂಪೋಸ್ಟ್ ನಲ್ಲೂ ಸೇರುವ ಸಾಧ್ಯತೆ ಇರುತ್ತದೆ. ಇದರಿಂದ ಗಿಡಗಳಿಗೆ ಹಾನಿಯಾಗುವುದು ಖಂಡಿತ.

ಹಾಗಾಗಿ ಈ ಮೇಲಿನ ಎಲ್ಲಾ ವಿಷಯಗಳನ್ನೂ ಗಮನದಲ್ಲಿಟ್ಟುಕೊಂಡು ಈಗಲೇ ನಿಮ್ಮ ತೋಟಗಾರಿಕಾ ಕೆಲಸವನ್ನು ಆರಂಭಿಸಿಯೇ ಬಿಡಿ. ಶುಚಿ ರುಚಿಯಾದ ಸಾಮಯವ ಹಣ್ಣು ತರಕಾರಿಗಳು ನಿಮ್ಮ ತೋಟವನ್ನು ತುಂಬಲಿ.

English summary

Expert Gardening Tips Every Gardener Should Know in Kannada

Here we are discussing about Every Gardener Should Know These Easy Gardening Tips. Are you wanting to start a garden but don't know where to begin? These gardening tips for beginners are perfect for new gardeners.Read on.
Story first published: Thursday, August 6, 2020, 15:57 [IST]
X
Desktop Bottom Promotion