For Quick Alerts
ALLOW NOTIFICATIONS  
For Daily Alerts

ಬರೀ ಒಂದೇ ತಿಂಗಳಲ್ಲಿ, ಇಂತಹ ತರಕಾರಿಗಳನ್ನು ಬೆಳೆಸಬಹುದು

By Hemanth
|

ಕೈದೋಟ ಮಾಡಿಕೊಳ್ಳುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇದು ಎಲ್ಲರಿಗೂ ಒಲಿಯುವಂತಹ ಕಲೆಯು ಅಲ್ಲ. ಯಾಕೆಂದರೆ ಮಣ್ಣಿನ ಗುಣ ಹಾಗೂ ಅದಕ್ಕೆ ಹೊಂದಿಕೊಳ್ಳುವ ಹಣ್ಣು ಅಥವಾ ತರಕಾರಿಯನ್ನು ಬಿತ್ತನೆ ಮಾಡಿ ಅದು ಫಲ ನೀಡಲು ಕಾಯಬೇಕಾಗುತ್ತದೆ. ತಾಳಿದವನು ಬಾಳಿಯನು ಎನ್ನುವ ಮಾತು ಕೈದೋಟದ ವಿಚಾರದಲ್ಲೂ ನಿಜವಾಗುವುದು. ಯಾಕೆಂದರೆ ಕೇವಲ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಫಲ ಸಿಗಬೇಕೆಂದರೆ ಆಗದು. ಇದಕ್ಕಾಗಿ ತುಂಬಾ ಸಮಯ ಕಾಯಬೇಕು. ಇದಕ್ಕೆ ತಾಳ್ಮೆ ಮುಖ್ಯ.

ತಾಳ್ಮೆಯಿಲ್ಲದೆ ಇದ್ದರೆ ಆಗ ಕೈದೋಟದ ಬಗ್ಗೆ ಆಸಕ್ತಿಯೇ ಕಳಕೊಳ್ಳುಬೇಕಾಗುತ್ತದೆ. ಅದರಲ್ಲೂ ಕೈದೋಟದಲ್ಲಿ ಅನುಭವ ಇಲ್ಲದೆ ಇರುವವರು ಇದರಲ್ಲಿ ಆಸಕ್ತಿ ಬೇಗ ಕಳೆದುಕೊಳ್ಳುವರು. ಅನುಭವಿಗಳು ಬಿತ್ತನೆ ಮಾಡಿ ಅದು ಫಲ ನೀಡುವ ತನಕ ಅದರ ಪೋಷಣೆ ಮಾಡುತ್ತಾ ಕಾಯುತ್ತಾ ಇರುವರು. ಇಲ್ಲಿ ಕಠಿಣ ಪರಿಶ್ರಮ ಕೂಡ ಅತೀ ಅಗತ್ಯವಾಗಿರುವುದು. ತುಂಬಾ ವೇಗವಾಗಿ ಬೆಳೆಯುವಂತಹ ತರಕಾರಿಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡರೆ ಕೈದೋಟ ಮಾಡುವುದು ನಿಮಗೆ ಹೆಚ್ಚು ಕಷ್ಟವಾಗದು. ಕೇವಲ ಒಂದು ತಿಂಗಳಲ್ಲಿ ಬೆಳೆಯುವ ತರಕಾರಿಗಳ ಬಗ್ಗೆ ನೀವು ತಿಳಿಯಿರಿ. ಕೈದೋಟ ಮಾಡಲು ತಯಾರಾಗಿ.....

vegetables that can grow in 30 days

ಬೇಬಿ ಕ್ಯಾರೆಟ್

ನಿಮಗೆ ಕ್ಯಾರೆಟ್ ಎಂದರೆ ತುಂಬಾ ಇಷ್ಟವೆಂದಿದ್ದರೆ ಆಗ ನೀವು ಇದರಲ್ಲಿ ವೈವಿಧ್ಯವಾಗಿರುವುದನ್ನು ನೋಡಿ, ಬೇಗ ಬೆಳೆಯುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಒಂದು ಪ್ಲಾಸ್ಟಿಕ್ ಬಾಲ್ಡಿಯಲ್ಲಿ ಅಥವಾ ನೇರವಾಗಿ ಮಣ್ಣಿನಲ್ಲಿ ಬೇಬಿ ಕ್ಯಾರೆಟ್ ನ್ನು ಬೀಜಗಳನ್ನು ಬಿತ್ತನೆ ಮಾಡಿ. ಬೇಬಿ ಕ್ಯಾರೆಟ್ ನ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಕ್ಕೆ ನೀವು ಹೆಚ್ಚಿನ ಆರೈಕೆ ಮಾಡಬೇಕಾದ ಅಗತ್ಯವೂ ಇಲ್ಲ. 2-3 ದಿನಕ್ಕೊಮ್ಮೆ ನೀವು ನೀರು ಹಾಕಿದರೆ ಮುಂದಿನ 30 ದಿನಗಳಲ್ಲಿ ಬೇಬಿ ಕ್ಯಾರೆಟ್ ಬೆಳೆದಿರುವುದು. ನೆನಪಿಡಿ ಕ್ಯಾರೆಟ್‌ಗಳ ಬೆಳವಣಿಗೆಯ ಪ್ರಾಥಮಿಕ ಹ೦ತಗಳಲ್ಲಿ ಅವುಗಳಿಗೆ ಪೂರ್ಣವಾಗಿ ಸೂರ್ಯನ ಬೆಳಕು ದೊರೆಯುವ೦ತೆ ನೋಡಿಕೊಳ್ಳಬೇಕು. ಕೆಲವು ತಳಿಗಳ೦ತೂ ಭಾಗಶ: ಸೂರ್ಯನ ಬೆಳಕಿನಲ್ಲಿಯೂ ಸಹ ಬೆಳೆಯಬಲ್ಲವು. ಆದರೆ, ನಿಮಗೆ ಉತ್ತಮ ಇಳುವರಿ ಬೇಕೆ೦ದಾದಲ್ಲಿ, ನೀವು ಗಿಡಗಳಿಗೆ ಸೂರ್ಯನ ಬೆಳಕು ಪೂರ್ಣಪ್ರಮಾಣದಲ್ಲಿ ಸಿಗುವ೦ತೆ ನೋಡಿಕೊಳ್ಳಬೇಕು. ತುಸು ಆಮ್ಲೀಯವಾಗಿರುವ ಮಣ್ಣಿನಲ್ಲಿ ಕ್ಯಾರೆಟ್‌ಗಳು ಅತ್ಯುತ್ತಮವಾಗಿ ಬೆಳೆಯುತ್ತವೆ. ಬೀಜಗಳನ್ನು ಬಿತ್ತುವ ಮೊದಲು, ಮಣ್ಣು ಸಡಿಲವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ. ಅ೦ತೆಯೇ, ಮನತಣಿಸುವಷ್ಟು ಪ್ರಮಾಣದಲ್ಲಿ ಇಳುವರಿಯನ್ನು ಪಡೆಯಲು ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರವನ್ನು ಬಳಸುವುದು ತು೦ಬಾ ಅಗತ್ಯ.

ಮೂಲಂಗಿ

ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವಂತಹ ಮೂಲಂಗಿಯನ್ನು ಭಾರತೀಯರು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಸಲಾಡ್ ಮತ್ತು ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಮೂಲಂಗಿ ಬೆಳೆಯಲು ನಿಮಗೆ ಇದೇ ರೀತಿಯ ಹವಾಮಾನ ಬೇಕೆಂದಿಲ್ಲ. ಯಾವುದೇ ಹವಾಮಾನದಲ್ಲೂ ಇದನ್ನು ಬೆಳೆಯಬಹುದು. ಮಣ್ಣಿನಲ್ಲಿ ಮೂಲಂಗಿ ಬೀಜಗಳನ್ನು ಬಿತ್ತನೆ ಮಾಡಿ ಮತ್ತು ಇದಕ್ಕೆ 1-2 ದಿನಕ್ಕೊಮ್ಮೆ ನೀರು ಹಾಕಿ. ಮೂಲಂಗಿಯು 25 ದಿನಗಳಲ್ಲಿ ಬೆಳೆಯುತ್ತದೆ. ಕೆಲವೊಮ್ಮೆ ಇದು 30 ದಿನ ಕೂಡ ತೆಗೆದುಕೊಳ್ಳಬಹುದು.

ಸೌತೆಕಾಯಿ

ಸೌತೆಕಾಯಿಯನ್ನು ಹೆಚ್ಚಾಗಿ ಹಸಿಯಾಗಿಯೇ ತಿನ್ನಲು ಇಷ್ಟಪಡುವರು. ಇದನ್ನು ಹಾಗೆ ತಿನ್ನಬಹುದು ಅಥವಾ ಬೇರೆ ಖಾದ್ಯಗಳು, ಸಲಾಡ್ ಮಾಡಿ ತಿನ್ನಬಹುದು. ಇದು ವರ್ಷದ ಯಾವುದೇ ಋತುವಿನಲ್ಲೂ ಬೆಳೆಯುವುದು. ಸೌತೆಕಾಯಿಗೆ ಹೆಚ್ಚಿನ ಸ್ಥಳ ಬೇಕಾಗುವುದು. ಕೈದೋಟದಲ್ಲಿ ಸೌತೆಕಾಯಿ ಬಳ್ಳಿ ಹೋಗಲು ನೀವು ಜಾಗ ಮಾಡಿಕೊಡಬೇಕು. 3-4 ವಾರಗಳಲ್ಲಿ ಸೌತೆಕಾಯಿ ಬಳ್ಳಿಯು ಹೂ ಬಿಟ್ಟು ಹಣ್ಣು ನೀಡುವುದನ್ನು ನೋಡಬಹುದು.

ಬಸಲೆ

ನಿಮ್ಮ ಆಹಾರಕ್ರಮದಲ್ಲಿ ತುಂಬಾ ಆರೋಗ್ಯಕರ ಆಹಾರವಾಗಿರುವಂತಹ ಬಸಲೆಯು 4-5 ವಾರಗಳಲ್ಲಿ ಬೆಳೆಯುವುದು. ಬಸಲೆ ಬೀಜಗಳನ್ನು ತಂದು ಅದನ್ನು ನೀವು ಒಳ್ಳೆಯ ಮಣ್ಣಿನಲ್ಲಿ ಬಿತ್ತನೆ ಮಾಡಿ. ಯಾರಾದರೂ ಬಸಲೆ ಬೆಳೆದಿದ್ದರೆ ಅದರ ತುಂಡನ್ನು ತಂದು ನೆಟ್ಟರೂ ಇದು ಬೆಳೆಯುವುದು. ಆದರ ಪ್ರತಿನಿತ್ಯವೂ ನೀವು ಇದಕ್ಕೆ ನೀರು ಹಾಕಬೇಕು. ನೀವು ಇದನ್ನು ಸರಿಯಾಗಿ ಮಾಡಿಕೊಂಡರೆ ಕೆಲವೇ ವಾರಗಳಲ್ಲಿ ಹಸಿರು ತರಕಾರಿಯು ಬೆಳೆದು ನಿಮ್ಮ ಕಣ್ಣಿಗೆ ಖುಷಿ ನೀಡುವುದು.

ಲೆಟಿಸ್

ಬಸಲೆಯಂತೆ ಲೆಟಿಸ್ ಕೂಡ ಒಂದು ರೀತಿಯ ಹಸಿರೆಳೆ ತರಕಾರಿ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಲೆಟಿಸ್ ಎಲ್ಲಾ ರೀತಿಯ ಹವಾಮಾನದಲ್ಲಿ ಬೆಳೆಯುವುದು ಮತ್ತು 30 ದಿನಕ್ಕಿಂತಲೂ ಕಡಿಮೆ ಸಮಯದಲ್ಲಿ ಇದು ಬೆಳೆಯುವುದು. ಲೆಟಿಸ್ ವಿವಿಧ ಬಗೆಯಲ್ಲಿ ಲಭ್ಯವಿದೆ ಮತ್ತು ಪ್ರತಿಯೊಂದರ ರುಚಿಯು ಭಿನ್ನವಾಗಿರುವುದು. ಇದರಲ್ಲಿ ಒಂದು ಆಯ್ಕೆ ಮಾಡಿ ಬಿತ್ತನೆ ಮಾಡಿ ಅಥವಾ ವಿಭಿನ್ನ ರೀತಿಯ ಲೆಟಿಸ್ ನ್ನು ಬಿತ್ತನೆ ಮಾಡಬಹುದು.

ಬೀಟ್ ರೂಟ್

ನೀವು ತುಂಬಾ ಕಡಿಮೆ ಶ್ರಮದಿಂದ ಈ ತರಕಾರಿಯನ್ನು ಬೆಳೆಯಬಹುದು. ಇದರ ಎಲೆಗಳಲ್ಲಿ ಕೂಡ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ ಮತ್ತು ಇದನ್ನು ಕೂಡ ನೀವು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅತಿಯಾದ ಬಿಸಿಯಲ್ಲಿ ಈ ತರಕಾರಿಯು ಬೆಳೆಯುವುದಿಲ್ಲ ಎನ್ನುವುದನ್ನು ನೀವು ನೆನೆಪಿನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಬೇಸಿಗೆಯಲ್ಲಿ ಇದನ್ನು ಬಿತ್ತನೆ ಮಾಡಬೇಡಿ. ಪ್ರತಿನಿತ್ಯ ಇದಕ್ಕೆ ನೀರುಣಿಸಬೇಕು. 25-30 ದಿನಗಳಲ್ಲಿ ನಿಮಗೆ ಬೀಟ್ ರೂಟ್ ಸಿಗುವುದು.

ಅವರೆ

ಬೇರೆ ರೀತಿಯ ಬೀನ್ಸ್ ಗಳಿಗೆ ಹೋಲಿಸಿದರೆ ಅವರೆಯು ಬೇಗನೆ ಬಳೆಯುವುದು ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಕೈದೋಟದ ಸೌಂದರ್ಯದ ಬಗ್ಗೆ ನೀವು ಹೆಚ್ಚು ಗಮನಹರಿಸುವಿರಾದರೆ ಆಗ ನೀವು ಖಂಡಿತವಾಗಿಯೂ ಇದನ್ನು ಬೆಳೆಸಲೇಬೇಕು. ಬಿತ್ತನೆ ಮಾಡಿದ 20 ದಿನಗಳಲ್ಲಿ ಇದು ನಿಮ್ಮ ಕೈದೋಟಕ್ಕೆ ಹಸಿರು ಸೌಂದರ್ಯವನ್ನು ನೀಡುವುದು. ಕೈದೋಟದ ಸೌಂದರ್ಯ ಮತ್ತು ತರಕಾರಿಗಳಲ್ಲಿ ಸಿಗುವಂತಹ ಹಲವಾರು ರೀತಿಯ ಪೋಷಕಾಂಶಗಳ ಬಗ್ಗೆ ನೀವು ಚಿಂತೆ ಮಾಡುತ್ತಲಿದ್ದರೆ ಆಗ ನೀವು ಖಂಡಿತವಾಗಿಯೂ ಕೈದೋಟದಲ್ಲಿ ಅವರೆ ಬೆಳೆಯಲೇಬೇಕು.

ಸೂರ್ಯಕಾಂತಿ ಚಿಗುರುಗಳು

ಕೈದೋಟಕ್ಕೆ ನೀವು ಹೆಚ್ಚಿನ ಬಣ್ಣ ನೀಡಬೇಕೆಂದು ಬಯಸಿದ್ದರೆ ಆಗ ನೀವು ಸೂರ್ಯಕಾಂತಿ ಬೀಜಗಳನ್ನು ಇದರಲ್ಲಿ ಸೇರಿಸಿಕೊಳ್ಳಲೇಬೇಕು. 12 ದಿನಗಳಲ್ಲಿ ಇದು ಬೆಳೆಯುವುದು ಮತ್ತು ಇದು ಅತ್ಯುತ್ತಮವಾಗಿರುವ ಪೋಷಕಾಂಶಗಳ ಆಗರ.
ಇದು ಎಲ್ಲಾ ರೀತಿಯ ವಾತಾವರಣ ಮತ್ತು ಹವಾಮಾನದಲ್ಲಿ ಬೆಳೆಯುವುದು. ಇದಕ್ಕೆ ಸರಿಯಾದ ಬಿಸಿಲು ಇದ್ದರೆ ಸಾಕು ಮತ್ತು ಪ್ರತಿನಿತ್ಯ ನೀರು ಹಾಕಬೇಕು. ಬಾಲ್ಕನಿಯಲ್ಲಿ ಕೈದೋಟ ಮಾಡಿದ್ದರೆ ಆಗ ಇದನ್ನು ನೀವು ಬೆಳೆಸಲೇಬೇಕು.

English summary

Vegetables That Grow Easily In 30 Days

One of the most rewarding hobbies in the world, gardening is one place where you are blessed with the fruits of your hard work (both literally and otherwise). Although this is a science and involves a lot of planning of which seeds should be sown and how to arrive at the ideal condition for the plant's growth, the same is an art as well. A lot of artistic planning goes into taking care of the beautiful gardens.
X
Desktop Bottom Promotion