For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಟೊಮೆಟೊ ಕೃಷಿ ಮಾಡಲು ಕೆಲವೊಂದು ಕಿವಿಮಾತುಗಳು

By Jaya subramanya
|

ಅಡುಗೆ ಮನೆಯಲ್ಲಿ ಟೊಮೆಟೊಗೆ ಹೆಚ್ಚು ಪ್ರಾಶಸ್ತ್ಯವಿದೆ. ಯಾವುದೇ ಬಗೆಯ ಖಾದ್ಯವಾಗಿರಲಿ ಅದಕ್ಕೆ ನೀವು ಟೊಮೆಟೊವನ್ನು ಸೇರಿಸಿಲ್ಲದಿದ್ದರೆ ಆ ಖಾದ್ಯಕ್ಕೆ ರುಚಿ ಎಂಬುದೇ ಇರುವುದಿಲ್ಲ. ಅಂತೆಯೇ ಅತಿ ಕಡಿಮೆ ಬೆಲೆಗೆ ದೊರೆಯುವ ಈ ತರಕಾರಿ ಎಲ್ಲರಿಗೂ ಕೈಗೆಟಕುವಂತಿದೆ. ಊಟಕ್ಕೆ ಏನೂ ಇಲ್ಲದಿದ್ದರೂ ಬರಿಯ ಟೊಮೆಟೊ ಸಾರು ಮಾಡಿ ಹೊಟ್ಟೆಯನ್ನು ತುಂಬಿಸಿಕೊಳ್ಳಬಹುದಾಗಿದೆ.

ಇನ್ನು ಅಡುಗೆ ಮನೆಯಲ್ಲಿ ಮಾತ್ರವಲ್ಲದೆ ಹೆಚ್ಚಿನ ಸೌಂದರ್ಯ ಸಾಧನಗಳಲ್ಲಿ ಕೂಡ ಟೊಮೆಟೊಗೆ ಹೆಚ್ಚಿನ ಸ್ಥಾನವಿದೆ. ಫೇಸ್‌ಪ್ಯಾಕ್ ಆಗಿ ಕೂಡ ಈ ತರಕಾರಿಯನ್ನು ಬಳಸುತ್ತಾರೆ ಅಂತೆಯೇ ತ್ವಚೆಯ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಟೊಮೆಟೊ ಸಹಕಾರಿಯಾಗಿದೆ. ನಿಮಗೆ ಗಾರ್ಡನಿಂಗ್ ಮಾಡುವುದು ಹೆಚ್ಚು ಇಷ್ಟವಾಗಿದೆ ಎಂದಾದಲ್ಲಿ ನೀವು ಟೊಮೆಟೊ ಬೆಳೆಯನ್ನೇ ಬೆಳೆಯಬಹುದು ತಾನೇ?

Tomatoes

ಹೌದು ಮನೆಯಲ್ಲೇ ನಿಮ್ಮ ಬಿಡುವಿನ ಸಮಯಕ್ಕೆ ಸಹಕಾರಿ ಎಂದೆನಿಸಿರುವ ಈ ಬೆಳೆಯು ಉತ್ತಮ ಫಲವನ್ನು ನೀಡಿದಲ್ಲಿ ಮನೆ ಬಳಕೆಗೂ ಉಪಯುಕ್ತವಾಗಿದೆ. ಆದರೆ ಈ ಬೆಳೆಯನ್ನು ಬೆಳೆಯುವ ಮುನ್ನ ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಕೊಂಚ ಆರೈಕೆಯನ್ನು ಮಾಡಿದರೆ ಟೊಮೆಟೊ ಹುಲುಸಾಗಿ ಬೆಳೆಯುತ್ತದೆ. ಇನ್ನು ಮುಖ್ಯ ಬೆಳೆಯನ್ನಾಗಿ ನೀವು ಟೊಮೆಟೊವನ್ನು ಬೆಳೆಸುತ್ತಿದ್ದೀರಿ ಎಂದಾದಲ್ಲಿ ಅವುಗಳ ಬೇರಿಗೆ ಸಾಕಷ್ಟು ಸ್ಥಳವನ್ನು ನೀಡಬೇಕು. ಹಾಗಿದ್ದರೆ ಟೊಮೆಟೊ ಬೆಳೆಗೆ ಅತ್ಯಗತ್ಯ ಎಂದೆನಿಸಿರುವ ಕೆಲವೊಂದು ಟಿಪ್ಸ್‌ಗಳನ್ನು ನಾವು ನೀಡುತ್ತಿದ್ದು ಈ ಸಲಹೆಗಳನ್ನು ಬಳಸಿಕೊಂಡು ನಿಮಗೆ ಟೊಮೆಟೊ ಬೆಳೆಯನ್ನು ಮನೆಯಲ್ಲೇ ಬೆಳೆಸಬಹುದಾಗಿದೆ.

ಅವುಗಳಿಗೆ ಸಾಕಷ್ಟು ಸ್ಥಳವಕಾಶ ನೀಡಿ
ನೀವು ಪಾಟ್‌ಗಳಲ್ಲಿ ಟೊಮೆಟೊವನ್ನು ಬೆಳೆಸುತ್ತೀರಿ ಎಂದಾದಲ್ಲಿ ಬೇರಿಗೆ ಗಾಳಿಯಾಡಲು ಸಾಕಷ್ಟು ಸ್ಥಳವಕಾಶ ದೊರೆಯುತ್ತಿದೆ ಎಂಬುದಾಗಿ ಖಾತ್ರಿಪಡಿಸಿಕೊಳ್ಳಿ. ಇಲ್ಲವೇ 15 ಅಥವಾ 25 ಲೀಟರ್ ನೀರು ಹಿಡಿಸುವ ಒಂದು ಬಕೆಟ್‌ನಲ್ಲಿ ನಿಮಗೆ ಟೊಮೆಟೊ ಕೃಷಿಯನ್ನು ಮಾಡಬಹುದಾಗಿದೆ. ಇನ್ನು ದೊಡ್ಡ ಪಾಟ್‌ಗಳನ್ನು ನೀವು ಬಳಸುತ್ತೀರಿ ಎಂದಾದಲ್ಲಿ ಇದು 15 ಲೀಟರ್‌ ಗಾತ್ರದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟೊಮೆಟೊದೊಂದಿಗೆ ಕೊತ್ತಂಬರಿ ಸೊಪ್ಪನ್ನು ನೀವು ಬೆಳೆಸಬಹುದಾಗಿದೆ.

ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

ಅವುಗಳನ್ನು ಚೆನ್ನಾಗಿ ಪೋಷಿಸಿ
ಟೊಮೆಟೊಗೆ ಸಾಕಷ್ಟು ಕಾಳಜಿಯನ್ನು ನಡೆಸಬೇಕಾಗುತ್ತದೆ. ಅಂತೆಯೆ ಕ್ಯಾಲ್ಶಿಯಂ ಮತ್ತು ಉತ್ತಮ ಪೋಷಕಾಂಶವುಳ್ಳ ಮಣ್ಣನ್ನು ಈ ಬೆಳೆಗೆ ನೀಡಿ. ಇದರಿಂದ ಬೇರಿಗೆ ಉತ್ತಮ ಪೋಷಕಾಂಶ ದೊರೆತು ಹಣ್ಣುಗಳು ಚೆನ್ನಾಗಿ ಬೆಳೆಯುತ್ತದೆ. ಅಂತೆಯೇ ಒಳ್ಳೆಯ ರಸಗೊಬ್ಬರವನ್ನು ಬಳಸಿ.

ಸೂರ್ಯನ ಬಿಸಿಲಿಗೆ ಇಡಿ
ಪ್ರತಿ ದಿನವೂ ಈ ಬೆಳೆಗೆ ಸೂರ್ಯನ ಬೆಳಕು ಅತ್ಯಗತ್ಯವಾಗಿದೆ. ಇದರಿಂದ ಗುಲಾಬಿ ಮಿಶ್ರಿತ ಬಣ್ಣವು ಅದಕ್ಕೆ ದೊರೆಯುತ್ತದೆ. ಅಂತೆಯೇ ಬಿಸಿಲು ಬೇರುಗಳನ್ನು ಭದ್ರಪಡಿಸಿ ಬೆಳೆ ಬೆಳೆಯಲು ಅನುವು ಮಾಡಿಕೊಡುತ್ತದೆ. ನಿಮ್ಮ ಸಸ್ಯಕ್ಕೆ ಬೆಚ್ಚಗೆ ಬೇಕು ಆದ್ದರಿಂದ ಪ್ಲಾಸ್ಟಿಕ್ ಹೊದಿಕೆಯನ್ನು ಗಂಟೆಯಷ್ಟು ಕಾಲ ಕವರ್ ಮಾಡಿ ಇರಿಸಿ.

ಸಾಕಷ್ಟು ನೀರು
ಇನ್ನು ಟೊಮೆಟೊ ಬೆಳೆಗೆ ಸಾಕಷ್ಟು ನೀರು ಬೇಕೇ ಬೇಕು. ಕಡಿಮೆ ನೀರು ಇದ್ದಲ್ಲಿ ಇವುಗಳು ತಮ್ಮ ಬೆಳವಣಿಗೆಯನ್ನು ಕುಂಠಿತ ಗೊಳಿಸುತ್ತವೆ. ನೀವು ಸಮಯಕ್ಕೆ ಸರಿಯಾಗಿ ಟೊಮೆಟೊಗೆ ನೀರು ಉಣಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಂತೆಯೇ ನೀರುಣಿಸಿದ ಟೊಮೆಟೊಗಳು ಉತ್ತಮ ಎಂದೆನಿಸಿವೆ. ನೀವು ಬೆಳೆಗೆ ಬೆಳೆಸಿರುವ ಪಾಟ್‌ನಲ್ಲಿ ಹೆಚ್ಚುವರಿ ನೀರು ಹರಿದು ಹೋಗಲು ಸ್ಥಳಾವಕಾಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆಧಾರಕ್ಕಾಗಿ ಕೋಲನ್ನು ಇರಿಸಿ
ಟೊಮೆಟೊ ಬಳ್ಳಿಗಳು ಸಾಕಷ್ಟು ದುರ್ಬಲವಾಗಿವೆ ಮತ್ತು ಹಳತಾಗಿವೆ ಎಂದಾದಲ್ಲಿ ಕೋಲನ್ನು ಬಳ್ಳಿಗಳಿಗೆ ಆಧಾರವಾಗಿರಿಸಿ. ಇದು ಟೊಮೆಟೊ ಬೆಳೆಗೆ ಸಾಮರ್ಥ್ಯವನ್ನು ನೀಡುತ್ತವೆ. ಹಾಗೆಯೇ ಬೆಂಬಲವಿರುವ ಕೋಲನ್ನು ಆಧರಿಸಿಕೊಂಡು ಅತ್ತಿತ್ತ ಹರಡದೆಯೇ ನೇರವಾಗಿ ಬೆಳೆ ಬೆಳೆಯುತ್ತದೆ. ಬಳ್ಳಿಗೆ ನೀವು ಸರಿಯಾದ ಬೆಂಬಲವನ್ನು ನೀಡಿಲ್ಲ ಎಂದಾದಲ್ಲಿ ಬಳ್ಳಿ ಬಾಗಿ ಹೋಗಿ ಗಿಡಕ್ಕೆ ಸಮಸ್ಯೆಯನ್ನು ಉಂಟುಮಾಡಬಹುದು. ನಿಮ್ಮ ಮನೆಯಲ್ಲೇ ಅತಿ ಕಡಿಮೆ ಸ್ಥಳಾವಕಾಶದಲ್ಲೇ ಬೆಳೆಯಬಹುದಾದ ಬೆಳೆ ಇದಾಗಿದ್ದು ಇದಕ್ಕೆ ಬೇಕಾಗಿರುವುದು ದೊಡ್ಡ ಚಟ್ಟಿ, ಆಧಾರಕ್ಕಾಗಿ ಕೋಲು ಮತ್ತು ಕೆಲವೊಂದು ಪ್ರಮುಖ ಆರೈಕೆ ವಿಧಾನಗಳಾಗಿವೆ.

English summary

Simple Tips To Keep In Mind While Growing Tomatoes

Tomatoes are every kitchen garden's delight, and the sight and smell of a warm tomato newly plucked from a vine is mesmerizing. There is nothing as magical as growing your own food, unless it is growing your own food well. Tomatoes are special plants that need special care, but if they receive it, the rewards can be overwhelming. So, here is how you can master the art of growing fabulous, beautifully red tomatoes for yourself and your dear ones. Take a look.
X
Desktop Bottom Promotion