For Quick Alerts
ALLOW NOTIFICATIONS  
For Daily Alerts

ತೋಟದಲ್ಲಿ ಟೊಮೇಟೊವನ್ನು ಬೆಳೆಸಲು ಸೂಕ್ತ ಸಲಹೆಗಳು

|

ಆರೋಗ್ಯಕರವಾದ ತರಕಾರಿ ಎಂದೇ ಪ್ರಸಿದ್ಧವಾಗಿರುವ ಟೊಮೇಟೊ ಹಣ್ಣನ್ನು, ನಿಮ್ಮ ತೋಟದಲ್ಲೂ ಸರಳವಾಗಿ ಬೆಳೆಸಬಹುದು. ಬೇರೆಲ್ಲಾ ತರಕಾರಿ, ಹೂ ಗಿಡಗಳೊಂದಿಗೆ, ಕೆಂಪು ಕೆಂಪಾಗಿ ರಸವನ್ನು ಸೂಸುತ್ತಿರುವ ಟೊಮೇಟೊವನ್ನು ಕೂಡ ಬೆಳೆಸಬಹುದಾಗಿದೆ.

ಟೊಮೇಟೊ ಹೂವಿನ ರುಚಿ ಮತ್ತು ಪರಿಮಳ ಸ್ವಲ್ಪ ಹುಳಿ ಮತ್ತು ಸಿಹಿಯಾಗಿರುತ್ತದೆ. ಈ ರೀತಿ ಎಲ್ಲರಿಗೂ ಇಷ್ಟವಾಗುವ ಟೊಮೇಟೊ, ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಬೆಳೆಯುತ್ತದೆ. ಟೊಮೇಟೊ ಬೆಳೆಗೆ ಬೆಚ್ಚಗಿನ ಪರಿಸರ ಮತ್ತು ಸೂರ್ಯನ ಶಾಖ ಅಗತ್ಯ. ಆದ್ದರಿಂದ ಚಳಿಗಾಲದ ಋತು ಟೊಮೇಟೊ ಬೆಳೆಗೆ ಅನುಕೂಲಕರವಾಗಿಲ್ಲ.

ಚಳಿಗಾಲದಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಟೊಮೇಟೊ ಹೆಚ್ಚಾಗಿ ರಾಸಾಯನಿಕಗಳು ಅಥವಾ ಹೈಬ್ರಿಡ್ ತಂತ್ರಜ್ಞಾನ ಬಳಸಿ ಬೆಳೆಯಲಾಗುತ್ತದೆ. ಅಂತಹ ಟೊಮೇಟೊ ನೈಸರ್ಗಿಕ ರುಚಿಯನ್ನು ನೀಡುವುದಿಲ್ಲ!

ಗಾರ್ಡನ್ ಸೊಬಗು ಹೆಚ್ಚಿಸುವ 10 ಬಗೆಯ ದಾಸವಾಳಗಳು

ಈ ತರಕಾರಿಯನ್ನು ಬೆಳೆಸಲು ನೀವು ತುಂಬಾ ಕಷ್ಟಪಡಬೇಕಾಗಿಲ್ಲ ಮತ್ತು ಇದರ ಆರೈಕೆಗೆ ಕೂಡ ಹೆಚ್ಚುವರಿ ಖರ್ಚಿನ ಅಗತ್ಯವಿಲ್ಲ. ಟೊಮೇಟೊದ ಸಂಪೂರ್ಣ ಫಲ ಕೂಡ ಪ್ರತಿಯೊಂದು ರೋಗಕ್ಕೂ ರಾಮಬಾಣವಾಗಿದೆ.

ನಿಮ್ಮ ತ್ವಚೆಯ ಆರೈಕೆಯನ್ನು ಈ ಹಣ್ಣು ಮಾಡುವುದರೊಂದಿಗೆ ಕಿಡ್ನಿ ಕಲ್ಲಿಗೂ ಟೊಮೇಟೊ ಸಿದ್ಧೌಷಧವಾಗಿದೆ. ಇಷ್ಟೆಲ್ಲಾ ಆರೋಗ್ಯಕಾರಿ ಸತ್ವಗಳಿಂದ ಕೂಡಿರುವ ಟೊಮೇಟೊವನ್ನು ನಿಮ್ಮ ತೋಟದಲ್ಲೂ ಬೆಳೆಸುವ ಹಂಬಲ ನಿಮ್ಮಲ್ಲಿದ್ದರೆ ಮತ್ತೇಕೆ ತಡ ನಾವಿಲ್ಲಿ ನೀಡಿರುವ ಕೆಲವೊಂದು ಮಾಹಿತಿಗಳ ಮೂಲಕ ಟೊಮೇಟೊವನ್ನು ನಿಮ್ಮ ಮನೆಯಲ್ಲಿ ಕೂಡ ಬೆಳೆಸಬಹುದು.

*ಟೊಮೇಟೊಗಳು ಋತುಮಾನ ಉದ್ದಕ್ಕೂ ಬೆಳೆಯುವಂತಹ ತರಕಾರಿಯಾಗಿದೆ ಎಂಬುದು ನೀವು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ಪ್ರಾರಂಭದಲ್ಲಿ ಬೀಜವನ್ನು ಬಿತ್ತುವಾಗ, ಅವುಗಳನ್ನು ಹೊರಕ್ಕೆ ಕೊಂಡೊಯ್ಯುವವರೆಗೆ ಅಂದರೆ ಸೂರ್ಯನ ಬಿಸಿಲಿಗೆ ತೆರೆದಿಡುವುದಕ್ಕಿಂತ ಮುಂಚೆ ಮೂರರಿಂದ ನಾಲ್ಕು ವಾರಗಳವರೆಗೆ ಅವುಗಳು ಒಳಾಂಗಣದಲ್ಲಿ ಬೆಳೆಸಬೇಕು.

*ಟೊಮೇಟೊ ಬೆಳೆಗೆ ತುಸು ಹೆಚ್ಚಾಗಿಯೇ ಸೂರ್ಯನ ಬೆಳಕು ಅಗತ್ಯ. ಚಳಿಗಾಲದಲ್ಲಿ ಸೂರ್ಯನ ಬೆಳಕು ಟೊಮೇಟೊಗೆ ಸಾಕಾಗುವುದಿಲ್ಲ. ಇದಕ್ಕೆ ಕನಿಷ್ಠ ಪ್ರಾರಂಭಿಕ ಹಂತದಲ್ಲಿ ಬೆಳಕು ಸಾಕಷ್ಟು ಅಗತ್ಯವಿದೆ. ಈ ಸಮಯದಲ್ಲಿ ನೀವು ಪ್ರತಿ ದಿನ 10-12 ಬಾರಿ ಸಸಿಗಳಿಗೆ ಕೃತಕ ಬೆಳಕನ್ನು ನೀಡಬಹುದು. ಸಾಕಷ್ಟು ಬೆಳಕಿನ ಪ್ರಮಾಣ ಈ ಸಸ್ಯದ ಮೇಲೆ ಬಿದ್ದರೆ ಇದರ ಬೆಳವಣಿಗೆ ಹೆಚ್ಚುತ್ತದೆ.

ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?

*ಟೊಮೇಟೊ ಬೆಳೆಗೆ ಮೊದಲೇ ಹೇಳಿದಂತೆ ಬೆಚ್ಚಗಿನ ಪರಿಸರದ ಅಗತ್ಯವಿದೆ. ಆದ್ದರಿಂದ, ಆಳವಾಗಿ ಮಣ್ಣಿನಲ್ಲಿ ಸಸಿಗಳನ್ನು ಹೂತು ಬೆಳೆಯಬೇಕು. ಇದು ನೀವು ಚಳಿಗಾಲದಲ್ಲಿ ಆರೋಗ್ಯಕರ ಟೊಮೇಟೊ ಬೆಳೆಯಲು ಸಹಾಯ ಮಾಡುತ್ತದೆ. ಈ ವಿಧಾನವನ್ನು ಬಳಸುವಾಗ, ಸಸಿಗಳನ್ನು ತುಂಬಾ ಹತ್ತಿರ ನೆಡಬಾರದು. ಏಕೆಂದರೆ ಗಿಡದ ಬೆಳವಣಿಗೆ ಇದರಿಂದ ಕುಂಠಿತವಾಗುವ ಸಾಧ್ಯತೆಗಳಿರುತ್ತವೆ.

*ಇನ್ನು ಮಣ್ಣಿನ ವಿಚಾರಕ್ಕೆ ಬಂದಾಗ, ಮಣ್ಣು ತೇವಭರಿತವಾಗಿರಬೇಕು ಹೆಚ್ಚು ಒದ್ದೆ ಕೂಡ ಆಗಿರಬಾರದು. ಸ್ವಲ್ಪ ಮಟ್ಟಿಗಿನ ಬೆಚ್ಚಗೆ ಅವಶ್ಯ. ನಿಮ್ಮ ವಾಟರ್ ಹೀಟರ್ ಅನ್ನು ಕೂಡ ಈ ಉದ್ದೇಶಕ್ಕಾಗಿ ಬಳಸಬಹುದು.

*ಟೊಮೇಟೊ ಬೆಳೆ ಬಹಳ ಸೂಕ್ಷ್ಮವಾಗಿದ್ದು, ತಾಪಮಾನ ಮತ್ತು ಸುತ್ತಮುತ್ತಲಿನ ಪರಿಸರ ಇದರ ಮೇಲೆ ನೇರ ಪರಿಣಾಮ ಬೀರುತ್ತದೆ.

*ಬೀಜಗಳು ಒಮ್ಮೆ ಚಿಗುರಿದ ನಂತರ ಸೂರ್ಯನ ಬೆಳಕು ಸಾಕಷ್ಟಿರುವ ಸ್ಥಳದಲ್ಲಿ ಅವುಗಳನ್ನು ಇರಿಸುವುದಾಗಿದೆ. ಕ್ರಿಮಿಕೀಟಗಳಿಂದ ನಿಮ್ಮ ಗಿಡವನ್ನು ರಕ್ಷಿಸಿಕೊಳ್ಳಲು ಸೂಕ್ತವಾದ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ನೀವು ಬಳಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಬಳಸಲು ಮರೆಯದಿರಿ.

English summary

Tips To Plant Tomatoes In Your Garden

In this article, we look at a few facts relating to growing tomatoes in your garden. It is important to understand certain facts about growing them in order to get a good idea of what to do. Here are a few tips to plant tomatoes in your garden. Read on...
X