For Quick Alerts
ALLOW NOTIFICATIONS  
For Daily Alerts

14 ಸರಳ ಗಾರ್ಡನಿಂಗ್ ಸಲಹೆಗಳು ಮತ್ತು ಉಪಾಯಗಳು

By Arpitha Rao
|

ಗಾರ್ಡನಿಂಗ್ ಎಂಬುದೊಂದು ಕಲೆ.ಗಾರ್ಡನಿಂಗ್ ಮಾಡುವುದರಲ್ಲಿ ಆಸಕ್ತಿ ಇದ್ದರೆ ಮನೆಯ ಒಳಗೆ ಕೂಡ ಕಂಟೈನರ್ ಗಾರ್ಡನಿಂಗ್ ಮಾಡಬಹುದು.ಗಾರ್ಡನಿಂಗ್ ಮಾಡುವ ಮೊದಲು ಅದರ ಬಗ್ಗೆ ತಿಳಿದುಕೊಂಡಿರಬೇಕು.ಸೂಕ್ತವಾದ ಮಾಹಿತಿ ಮೊದಲೇ ಪಡೆದಿದ್ದರೆ ಹುಳುಗಳು ಬಂದಾಗ ಅಥವಾ ಗಿಡ ಒಣಗುತ್ತಿದ್ದರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.

ಮಾಸ್ಟರ್ ಗಾರ್ಡನರ್ ಪೌಲ್ ಜೇಮ್ಸ್ ಗಾರ್ಡನಿಂಗ್ ಮಾಡಲು ಬೇಕಾಗುವ 14 ಸರಳ ಟಿಪ್ಸ್ ಮತ್ತು ಟ್ರಿಕ್ಸ್ ಬಗ್ಗೆ ತಿಳಿಸಿದ್ದಾರೆ. ಪೌಲ್ ಜೇಮ್ಸ್ ತಿಳಿಸಿದ ಇತ್ತೀಚಿನ ಸಲಹೆಗಳು ಮತ್ತು ಟ್ರಿಕ್ಸ್ ಇಲ್ಲಿ ನೀಡಲಾಗಿದೆ.

1.ಮಣ್ಣಿನ ಪಾಟ್ ಗಳಲ್ಲಿ ಉಪ್ಪಿನ ಅಂಶವನ್ನು ತೆಗೆಯಲು ವೈಟ್ ವಿನೆಗರ್ ಮತ್ತು ಅಲ್ಕೋಹಾಲ್ ,ಜೊತೆಗೆ ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಬೇಕು.ಇದನ್ನು ಪಾಟ್ ಗೆ ಹಚ್ಚಿ ಬ್ರಶ್ ನಿಂದ ತಿಕ್ಕಬೇಕು.ಇದರಲ್ಲಿ ಯಾವುದಾದರು ಗಿಡ ನೆಡುವ ಮೊದಲು ಇದನ್ನು ಸಂಪೂರ್ಣವಾಗಿ ಒಣಗಲು ಬಿಡಿ.

2.ನೀವು ಗಾರ್ಡನಿಂಗ್ ಮಾಡುವಾಗ ನಿಮ್ಮ ಉಗುರುಗಳ ಕೆಳಗೆ ಮಣ್ಣು ಸೇರುವುದನ್ನು ತಪ್ಪಿಸಲು ಸೋಪ್ ನಲ್ಲಿ ಉಗುರುಗಳನ್ನು ಗೀರಬೇಕು.ಇದರಿಂದ ಮಣ್ಣು ಸೇರುವ ಜಾಗದಲ್ಲಿ ಸೋಪು ಇರುವುದರಿಂದ ಮಣ್ಣು ಮೆತ್ತಿಕೊಳ್ಳುವುದಿಲ್ಲ.ಗಾರ್ಡನಿಂಗ್ ಮಾಡಿ ಮುಗಿದ ನಂತರ ಉಗುರಿಗೆ ಅಂಟಿಕೊಂಡ ಸೋಪನ್ನು ನೈಲ್ ಬ್ರಶ್ ಮುಲಕ ತೆಗೆಯಿರಿ ಇದರಿಂದ ಉಗುರುಗಳು ಸ್ವಚ್ಚವಾಗಿರುತ್ತದೆ.

3.ಗಿಡಗಳನ್ನು ಟ್ರಿಮ್ ಮಾಡುವಾಗ ತ್ರಿಮ್ಮರ್ ಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡರೆ ಗಿಡ ತುಂಡಾಗುವುದು ಅಥವಾ ಜ್ಯಾಮ್ ಆಗುವುದು ತಪ್ಪುತ್ತದೆ.

ಬೇವಿನ ಎಲೆಯ 7 ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ!

4.ಉದ್ದವಾಗಿರುವ ಒಂದು ಕೋಲನ್ನು ಅಳತೆ ಕೋಲಾಗಿ ಬಳಸಿ.ಗಾರ್ಡನ್ ನಲ್ಲಿ ಇದನ್ನು ಕೆಳಗೆ ಅಡ್ಡವಾಗಿ ಇಡಿ ಮತ್ತು ಅಳತೆ ಟೇಪ್ ನಲ್ಲಿ ಇದರ ಅಳತೆ ತೆಗೆದುಕೊಳ್ಳಿ.ಶಾಶ್ವತವಾಗಿರುವ ಹ್ಯಾಂಡಲ್ ಬಳಸಿ ಅದರ ಮೇಲೆ ಇಂಚು ಮತ್ತು ಅಡಿ ಅಂಕಗಳನ್ನು ಗುರುತು ಮಾಡಿಟ್ಟುಕೊಳ್ಳಿ.ನಿರ್ಧಿಷ್ಟ ಅಳತೆಯಲ್ಲಿ ಗಿಡಗಳನ್ನು ನೆಡಬೇಕೆಂದಾಗ ಪದೇ ಪದೇ ಅಳತೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.ಮೊದಲೇ ಮಾಡಿಟ್ಟುಕೊಂಡ ಗುರುತುಗಳ ಆಧಾರದ ಮೇಲೆ ಗಿಡ ನೆಡಬಹುದು.

5.ನಿಮಗೆ ಅಗತ್ಯವಿರುವಾಗ ಸೂಕ್ತ ಹ್ಯಾಂಡಿ ಆಗಿರುವ ಗಾರ್ಡನಿಂಗ್ ಬೇಕೆಂದರೆ ಒಂದು ಮಡಕೆಗೆ ಸಣ್ಣ ಚೆಂಡು ಕಟ್ಟಿ,ರಂದ್ರ ದ ಮೂಲಕ ಈ ಚೆಂಡನ್ನು ಎಳೆಯಿರಿ.ಪಾಟ್ ಅನ್ನು ಉಲ್ಟಾ ಮಾಡಿಡಿ.ಈ ರೀತಿ ಮಾಡುವುದುದರಿಂದ ನಿಮಗೆ ಮತ್ತೆ ಟ್ವೈನ್ ಆಗಿರುವ ಗಾರ್ಡನಿಂಗ್ ಮಾಡಬೇಕೆಂದೆನಿಸುವುದಿಲ್ಲ.

6.ಪುಟ್ಟ ಮಣ್ಣಿನ ಮಡಕೆಗಳು ಗಿಡಗಳನ್ನು ರಾತ್ರಿಯ ಹಠಾತ್ ಮಂಜು ಅಥವಾ ಗಾಳಿಯಿಂದ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ.

7.ಮಣ್ಣಿನ ಮಡಕೆಯಲ್ಲಿ ಮೆದುಗೊಳವೆ ನಿರ್ಮಿಸಲು ಒಂದು ಅಡಿ ಉದ್ದದ ಬಲಯುತ ಸ್ಟೀಲ್ ಬಾರ್ ಅಳವಡಿಸಿ ಅದಕ್ಕೆ ಎರಡು ಮಣ್ಣಿನ ಮಡಕೆಯನ್ನು ಅಳವಡಿಸಿ ಒಂದು ಮೇಲ್ಮುಖವಾಗಿ ಮತ್ತೊಂದು ಕೆಳ ಮುಖವಾಗಿ ಇರಲಿ.ನೀವು ಎಳೆದಾಗ ಪಾಟ್ ಹಾನಿಗೊಳಗಾಗುವುದು ತಪ್ಪುತ್ತದೆ.

8.ಶಾಶ್ವತ ಗುರುತನ್ನು ಮಾಡಲು ಗಿಡಗಳ ಹೆಸರುಗಳನ್ನು ಕಲ್ಲುಗಳನ್ನು ಅಳವಡಿಸಿ ಕೆಳಗೆ ನೆಲದ ಮೇಲೆ ಆ ಗಿಡಕ್ಕೆ ಸರಿಯಾಗಿ ಬರೆಯಿರಿ.

ಗುಲಾಬಿ ಗಿಡಗಳ ನಿರ್ವಹಣೆಗೆ ಇಲ್ಲಿದೆ ಸುಲಭ ಟಿಪ್ಸ್

9.ಗಿಡಗಳಲ್ಲಿ ಹುಳುಗಳು ಹೆಚ್ಚುತ್ತಿವೆಯೇ?ಕೀಟಾಣುನಾಶಕಗಳನ್ನು ಸಿಂಪಡಿಸುವುದರ ಮೂಲಕ ಇದನ್ನು ಹೋಗಲಾಡಿಸಬಹುದು.ಇನ್ನೊಂದು ಆಸಕ್ತಿಕರ ಫ಼ನ್ ನೀಡುವ ಕೆಲಸವೆಂದರೆ ಒಂದು ಉದ್ದ ಟೇಪ್ ತೆಗೆದುಕೊಂಡು ಅದನ್ನು ನಿಮ್ಮ ಕೈಗೆ ಸುತ್ತಿಕೊಳ್ಳಿ ನಂತರ ಗಿಡಗಳ ಮೇಲೆ ಅದನ್ನು ನಿಧಾನವಾಗಿ ಭಾರಿಸಿ ಇದರಿಂದ ಗಿದದಲ್ಲಿರುವ ಎಳೆಗಳ ಅಡಿಯಲ್ಲಿರುವ ಹುಳುಗಳು ಕೆಳಗೆ ಬೀಳುವುದನ್ನು ಕಾಣಬಹುದು.

10.ನೀವು ತರಕಾರಿಗಳನ್ನು ಬೇಯಿಸಿ ಉಳಿದ ನೀರನ್ನು ಹಾಗೆಯೇ ಚೆಲ್ಲಬೇಕಾಗಿಲ್ಲ.ಅದನ್ನು ಗಿಡಗಳ ಬುಡದಲ್ಲಿ ಹಾಕಿ ನೋಡಿ ಇದರಿಂದ ಗಿಡ ಬೇಗ ಬೆಳೆಯುವುದನ್ನು ಕಾಣಬಹುದು.

11.ಕಾಫಿ ಮತ್ತು ಟೀ ಮಾಡಿ ಉಳಿದ ಮಡ್ದನ್ನು ಗಿಡದಲ್ಲಿ ಇರುವ ಹುಳುವನ್ನು ಹೋಗಲಾಡಿಸಲು ಮತ್ತು ಬೆರ್ರಿ ಹಣ್ಣುಗಳು,ರೊಡೊಡೆಂಡ್ರೋನ್ಸ್,ಲೆಮರೀ ಮುಂತಾದ ಗಿಡಗಳಿಗೆ ಬಳಸಬಹುದು.ತಿಂಗಳಿಗೊಮ್ಮೆ ಇದನ್ನು ಗಿಡಗಳಿಗೆ ಸಿಂಪಡಿಸುವುದರಿಂದ ಗಿಡಗಳು ಚೆನ್ನಾಗಿ ಬೆಳಯುತ್ತದೆ.

12.ಆಗಷ್ಟೇ ಚಿಗುರು ಒಡೆದಿರುವ ಗಿಡಗಳಿಗೆ ಆಕಸ್ಮಿಕವಾಗಿ ಎರಗುವ ಶಿಲೀಂದ್ರದಿಂದ ತಪ್ಪಿಸಲು ಚಹಾ ಕಣ್ಣನ್ನು ಬಳಸಿ.ವಾರದಲ್ಲಿ ಒಮ್ಮೆ ಬೀಜಗಳ ಬುಡದಲ್ಲಿ ಈ ಚಹಾ ಹಾಕಿ ಅಥವಾ ಎಲೆಗಳಿಗೆ ಸಿಂಪಡಿಸಿ.

13.ನೀವು ಟೀ ಕುಡಿಯುವಾಗ ಮಣ್ಣಿನ ಮಡಕೆಯ ಮೇಲೆ ಒಂದು ಸಾಸರ್ ಇಟ್ಟು ಅದಕ್ಕೆ ಟೀ ಎರೆಸಿದರೆ ಉಳಿದ ಮಡ್ದನ್ನು ಗಿಡಗಳಿಗೆ ಬಳಸಬಹುದು.

ಲಾಂಡ್ರಿ ಸುಲಭವಾಗಿಸುವ ವಿಧಾನಗಳು

14.ಗಿಡಮೂಲಿಕೆಗಳನ್ನು ಒಣಗಿಸಬೇಕೆಂದಾಗ ಕಾರಿನ ಸೀಟಿನಲ್ಲಿ ಒಂದು ಪೇಪರ್ ಹರಡಿ ಅದರ ಮೇಲೆ ಈ ಗಿಡಮೂಲಿಕೆಗಳನ್ನು ಪದರವಾಗಿ ಹರಡಿ ನಂತರ ಕಿಟಕಿ ಹಾಕಿ ಹೊಸಬನ್ನಿ.ಸುಲಭವಾಗಿ ಗಿಡಮೂಲಿಕೆಗಳು ಒಣಗುತ್ತವೆ ಮತ್ತು ಕಾರು ಕೂಡ ಸುವಾಸನೆಭರಿತವಾಗುತ್ತದೆ.

English summary

14 Simple Gardening Tips and Tricks

From using leftover coffee beans to preventing dirt from getting underneath fingernails, master gardener Paul James shares his top 14 tips and shortcuts to make spring gardening a breeze.
Story first published: Thursday, May 22, 2014, 17:01 [IST]
X