For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಅಲಂಕಾರಕ್ಕೆ ಅಗತ್ಯ ಸಲಹೆಗಳು

By Poornima hegde
|

ಈ ವರ್ಷದ ಚಳಿಗಾಲ ಚಳಿ ಆರಂಭವಾಗಿದೆ. ಚಳಿಗಾಲದಲ್ಲಿ ಹೇಗೆ ಅತಿಯಾದ ಚಳಿಯಿಂದಾಗಿ ನಮಗೆ ದಿನನಿತ್ಯದ ಕೆಲಸ ಮಾಡಲು ಮನಸ್ಸೇ ಇರುವುದಿಲ್ಲವೋ ಅದೇ ರೀತಿ ಹೊಸತೇನನ್ನಾದರು ಮಾಡಲು ಚಳಿಗಾಲ ಸ್ಪೂರ್ತಿ ನೀಡುತ್ತದೆ! ಚಳಿಗಾದಲ್ಲಿ ನಿಮ್ಮ ಮನೆಯನ್ನು ಆಕರ್ಷಕವಾಗಿ ಅಲಂಕಾರ ಮಾಡಿ ಈ ವರ್ಷದ ಚಳಿಗಾಲವನ್ನು ಉತ್ತಮವಾಗಿಸಬಹುದು. ಇದು ನಿಮ್ಮ ಮನೆ ಅಥವಾ ಕಚೇರಿ ಇರಬಹುದು ಆದರೆ ನೀವು ಮಾಡುವ ಸ್ವಲ್ಪ ಅಲಂಕಾರ ಅಲ್ಲಿನ ಪರಿಸರವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಈ ಚಳಿಗಾಲದಲ್ಲಿ ಮಾಡಬಹುದಾದ ಅಲಂಕಾರಗಳ ಬಗ್ಗೆ ಸೂಕ್ತ ಹಲವಾರು ಉಪಾಯಗಳಿವೆ. ಚಳಿಗಾಲದ ಹವಾಮಾನದಿಂದ ನಿಮಗೆ ಮನೆಯಿಂದ ಹೊರಗಡೆ ಹೋಗುವುದಕ್ಕೆ ಇಷ್ಟವಾಗದೇ ಇರಬಹುದು. ಆದರೆ ನೀವು ನಿಮ್ಮ ಮನೆಯನ್ನು ಚಳಿಗಾಲದಲ್ಲಿ ಅಲಂಕಾರಿಕ ವಸ್ತುಗಳನ್ನು ಬಳಸಿ ಸುಂದರವಾಗಿ ರೂಪಿಸಬಹುದು.

ರಜಾದಿನಗಳು ನೀವು ನಿಜವಾಗಿಯೂ ಸ್ನೇಹಶೀಲ ಅಲಂಕಾರದ ವಿಚಾರಗಳನ್ನು ಮಾಡುತ್ತ ಮನೆಯನ್ನು ಅಲಂಕರಿಸಿ ಮನೆಯಲ್ಲಿಯೇ ಸಮಯವನ್ನು ಕಳೆಯಲು ಉತ್ತಮವಾಗಿರುತ್ತವೆ. ಚಳಿಗಾಲದಲ್ಲಿ ಅಲಂಕಾರಗಳನ್ನು ಉತ್ತಮ ರೀತಿಯಲ್ಲಿ ಮಾಡಲು ನಿಮ್ಮ ಮನೆ ಅಥವಾ ಕಚೇರಿಗೆ ತಕ್ಕಂತೆ ಉತ್ತಮ ಅಲಂಕಾರಿಕ ವಸ್ತುಗಳನ್ನು ಪರಿಶೀಲಿಸಿ ಅವುಗಳನ್ನು ಬಳಸುವುದು. ನೀವು ಅತ್ಯುತ್ತಮ ಅಲಂಕಾರಿಕ ಉಪಾಯಗಳಿಗಾಗಿ ತಲೆಕೆಡಿಸಿಕೊಳ್ಳುತ್ತಿದ್ದರೆ ಇಲ್ಲಿದೆ ನಿಮಗೆ ಸೂಕ್ತವಾದ ಸಲಹೆಗಳು!

Winter décor items: essentials

1. ಸುಂದರವಾದ ಛಾಯಾಚಿತ್ರಗಳು
ನೀವು ಚಳಿಗಾದಲ್ಲಿ ಕಲಾತ್ಮಕ ಅಲಂಕಾರಗಳನ್ನು ಮಾಡಲು ಇಷ್ಟಪಡುವಿರಾದರೆ ನೀವು ಛಾಯಾಚಿತ್ರಗಳ ಬಗ್ಗೆ ಗಮನಹರಿಸಬಹುದು. ನಿಮ್ಮ ಮನೆಯಲ್ಲಿ ಕೆಲವು ಸುಂದರ ಛಾಯಾಚಿತ್ರಗಳನ್ನು ಇರಿಸಿ . ಇದು ನಿಮ್ಮ ಮನೆಗೆ ನಿಜವಾದ ಗ್ಲಾಮರ್ ನೀಡುತ್ತದೆ. ಮನೆಯ ಸೌಂದರ್ಯವನ್ನು ಹೆಚ್ಚಿಸಲು ಇದೊಂದು ಅತ್ಯುತ್ತಮ ಅಲಂಕಾರಿಕ ಯೋಜನೆ!

2. ಐಸ್ ಹೂದಾನಿಗಳ ಮ್ಯಾಜಿಕ್!
ಅಲಂಕಾರಗಳು ಕೇವಲ ನಿಮ್ಮ ಒಳಾಂಗಣಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಹೊರಾಂಗಣದಲ್ಲಿಯೂ ಕೂಡ ಸಾಕಷ್ಟು ಅಲಂಕಾರಗಳನ್ನು ಮಾಡಬಹುದು. ಹೊರಾಂಗಣ ಅಲಂಕಾರಗಳ ವಿಷಯ ಬಂದಾಗ ನೀವು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ನಿಮ್ಮ ಹೊರಾಂಗಣವನ್ನು ನಿಮ್ಮ ಪ್ರಯತ್ನದಿಂದ ನಿಜವಾಗಿಯೂ ಸುಂದರ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಈ ರೀತಿ ಚಿಂತನೆ ನಿಮ್ಮ ಮನಸ್ಸಿನಲ್ಲಿದ್ದರೆ ನಿಮ್ಮ ಹೊರಾಂಗಣದಲ್ಲಿ ಕೆಲವು ಐಸ್ ಹೂವಿನ ದಂಡೆಗಳನ್ನು ಇರಿಸುವ ಪ್ರಯತ್ನಿಸಿ. ಇದು ಖಚಿತವಾಗಿ ನಿಮ್ಮ ಮನೆಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ.

3. ನಿಮ್ಮ ಮನೆಯ ಕೈಸಾಲೆಯ ಸೊಬಗನ್ನೂ ಹೆಚ್ಚಿಸಿ
ನೀವು ಗಂಭೀರ ಚಳಿಗಾಲದಲ್ಲಿ ಅಲಂಕಾರಗಳನ್ನು ಮಾಡುವ ಯೋಜನೆ ಹೊಂದಿದ್ದರೆ, ನೀವು ಖಚಿತವಾಗಿ ಸ್ವಲ್ಪ ಪ್ರಯತ್ನ ಮಾಡಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಒಂದು ಕೊಠಡಿಯನ್ನು ಅಲಂಕರಿಸಿದಂತೆ ಈ ಚಳಿಗಾಲದಲ್ಲಿ ನಿಮ್ಮ ಮುಖಮಂಟಪ/ ಕೈಸಾಲೆಯನ್ನೂ ಅಲಂಕರಿಸಿ. ಇದು ನೀವು ಅನುಸರಿಸಿದರೆ ನಿಮ್ಮ ಮನೆಗೆ ಇನ್ನಷ್ಟು ಸೌಂದರ್ಯವನ್ನು ಸೇರಿಸುತ್ತದೆ.

4. ಹೂ ಕುಂಡಗಳನ್ನು ಬದಲಾಯಿಸಿ
ಸಸ್ಯಗಳನ್ನು ಬೆಳೆಸಿರುವ ಕುಂಡಗಳನ್ನು ಬದಲಿಸಿ. ಅವುಗಳನ್ನು ಬದಲಾಯಿಸಿ ಮತ್ತು ವರ್ಣರಂಜಿತ ಕುಂಡಗಳಲ್ಲಿ ಸಸ್ಯಗಳನ್ನು ಬೆಳೆಸಿ. ಇದು ನಿಮ್ಮ ತೋಟದ ಒಳಾಂಗಣ ಮತ್ತು ಹೊರಾಂಗಣದ ಸೌಂದರ್ಯ ದ್ವಿಗುಣ ಗೊಳಿಸುತ್ತದೆ. ನೀವು ಕಠಿಣ ಹವಾಮಾನದಿಂದ ಸಸ್ಯಗಳನ್ನು ರಕ್ಷಿಸಿಕೊಳ್ಳಲು ಕುಂಡಗಳನ್ನು ಮನೆಯ ಒಳಗೆ ಇಡುವುದು ಒಳ್ಳೆಯದು.

5. ಮುಖದ್ವಾರ ಆಕರ್ಷಕವಾಗಿರಲಿ

ಇದು ವರ್ಷದ ಅತ್ಯಂತ ತಂಪಾದ ಸಮಯವಾಗಿದ್ದು ನೀವು ಅಲಂಕಾರಕ್ಕಾಗಿ ಕೆಲವು ತಯಾರಿ ನಡೆಸಬೇಕಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಅಲಂಕಾರಮಾಡುವ ಅಭಿಲಾಷೆಯಿದ್ದರೆ ಅದನ್ನು ನಿಮ್ಮ ಮನೆಯ ಮುಂಭಾಗದ ಬಾಗಿಲಿನಿಂದಲೇ ಆರಂಭಿಸಿ. ನಿಮ್ಮ ಮನೆಯ ಬಾಗಿಲಿನ ಮುಂದೆ ಐಸ್ ಸ್ಕೇಟ್ ಜೋಡಿಸಿ ಸಿದ್ಧಗೊಳಿಸಿ.

6. ವಿನ್ಯಾಸದ ವಸ್ತುಗಳನ್ನು ಬಳಕೆ ಮಾಡಿ

ಬೇಸಿಗೆಯಲ್ಲಿ ಯಾವ ರೀತಿ ನಿಮ್ಮ ಕೈದೋಟವನ್ನು ಅಲಂಕರಿಸುತ್ತೀರೋ ಅದೇ ರೀತಿ ಕೆಲವು ವಿನ್ಯಾಸದ ವಸ್ತುಗಳನ್ನು ಬಳಕೆ ಮಾಡಿ ಚಳಿಗಾಲದ ತೋಟವನ್ನೂ ಸುಂದರಗೊಳಿಸಬಹುದು. ಬಣ್ಣಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ ನಿಮ್ಮ ತೋಟವನ್ನು ಸುಂದರ ಮತ್ತು ವರ್ಣಮಯವನ್ನಾಗಿಸಿ. ಚಳಿಗಾಲದ ತೋಟಗಳು ಕೇವಲ ಹವಾಮಾನ ಹಾಗೆ ವಿಶೇಷವಾಗಿದೆ . ಸ್ವಲ್ಪ ಕಾಳಜಿ ಮಾಡಿದರೆ ನಿಮ್ಮ ಹೂದೋಟವನ್ನು ಹೆಚ್ಚು ಸುಂದರಗೊಳಿಸಬಹುದು.

7. ಲಾಸ್ಟ್ ಬಟ್ ನಾಟ್ ದ ಲೀಸ್ಟ್ (ಕೊನೆಯದು ಆದರೆ ವಿಶೇಷವಾದದ್ದು)
ನಿಮ್ಮ ಚಳಿಗಾಲದಲ್ಲಿ ಅಲಂಕಾರಗಳನ್ನು ಮಾಡುವ ಯೋಜನೆಯನ್ನು ಮಾಡಿಕೊಂಡ ಮೇಲೆ ನೀವು ನಿಮ್ಮ ಬಜೆಟ್ ಬಗ್ಗೆಯೂ ಆಲೋಚಿಸಬೇಕಾದುದು ಅಗತ್ಯ. ನಿಮ್ಮ ಬಜೆಟ್ ನ್ನು ನೋಡಿ ಮತ್ತು ಸಾಧ್ಯವಾದಷ್ಟು ಸರಳವಾಗಿ ಅಲಂಕಾರಗಳನ್ನು ಮಾಡಿ. ಅಲಂಕಾರ ಮಾಡುವುದು ಎಂದರೆ ಅಗತ್ಯವಾಗಿ ನೀವು ನಿಮ್ಮ ಹಣವನ್ನೇಲ್ಲ ಖರ್ಚು ಮಾಡಬೇಕೆಂದು ಅರ್ಥವಲ್ಲ. ನೀವು ಮನೆಯಲ್ಲಿ ಉಪಯುಕ್ತತೆ ವಸ್ತುಗಳನ್ನು ಉಪಯೋಗಿಸಿ ಅಲಂಕಾರ ಮಾಡಲು ಯೋಜಿಸಬಹುದು. ಸರಳವಾಗಿ ಪುನರ್ರವಿಂಗಡಣೆ ಮತ್ತು ಕಡಿಮೆ ಹೂಡಿಕೆಗಳನ್ನು ನಿಮ್ಮ ಚಳಿಗಾಲದ ಅಲಂಕಾರಗಳನ್ನು ಆಕರ್ಷಕ ಮತ್ತು ಸೊಗಸಾಗಿ ಮಾಡಬಹುದು. ಚಳಿಗಾಲದ ರಜಾ ಮಜಾವನ್ನು ನಿಡುವಂತಹ ಋತು. ಈ ಸಮಯವನ್ನು ನಿಮ್ಮ ಮನೆಯನ್ನು ಉತ್ತಮ ರೀತಿಯಲ್ಲಿ ಅಲಂಕರಿಸುತ್ತ ಈ ರಜಾದಿನಗಳನ್ನು ಆನಂದಿಸಿ!

English summary

Winter decor items: essentials

he chill time of the year is back again and this winter you can celebrate with graceful décor. May it be your home or office; a little decoration will make it look beautiful. There are a number of décor ideas that may come handy this winter. Winter is a time you may not prefer going out, as the weather is dull.
X
Desktop Bottom Promotion