For Quick Alerts
ALLOW NOTIFICATIONS  
For Daily Alerts

ಚಳಿಗಾಲಕ್ಕೆ ನಿಮ್ಮ ಕೈತೋಟದಲ್ಲಿ ಇವನ್ನು ಬೆಳೆಯಿರಿ

|

ಚಳಿಗಾಲ ನಿಮ್ಮ ಕೈತೋಟದಲ್ಲಿ ಹೊಸ ಗಿಡಗಳನ್ನು ನೆಡುವ ಸಮಯ. ಹಲವರಿಗೆ ಋತುಮಾನಕ್ಕೆ ತಕ್ಕಂತೆ ತರಕಾರಿ ಗಿಡಗಳನ್ನು ನೆಡುವುದು ನೆಚ್ಚಿನ ವಿಷಯವಾಗಿರುತ್ತದೆ. ಉದಾಹರಣೆಗೆ ನೀವು ಸೌತೆಕಾಯಿಯನ್ನು ಬೇಸಿಗೆಯಲ್ಲಿ ದಂಡಿಯಾಗಿ ಬಳಸಿರಬಹುದು. ಚೇಪೆಕಾಯಿಗಳನ್ನು ಮಳೆಗಾಲದಲ್ಲಿ ರುಚಿನೋಡಿರಬಹುದು.
ಅದೇನೆ ಇರಲಿ ಚಳಿಗಾಲದ ಹವಾಮಾನದಲ್ಲಿ ಬೆಳೆಯುವಂತಹ ತರಕಾರಿ ಮತ್ತು ಹಣ್ಣಿನ ಬೀಜಗಳನ್ನು ನೆಡುವುದು ಉತ್ತಮ. ಚಳಿಗಾಲಕ್ಕೆ ವಿಶೇಷವಾದ ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಯಲ್ಲಿ ನೋಡಬಹುದು.
ಮತ್ತೇಕೆ ತಡ ನಿಮ್ಮದೇ ತೋಟದಲ್ಲಿ ಕಡಿಮೆ ವೆಚ್ಚದಲ್ಲಿ ತಾಜಾ ಹಣ್ಣು ತರಕಾರಿಗಳನ್ನು ಬೆಳೆದು ರುಚಿನೋಡಿ. ನಾವಿಲ್ಲಿ ಕಡಿಮೆ ಸಮಯ ಮತ್ತು ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ತರಕಾರಿಗಳ ವಿವರಗಳನ್ನು ನಿಮಗೆ ನೀಡಿದ್ದೇವೆ. ನೋಡಿ:

ಟೊಮೊಟೊ

ಟೊಮೊಟೊ

ಟೊಮೊಟೊಗಳನ್ನು ಬೀಜ ಅಥವ ಸಸಿಗಳನ್ನು ಬಳಸಿ ಬೆಳೆಯಬಹುದು. ಚೆರ್ರಿ ಟೊಮೊಟೊಗಳನ್ನು ಸುಗ್ಗಿ ಕಾಲದ ಆರಂಭದಲ್ಲಿ ಕಾಣಬಹುದು. ನಿಮಗೆ ಬೇಕೆನಿಸಿದರೆ ಬೇಸಿಗೆಯಲ್ಲಿ ದೊಡ್ಡ ದೊಡ್ಡ ಟೊಮೊಟೊಗಳನ್ನು ಸವಿಯಬಹುದು.

ಸ್ಪಿನಾಚ್

ಸ್ಪಿನಾಚ್

ಸೊಪ್ಪು ನಿಮ್ಮ ಕೈತೋಟಕ್ಕೆ ಅಂದವನ್ನು ನೀಡುವ ಹಸಿರೆಲೆಯ ತರಕಾರಿ. ಇದು ಚಳಿಗಾಲದಲ್ಲಿ ಸೊಂಪಾಗಿ ಬೆಳೆಯುತ್ತದೆ. ನೀವು ಬೀಜ ನೆಟ್ಟ 4-6 ವಾರಗಳಲ್ಲಿ ಇವು ಬೆಳೆದು ಕೈಗೆ ಬರುತ್ತವೆ. ಇದಕ್ಕೆ ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ. ಏಕೆಂದರೆ ಇದಕ್ಕೆ ಹೆಚ್ಚಿನ ಕೀಟಭಾದೆಯ ಭಯವಿಲ್ಲ.

ವಿಂಟರ್ ಸ್ಕಾಷ್

ವಿಂಟರ್ ಸ್ಕಾಷ್

ಇದು ಕೂಡ ಚಳಿಗಾಲದಲ್ಲಿ ಬೆಳೆಯಬಹುದಾದ ತರಕಾರಿ. ಇದನ್ನು ಸುಲಭವಾಗಿ ಬೆಳೆಯಬಹುದು.

ಎಲೆ ಕೋಸು

ಎಲೆ ಕೋಸು

ಇದು ಕೂಡ ಚಳಿಗಾಲದ ತರಕಾರಿ. ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು. ಕೋಸಿಗೆ ಥಂಡಿ ಮತ್ತು ಮಂಜನ್ನು ತಡೆದುಕೊಂಡು ಬೆಳೆಯಬಲ್ಲ ಶಕ್ತಿಯಿದೆ.

ಆಸ್ಪರಗಸ್

ಆಸ್ಪರಗಸ್

ಇದು ನಿಮ್ಮ ಕೈತೋಟದ ಅಂದವನ್ನು ಹೆಚ್ಚಿಸುವ ತರಕಾರಿ ಗಿಡಗಳಲ್ಲಿ ಒಂದು. ಮೊದಲಲ್ಲಿ ಕೆಲವು ದಿನಗಳವರೆಗೆ ಈ ಗಿಡವನ್ನು ನೆರಳಿನಲ್ಲಿ ಇಡಿ. ನಂತರ ಇದು ಅಂದವಾಗಿ ಬೆಳೆಯುವುದನ್ನು ನೋಡಿ.

ಸ್ಪ್ರಿಂಗ್ ಆನಿಯನ್ಸ್

ಸ್ಪ್ರಿಂಗ್ ಆನಿಯನ್ಸ್

ಇವು ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಇದು ಚೆನ್ನಾಗಿ ಬಲಿಯುವುದಕ್ಕೆ ಮುನ್ನ ಕೀಳಬೇಡಿ. ಹಾಗೆ ಕಿತ್ತರೆ ಇವು ರುಚಿಯಲ್ಲಿ ಸಿಹಿಯಾಗಿರುತ್ತದೆ. ಇವುಗಳನ್ನು ಕುಂಡಗಳಲ್ಲಿ ಕೂಡ ಬೆಳೆಸಬಹುದು.

ಬಟಾಣಿ

ಬಟಾಣಿ

ಇದನ್ನು ಚಳಿಗಾಲದ ಆರಂಭದಲ್ಲೆ ಬೆಳೆಯಬಹುದು. ಬೇಗ ಮೊಳಕೆಯೊಡೆಯುವಂತೆ ಮಾಡಲು ಇದನ್ನು ಒದ್ದೆ ಬಟ್ಟೆಯಲ್ಲಿಟ್ಟಿದ್ದು ನಂತರ ಮಣ್ಣಿನಲ್ಲಿ ಬಿತ್ತಿ.

ಲೆಟ್ಯೂಸ್

ಲೆಟ್ಯೂಸ್

ಈ ಹಸಿರೆಲೆಯ ತರಕಾರಿಯನ್ನು ಕೂಡ ನಿಮ್ಮ ಚಳಿಗಾಲದ ಕೈತೋಟದಲ್ಲಿ ಬೆಳೆಯಬಹುದು.

English summary

Vegetables To Grow In Winter Garden

Published: Thursday, November 14, 2013, 14:12 [IST] Ads by Google Winter is coming closer so it is time to harvest new seeds in your garden. There are many gardeners who love to plant vegetables and fruits as per seasonal changes. For example, you might have planted and used cucumbers widely during rhe summers.
Story first published: Saturday, November 30, 2013, 15:43 [IST]
X
Desktop Bottom Promotion