For Quick Alerts
ALLOW NOTIFICATIONS  
For Daily Alerts

ಗಾರ್ಡನ್ ಸೊಬಗು ಹೆಚ್ಚಿಸುವ 10 ಬಗೆಯ ದಾಸವಾಳಗಳು

|

ನಿಮ್ಮ ಹೂ ತೋಟದಲ್ಲಿ ಯಾವುದೇ ಬಗೆಯ ಹೂಗಳಿರಲಿ ಅವುಗಳ ಜೊತೆಗೆ ದಾಸವಾಳ ಹೂ ಇದ್ದೇ ಇರುತ್ತದೆ. ಕೆಲವೊಂದು ಬಗೆಯ ಹೂಗಳು ಎಲ್ಲಾ ಕಾಲದಲ್ಲಿ ಬಿಡುವುದಿಲ್ಲ, ಸೀಸನ್ ನಲ್ಲಿಷ್ಟೇ ಅರಳುತ್ತವೆ, ಮತ್ತೆ ಕೆಲವು ಬಗೆಯ ಹೂ ಗಿಡಗಳು ಸದಾ ಕಾಲ ಹೂವಿನಿಂದ ನಳ ನಳಿಸುತ್ತಿರುತ್ತದೆ. ಅಂತಹ ಹೂಗಳಲ್ಲಿ ಒಂದು ದಾಸವಾಳ.

ಗಾರ್ಡನ್ ನಲ್ಲಿ ಕಮ್ಮಿಯೆಂದರೂ 5-6 ಬಗೆಯ ದಾಸವಾಳದ ಹೂಗಳಿದ್ದರಂತೂ ನಿಮ್ಮ ಮನೆಯ ಸೊಬಗು ಮತ್ತಷ್ಟು ಹೆಚ್ಚುವುದು. ಈ ದಾಸವಾಳ ಹೂಗಳಿಗೆ ಗುಲಾಬಿ ಹೂಗಳಿಗೆ ಮಾಡುವಷ್ಟು ಆರೈಕೆ ಮಾಡಬೇಕಾಗಿಲ್ಲ, ನೆಟ್ಟು ಕಾಲ-ಕಾಲಕ್ಕೆ ಸ್ವಲ್ಪ ಗೊಬ್ಬರ ಹಾಕಿ, 2-3 ದಿನಕ್ಕೆ ಒಮ್ಮೆ ನೀರು ಹಾಕಿದರೆ ಸಾಕು ಸದಾ ಕಾಲ ಹೂ ಬಿಡುತ್ತಾ ಸೊಗಸಾಗಿ ಇರುತ್ತವೆ.

ಇಲ್ಲಿ ನಾವು ನಿಮ್ಮ ಮನೆಯಲ್ಲಿ ಸುಲಭದಲ್ಲಿ ಬೆಳೆಯಬಹುದಾದ ಕೆಲ ಬಗೆಯ ದಾಸವಾಳ ಹೂಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ.

ಚೈನೀಸ್ ದಾಸವಾಳ

ಚೈನೀಸ್ ದಾಸವಾಳ

ಈ ಚೈನೀಸ್ ದಾಸವಾಳ ಭಾರತದ ಮಣ್ಣಿನಲ್ಲಿ ಸೊಗಸಾಗ ಬೆಳೆಯುತ್ತದೆ. ಈ ದಾಸವಾಳ ಪಿಂಕ್ ಮಿಶ್ರಿತ ಕೆಂಪು ಬಣ್ಣದಲ್ಲಿದ್ದು ಅತ್ಯಾಕರ್ಷಕವಾಗಿರುತ್ತದೆ.

ಚೆಕ್ರೆಡ್ ದಾಸವಾಳ

ಚೆಕ್ರೆಡ್ ದಾಸವಾಳ

ಈ ದಾಸವಾಳ ದ್ವಿ ಬಣ್ಣದಲ್ಲಿದ್ದು, ಇದರಲ್ಲಿ ಬಿಳಿ-ಕ್ರೀಮ್ , ಪಿಂಕ್ -ಪಿಳಿ, ರೆಡ್-ಕ್ರೀಮ್ ಬಣ್ಣದಲ್ಲಿ ದಾಸವಾಳ ದೊರೆಯುತ್ತದೆ.

ಹವೈನ್ ದಾಸವಾಳ

ಹವೈನ್ ದಾಸವಾಳ

ಈ ದಾಸವಾಳ ಹೂ ಒಂದು ದಿನಕ್ಕೆಲ್ಲಾ ಬಾಡಿ ಹೋಗುವುದಿಲ್ಲ. ಅಲ್ಲದೆ ಈ ಜಾತಿಯ ದಾಸವಾಳ ಹೂವಿನಲ್ಲಿ ಅನೇಕ ಬಣ್ಣದ ದಾಸವಾಳಗಳಿವೆ.

ಬಿಳಿ ದಾಸವಾಳ

ಬಿಳಿ ದಾಸವಾಳ

ಬಣ್ಣ-ಬಣ್ಣದ ದಾಸವಾಳ ಗಿಡದ ಮಧ್ಯೆ ಬಿಳಿ ದಾಸವಾಳ ಗಿಡ ಇದ್ದರೆ ಸೆಂಟರ್ ಆಫ್ ದಿ ಅಟ್ರಾಕ್ಷನ್ ಆಗಿ ಗಮನ ಸೆಳೆಯುತ್ತದೆ.

ಸಬ್ ಡಾರ್ಫಿಯಾ

ಸಬ್ ಡಾರ್ಫಿಯಾ

ತೆಳು ಹಳದಿ ಬಣ್ಭದ ದಾಸವಾಳದ ಮಧ್ಯೆ ಕೆಂಪು ಬಣ್ಣ ಇರುವುದರಿಂದ ನೋಡಲು ಮತ್ತಷ್ಟು ಆಕರ್ಷಕ. ಈ ದಾಸವಾಳ ಗಿಡದಲ್ಲಿ ಹೂ ವರ್ಷ ಪೂರ್ತಿ ಬಿಡುವುದು.

 ಕೆಂಪು ದಾಸವಾಳ

ಕೆಂಪು ದಾಸವಾಳ

ಇದು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಇರುತ್ತದೆ. ಕೆಂಪು ದಾಸವಾಳ ಗಿಡ ತುಂಬಾ ಹೂ ಬಿಡುವುದರಿಂದ ಬೇಲಿ ಹತ್ತರ, ಗಾರ್ಡನ್ ಮೂಲೆಗಳಲ್ಲಿ ನೆಟ್ಟರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು.

ಪಿಂಕ್ ದಾಸವಾಳ

ಪಿಂಕ್ ದಾಸವಾಳ

ಇದರ ಗಿಡ ಸಾಧಾರಣ ಎತ್ತರದಲ್ಲಿ ಬೆಳೆಯುತ್ತದೆ. ಈ ಹೂವನ್ನು ಎಲ್ಲಾ ದಾಸವಾಳ ಗಿಡಗಳ ಮಧ್ಯೆ ನೋಡಲು ಆಕರ್ಷಕವಾಗಿರುವುದು.

ಟ್ರೈನಮ್ ದಾಸವಾಳ

ಟ್ರೈನಮ್ ದಾಸವಾಳ

ಮೂರು ಬಣ್ಣದ ಈ ದಾಸವಾಳ ಕೂಡ ನಿಮ್ಮ ಮನೆಯ ಸೊಬಗನ್ನು ಹೆಚ್ಚಿಸುವುದು.

 ಕ್ಯಾನ್ ಬೈನಸ್

ಕ್ಯಾನ್ ಬೈನಸ್

ಈ ದಾಸವಾಳ ಹೂವಿನ ಗಿಡವನ್ನು ಹೂ ಕುಂಡದಲ್ಲಿ ಬೆಳೆಸಬಹುದಾಗಿದ್ದು ಮನೆ ಮುಂದಿನ ಹೂ ಕುಂಡದಲ್ಲಿ ಇದನ್ನು ಬೆಳೆಸಬಹುದು.

ಹಳದಿ ಬಣ್ಣ

ಹಳದಿ ಬಣ್ಣ

ಹೊಳೆಯುವ ಕಡು ಹಳದಿ ಬಣ್ಣದ ದಾಸವಾಳ ಹೆಚ್ಚಾಗಿ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹೂ ನಿಮ್ಮ ಗಾರ್ಡನ್ ನ ರಂಗು ಮತ್ತಷ್ಟು ಹೆಚ್ಚಿಸುವುದು.

English summary

Types Of Hibiscus Flowers For Garden

Hibiscus flowers will keep its green leaves almost the same throughout even in different seasons. The diverse flower colours of different types of hibiscus will add to the beauty and splendour of your green garden.
 
Story first published: Tuesday, September 3, 2013, 16:48 [IST]
X
Desktop Bottom Promotion