For Quick Alerts
ALLOW NOTIFICATIONS  
For Daily Alerts

ಈ ಗಾರ್ಡನ್ ಬಗ್ಗೆ ಮಾತ್ರ ತಪ್ಪು ಕಲ್ಪನೆ ಏಕೆ?

|

ನಗರ ಪ್ರದೇಶಗಳಲ್ಲಿ ಗಾರ್ಡನ್ ಎಂಬ concept ನಿಧಾನಕ್ಕೆ ಕಣ್ಮರೆಯಾಗುತ್ತಿದೆ. ಸ್ವಲ್ಪ ವಿಸ್ತಾರವಾದ ಮನೆ ಕಟ್ಟಲೇ ಜಾಗವಿಲ್ಲದಿರುವಾಗ ಇನ್ನು ಗಾರ್ಡನ್ ಬೆಳೆಯುವುದಾದರೂ ಎಲ್ಲಿಂದ ಸಾಧ್ಯ?

ಆದರೆ ನಮ್ಮ ಮನೆಯ ಸುತ್ತ ಹಸಿರು ಇರಬೇಕೆಂದು ಬಯಸುವವರು ಇನ್ ಡೋರ್ ಗಾರ್ಡನ್ ಮಾಡುವುದು, ಮನೆಯ ಗೋಡೆಗಳನ್ನು, ಕಾಂಪೌಂಡ್ ಗಳನ್ನೇ ಗಾರ್ಡನ್ ಆಗಿ ಮಾಡುವುದನ್ನು ನೋಡುತ್ತೇವೆ. ಬಳ್ಳಿ ಗಿಡಗಳನ್ನು ನೆಟ್ಟು ಮನೆಯ ಕಂಬಗಳಿಗೆ, ಗೋಡೆಗೆ, ಕಿಟಕಿಗಳಿಗೆ ಬಳ್ಳಿಗಳನ್ನು ಹಬ್ಬಿಸಿ ಬಿಡುತ್ತಾರೆ. ಈ ರೀತಿಯ ಬಳ್ಳಿಗಳು ಬೆಳೆದು ಮನೆಯ ಸೊಬಗನ್ನು ಹೆಚ್ಚಿಸುವುದಂತು ನಿಜ, ಆದರೆ ಈ ರೀತಿಯ ಗಾರ್ಡನ್ ಮಾಡಲು ಹೆಚ್ಚಿನವರು ಮುಂದೆ ಬರುತ್ತಿಲ್ಲ, ಅದಕ್ಕೆ ಕಾರಣ ಈ ರೀತಿಯ ಗಾರ್ಡನ್ ಸುತ್ತ ಇರುವ ಮಿಥ್ಯೆಗಳು, ಬನ್ನಿ ಅವುಗಳತ್ತ ಕಣ್ಣಾಡಿಸೋಣ:

Myths About Green Buildings

* ಈ ರೀತಿಯ ಗಾರ್ಡನ್ ಗೆ ಸಾಕಷ್ಟು ಹಣ ಖರ್ಚಾಗುತ್ತದೆ
ಈ ರೀತಿಯ ಗಾರ್ಡನ್ ಬೆಳೆಯಲು ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಬೆಳೆಸಿದ ಗಿಡಗಳು ಮನೆಗೆ ರಾಯಲ್ ಲುಕ್ ನೀಡುತ್ತದೆಯೇ ಹೊರತು ಇದನ್ನು ಬೆಳೆಸುವುದು ಕಷ್ಟದ ಕೆಲಸವಲ್ಲ.

* ಈ ರೀತಿ ಬೆಳೆಸಿದರೆ ಗಾಳಿ ಬೆಳಕು ಸರಿಯಾಗಿ ಬರುವುದಿಲ್ಲ
ಕಿಟಕಿಗೆ ಗಿಡ ಹಬ್ಬುವಂತೆ ನೆಟ್ಟರೆ ಬೆಳಕು ಸರಿಯಾಗಿ ಬರುವುದಿಲ್ಲ ನಿಜ, ಆದ್ದರಿಂದ ಬೆಳಕು ಸರಿಯಾಗಿ ನಿಮ್ಮ ಮನೆಯೊಳಗೆ ಬೀಳುವಂತೆ ಗಿಡವನ್ನು ಬೆಳೆಸಿ ಬಳ್ಳಿ ಕಿಟಕಿಗೆ ಹಬ್ಬಲು ಬಿಡಬೇಡಿ, ಇನ್ನು ಗಾಳಿ ಬರುವುದಿಲ್ಲ ಅನ್ನುವುದು ಸುಳ್ಳು, ಹಸಿರು ನಿಮ್ಮ ಮನೆ ಸುತ್ತ ಇದ್ದರೆ ಶುದ್ಧ ಗಾಳಿ ಸೇವಿಸಬಹುದು.

ಇದನ್ನು ನೋಡಿಕೊಳ್ಳುವುದು ಕಷ್ಟ

ಕೆಲವೊಂದು ಬಳ್ಳಿ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕು, ಕೆಲವೊಂದಕ್ಕೆ ಬೇಡ, ಗಿಡಗಳ ಆರೈಕೆಗೆ ಹೆಚ್ಚು ಪುರುಸೊತ್ತು ಇಲ್ಲದಿರುವುದು ನೀರು ಕಮ್ಮಿ ಸಾಕಾಗುವ, ಹೆಚ್ಚು ಆರೈಕೆ ಬೇಕಿಲ್ಲದ ಗಿಡಗಳನ್ನು, ಬಳ್ಳಿಗಳನ್ನು ನೆಟ್ಟು ಗಾರ್ಡನ್ ಮಾಡಬಹುದು.

ಈ ರೀತಿಯ ಗಾರ್ಡನ್ ಬಗ್ಗೆ ಗಮನಿಸಬೇಕಾದ ಅಂಶ
ಮನೆಗೆ ಗಿಡವನ್ನು ಹಬ್ಬಿಸಿ ಬಿಡುವುದರಿಂದ ಮನೆಯ ಅಂದ ಹೆಚ್ಚುವುದು, ಆದರೆ ಗಿಡದಲ್ಲಿ ಹಾವು ಸೇರದಂತೆ ಎಚ್ಚರವಹಿಸಬೇಕು. ಗಿಡಕ್ಕೆ ಹಾವು ಬರದಂತೆ ತಡೆಯುವ ಕೀಟನಾಶಕ ಸಿಂಪಡಿಸಿ.

English summary

Myths About Green Buildings

Going green is essential and we also should consider remodeling our homes or our offices for a friendly environment. Millions of people around the world are stepping up, taking the initiative to look after our Mother Earth, lets join for this group.
X
Desktop Bottom Promotion