For Quick Alerts
ALLOW NOTIFICATIONS  
For Daily Alerts

ಹಾಸಿಗೆ ಖರೀದಿಸುವಾಗ ನೆನಪಿನಲ್ಲಿಡಬೇಕಾದ ವಿಚಾರಗಳಿವು

|

ನೀವು ಹೊಸ ಹಾಸಿಗೆ ಖರೀದಿಸಲು ಯೋಚಿಸುತ್ತಿದ್ದೀರಾ ? ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರಾಂಡ್‌ಗಳು ಲಭ್ಯವಿರುವುದರಿಂದ ಸರಿಯಾದ ಹಾಸಿಗೆ ಆಯ್ಕೆ ಮಾಡುವುದು ಗೊಂದಲವನ್ನುಂಟುಮಾಡುತ್ತದೆ. ಸರಿಯಾದ ಹಾಸಿಗೆಗೆ ಇರಬೇಕಾದ ಗುಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲದಿಲ್ಲದಿರಬಹುದು. ಕುಟುಂಬದ ಪ್ರತಿಯೊಬ್ಬರ ನಿದ್ರೆಯ ಮೇಲೆ ಪರಿಣಾಮ ಬೀರುವ ಹಾಸಿಗೆ, ದೇಹಕ್ಕೆ ಸರಿಯಾದ ಬೆಂಬಲವನ್ನು ನೀಡಿ, ಆರೋಗ್ಯಕರ ನಿದ್ರೆಯನ್ನು ನೀಡುವುದು.

ಹಾಸಿಗೆ ಕೊಳ್ಳುವಾಗ ನೋಡಬೇಕಾದ ಕೆಲವು ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

ಹಾಸಿಗೆಯ ಟೈಪ್:

ಹಾಸಿಗೆಯ ಟೈಪ್:

ಹಾಸಿಗೆ ಆಯ್ಕೆಮಾಡುವಲ್ಲಿ ಇದು ಒಂದು ದೊಡ್ಡ ಅಂಶವಾಗಿದೆ. ಹತ್ತಿ ಹಾಸಿಗೆಗಳಿಂದ ಹಿಡಿದು ಅತ್ಯಾಧುನಿಕ ಹಾಸಿಗೆಗಳವರೆಗೆ ವಿವಿಧ ರೀತಿಯ ಹಾಸಿಗೆಗಳಿವೆ. ಪಾಕೆಟ್ ಸ್ಪ್ರಿಂಗ್ಸ್, ಲ್ಯಾಟೆಕ್ಸ್ ಹಾಸಿಗೆಗಳು ಮತ್ತು ಮೆಮೊರಿ ಫೋಮ್ ಹಾಸಿಗೆಗಳು ಆರಾಮ ಮತ್ತು ತಂತ್ರಜ್ಞಾನದ ಮಿಶ್ರಣವಾಗಿದೆ. ಇವುಗಳಲ್ಲಿ ನಿಮಗೆ ಸರಿಹೊಂದುವಂತಹ ಹಾಸಿಗೆಗಳನ್ನು ಕೊಳ್ಳಬಹುದು. ಮೃದುವಾದ ಹಾಸಿಗೆ ಹೆಚ್ಚಿನ ಜನರು ಆಯ್ಕೆ ಮಾಡುವ ಹಾಸಿಗೆಯಾಗಿದ್ದು, ಉತ್ತಮ ಗುಣಮಟ್ಟ ಮತ್ತು ಉತ್ತಮ ನಿದ್ರೆಯನ್ನು ಖಾತ್ರಿಗೊಳಿಸುತ್ತದೆ.

ಹಾಸಿಗೆಯ ಗಾತ್ರ:

ಹಾಸಿಗೆಯ ಗಾತ್ರ:

ಹಾಸಿಗೆ ಯಾವಾಗಲೂ ನಿಮ್ಮ ಮಂಚಕ್ಕೆ ಹೊಂದಿಕೊಳ್ಳಬೇಕು ಇಲ್ಲದಿದ್ದರೆ ಸಪೋರ್ಟ್ ಸಿಗದೇ ಹಾಸಿಗೆ ಹಾನಿಗೊಳಗಾಗುತ್ತದೆ. ಅಷ್ಟೇ ಅಲ್ಲ ಆರಾಮತೆ ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವಾಗಲೂ ನಿಮ್ಮ ಮಂಚಕ್ಕೆ ಸರಿಹೊಂದುವಂತಹ ಹಾಸಿಗೆಯನ್ನು ಆಯ್ಕೆ ಮಾಡುವುದು ಉತ್ತಮ.

ಹಾಸಿಗೆಯ ದಪ್ಪ:

ಹಾಸಿಗೆಯ ದಪ್ಪ:

ಹಾಸಿಗೆಯ ದಪ್ಪವು ಅದರಿಂದ ಸಿಗುವ ಆರಾಮ ಮತ್ತು ಸಪೋರ್ಟ್ ನೀಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹೆಚ್ಚು ದಪ್ಪವೂ ಇರಬಾರದು, ಕಡಿಮೆಯೂ ಇರಬಾರದು. ಅದಕ್ಕಾಗಿ ಆರ್ಥೋಪೆಡಿಕ್ ಹಾಸಿಗೆಗಳು ಉನ್ನತ ಗುಣಮಟ್ಟದ್ದಾಗಿದ್ದು, ಒಬ್ಬರ ದೇಹ, ಆರೋಗ್ಯ ಮತ್ತು ವಿಶ್ರಾಂತಿ ಹಾಗೂ ನಿದ್ರೆಗೆ ಸಾಕಷ್ಟು ಬೆಂಬಲವನ್ನು ನೀಡುವುದರ ಜೊತೆಗೆ ಹಾಸಿಗೆಯಿಂದ ಕೆಳಗಿಳಿದು ಬರಲು ಸುಲಭವಾಗಿರುವುದು.

ಹಾಸಿಗೆಯ ವ್ಯಾರಂಟಿ:

ಹಾಸಿಗೆಯ ವ್ಯಾರಂಟಿ:

ಹೆಚ್ಚಿನ ಖಾತರಿ ಮತ್ತು ಬಾಳಿಕೆ ಹೊಂದಿರುವ ಹಾಸಿಗೆ ಆಯ್ಕೆ ಮಾಡುವುದು ಉತ್ತಮ. ಕೆಲವೊಮ್ಮೆ ಕಡಿಮೆ ಬೆಲೆಗೆ ಹಾಸಿಗೆ ಸಿಕ್ಕಿಬಿಡುತ್ತವೆ ಆದರೆ ಅದರ ಬಾಳಿಕೆ ವಿಚಾರಕ್ಕೆ ಬಂದರೆ ಚೆನ್ನಾಗಿ ಇರುವುದಿಲ್ಲ. ಎಲ್ಲರೂ ಕೊಳ್ಳುತ್ತಾರೆಂದು ನಾವೂ ಕೊಳ್ಳುವುದು ಸರಿಯಲ್ಲ. ನಿಮಗೆ ಸೂಕ್ತವೆನಿಸುವ ಹೆಚ್ಚು ಬಾಳಿಕೆ ಬರುವ ಹಾಸಿಗೆಗಳನ್ನು ಜಾಣತನದಿಂದ ಖರೀದಿಸುವುದು ಉತ್ತಮ. ನೀವು ಖರೀದಿಸುವ ಮೊದಲು ಹಾಸಿಗೆಯನ್ನು ಪರೀಕ್ಷಿಸಲು ಸೂಚಿಸಲಾಗುತ್ತದೆ ಏಕೆಂದರೆ ಅದು ನಿಮಗೆ ಗುಣಮಟ್ಟದ ಬಗ್ಗೆ ಒಂದು ಕಲ್ಪನೆಯನ್ನು ನೀಡುತ್ತದೆ.

Read more about: home ಮನೆ
English summary

Tips to Keep When Buying a Mattress in kannada

Here we talking about Tips to Keep When Buying a Mattress in kannada, read on
Story first published: Saturday, July 3, 2021, 17:52 [IST]
X
Desktop Bottom Promotion