For Quick Alerts
ALLOW NOTIFICATIONS  
For Daily Alerts

ಯುಗಾದಿ ಹಬ್ಬಕ್ಕೆ ಮನೆ ಬಾಗಿಲನ್ನು ಈ ರೀತಿ ಅಲಂಕಾರ ಮಾಡಿದರೆ ಚಂದ

|

ಭಾರತದಲ್ಲಿ ಯುಗಾದಿ ಹಬ್ಬದ ಆಚರಣೆ ತುಂಬಾನೇ ಸ್ಪೆಷಲ್‌. ಬಹಳ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಮುಖ್ಯವಾದ ವಿಚಾರ ಅಂದ್ರೆ ಭಾರತೀಯ ಪಂಚಾಗದ ಪ್ರಕಾರ ಹೊಸ ವರುಷ ಆರಂಭವಾಗುವುದೇ ಯುಗಾದಿಯ ದಿನದಂದು. ಈ ದಿನದಿಂದ ಭಾರತೀಯರಿಗೆ ಹಬ್ಬಗಳ ಸುಗ್ಗಿಯೇ ಶುರುವಾಗುತ್ತದೆ.

Simple Tips To Decorate Your Door On This Ugadi

ಹೊಸ ವರುಷ ಅಂದ್ರೆ ಅಲ್ಲಿ ಸಂಭ್ರಮ, ಸಡಗರ ಇದ್ದೇ ಇರುತ್ತದೆ. ಈ ಸಂಭ್ರಮ ಶುರುವಾಗೋದೆ ಅಲಂಕಾರದಿಂದ ಹೌದು, ಆ ಅಲಂಕಾರ ಶುರುವಾಗೋದು ಮನೆ ಬಾಗಿಲಿನಿಂದ. ಇವತ್ತು ನಾವು ನಿಮಗೆ ಈ ಯುಗಾದಿಗೆ ಮನೆ ಬಾಗಿಲನ್ನು ಯಾವ ರೀತಿ ಸ್ಪೆಷಲ್‌ ಆಗಿ ಅಲಂಕಾರ ಮಾಡಬಹುದು ಅನ್ನೋದನ್ನ ಹೇಳ್ತೀವಿ.

ಮನೆಯ ಮುಖ್ಯದ್ವಾರದಲ್ಲಿ ಸಾಂಪ್ರದಾಯಿಕ ರಂಗವಲ್ಲಿ ಬಿಡಿಸುವುದರಿಂದ ಹಿಡಿದು ಮಾವಿನ ತೋರಣ ಸೇರಿದಂತೆ ಹತ್ತು ಹಲವು ಅಲಂಕಾರವನ್ನು ಮನೆಯ ಬಾಗಿಲಿಗೆ ಈ ಹಬ್ಬದಲ್ಲಿ ಮಾಡಲಾಗುತ್ತದೆ ಮತ್ತು ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲಾಗುತ್ತದೆ.ಈ ವರ್ಷದ ಯುಗಾದಿ ಸಂಭ್ರಮ ಮಾರ್ಚ್ 22, 2023 ಕ್ಕೆ ನಡೆಯಲಿದೆ.

ಈ ಯುಗಾದಿ ಸಂಭ್ರಮಕ್ಕಾಗಿ ಮನೆಯ ಬಾಗಿಲನ್ನು ಅಲಂಕರಿಸುವುದಕ್ಕಾಗಿ ನೀವೇ ಸುಲಭವಾಗಿ ಮಾಡಬಹುದಾದ ಅಲಂಕಾರಿಕ ಐಡಿಯಾಗಳನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ನಿಮ್ಮ ಕೆಲಸ ನಿಮಗೆ ಆಶ್ಚರ್ಯ ಹುಟ್ಟಿಸುವಂತಹ ಕೆಲವು ಟ್ರಿಕ್ಸ್ ಗಳನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಖಂಡಿತ ಇವುಗಳನ್ನು ಈ ಯುಗಾದಿ ಹಬ್ಬದಲ್ಲಿ ನೀವು ಟ್ರೈ ಮಾಡಬಹುದು.

ರಂಗೋಲಿ ಡಿಸೈನ್ ಮತ್ತು ರೆಡಿಮೇಟ್ ಫ್ಲೋರ್ ಆರ್ಟ್:

ರಂಗೋಲಿ ಡಿಸೈನ್ ಮತ್ತು ರೆಡಿಮೇಟ್ ಫ್ಲೋರ್ ಆರ್ಟ್:

ಫ್ಲೋರ್ ಆರ್ಟ್ ಅಂದರೆ ಮನೆಯ ನೆಲದಲ್ಲಿ ಹೊಸ ರೀತಿಯ ಚಿತ್ರಕಲೆ ಮಾಡುವುದಕ್ಕೆ ಯುಗಾದಿ ಹಬ್ಬ ಸರಿಯಾದ ಸಮಯವಾಗಿದೆ.ರಂಗೋಲಿ ಬಿಡಿಸುವುದರಲ್ಲಿ ನಿಮಗೆ ವಿಶೇಷ ಚಾಣಾಕ್ಷತೆ ಇಲ್ಲದೆ ಇದ್ದಲ್ಲಿ ಅಥವಾ ಈ ಹಿಂದೆ ಯಾವತ್ತೂ ರಂಗೋಲಿ ಬಿಡಿಸುವುದನ್ನು ನೀವು ಟ್ರೈ ಮಾಡದೇ ಇದ್ದವರಾಗಿದ್ದಲ್ಲಿ ಫ್ಲೋರ್ ಆರ್ಟ್ ಸ್ಟೆನ್ಸಿಲ್ ಗಳನ್ನು ಖರೀದಿಸಬಹುದು.

ಮಾರುಕಟ್ಟೆಯಲ್ಲಿ ಇದೀಗ ಹಲವು ರೀತಿಯ ಫ್ಲೋರ್ ಆರ್ಟ್ ಸ್ಟೆನ್ಸಿಲ್ ಗಳು ಲಭ್ಯವಿದೆ. ಬೇರೆಬೇರೆ ಬಣ್ಣಗಳಿಂದ ಈ ಸ್ಟೆನ್ಸಿಲ್ ಅಥವಾ ರಂಗೋಲಿ ಆಕೃತಿಯನ್ನು ತುಂಬಿಸಿದರೆ ಅತ್ಯುತ್ತಮವಾದ ರಂಗವಲ್ಲಿ ನಿಮ್ಮ ಮನೆ ಬಾಗಿಲಿನಲ್ಲಿ ಸಿದ್ಧವಾಗುತ್ತದೆ.ಗಾಢ ಬಣ್ಣಗಳಿಗಿಂತ ಮರದ ಪುಡಿಯಂತಹ ವಸ್ತುಗಳು ಅಥವಾ ನೈಸರ್ಗಿಕ ವಸ್ತುಗಳನ್ನು ಬಳಸಿ ರಂಗೋಲಿಯನ್ನು ಅಲಂಕರಿಸುವುದು ಒಳ್ಳೆಯದು. ಕೆಮಿಕಲ್ ನಿಂದ ದೂರವಿದ್ದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿಮ್ಮ ಗಮನದಲ್ಲಿರಲಿ.

ಕ್ರಿಯಾತ್ಮಕವಾಗಿರಲಿ ಬಾಗಿಲಿನ ಹ್ಯಾಂಗಿಂಗ್:

ಕ್ರಿಯಾತ್ಮಕವಾಗಿರಲಿ ಬಾಗಿಲಿನ ಹ್ಯಾಂಗಿಂಗ್:

ಕೇವಲ ಫ್ಲೋರ್ ಆರ್ಟ್ ನಿಂದ ಮನೆಯ ಮುಂಭಾಗವನ್ನು ಅಲಂಕರಿಸುವುದಕ್ಕೆ ಸಾಧ್ಯವಿಲ್ಲ. ಈ ಯುಗಾದಿ ಸಂಭ್ರಮಾಚರಣೆಗಾಗಿ ಸ್ವಲ್ಪ ಕ್ರಿಯಾತ್ಮಕವಾಗಿ ಆಲೋಚನೆ ಮಾಡಿ. ಆ ಮೂಲಕ ನಿಮ್ಮ ಮನೆಯ ಮುಂಭಾಗವನ್ನು ಇನ್ನಷ್ಟು ಹೊಳೆಯುವಂತೆ ಮಾಡಿ. ಅದಕ್ಕಾಗಿ ನೀವು ಡೋರ್ ಹ್ಯಾಂಗಿಂಗ್ ಗಳನ್ನು ಬಳಸಬಹುದು.ಲೋಹ,ಬಟ್ಟೆಯಿಂದ ತ

ಯಾರಿಸಿದ ಅಥವಾ ಮರದಿಂದ ತಯಾರಿಸಿದ ವಿಶೇಷ ರೀತಿಯ ಸಾಂಪ್ರದಾಯಿಕ ಹ್ಯಾಂಗಿಂಗ್ ಗಳು ಮಾರುಕಟ್ಟೆಗಳಲ್ಲಿ ಸಿಗುತ್ತದೆ. ಮನೆಯ ಮುಂಭಾಗದಲ್ಲಿ ಹ್ಯಾಂಗಿಂಗ್ ಗಳನ್ನು ನೇತು ಹಾಕುವಾಗ ಅದು ಓಡಾಟಕ್ಕೆ ತೊಂದರೆ ನೀಡದಂತೆ ನೋಡಿಕೊಳ್ಳಿ. ಬರುವ ಅತಿಥಿಗಳಿಗೆ, ಸಂಬಂಧಿಕರಿಗೆ ಮನೆಯೊಳಗೆ ಪ್ರವೇಶಿಸುವಾಗ ಕಿರಿಕಿರಿಯಾಗದಂತೆ ಹ್ಯಾಂಗಿಂಗ್ ಗಳನ್ನು ಬಳಸಿ ಅಲಂಕರಿಸಿ.

ಮಾವಿನ ಎಲೆ ಮತ್ತು ಬೇವಿನ ಎಲೆಗಳು:

ಮಾವಿನ ಎಲೆ ಮತ್ತು ಬೇವಿನ ಎಲೆಗಳು:

ಮಾವು ಚಿಗುರುವ ಸಮಯವೇ ಯುಗಾದಿ. ವರ್ಷದ ಮೊದಲ ಹಿಂದೂ ಹಬ್ಬಕ್ಕೆ ಪ್ರಕೃತಿ ಕೂಡ ಸಜ್ಜಾಗಿರುವ ಸಮಯವಿದು. ಅದೇ ಕಾರಣಕ್ಕಾಗಿ ಹಿಂದಿನಿಂದಲೂ ಮಾವಿನೆಲೆ ತೋರಣ, ಬೇವಿನಎಲೆಯ ಅಲಂಕಾರ ಮನೆಯ ಮುಂಭಾಗಿಲಿಗೆ ಮಾಡುವುದು ರೂಢಿಯಲ್ಲಿದೆ. ಮಾವಿನೆಲೆಯ ತೋರಣವಿಲ್ಲದ ಯುಗಾದಿ ಹಬ್ಬ ಅದೆಂತ ಹಬ್ಬವಾಗಿರಲು ಸಾಧ್ಯ ನೀವೇ ಹೇಳಿ? ಮಾವು ಮತ್ತು ಬೇವಿನೆಲೆಯ ತೋರಣ ಧನಾತ್ಮಕ ಶಕ್ತಿಯನ್ನು ಮನೆಯಲ್ಲಿರುವಂತೆ ಮಾಡುತ್ತದೆ.

ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸುವುದಕ್ಕೆ ಇದು ಬಹಳ ಪ್ರಯೋಜನಕಾರಿಯಾಗಿರುತ್ತದೆ. ಮಾವು ಮತ್ತು ಬೇವಿನ ಎಲೆಗಳನ್ನು ರಂಗವಲ್ಲಿಯಲ್ಲಿಯೂ ಬಳಕೆ ಮಾಡಬಹುದು ಅಥವಾ ತೋರಣ ಮಾಡಿ ಮನೆಯ ಬಾಗಿಲಿನಲ್ಲಿ ನೇತು ಹಾಕಬಹುದು.ಇನ್ನು ತೋರಣವನ್ನು ವಿಭಿನ್ನ ರೀತಿಯಲ್ಲಿ ಮಾಡುವುದಕ್ಕೂ ಸಾಧ್ಯವಿದ್ದು ಅವುಗಳ ಡಿಸೈನ್ ನೋಡುವುದಕ್ಕಾಗಿ ನೀವು ಆನ್ ಲೈನ್ ವೀಡಿಯೋಗಳ ಮೊರೆ ಹೋಗಬಹುದು.

ಸಣ್ಣ ಬಾಳೆ ಮರ ಅಥವಾ ಕೃತಕವಾಗಿರುವ ಬಾಳೆ ಮರದಿಂದ ಅಲಂಕಾರ:

ಸಣ್ಣ ಬಾಳೆ ಮರ ಅಥವಾ ಕೃತಕವಾಗಿರುವ ಬಾಳೆ ಮರದಿಂದ ಅಲಂಕಾರ:

ಬಾಳೆಮರ ಕೇವಲ ಧಾರ್ಮಿಕ ಆಚರಣೆಯ ಸಂಕೇತ ಮಾತ್ರವಲ್ಲ ಬದಲಾಗಿ ಯುಗಾದಿಯ ಸಾಂಪ್ರದಾಯಿಕ ಆಚರಣೆಯ ಒಂದು ಭಾಗವೇ ಆಗಿದೆ.ನೀವು ಮನೆಯ ಮುಂಭಾಗದಲ್ಲಿ ಕೃತಕವಾಗಿ ಲಭ್ಯವಾಗುವ ಬಾಳೆಮರವನ್ನು ಇಟ್ಟು ಅಲಂಕರಿಸಬಹುದು ಅಥವಾ ಸಾಂಪ್ರದಾಯಿಕ ನೈಜ ಬಾಳೆಮರವನ್ನು ಇಟ್ಟು ಕೂಡ ಸುಂದರವಾಗಿಸಬಹುದು.

ಆಧುನಿಕ ಅಲಂಕಾರ ಮತ್ತು ಸಾಂಪ್ರದಾಯಿಕ ಶೈಲಿಯ ಅಲಂಕಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕಾಗಿ ನೀವು ಕೃತಕ ಬಾಳೆಮರದಿಂದ ಅಲಂಕರಿಸಿದರೆ ಹೆಚ್ಚು ಅರ್ಥಪೂರ್ಣವೆನಿಸಬಹುದು.

ಬಾಗಿಲಿನಲ್ಲಿ ಘಂಟೆಗಳು ಮತ್ತು ದೇವಸ್ಥಾನದಂತಹ ಘಂಟೆಗಳ ಅಲಂಕಾರ:

ಬಾಗಿಲಿನಲ್ಲಿ ಘಂಟೆಗಳು ಮತ್ತು ದೇವಸ್ಥಾನದಂತಹ ಘಂಟೆಗಳ ಅಲಂಕಾರ:

ಯುಗಾದಿ ಅಲಂಕಾರಕ್ಕಾಗಿ ಇರುವ ಮತ್ತೊಂದು ಬೆಸ್ಟ್ ಉಪಾಯವೆಂದರೆ ಬಾಗಿಲಿನಲ್ಲಿ ತಾಮ್ರದ ಸಣ್ಣಸಣ್ಣ ಘಂಟೆಗಳನ್ನು ನೇತು ಹಾಕಿ ಅಲಂಕರಿಸುವುದು.

ತಾಮ್ರದ ಬಾಗಿಲಿನ ಘಂಟೆಗಳನ್ನು ಯಶಸ್ಸಿನ ಸಂಕೇತ ಎಂದು ಭಾವಿಸಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ ಮುಂಭಾಗಿಲಿನ ಅಲಂಕಾರಕ್ಕಾಗಿ ಬಣ್ಣದ ಲೈಟ್ ಗಳನ್ನು ಬಳಸಲಾಗುತ್ತದೆ. ಆದರೆ ಈ ರೀತಿಯ ಘಂಟೆಗಳ ಅಲಂಕಾರದಿಂದ ನೀವು ನಿಮ್ಮ ಅಲಂಕಾರದಲ್ಲಿ ವಿಭಿನ್ನತೆಯನ್ನು ಸೃಷ್ಟಿಸಬಹುದು ಮತ್ತು ನಿಮ್ಮ ಸ್ನೇಹಿತರ ಮತ್ತು ಬಂಧುಗಳ ಬಳಿ ಹೊಗಳಿಕೆಯನ್ನು ಪಡೆದುಕೊಳ್ಳಬಹುದು.

English summary

Simple Tips To Decorate Your Door On This Ugadi

Here are simple tips to decorative your door on this ugadi, Read on.
X
Desktop Bottom Promotion