Just In
- 49 min ago
Mental Health: ಅತಿಯಾಗಿ ಯೋಚನೆ ಮಾಡುವುದರಿಂದ ಹೀಗೂ ಆಗಬಹುದು ಗೊತ್ತಾ..?
- 2 hrs ago
ಈ 4 ರಾಶಿಯವರನ್ನು ಜನ ಸುಲಭವಾಗಿ ಯಾಮಾರಿಸುತ್ತಾರೆ...ನೀವು ಈ ರಾಶಿಯವರೇ? ಹುಷಾರು ಕಣ್ರಿ!
- 4 hrs ago
ಓವರ್ಆ್ಯಕ್ಟಿವ್ ಬ್ಲಾಡರ್ ಸಮಸ್ಯೆಗೆ ಯಾವ ಆಹಾರ ಹಾಗೂ ಪಾನೀಯ ಒಳ್ಳೆಯದು?
- 8 hrs ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಸೇರಿದಂತೆ ಈ ರಾಶಿಯ ಉದ್ಯೋಗಿಗಳಿಗೆ ಉತ್ತಮ ದಿನ
Don't Miss
- Movies
ಬಂಗಾರಮ್ಮನ ವಿರುದ್ಧ ನಿಂತ ಸ್ನೇಹಾ: ದಂಗಾದ ಪುಟ್ಟಕ್ಕ
- Automobiles
ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ
- Education
KCET 2022 Application Correction : ಅರ್ಜಿ ತಿದ್ದುಪಡಿಗೆ ಇಂದು ಕೊನೆಯ ದಿನ
- News
ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ sorry.. sorry..ಬರಹ: ಯುವಕರ ಹುಚ್ಚಾಟ!
- Sports
ಆರ್ಸಿಬಿಗೆ ಮತ್ತೆ ಬರ್ತಿದ್ದೇನೆ ಎಂದ ಎಬಿಡಿ: ಯಾವ ಪಾತ್ರ ಎಂಬುದರ ಕುರಿತು ಸುಳಿವು ಕೊಟ್ಟ ಮಿ.360!
- Technology
ನೀವು ಬಳಸಬಹುದಾದ ಅತ್ಯುತ್ತಮ ಪಾಸ್ವರ್ಡ್ ಮ್ಯಾನೇಜರ್ಗಳ ವಿವರ ಇಲ್ಲಿದೆ!
- Finance
*99# ಮೂಲಕ ಆಫ್ಲೈನ್ ಯುಪಿಐ ಪಾವತಿ ಸೆಟ್ಅಪ್ ಮಾಡುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕರ ಸಂಕ್ರಾತಿ: ಇಲ್ಲಿದೆ ನೋಡಿ ಮನ ಸೆಳೆಯುವ ರಂಗೋಲಿ ವಿನ್ಯಾಸ
ಸಂಕ್ರಾಂತಿ ಸುಗ್ಗಿಯ ಹಬ್ಬ ಈ ಆಚರಣೆ ಸಮೃದ್ಧಿಯ ಸಂಕೇತವಾಗಿದೆ. ಕರ್ನಾಟಕದಲ್ಲಿ ಎಳ್ಳು-ಬೆಲ್ಲ ಸಂಕ್ರಾಂತಿ ಹಬ್ಬದಲ್ಲಿ ವಿಶೇಷವಾಗಿ ತಯಾರಿಸಲ್ಪಡುವ ತಿನಿಸಲಾಗಿದೆ. ಸಂಕ್ರಾಂತಿಯನ್ನು ಕರ್ನಾಟಕಲ್ಲಿ ಮಾತ್ರವಲ್ಲ ದೇಶದ ವಿವಿಧ ಕಡೆ ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.
ಸಂಕ್ರಾಂತಿಯಂದು ಮನೆಗೆ ತೋರಣ ಕಟ್ಟಿ ಅಲಂಕರಿಸಲಾಗುವುದು, ಮನೆಯ ಮುಂದೆ ರಂಗೋಲಿ ಬಿಡಲಾಗುವುದು. ರಂಗೋಲಿ ಶುಭದ ಸಂಕೇತ, ರಂಗೋಲಿಯನ್ನು ಆಕರ್ಷವಾಗಿ ಬಿಟ್ಟರೆ ಲಕ್ಷ್ಮಿಯು ಆಕರ್ಷಿತಳಾಗಿ ಮನೆಗೆ ಬರುತ್ತಾಳೆ ಎಂದು ಹೇಳಲಾಗುವುದು. ಆದ್ದರಿಂದ ಹಬ್ಬ ಹರಿದಿನ ಪೂಜೆಗಳಲ್ಲಿ ರಂಗೋಲಿಗೆ ಮಹತ್ವದ ಸ್ಥಾನದ ಇದೆ. ಮಕರ ಸಂಕ್ರಾಂತಿಯಂದು ಹಾಕಲು ಆಕರ್ಷಕ ವಿನ್ಯಾಸದ ರಂಗೋಲಿ ವಿನ್ಯಾಸಗಳು ನೋಡಿ ಇಲ್ಲಿವೆ:

ಸುಗ್ಗಿಯ ಹಬ್ಬಕ್ಕೆ ಧಾನ್ಯದ ರಂಗೋಲಿ
ಈ ರಂಗೋಲಿ ನೋಡಿ ಧಾನ್ಯಗಳನ್ನು ಬಳಸಿ ಮಾಡಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ತುಂಬಾ ಸೂಕ್ತವಾದ ರಂಗೋಲಿ ಇದಾಗಿದೆ. ನೀವು ಧಾನ್ಯಗಳನ್ನು ಬಳಸಿ ರಂಗೋಲಿ ಬಿಡಿಸಿ ಸುಗ್ಗಿ ಹಬ್ಬ ಕೊಂಡಾಡಬಹುದು.

ಕಡ್ಲೆಪುರಿ-ಎಳ್ಳುಂಡೆ ರಂಗೋಲಿ
ಸಂಕ್ರಾಂತಿಗೆ ಎಳ್ಳುಂಡೆ ಮಾಡಲಾಗುವುದು. ನೀವು ರಂಗೋಲಿಯಲ್ಲೂ ಅದನ್ನು ಬಳಸಬಹುದು. ಚಿಕ್ಕ ಬೌಲ್ಗಳಲ್ಲಿ ಪುರಿ ಹಾಕಿ ಅದರ ಮೇಲೆ ಎಳ್ಳುಂಡೆ ಇಟ್ಟು ನೀವು ಬಿಡಿಸಿದ ರಂಗೋಲಿಯನ್ನು ಅಲಂಕರಿಸಬಹುದು.

ಮಕರ ಸಂಕ್ರಾಂತಿಗೆ ಸರಳ-ಸುಂದರ ರಂಗೋಲಿ
ಮಕರ ಸಂಕ್ರಾಂತಿಗೆ ನೀವು ಹೆಚ್ಚಿನ ವಿನ್ಯಾಸ ಬೇಡ, ಸರಳವಾದ-ಸುಂದರ ಅರ್ಥಪೂರ್ಣವಾದ ರಂಗೋಲಿ ಬಿಡಿಸಲು ಬಯಸಿದರೆ ಈ ರಂಗೋಲಿ ನೋಡಿ ಸರಳವಾಗಿದೆ, ಆಕರ್ಷಕವಾಗಿದೆ.

ಮಕರ ಸಂಕ್ರಾಂತಿ-ಬಾವುಟ
ಸಂಕ್ರಾಂತಿಯಂದು ಕೆಲವು ಕಡೆ ಬಾವುಟಗಳನ್ನು ಹಾರಿಸಿ ಸಂಭ್ರಮಿಸಲಾಗುವುದು. ಹಬ್ಬದ ಸಂಭ್ರಮವನ್ನು ಈ ರೀತಿ ಬಾವುಟದಲ್ಲಿ ಬಿಡಿಸಬಹುದು.

ಸೂರ್ಯ ಸಂಕ್ರಮಣ
ಮಕರ ಸಂಕ್ರಮಣದಂದು ಸೂರ್ಯ ಸಂಕ್ರಮಣ, ಸೂರ್ಯ ಸಂಕ್ರಾಂತಿಯನ್ನು ರಂಗೋಲಿ ಮೂಲಕ ಹೀಗೆ ಸ್ವಾಗತಿಸಬಹುದು.

ಗ್ರ್ಯಾಂಡ್ ರಂಗೋಲಿ
ಹಬ್ಬಕ್ಕೆ ದೊಡ್ಡದಾದ ಆಕರ್ಷಕವಾದ ರಂಗೋಲಿ ಬಿಡಿಸಲು ಬಯಸಿದರೆ ಈ ರಂಗೋಲಿ ನೋಡಿ ಆಕರ್ಷಕವಾಗಿದೆ ಅಲ್ವಾ?

ಸಂಕ್ರಾಂತಿ ರಂಗೋಲಿ
ಸಂಕ್ರಾಂತಿಗೆ ಈ ರಿತಿ ನವಿಲು ವಿನ್ಯಾಸದಲ್ಲಿ ರಂಗೋಲಿ ಬಿಡಿಸಿದರೂ ತುಂಬಾನೇ ಆಕರ್ಷಕವಾಗಿ ಕಾಣುವುದು.
ಈ ಸಂಕ್ರಾಂತಿ ನಿಮ್ಮ ಬಾಳಲ್ಲಿ ಸಮೃದ್ಧಿ ತರಲಿ, ಸಂಕ್ರಾಂತಿ ಶುಭಾಶಯಗಳು