For Quick Alerts
ALLOW NOTIFICATIONS  
For Daily Alerts

ಪೇಪರ್ ಕ್ರಿಸ್ಮಸ್ ಟ್ರೀ ಮಾಡೋದು ಹೇಗೆ ಗೊತ್ತಾ?

|

ಕ್ರಿಸ್ಮಸ್ ಅಂದ್ರೆ ತಕ್ಷಣ ನೆನಪಾಗೋದು, ಕ್ರಿಸ್ಮಸ್ ಟ್ರೀ. ಮನೆ ಮುಂದೆ ಕಲರ್ ಕಲರ್ ಲೈಟ್, ಬಲೂನ್, ರಿಬ್ಬನ್‌ಗಳಿಂದ ಕಂಗೊಳಿಸೋ ಕ್ರಿಸ್ಮಸ್ ಟ್ರೀಯನ್ನು ನೋಡೋದೇ ಒಂದು ಹಬ್ಬ. ಅದಕ್ಕಾಗಿ ದಿನಗಳಗಟ್ಟಲೇ ತಯಾರಿ ಮಾಡಿಕೊಳ್ತಾ ಇರ್ತಾರೆ. ಕೆಲವೊಬ್ಬರಂತೂ ಕಾಂಪಿಟೇಷನ್ ರೀತಿಯಲ್ಲಿ ಸಿಂಗಾರ ಮಾಡಿ, ಸಂಭ್ರಮಿಸುತ್ತಿರುತ್ತಾರೆ. ಇಂತಹ ಕ್ರಿಸ್ಮಸ್ ಟ್ರೀಯನ್ನು ಮನೆಯಲ್ಲಿಯೇ ತಯಾರಿಸಬಹುದು. ಅದು ನಿವೇ ಸುಲಭವಾಗಿ ಹಾಗೂ ಸರಳವಾಗಿ ಅಂದ್ರೆ ಆಶ್ಚರ್ಯವಾಗುತ್ತಾ?

ಹೌದು, ಮನೆ ಮುಂದೆ ಇಡೋ ಕ್ರಿಸ್ಮಸ್ ಟ್ರೀಯನ್ನು ನಿಮ್ಮ ಕೈಯಾರೇ ಮಾಡಬಹುದು. ಈ ಪುಟಾಣಿ ಟ್ರೀಯನ್ನು ನಿಮ್ಮ ದೊಡ್ಡ ಕ್ರಿಸ್ಮಸ್ ಮರದ ಮಧ್ಯೆ ಇಟ್ರೆ ಆ ಟ್ರೀಗೆ ಮತ್ತಚ್ಟು ಮೆರಗು ಬರೋದ್ರಲ್ಲಿ ಸಂಶಯವಿಲ್ಲ. ಅಥವಾ ಕೇವಲ ಇದೇ ಚಿಕ್ಕ-ಚಿಕ್ಕ ಮರಗಳನ್ನೇ ಉಪಯೋಗ ಮಾಡ್ಕೊಂಡು ನಿಮ್ಮ ಕ್ರಿಸ್ಮಸ್ ಆಚರಣೆ ಮಾಡ್ತೀರಾ ಅಂದ್ರೂ ಅದೂ ಕೂಡ ಸೂಪರೇ. ಇದನ್ನು ನೀವು ಮಾಡಬಹುದು, ನಿಮ್ಮ ಮಕ್ಕಳಿಗೂ ಹೇಳಕೊಡಬಹುದು. ಹಾಗಾದ್ರೆ ಬನ್ನಿ ಮನೆಯಲ್ಲಿಯೇ ಸುಲಭವಾಗಿ ಕರಕುಶಲವಾಗಿ ಕ್ರಿಸ್ಮಸ್ ಟ್ರೀಯನ್ನು ಕೇವಲ ಒಂದು ಹಸಿರು ಕಾಗದದಲ್ಲಿ ಹೇಗೆ ತಯಾರು ಮಾಡೋದು ಅಂತ ನೋಡಿಕೊಂಡು ಬರೋಣ.

ಕ್ರಿಸ್ಮಸ್ ಟ್ರೀ ಮಾಡಲು ಅಗತ್ಯವಿರುವ ವಸ್ತುಗಳು:

ಕ್ರಿಸ್ಮಸ್ ಟ್ರೀ ಮಾಡಲು ಅಗತ್ಯವಿರುವ ವಸ್ತುಗಳು:

ಹಸಿರು ಕಾಗದ (ಅಥವಾ ನೀವು ಇಷ್ಟಪಡುವ ಯಾವುದೇ ಬಣ್ಣ)

ಕತ್ತರಿ

ಟೇಪ್

ಮಾರ್ಕರ್

ನಿಮ್ಮ ಮರಕ್ಕೆ ಅಲಂಕಾರಕ ವಸ್ತುಗಳು; ಬಣ್ಣದ ಕಾಗದ, ಸ್ಟಿಕ್ಕರ್‌ಗಳು, ಮಿನುಗು, ರಿಬ್ಬನ್, ಕಾನ್ಫೆಟ್ಟಿ, ಇತ್ಯಾದಿ

ಅಲಂಕಾರಗಳನ್ನು ಅಂಟಿಸಲು ಕ್ರಾಫ್ಟ್ ಅಂಟು ಅಥವಾ ಅಂಟು ಚುಕ್ಕೆಗಳು

ಟಾಪರ್ ಅನ್ನು ಲಗತ್ತಿಸಲು ಬಿಸಿ ಅಂಟು ಗನ್ ಮತ್ತು ಅಂಟು ಕಡ್ಡಿ (ಐಚ್ಛಿಕ)

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಸ್ಟೆಪ್ 1

ಕಾಗದವನ್ನು ಒಂದೇ ರೀತಿಯ ಎರಡು ಮರದ ಆಕಾರದಂತೆ ಕತ್ತರಿಸಿ. ಕಾಗದದ ಎರಡು ಹಾಳೆಗಳನ್ನು ಜೋಡಿಸಿ ಮತ್ತು ಅವುಗಳನ್ನು ಅರ್ಧದಷ್ಟು ಮಡಚಿ. ಅವುಗಳ ಮೇಲೆ ಮಾರ್ಕರ್‌ನಿಂದ ಕ್ರಿಸ್ಮಸ್ ಮರದ ಎಲೆಗಳನ್ನು ಬಿಡಿಸಿ. ನಂತರ ಅದನ್ನು ಆಕಾರದಂತೆ ಕತ್ತರಿಸಿ. ಈಗ ನೀವು ಎರಡು ಒಂದೇ ತರಹದ ಮರದ ಆಕಾರಗಳನ್ನು ಪಡೆಯುತ್ತೀರಿ.

ಸ್ಟೆಪ್ 2

ಸ್ಟೆಪ್ 2

ಅವುಗಳನ್ನು ಒಟ್ಟಿಗೆ ಸೇರಿಸಲು ಮರದ ಆಕಾರದ ಮಧ್ಯೆ ಸೀಳುಗಳನ್ನು ಮಾಡಿ. ಈ ಮರಗಳ ಮಧ್ಯವನ್ನು ಗುರುತಿಸಿ. ಈಗ, ಒಂದು ಮರದಲ್ಲಿ ಒಂದು ಸೀಳನ್ನು ಮೇಲಿನಿಂದ ಮಧ್ಯದ ಗುರುತುವರೆಗೆ ಕತ್ತರಿಸಿ, ಮತ್ತು ಇನ್ನೊಂದು ಮರವನ್ನು ಕೆಳಗಿನಿಂದ ಮಧ್ಯದವರೆಗೆ ಕತ್ತರಿಸಿ.

ಸ್ಟೆಪ್ 3

ಸ್ಟೆಪ್ 3

ಈಗ ಎರಡು ಆಕಾರಗಳನ್ನು ಸೇರಿಸಿಕೊಂಡು ಮರವನ್ನು ಮಾಡಿ. ಈ ಮರಗಳು ದೃಢವಾಗಿ ಮತ್ತು ಒಟ್ಟಿಗೆ ಹಿಡಿದಿಡಲು ಮರದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಬಿಳಿ ಗಮ್ ಟೇಪಿನ ಕೆಲವು ತುಣುಕುಗಳನ್ನು ಅಂಟಿಸಿ. ಈಗ, ಮರವನ್ನು ತೆರೆದಂತೆ ಮಡಚಿ. ಇದರಿಂದ ಮರವು ನಿಲ್ಲುತ್ತದೆ.

ಸ್ಟೆಪ್ 4

ಇದೀಗ ನಿಮ್ಮ ಕ್ರಿಸ್ಮಸ್ ಟ್ರೀಯನ್ನು ಅಲಂಕರಿಸಿ ಆನಂದಿಸಿ! ನಿಮ್ಮ ಕ್ರಿಸ್ಮಸ್ ಮರವನ್ನು ಸ್ಪಾರ್ಕ್ಲರ್ಗಳು, ರಿಬ್ಬನ್ಗಳು, ಥ್ರೆಡ್ ಅಥವಾ ಯಾವುದೇ ಅಲಂಕಾರಿಕ ವಸ್ತುಗಳನ್ನು ಬಳಸಿ!

English summary

How to Make Christmas Tree with Paper at Home in Kannada

Here we told about How to Make Christmas Tree with Paper at Home in Kannada, Read on,
X
Desktop Bottom Promotion