For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು

By Deepu
|

ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹಾರವಾದರೂ ಹೇಗೆ ಕಂಡುಹಿಡಿಯಲು ಸಾಧ್ಯ. ಹೀಗೆ ನಿಮ್ಮ ಜೀವನದಲ್ಲೂ ಹಲವು ಬಾರಿ ಯಾವುದೇ ಸರಿಯಾದ ಕಾರಣವಿಲ್ಲದೆ ಸಮಸ್ಯೆಗಳು ಎದುರಾಗಿರಬಹುದು. ಯಾವುದೇ ವೈದ್ಯರಲ್ಲಿ ಹೋದರೂ ಅನಾರೋಗ್ಯವೇ ಗುಣವಾಗುವುದಿಲ್ಲ, ಯಾವುದೇ ವ್ಯವಹಾರದಲ್ಲೂ ಲಾಭವಾಗುವುದಿಲ್ಲ ಹೀಗೆ ಅನೇಕ ವೇಳೆ ಏನೇ ಮಾಡಿದರೂ ನಷ್ಟವೇ ಆಗುತ್ತಿರಬಹುದು. ನಿಮ್ಮ ಪ್ರಯತ್ನದ ಹೊರತಾಗಿಯೂ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಕೈ ಹಿಡಿಯುವ ಇನ್ನೂ ಅನೇಕ ವಿಷಯಗಳಿವೆ.

ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ನಡುಮನೆಯ ಬಾಗಿಲನ್ನು ಪೂರ್ವ ಅಥವಾ ಉತ್ತರ ಭಾಗದಲ್ಲಿ ಇರಿಸುವುದರಿಂದ ಹಣ, ಆರೋಗ್ಯ ಮತ್ತು ಸಕಲ ಸಂಪತ್ತುಗಳು ದೊರೆಯುತ್ತದೆ ಎಂದು ಹೇಳಲಾಗುತ್ತದೆ. ದಕ್ಷಿಣ, ಈಶಾನ್ಯ ಅಥವಾ ಆಗ್ನೇಯ ಪ್ರವೇಶವು ಯಶಸ್ಸನ್ನು ಸೂಚಿಸುತ್ತದೆ ಆದರೆ ಇದನ್ನು ಸಾಧಿಸಲು ಸತತ ಪ್ರಯತ್ನವನ್ನು ಪಡಬೇಕಾಗುತ್ತದೆ. ಪಶ್ಚಿಮದ ಪ್ರವೇಶವು ವಿದ್ವಾಂಸರು ಮತ್ತು ಸಂಶೋಧಕರಿಗೆ ಉತ್ತಮವಾದುದು. ವಾಯುವ್ಯ ದ್ವಾರವು ಜೀವನದ ಎಲ್ಲಾ ಅಭಿವೃದ್ಧಿಯ ದ್ಯೋತಕವಾಗಿದೆ. ನಡುಮನೆಯ ಬಾಗಿಲನ್ನು ದಕ್ಷಿಣದಲ್ಲಿ ಇರಿಸುವುದು ಅಶುಭವಾಗಿದೆ.

ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಮಧ್ಯಭಾಗದಲ್ಲಿ ನಿಲ್ಲಿ ಹಾಗೂ ಕೈಯಲ್ಲಿ ಕಂಪಾಸನ್ನು ಹಿಡಿದುಕೊಳ್ಳಿ ಹಾಗೂ ನಿಮ್ಮ ಮನೆಯ ದಿಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಯಿರಿ. ನಿಮ್ಮ ಮನೆಯ ಮುಖ್ಯ ದ್ವಾರ ನಿಮ್ಮ ಮನೆಯ ಬಾಯಿಯಾಗಿದ್ದು ಅದು ನಿಮ್ಮ ಮನೆಗೆ ಶಕ್ತಿಯನ್ನು ತರುತ್ತದೆ. ಮನೆಯ ನೈಋತ್ಯ ಭಾಗಕ್ಕೆ ಮುಖ್ಯದ್ವಾರ ಇರುವ ಮನೆಯನ್ನು ಎಂದೂ ಆರಿಸಿಕೊಳ್ಳಬೇಡಿ. ಇದರಿಂದಾಗಿ ಮನೆಗೆ ದುಷ್ಟ ಶಕ್ತಿಗಳ ಆಗಮನವಾಗಿ ಮನೆಯಲ್ಲಿ ಅಶಾಂತಿ ಮನೆ ಮಾಡುತ್ತದೆ. ಈಗ ನೀವಿರುವ ಮನೆಯಲ್ಲಿ ಮುಖ್ಯದ್ವಾರ ನೈಋತ್ಯ ದಿಕ್ಕಿನಲ್ಲಿಯೇ ಇದೆ ಎಂದಾದರೆ ಎರಡು ಹನುಮಾನ್ ಟೈಲ್ಸ್‌ ಗಳನ್ನು ಹಾಕಿ ಹಾಗೂ ವ್ಯತ್ಯಾಸ ಗಮನಿಸಿ.

ನಡುಮನೆಯು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು

ನಡುಮನೆಯು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು

ನಿಮ್ಮ ನಡುಮನೆಯು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಅದಾಗ್ಯೂ ನಿಮ್ಮ ಮನೆಯು ದಕ್ಷಿಣಕ್ಕೆ ಮುಖ ಮಾಡುತ್ತಿದೆ ಎಂದಾದಲ್ಲಿ ನಿಮ್ಮ ನಡುಮನೆಯು ಆಗ್ನೇಯ ಮೂಲೆಯಲ್ಲಿರಬೇಕು. ಅದಾಗ್ಯೂ ಉತ್ತರ ದಿಕ್ಕು ನಡುಮನೆಗೆ ಹೆಚ್ಚು ಪ್ರಶಸ್ತವಾಗಿದೆ.

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ ಎಲ್ಲಾ ವಾಸ್ತು ನಿಯಮಗಳ ರಾಜನಿದ್ದಂತೆ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಬರುವಂತೆ ಇಡೀ ಆಗ ನೋಡಿ ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತವೆ. ಹಾಗಾಗಿ ನೀವು ಪ್ರಾರ್ಥನೆ ಮಾಡುವ ಸಮಯದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಪ್ರಾರ್ಥನೆ ಮಾಡಿ.

ಅಡುಗೆ ಮನೆ

ಅಡುಗೆ ಮನೆ

ಅಡುಗೆ ಮನೆಯು ಸಮೃದ್ಧಿಯ ಸಂಕೇತವಾಗಿರುತ್ತದೆ. ಹಾಗಾಗಿ ಅಡಿಗೆ ಮನೆಯು ಆಗ್ನೇಯ ದಿಕ್ಕಿನಲ್ಲಿರಬೇಕು. ಹಾಗೇನಾದರೂ ಆಗದೇ ಅಡಿಗೆ ಮನೆಯು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದ್ದಲ್ಲಿ ಅದು ಹಣಕಾಸಿನ ಹಾಗೂ ಅನೇಕ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಲ್ಛಾವಣಿಯಲ್ಲಿ (ಸೀಲಿಂಗ್) ಮೂರು ಕಂಚಿನ ಬಟ್ಟಲುಗಳನ್ನು ತಲೆಕೆಳಕಾಗಿ ನೇತುಹಾಕಿ ಆದರೆ ಅದನ್ನು ಸ್ಟವ್‌ ಮೇಲೆ ನೇರವಾಗಿ ನೇತು ಹಾಕಬೇಡಿ.

ಮಲಗುವ ಕೋಣೆ

ಮಲಗುವ ಕೋಣೆ

ಮಲಗುವ ಕೋಣೆ ಸ್ಥಿರತೆಯನ್ನು ಕಾಪಾಡುವಂತಹದ್ದು ಆ ಕೋಣೆಯ ಬಾಗಿಲು ನೈಋತ್ಯ ದಿಕ್ಕಿಗೆ ಇರಬೇಕು. ಮತ್ತು ನೀವು ದಕ್ಷಿಣಾಭಿಮುಖವಾಗಿ ಅಥವಾ ಪಶ್ಚಿಮಾಭಿಮುಖವಾಗಿ ತಲೆ ಹಾಕಿ ಮಲಗಬೇಕು. ಆದರೆ ಮನೆಯ ಯಜಮಾನ ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ತಲೆಹಾಕಿ ಮಲಗಬಾರದು.

ಸ್ನಾನಗೃಹಗಳು ಮತ್ತು ಶೌಚಾಲಯಗಳು

ಸ್ನಾನಗೃಹಗಳು ಮತ್ತು ಶೌಚಾಲಯಗಳು

ಸ್ನಾನಗೃಹಗಳು ಮತ್ತು ಶೌಚಾಲಯಗಳು ಕಷ್ಟವನ್ನು ತರುವ ಶಕ್ತಿಯನ್ನು ಹೊಂದಿರುವ ಸ್ಥಳವಾಗಿದ್ದು, ಇವು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿರಬೇಕು. ಇವುಗಳು ಯಾವುದೇ ಕಾರಣಕ್ಕೂ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಎಂದಿಗೂ ಇರಬಾರದು. ಹಾಗೆ ಇದ್ದಲ್ಲಿ ಅದು ಹಣಕಾಸು, ಆರೋಗ್ಯ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ತರುತ್ತವೆ.

ಲಕ್ಷ್ಮಿ ದೇವರ ಪಟ

ಲಕ್ಷ್ಮಿ ದೇವರ ಪಟ

ಮನೆಯಲ್ಲಿ ಸಂಪತ್ತು ಸದಾ ತುಂಬಿರಲು ಲಕ್ಷ್ಮಿದೇವರ ಪಟ ಅಥವಾ ಮುದ್ರಿತ ಗೋಡೆಯ ಟೈಲ್ಸ್ ಅನ್ನು ಮನೆಯ ಪ್ರಧಾನ ಬಾಗಿಲಿಗೆ ಎದುರಾಗಿ, ಅಂದರೆ ಮನೆಯ ಒಳಗೆ ಅಡಿಯಿಡುತ್ತಿದ್ದಂತೆಯೇ ಕಾಣುವಂತೆ ಇರಿಸಿ. ಆದರೆ ಇದಕ್ಕೆ ಎದುರಾಗಿ ಪಾದರಕ್ಷೆಗಳು ಅಥವಾ ಪಾದರಕ್ಷೆಗಳ ಕಪಾಟು ಇರಿಸಕೂಡದು.

 ಝೀರೊ ವ್ಯಾಟ್‌ನ ನೀಲಿ ಬಲ್ಬನ್ನು ಉಪಯೋಗಿಸಿ...

ಝೀರೊ ವ್ಯಾಟ್‌ನ ನೀಲಿ ಬಲ್ಬನ್ನು ಉಪಯೋಗಿಸಿ...

ನಿಮ್ಮ ಮನೆಯ ಕೇಂದ್ರ ಸ್ಥಳವು ನಿಮ್ಮ ದೇಹದಲ್ಲಿರುವ ಮೂಗಿಗೆ ಸಮಾನ. ಇದು ಉಸಿರಾಡಲು ಅನುಕೂಲವಾಗುವಂತೆ ಮುಕ್ತವಾಗಿ ಮತ್ತು ಗೊಂದಲವಿಲ್ಲದೆ ಇರಬೇಕು. ಕೇಂದ್ರ ಸ್ಥಳದ ಗೋಡೆಯು ಹೊಟ್ಟೆಗೆ ಸಂಬಂಧಿಸಿದ ಮತ್ತು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದ್ದರಿಂದ ಝೀರೊ ವ್ಯಾಟ್‌ನ ನೀಲಿ ಬಲ್ಬನ್ನು ಈ ಗೋಡೆಗೆ ಹಾಕಿ ಅದನ್ನು 24X7 ಉರಿಯುತ್ತಿರುವಂತೆ ನೋಡಿಕೊಳ್ಳಬೇಕು.

ಮನೆಯ ಪೀಠೋಪಕರಣಗಳು

ಮನೆಯ ಪೀಠೋಪಕರಣಗಳು

ಯಾವಾಗಲೂ ಮನೆಯ ಒಳಗಿನ ಪೀಠೋಪಕರಣಗಳನ್ನು ಭಾರವಾದ ವಸ್ತುಗಳನ್ನು ಪಶ್ಚಿಮ ಅಥವಾ ದಕ್ಷಿಣದಲ್ಲಿರಿಸಬೇಕು. ಈ ರೀತಿ ಇರಿಸಲು ಸಾಧ್ಯವಿಲ್ಲ ಎಂದಾದಲ್ಲಿ ಉತ್ತರ ಅಥವಾ ಈಶಾನ್ಯದಲ್ಲಿ 1-3 ಇಂಚುಗಳ ಎತ್ತರದಲ್ಲಿ ಇರಿಸಿರಿ.

ಮನೆಯ ಅಂದ ಹೀಗಿರಲಿ...

ಮನೆಯ ಅಂದ ಹೀಗಿರಲಿ...

ನಡುಮನೆಯಲ್ಲಿ ಚೌಕಾಕಾರ ಅಥವಾ ಆಯತಾಕಾರದ ಪೀಠೋಪಕರಣಗಳನ್ನು ಇರಿಸಿ ವೃತ್ತಾಕಾರದ, ಅಂಡಾಕಾರದ ಅಥವಾ ಇತರೆ ಆಕಾರದ ಪೀಠೋಪಕರಣಗಳನ್ನು ಇಲ್ಲಿ ಇರಿಸದಿರಿ. ಈಶಾನ್ಯ ಭಾಗದ ಕಿಟಕಿ ಬಾಗಿಲುಗಳಿಗೆ ಹಗುರವಾದ ಕರ್ಟನ್‌ಗಳನ್ನು ಹಾಕಿ ಅಂತೆಯೇ ನೈಋತ್ಯ ಭಾಗದ ಕಿಟಕಿ ಬಾಗಿಲುಗಳಿಗೆ ಕೊಂಚ ಭಾರದ ಕರ್ಟನ್‌ಗಳನ್ನು ಹಾಕಿ. ನಡುಮನೆಯಲ್ಲಿ ದಕ್ಷಿಣ, ಪಶ್ಚಿಮ ಅಥವಾ ನೈಋತ್ಯ ಮೂಲೆಯಲ್ಲಿ ಮೆಟ್ಟಿಲುಗಳನ್ನು ಒದಗಿಸಿ. ಸಾಧ್ಯವಾದಲ್ಲಿ ನಡುಮನೆಯ ಈಶಾನ್ಯ ಮೂಲೆಯನ್ನು ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇರಿಸಿಕೊಳ್ಳಿ. ಮೂಲೆಯಲ್ಲಿ ಆರೋಗ್ಯಕರ ಸಸ್ಯಗಳನ್ನು ಇರಿಸಿ. ಕೃತಕ ಹೂವುಗಳನ್ನು ಒಣ ಹೂವುಗಳನ್ನು, ಮತ್ತು ಕ್ಯಾಕ್ಟಸ್ ಅಥವಾ ಬೋನ್ಸೈ ಸಸ್ಯಗಳನ್ನು ಈ ಭಾಗದಲ್ಲಿ ಇರಿಸದಿರಿ.

ಕೆಲವೊಂದು ಸರಳ ಪರಿಹಾರ

ಕೆಲವೊಂದು ಸರಳ ಪರಿಹಾರ

ಮನೆಯ ಯಾವುದೇ ದಿಕ್ಕನ್ನು ಕಡಿತಗೊಳಿಸಿದ್ದಲ್ಲಿ ಅಥವಾ ಅಸ್ಥಿರಗೊಳಿಸಿದ್ದಲ್ಲಿ ಅಂದರೆ ಮುಖ್ಯವಾಗಿ ನೈಋತ್ಯ, ಉತ್ತರ ಈಶಾನ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಯಾವುದೇ ಕಡಿತ ಮಾಡಿದ್ದಲ್ಲಿ ಅದು ಗಂಭೀರ ಸಮಸ್ಯೆಯನ್ನು ತರುತ್ತದೆ. ಅದರ ಪರಿಹಾರಕ್ಕೆ ಹಲವಾರು ರಹಸ್ಯಗಳಿವೆ. ಇದೀಗ ಪರಿಹಾರಗಳತ್ತ ಒಂದು ಪಕ್ಷಿನೋಟ ಹರಿಸೋಣ ಬನ್ನಿ.

ಕೆಂಪು ಮತ್ತು ಕೆನ್ನೆರಳೆಯ ಬಣ್ಣಗಳನ್ನು ಉಪಯೋಗಿಸಬೇಡಿ....

ಕೆಂಪು ಮತ್ತು ಕೆನ್ನೆರಳೆಯ ಬಣ್ಣಗಳನ್ನು ಉಪಯೋಗಿಸಬೇಡಿ....

ನಿಮ್ಮ ಮನೆಯನ್ನು ಅಲಂಕರಿಸಲು ಹೆಚ್ಚು ಪ್ರಕಾಶಮಾನವಾದ ಕೆಂಪು ಮತ್ತು ಕೆನ್ನೆರಳೆಯ ಬಣ್ಣಗಳನ್ನು ಉಪಯೋಗಿಸಬೇಡಿ. ಇದು ನಿಮ್ಮಲ್ಲಿ ಅನಾರೋಗ್ಯದ ಶಕ್ತಿಯನ್ನು ಹೆಚ್ಚಿಸಬಹುದು. ನೀವು ಮಲಗುವ ಕೋಣೆಯಲ್ಲಿ ನೀರಿನ ಚಿತ್ರಗಳು ಅಥವಾ ಕಾರಂಜಿಗಳನ್ನು ಇಟ್ಟುಕೊಳ್ಳಬೇಡಿ. ಇದು ನಿಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಲಕ್ಷ್ಮಿ ಕುಬೇರರ ಪಟ

ಲಕ್ಷ್ಮಿ ಕುಬೇರರ ಪಟ

ನಿಮ್ಮ ಮನೆಯ ಪ್ರಧಾನ ಬಾಗಿಲಿಗೆ ಎದುರಾಗುವಂತೆ ಗೋಡೆಯಲ್ಲಿ ಲಕ್ಷ್ಮಿ-ಕುಬೇರರ ಚಿತ್ರಪಟವನ್ನು ನೇತುಹಾಕಿ. ಇದು ಸಿಗದಿದ್ದರೆ ಬರೆಯ ಕುಬೇರನ ಪಟ, ಇದೂ ಸಿಗದಿದ್ದರೆ ಸ್ವಸ್ತಿಕ್ ಚಿಹ್ನೆ ಇರುವ ಪಟವನ್ನು ನೇತುಹಾಕಿ. ಇದರಿಂದ ನಿಮ್ಮ ಮನೆಗೆ ಬಂದಿದ್ದ ಹಣ ಹೊರಹೋಗದಿರುವಂತೆ ನೋಡಿಕೊಳ್ಳಬಹುದು.

ಅನವಶ್ಯಕವಾಗಿ ನಲ್ಲಿಯ ನೀರು ಹರಿದುಹೋದ೦ತೆ ನೋಡಿಕೊಳ್ಳಿರಿ

ಅನವಶ್ಯಕವಾಗಿ ನಲ್ಲಿಯ ನೀರು ಹರಿದುಹೋದ೦ತೆ ನೋಡಿಕೊಳ್ಳಿರಿ

ಹೌದು! ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ನಲ್ಲಿಯ ನೀರು ಹರಿದುಹೋದ೦ತೆ ನೋಡಿಕೊಳ್ಳಿರಿ ಹಾಗೂ ನಲ್ಲಿಯಿ೦ದ ನೀರು ಸೋರಿಹೋಗುವುದನ್ನು ತಡೆಗಟ್ಟಿರಿ. ನಿಮ್ಮ ಶಯ್ಯಾಗೃಹದಲ್ಲಿ ರಾಧಾ-ಕೃಷ್ಣರ ಚಿತ್ರಪಟವನ್ನು ತೂಗುಹಾಕಿರಿ. ಮನೆಯ ಹೆಬ್ಬಾಗಿಲಿನಲ್ಲಿ ಕುದುರೆಯ ಲಾಳವನ್ನು ಬಳಸಿರಿ. ನೀರಿನ ಸರಬರಾಜು ಅಥವಾ ಪೂರೈಕೆಯು ನಿಮ್ಮ ಮನೆಯ ವಾಯುವ್ಯ ದಿಕ್ಕಿನಿ೦ದ ಆಗುವ೦ತೆ ಸಾಧ್ಯವಾದಷ್ಟು ಪ್ರಯತ್ನಿಸಿ ಹಾಗೂ ಯಾವಾಗಲೂ ಆಹಾರವನ್ನು ನೈಋತ್ಯ ದಿಕ್ಕಿನಲ್ಲಿಯೇ ಸೇವಿಸಿರಿ. ಮಲಗುವಾಗ ನಿಮ್ಮ ತಲೆಯು ದಕ್ಷಿಣ ದಿಕ್ಕಿನಲ್ಲಿರಲಿ ಹಾಗೂ ಕಾಲುಗಳು ಉತ್ತರ ದಿಕ್ಕಿನತ್ತ ಚಾಚಿಕೊ೦ಡಿರಲಿ. ಅಥವಾ ಕನಿಷ್ಟ ನಿಮ್ಮ ತಲೆಯು ದಕ್ಷಿಣ ದಿಕ್ಕಿನಲ್ಲಿರುವ೦ತೆ ನೋಡಿಕೊಳ್ಳಿರಿ.

 ಬೇಡದ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಬೇಡಿ...

ಬೇಡದ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಬೇಡಿ...

ನಿಮ್ಮ ಮನೆಯ ಛಾವಣಿಯ ಮೇಲೆ ಬೇಡವಾದ, ಹಳೆಯ, ಅಥವಾ ಹಾಳಾದ ಪೀಠೋಪಕರಣಗಳನ್ನು ಎ೦ದಿಗೂ ಇರಿಸಬೇಡಿರಿ. ಬೇಡವಾದ ವಸ್ತುಗಳ ಸ೦ಗ್ರಹವು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ನಿಮ್ಮ ಮನೆಯ ಆಗ್ನೇಯ ದಿಕ್ಕು ಯಾವಾಗಲೂ ಸ್ವಚ್ಚವಾಗಿರಬೇಕು. ನಿಮ್ಮಲ್ಲೇನಾದರೂ ಭಾರವಾದ ವಸ್ತುಗಳಿದ್ದಲ್ಲಿ, ಅವುಗಳನ್ನು ನಿಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿರಿಸುವುದು ಸೂಕ್ತವಾಗಿರುತ್ತದೆ.

English summary

Vastu Tips for Home that will Bring More Happiness and Prosperity ...

1t is a popular belief that if you keep your home and the things in it in coherence with vastu tips then prosperity and happiness will surely be there in your life.
X
Desktop Bottom Promotion