Just In
- 6 min ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 57 min ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 1 hr ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- 3 hrs ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
Don't Miss
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯ ಬಾಲ್ಕನಿ: ಸ್ವಲ್ಪ ಎಡವಟ್ಟಾದರೂ ನೆಮ್ಮದಿಯೇ ಹಾಳಾಗಬಹುದು!
ಅನೇಕರು ಮನೆಯ ಬಾಲ್ಕನಿ ಎಂದರೆ ಬೇಡದ ವಸ್ತುಗಳನ್ನು ಶೇಖರಿಸಿಡುವ ಸ್ಥಳ ಎನ್ನುವ ಭಾವವನ್ನು ಹೊಂದಿರುತ್ತಾರೆ. ಇನ್ನು ಕೆಲವರು ಬಟ್ಟೆ ಒಣಗಿಸಲು ಸೂಕ್ತ ಸ್ಥಳ ಎಂದು ತಿಳಿಯುತ್ತಾರೆ....
ಮನೆಯ ನಿರ್ಮಾಣದಲ್ಲಿ ಬಾಲ್ಕನಿಯು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಮನೆಯಿಂದಾಚೆಯ ಜಾಗವಾದರೂ ಮನೆಯ ಸೌಂದರ್ಯ ಹೆಚ್ಚಿಸುವಲ್ಲೂ ಸಹಾಯ ಮಾಡುತ್ತದೆ. ಜೊತೆಗೆ ಮನೆಯ ಹೊರಗಿನ ಪರಿಸರವನ್ನು ಸವಿಯಲು ಸೂಕ್ತ ಜಾಗವನ್ನು ಕಲ್ಪಿಸಿಕೊಡುತ್ತದೆ. ಪ್ರತಿದಿನ ಬೆಳಗ್ಗೆ ಸೂರ್ಯನ ಕಿರಣಗಳನ್ನು ಸ್ವಾಗತಿಸಿ, ರಾತ್ರಿ ಸ್ವಚ್ಛಂದ ಆಕಾಶದ ಚಿತ್ತಾರವನ್ನು ಪ್ರದರ್ಶಿಸುವ ಈ ಸ್ಥಳ ವಾಸ್ತು ವಿಚಾರದಲ್ಲೂ ಹೆಚ್ಚು ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ. ಮನೆಯ ಒಳಗೆ ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಯ ಪ್ರವೇಶಕ್ಕೆ ಅವಕಾಶ ನೀಡುವ ಈ ಸ್ಥಳದ ಬಗ್ಗೆ ಅಸಡ್ಡೆ ತೋರುವಂತಿಲ್ಲ. ಬಾಲ್ಕನಿ ಶೃಂಗರಿಸಲು ಕೆಲವು ಟಿಪ್ಸ್
ಅನೇಕರು ಮನೆಯ ಬಾಲ್ಕನಿ ಎಂದರೆ ಬೇಡದ ವಸ್ತುಗಳನ್ನು ಶೇಖರಿಸಿಡುವ ಸ್ಥಳ ಎನ್ನುವ ಭಾವವನ್ನು ಹೊಂದಿರುತ್ತಾರೆ. ಇನ್ನು ಕೆಲವರು ಬಟ್ಟೆ ಒಣಗಿಸಲು ಸೂಕ್ತ ಸ್ಥಳ ಎಂದು ತಿಳಿಯುತ್ತಾರೆ. ಮನೆಯ ಸೌಂದರ್ಯವನ್ನು ಹೆಚ್ಚಿಸುವ ಈ ಬಾಲ್ಕನಿಯ ಬಗ್ಗೆ ನಿಷ್ಕಾಳಜಿ ತೋರದೆ ಇದ್ದರೆ ಒಳಿತು. ಏಕೆ? ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡಿದರೆ ಮುಂದೆ ಓದಿ...
ವಿನ್ಯಾಸ ನಿಯಮ
ಮನೆಯ ವಿನ್ಯಾಸದ ದೃಷ್ಟಿಯಿಂದ ವಿಭಿನ್ನ ಶೈಲಿಯ ಬಾಲ್ಕನಿಗಳು ಇಂದು ಚಾಲ್ತಿಯಲ್ಲಿವೆ. ಬಾಲ್ಕನಿಯನ್ನು ನಿರ್ಮಿಸುವಾಗ ವೃತ್ತಾಕಾರದ ಬಾಲ್ಕನಿ ನಿರ್ಮಿಸಬಾರದು. ಆಯತ ಮತ್ತು ಚದರ ರೀತಿಯ ಆಕಾರದಲ್ಲಿ ನಿರ್ಮಿಸಬೇಕು. ಇದು ವಾಸ್ತು ಪ್ರಕಾರ ಒಳ್ಳೆಯದು.
ಸಂಗ್ರಹ ಕೋಣೆಯಲ್ಲ
ಬಾಲ್ಕನಿಯಲ್ಲಿ ಹಲವಾರು ಪೀಠೋಪಕರಣಗಳನ್ನು ಇಡುವುದು, ಅನುಪಯುಕ್ತ ವಸ್ತುಗಳನ್ನು ಒಂದೆಡೆ ರಾಶಿ ಹಾಕುವುದು ಮತ್ತು ಮನೆಯ ಕಸದ ಬುಟ್ಟಿಯನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಂತೆ.
ಸಸ್ಯಗಳ ಬೆಳೆಸಿ
ಬಾಲ್ಕನಿಯಲ್ಲಿ ಪೊದೆಯಾಕಾರದ ಸಣ್ಣಸಣ್ಣ ಸಸ್ಯಗಳನ್ನು ಇಡಬೇಕು. ಇವು ಬಾಲ್ಕನಿಯ ಸೊಬಗನ್ನು ಹೆಚ್ಚಿಸುವುದರೊಂದಿಗೆ ಸಕಾರಾತ್ಮ ಶಕ್ತಿ ಮನೆಯೊಳಗೆ ಪ್ರವೇಶಿಸುವಂತೆ ಮಾಡುತ್ತದೆ.
ದಿಕ್ಕುಗಳ ಆಯ್ಕೆ
ಬಾಲ್ಕನಿಯನ್ನು ನಿರ್ಮಿಸುವಾಗ ದಿಕ್ಕುಗಳ ಆಯ್ಕೆಯು ಮಹತ್ತರವಾದ ಪಾತ್ರ ವಹಿಸುತ್ತದೆ. ಪೂರ್ವ, ಈಶಾನ್ಯ ಮತ್ತು ನೈರುತ್ಯ ಭಾಗದಲ್ಲಿ ನಿರ್ಮಿಸುವ ಬಾಲ್ಕನಿ ಕುಳಿತುಕೊಳ್ಳಲು ಹೆಚ್ಚು ಪ್ರಶಸ್ತವಾದದ್ದು. ಪೂರ್ವ ಮತ್ತು ಪಶ್ಚಿಮದಲ್ಲಿ ಜೋಕಾಲಿಯನ್ನು ಕಟ್ಟಲು ಯೋಗ್ಯವಾದ ಸ್ಥಳ.
ಕೈ ತೊಳೆಯುವುದು
ಕೆಲವರು ಬಾಲ್ಕನಿಯಲ್ಲಿ ಕೈ ತೊಳೆಯುವ ವಾಷ್ಬೇಸಿನ್ ಇಟ್ಟಿರುತ್ತಾರೆ. ಇದು ವಾಸ್ತುಪ್ರಕಾರ ಒಳ್ಳೆಯದಲ್ಲ.
ಬಟ್ಟೆ ಒಣಗಿಸುವುದು
ಅನೇಕರು ಬಾಲ್ಕನಿಯಲ್ಲಿ ಬಟ್ಟೆ, ಮ್ಯಾಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಒಣಹಾಕಲು ಉಪಯೋಗಿಸುತ್ತಾರೆ. ಈ ಪ್ರಕ್ರಿಯೆ ವಾಸ್ತು ಪ್ರಕಾರ ಒಳ್ಳೆಯದಲ್ಲ. ಇದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಬಾಲ್ಕನಿ ಸದಾ ಸ್ವಚ್ಛ ಹಾಗೂ ಗಾಳಿ ಓಡಾಡುವಂತಿರಬೇಕು.
ಛಾವಣಿ ವ್ಯವಸ್ಥೆ
ಬಾಲ್ಕನಿಗೆ ಹಾಕುವ ಛಾವಣಿಯು ಕೋಣೆಯ ಛಾವಣಿಗಿಂತ ಎತ್ತರ ಅಥವಾ ಸಮನಾಗಿರಬಾರದು. ಇದು ವಾಸ್ತು ಪ್ರಕಾರ ಅಶುಭ ಸೂಚನೆಯನ್ನು ನೀಡುತ್ತದೆ.