For Quick Alerts
ALLOW NOTIFICATIONS  
For Daily Alerts

ದಸರಾ ಗೊಂಬೆಗಳ ಶೃಂಗಾರ, ಹೇಗಿರಬೇಕು? ಏನೆಲ್ಲಾ ತಯಾರಿ ನಡೆಸಬೇಕು?

By Hemanth
|

ಯಾವುದೇ ಹಬ್ಬ ಆಚರಣೆಗಳಿರಲಿ, ಅದು ಒಂದೊಂದು ಪ್ರದೇಶದಲ್ಲಿ ಭಿನ್ನವಾಗಿರುವುದು. ನವರಾತ್ರಿ ಕೂಡ ಹಾಗೆಯೇ. ಗುಜರಾತ್ ನಲ್ಲಿ ನವರಾತ್ರಿ ವೇಳೆ ಗರ್ಭಾನೃತ್ಯದೊಂದಿಗೆ ದೇವಿಯ ಪೂಜಿಸುವರು. ಪಶ್ವಿಮಬಂಗಾಳದಲ್ಲಿ ಒಂದು ರೀತಿ ಮತ್ತು ಮಹಾರಾಷ್ಟ್ರದಲ್ಲಿ ಇನ್ನೊಂದು ರೀತಿ. ಅದೇ ನಮ್ಮ ಕರ್ನಾಟಕದಲ್ಲಿ ನವರಾತ್ರಿಯು ತುಂಬಾ ಭಿನ್ನವಾಗಿ ಆಚರಿಸಲ್ಪಡುವುದು. ಮೈಸೂರು ದಸರಾ ಮಾತ್ರವಲ್ಲದೆ ಮಕ್ಕಳಿಗೂ ನವರಾತ್ರಿ ತುಂಬಾ ಖುಷಿ ತಂದುಕೊಡುವುದು.

ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಆಯೋಜಿಸಲಾಗುವ ಗೊಂಬೆ ಹಬ್ಬ' ತುಂಬಾ ಜನಪ್ರಿಯ. ಇದು ಮಕ್ಕಳಲ್ಲದೆ ದೊಡ್ಡವರನ್ನೂ ಆಕರ್ಷಿಸುವುದು. ಮಕ್ಕಳು ಗೊಂಬೆಗಳನ್ನು ನೋಡಲು ಮನೆಯಿಂದ ಮನೆಗೆ ಹೋಗುವರು. ಪ್ರತೀ ವರ್ಷವು ಹೊಸ ಹೊಸ ಗೊಂಬೆಗಳ ಸಂಗ್ರಹ ಮಾಡಿ ಅದನ್ನು ಒಂದು ಕೋಣೆಯಲ್ಲಿ ಅಲಂಕರಿಸಿ, ಮನೆಗೆ ಬರುವ ಅತಿಥಿಗಳು, ಸ್ನೇಹಿತರು ಹಾಗೂ ನೆರೆಮನೆಯವರಿಗೆ ಇದನ್ನು ತೋರಿಸಲಾಗುವುದು. ಗೊಂಬೆ ಹಬ್ಬದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವುದು ಪಟ್ಟದ ಗೊಂಬೆ(ರಾಜಮನೆತನದ ಮದುವೆಯ ಗೊಂಬೆಗಳು).

ಗೊಂಬೆಗಳ ಸಮೂಹದಲ್ಲಿ ಈ ಗೊಂಬೆಗಳನ್ನು ರಾಜ ಮತ್ತು ರಾಣಿಯಾಗಿಸಿಕೊಂಡು ಪೂಜೆ ಮಾಡಲಾಗುತ್ತದೆ. ಗೊಂಬೆ ಹಬ್ಬದ ವೇಳೆ ಮಕ್ಕಳು ನೃತ್ಯ ಮಾಡಿ ದೊಡ್ಡವರನ್ನು ರಂಜಿಸುವರು. 9 ದಿನಗಳ ಕಾಲ ಹಲವಾರು ರೀತಿ ತಿಂಡಿತಿನಿಸುಗಳು ಹಾಗೂ ಕಾರ್ಯಕ್ರಮಗಳು ನಡೆಯುವುದು.

Navratri – Pattada Gombe Ideas

ನೀವು ಮನೆಯಲ್ಲಿ ಗೊಂಬೆಹಬ್ಬ ಮಾಡುತ್ತಾ ಇದ್ದರೆ ಈ ಲೇಖನ ಓದಲೇಬೇಕು. ಯಾಕೆಂದರೆ ಬೋಲ್ಡ್ ಸ್ಕೈ ನವರಾತ್ರಿ ಸಂದರ್ಭದಲ್ಲಿ ಗೊಂಬೆಹಬ್ಬದ ಶೃಂಗಾರದ ಬಗ್ಗೆ ತಿಳಿಸಿಕೊಡಲಿದೆ. ಪ್ರತೀ ವರ್ಷವು ರಾಜಮನೆತನ ಮದುವೆಯ ಅಲಂಕಾರದಲ್ಲಿ ಕೆಲವು ಬದಲಾವಣೆಗಳು ಆಗುವ ಕಾರಣ ನೀವು ಇದನ್ನು ಗಮನಿಸಲೇಬೇಕು.

ದಸರಾ ವಿಶೇಷ-ಗೊಂಬೆ ಹಬ್ಬದ ಮೆರುಗನ್ನು ಕಣ್ತುಂಬಿಕೊಳ್ಳಿ....

ನವರಾತ್ರಿ ಶೃಂಗಾರ ಪಟ್ಟದ ಗೊಂಬೆ ನಿಮಗೆ ಬೇಕು
1. ಎರಡು ಬದಿ ಅಂಟಿಕೊಳ್ಳುವ ಸ್ಟಿಕ್ಕರ್ ಮತ್ತು ಅಂಟು
2. ಸೀಕ್ವಿನ್ಸ್(ಮಿನುಗು)
3. ಬಂಗಾರ ಮತ್ತು ಬೆಳ್ಳಿಯ ಕಸೂತಿ ಪಟ್ಟಿ
4. ಕುಪ್ಪಸದ ಬಟ್ಟೆ/ಕಾಗದದ್ದು ಆಗಿರಬಹುದು (ಬಣ್ಣಗಳು-ಹಸಿರು, ಬಿಳಿ ಮತ್ತು ಕೆಂಪು)
5. ವೆಲ್ವೆಟ್ ಬಟ್ಟೆ
6. ತಲೆಯ ಆಭರಣಗಳು
7. ಕಪ್ಪು ಕೂದಲು
8. ಆಕರ್ಷಕ ಹಣೆ ಬೊಟ್ಟುಗಳು

ನಾಡ ಹಬ್ಬ ದಸರಾಕ್ಕೆ ಗೊಂಬೆಗಳ ತೇರು....

ರಾಜರಾಣಿಯರ ಶೃಂಗಾರ ಹೇಗೆ?
1. ವೆಲ್ವೆಟ್ ಬಟ್ಟೆಯನ್ನು ರಾಣಿಗೆ ಕುಪ್ಪಸವಾಗಿ ಮತ್ತು ರಾಜನಿಗೆ ಶೆರ್ವಾಣಿಯಾಗಿ ಕತ್ತರಿಸಿಕೊಳ್ಳಿ.
2. ಕುಪ್ಪಸ ಮತ್ತು ಶೆರ್ವಾಣಿಗೆ ಅಂಟು ಬಳಸಿಕೊಂಡು ಸ್ವಲ್ಪ ಹೊತ್ತು ಒಣಗಲು ಬಿಡಿ.
3. ಕೈಗಳನ್ನು ಪ್ರತ್ಯೇಕವಾಗಿ ಮಾಡಿಕೊಂಡು ಅದನ್ನು ಸೇರಿಸಿ ಅಥವಾ ದೇಹಕ್ಕೆ ಅಂಟಿಸಿ.
4. ಬಿಳಿ ಬಟ್ಟೆಯಿಂದ ಪಂಚೆ ಮಾಡಿಕೊಳ್ಳಿ. ಡಬಲ್ ಸ್ಟಿಕ್ ಅಂಟಿನಿಂದ ಪಂಚೆ ಅಂಟಿಸಿಕೊಳ್ಳಿ ಮತ್ತು ಇದನ್ನು ಬಿಗಿಯಾಗಿಸಿ.
5. ಹಸಿರು ಬಟ್ಟೆಯಿಂದ ರಾಣಿಗೆ ಲಂಗ ಮತ್ತು ಶಾಲು ಮಾಡಿ. ಇದಕ್ಕೆ ಮಿನುಗುವ ಅಂಚು ನೀಡಿ. ಎರಡನ್ನು ಡಬಲ್ ಸ್ಟಿಕ್‌ಗಮ್ ನಿಂದ ಅಂಟಿಸಿ ಅಥವಾ ಪಿನ್ ಬಳಸಿ.


6. ಮಿನುಗನ್ನು ಆಭರಣವಾಗಿ ಬಳಸಿಕೊಳ್ಳಿ. ಇದರೊಂದಿಗೆ ತಲೆಯ ಆಭರಣ ಕೂಡ ಹಾಕಿ.
7. ಮೂಗು, ಕಿವಿ ಮತ್ತು ಹಣೆಗೆ ಮಿನುಗುವ ಬಿಂದಿ ಅಂಟಿಸಿ. ಇದಕ್ಕೆ ನೀವು 3ಡಿ ಅಂಟು ಬಳಸಬಹುದು. ಈಗ ರಾಜರಾಣಿ ತಯಾರಾಗಿದ್ದಾರೆ.
English summary

Decorating The Royal Dolls For Navratri – Pattada Gombe Ideas

One of the most famous attraction of the doll festival is the pattada gombe (the royal wedding dolls). They are placed at the centre and performed pooja considering them as the royal king and queen. The kids will be asked to dance to entertain the dolls and lots of festive delicacies are prepared on the nine days and offered.
X
Desktop Bottom Promotion