For Quick Alerts
ALLOW NOTIFICATIONS  
For Daily Alerts

ಬ್ರಹ್ಮಚಾರಿಗಳೆ ಅಡುಗೆ ಮನೆ ಹೀಗಿರಲಿ

By Hemanth P
|

ಇಂದಿನ ದಿನಗಳಲ್ಲಿ ಹೆಚ್ಚಿನ ಯುವಕರು ವಿದ್ಯಾಭ್ಯಾಸ ಅಥವಾ ವೃತ್ತಿಗಾಗಿ ಮನೆಯಿಂದ ದೂರವಿರುವುದು ಸಾಮಾನ್ಯ. ಇದರಿಂದ ಕೆಲವು ಮಂದಿ ಏಕಾಂಗಿಯಾಗಿ ವಾಸಿಸಲು ಬಯಸಿದರೆ ಮತ್ತೆ ಕೆಲವರು ತಮ್ಮ ಕಚೇರಿಯಲ್ಲಿರುವ ತಮ್ಮದೇ ಮನಸ್ಥಿತಿಯ ವ್ಯಕ್ತಿಗಳೊಂದಿಗೆ ಅಥವಾ ಬೇರೆಡೆ ವಾಸಿಸುತ್ತಾರೆ. ಹೆಚ್ಚಿನ ಯುವಕರು ಅಪಾರ್ಟ್ ಮೆಂಟ್ ಅಥವಾ ಬಾಡಿಗೆಗೆ ಕೊಟ್ಟಿರುವ ಮನೆಯ ಒಂದು ಭಾಗದಲ್ಲಿ ವಾಸಿಸುತ್ತಾರೆ. ಅವರು ತಮ್ಮ ವೈಯಕ್ತಿಕತೆ ಇಷ್ಟಪಡುತ್ತಾರೆ ಮತ್ತು ತಮ್ಮ ಬಜೆಟ್ ನಲ್ಲಿ ಬರುವಂತಹ ಶೈಲಿ ಮತ್ತು ಹೊಂದಾಣಿಕೆಯಲ್ಲಿ ಮನೆಯನ್ನು ಅಲಂಕರಿಸುತ್ತಾರೆ.

ಅಡುಗೆ ಮನೆಯ ವಿಷಯಕ್ಕೆ ಬಂದರೆ ಹೆಚ್ಚಿನ ಬ್ಯಾಚುಲರ್ ಗಳ ಅಡುಗೆ ಮನೆಯ ಜೋಡಣೆ ಕನಿಷ್ಠ ಮಟ್ಟದ್ದಾಗಿರುತ್ತೆ. ಇದನ್ನು ಎದುರಿಸಬೇಕು, ಯಾಕೆಂದರೆ ಬ್ಯಾಚುಲರ್ ಗಳು ಹೆಚ್ಚಾಗಿ ಅಡುಗೆ ಮತ್ತು ಅಡುಗೆ ಮನಗೆ ಸ್ವಚಗೊಳಿಸಲು ಕೆಲವೇ ಗಂಟೆ ತೆಗೆದುಕೊಳ್ಳುತ್ತಾರೆ. ಅವರ ಕೈಯಲ್ಲಿ ಹೆಚ್ಚಿನ ಕೆಲಸವಿರುತ್ತದೆ ಮತ್ತು ಅಧಿಕ ಸಮಯ ಮನೆಯಿಂದ ಹೊರಗೆ ಇರುವ ಕಾರಣ ಅವರಿಗೆ ಅಡುಗೆ ಮನೆಗೆ ಸಮಯ ನೀಡಲು ಸಾಧ್ಯವಾಗದು. ಇದರಿಂದಾಗಿ ಹೆಚ್ಚಿನ ಬ್ಯಾಚುಲರ್ ಗಳ ಅಡುಗೆ ಮನೆ ಕೇವಲ ಮೂಲ ಸೌಕರ್ಯ ಮಾತ್ರ ಹೊಂದಿರುತ್ತದೆ.

ಬ್ಯಾಚುಲರ್ ಗಳ ಅಡುಗೆ ಕೋಣೆಯಲ್ಲಿ ಫ್ಯಾನ್ಸಿ ಪ್ರೊಸೆಸರ್ ಅಥವಾ ವಿಶೇಷವಾಗಿರುವ ಸ್ಟವ್ ಗಳು ನೋಡಲು ಸಿಗುವುದು ತುಂಬಾ ಅಪರೂಪ. ಹೆಚ್ಚಿನ ಬ್ಯಾಚುಲರ್ ಗಳು ಅಥವಾ ವಿದ್ಯಾರ್ಥಿಗಳು ಹೆಚ್ಚಿನ ಸಂದರ್ಭದಲ್ಲಿ ಮನೆಯಲ್ಲೇ ಬ್ರೇಕ್ ಫಾಸ್ಟ್ ಅಥವಾ ರಾತ್ರಿಯ ಊಟವನ್ನು ಮನೆಯಲ್ಲೇ ಮಾಡುತ್ತಾರೆ. ಬೆಳಗ್ಗಿನ ಉಪಹಾರದಲ್ಲಿ ಕೇವಲ ಆಮ್ಲೆಟ್ ಮತ್ತು ಸ್ಯಾಂಡ್ ವಿಚ್ ಇರುತ್ತದೆ. ರಾತ್ರಿಯ ಊಟಕ್ಕೆ ಮಾತ್ರ ಅಡುಗೆ ಮನೆಯನ್ನು ಉಪಯೋಗಿಸುತ್ತಾರೆ. ರಾತ್ರಿಯ ಊಟಕ್ಕೂ ಕೇವಲ ರೋಟಿ ಮತ್ತು ದಾಲ್ ಮಾತ್ರ ಸೇವಿಸುತ್ತಾರೆ. ಇದರಿಂದ ಅವರು ಹೆಚ್ಚಿನ ಸಮಯ ಉಳಿತಾಯ ಮಾಡಿ ಪರೀಕ್ಷೆ ಹಾಗೂ ಪ್ರಾಜೆಕ್ಟ್ ಗೆ ತಯಾರಿ ಮಾಡಲು ಸಾಧ್ಯವಾಗುತ್ತದೆ. ಹೆಚ್ಚಿನ ಅಡುಗೆ ಮನೆ ಅಲಂಕಾರವನ್ನು ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್ ಗಳನ್ನು ಗಮದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ.

ಸಣ್ಣದು

ಸಣ್ಣದು

ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್ ಗಳಿಗೆ ಅಡುಗೆ ಮನೆ ಮಾಡುವಾಗ ಅದರ ಗಾತ್ರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೆಚ್ಚಿನವರು ತಮ್ಮ ಅಗತ್ಯತೆ ತುಂಬಾ ಕಡಿಮೆ ಇರುವ ಕಾರಣದಿಂದ ಸಣ್ಣ ಅಡುಗೆ ಮನೆಯನ್ನು ಬಯಸುತ್ತಾರೆ ಹಾಗೂ ಎಲ್ಲಾ ವಸ್ತುಗಳು ತಮ್ಮ ಕೈಯಳತೆಯ ದೂರದಲ್ಲಿರುವಂತೆ ಅಡುಗೆ ಮನೆಯನ್ನು ಶೃಂಗರಿಸುತ್ತಾರೆ. ಇದರಿಂದ ವೇಗವಾಗಿ ಅಡುಗೆ ಮಾಡಲು ಮತ್ತು ಒಂದೇ ಸ್ಥಳದಲ್ಲಿ ನಿಲ್ಲಲು ಸಾಧ್ಯವಾಗುತ್ತದೆ.

ಕಡಿಮೆ ಸಾಮಗ್ರಿಗಳು

ಕಡಿಮೆ ಸಾಮಗ್ರಿಗಳು

ಹೆಚ್ಚಿನ ವಿದ್ಯಾರ್ಥಿಗಳು ಕಡಿಮೆ ಸಾಮಗ್ರಿ ಮತ್ತು ಅಗತ್ಯತೆ ಬೀಳುವ ವಸ್ತುಗಳನ್ನು ಮಾತ್ರ ಇಡಲು ಬಯಸುತ್ತಾರೆ. ಇದರಿಂದ ಅವರು ತಮ್ಮ ಹಣವನ್ನು ಗೇಮ್ಸ್ ಅಥವಾ ಇತರ ಯಾವುದೇ ಅತ್ಯಾಧುನಿಕ ವಸ್ತುಗಳಿಗೆ ವಿನಿಯೋಗಿಸಲು ಬಯಸುತ್ತಾರೆ, ಅಡುಗೆ ಕೋಣೆಯಿಂದ ಸ್ವಲ್ಪ ಹೊಗೆ ಹೋಗುವುದು ಅವರಿಗೆ ಇಷ್ಟ.

ಉತ್ತಮ ಸಂಗ್ರಹ

ಉತ್ತಮ ಸಂಗ್ರಹ

ಅವರು ತುಂಬಾ ಕಡಿಮೆ ಸಾಮಗ್ರಿ ಅಥವಾ ಸಂಗ್ರಹವನ್ನು ಬಯಸಿದರೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್ ಗಳು ಅಡುಗೆ ಮನೆಯಲ್ಲಿ ಸಂಗ್ರಹಕ್ಕೆ ಗರಿಷ್ಠ ಸ್ಥಳಾವಕಾಶವಿರಬೇಕೆಂದು ಬಯಸುತ್ತಾರೆ. ಇದರಿಂದ ನಿರ್ವಹಣೆ ಮತ್ತು ಸ್ವಚತೆ ಸುಲಭವಗುತ್ತದೆ. ಇಂತಹ ಹೆಚ್ಚಿನ ಅಡುಗೆ ಮನೆಯಲ್ಲಿ ರೆಡಿ ಟು ಈಟ್, ರೆಡಿ ಟು ಕುಕ್ ಮತ್ತು ಪ್ರಿ ಮಿಕ್ಸ್ ಇತ್ಯಾದಿಗಳಿಂದ ತುಂಬಿರುತ್ತದೆ. ಇದಕ್ಕೆ ಭದ್ರ ಸಂಗ್ರಹ ಬೇಕಾಗುತ್ತದೆ.

ಹೆಚ್ಚಿನ ಕೋಲ್ಡ್ ಸ್ಟೋರೇಜ್

ಹೆಚ್ಚಿನ ಕೋಲ್ಡ್ ಸ್ಟೋರೇಜ್

ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್ ಗಳಿಗೆ ಅಡುಗೆ ಅಲಂಕಾರದಲ್ಲಿ ನೆರವು ನೀಡುವಂತಹ ಮತ್ತೊಂದು ಅಂಶವೆಂದರೆ ಅಳಿದುಳಿದ ಆಹಾರವನ್ನು ಇಡಲು ಬೇಕಾಗುವಂತಹ ಕೋಲ್ಡ್ ಸ್ಟೋರೇಜ್. ಉಳಿದ ಆಹಾರವನ್ನು ಕೋಲ್ಡ್ ಸ್ಟೋರೇಜ್ ನಲ್ಲಿಟ್ಟಿರೆ ಆಗ ಮುಂದಿನ ದಿನಗಳಲ್ಲಿ ಅಡುಗೆ ಮಾಡುವ ಕೆಲಸ ತಪ್ಪಿ ಅದನ್ನೇ ಬಿಸಿ ಮಾಡಿಕೊಂಡು ತಿನ್ನಬಹುದು. ಹೆಚ್ಚಿನವರು ಮತ್ತೆ ಮತ್ತೆ ಅಡುಗೆ ಮಾಡುವುದನ್ನು ಬಯಸುವುದಿಲ್ಲ.

ಟಿವಿ ನೋಡುತ್ತಾ ಅಡುಗೆ ಮಾಡುವುದು

ಟಿವಿ ನೋಡುತ್ತಾ ಅಡುಗೆ ಮಾಡುವುದು

ವಿದ್ಯಾರ್ಥಿಯೊಬ್ಬ ತನ್ನ ಅಡುಗೆ ಮನೆಯಲ್ಲಿ ಟಿವಿ ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದರೆ ಆಗ ಆತ ಮರುಚಿಂತಿಸದೆ ಟಿವಿಯನ್ನು ತನ್ನ ಅಡುಗೆ ಕೋಣೆಯಲ್ಲೇ ನಿಂತು ವೀಕ್ಷಿಸುವಂತೆ ಜೋಡಿಸುತ್ತಾನೆ. ಊಟದಂತೆ ಟಿವಿಯಲ್ಲಿ ಬರುವಂತಹ ಫೇವರಿಟ್ ಆಟಗಳನ್ನು ನೋಡುವುದು ಕೂಡ ಅಷ್ಟೇ ಮುಖ್ಯ. ಅವರು ಇಂತಹ ಆಟಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಅಡುಗೆ ಕಾರಣಕ್ಕಂತೂ ಖಂಡಿತವಾಗಿಯೂ ಅಲ್ಲ.

ಅತ್ಯಾಧುನಿಕ ವಸ್ತುಗಳು

ಅತ್ಯಾಧುನಿಕ ವಸ್ತುಗಳು

ಇದು ಅವರ ಅಡುಗೆಯಲ್ಲಿ ನೆರವಾಗುತ್ತದೆ ಮತ್ತು ಅಡುಗೆ ಮಾಡುವಂತಹ ಸಮಯ ಉಳಿಸುತ್ತದೆ. ಹೆಚ್ಚಿನ ವಿದ್ಯಾರ್ಥೀಗಳು ತಮ್ಮ ಅಡುಗೆ ಮನೆಯ ಅಲಂಕಾರದಲ್ಲಿ ಇಂತಹ ವಸ್ತುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಅತ್ಯಾಧುನಿಕ ಫುಡ್ ಪ್ರಾಸೆಸರ್ ಅಡುಗೆಯ ಅರ್ಧ ಕೆಲಸವನ್ನು ಮುಗಿಸುತ್ತದೆ ಮತ್ತು ಇದು ಅಡುಗೆ ಮಾಡುವಾಗ ಅವರಿಗೆ ಹೆಚ್ಚಿನ ಮನೋರಂಜನೆ ಕೂಡ ನೀಡಬಲ್ಲದು.

ಫೋನ್ ಅಥವಾ ಟ್ಯಾಬ್ಲೆಟ್ ಇಡಲು ಜಾಗ

ಫೋನ್ ಅಥವಾ ಟ್ಯಾಬ್ಲೆಟ್ ಇಡಲು ಜಾಗ

ಇಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್ ಗಳು ಈ ಬೇಡಿಕೆಯನ್ನಿಡುತ್ತಿದ್ದಾರೆ. ಅಡುಗೆ ಮನೆಯಲ್ಲಿ ಮೊಬೈಲ್ ಫೋನ್ ನ್ನು ನೇತಾಡಿಸಲು ಅಥವಾ ಮೊಬೈಲ್ ಅಥವಾ ಟ್ಯಾಬ್ಲೆಟ್ ನ್ನು ಬಳಸುವಂತಹ ಜಾಗ ಬಯಸುತ್ತಾರೆ. ಇದರಿಂದ ಅವರು ಅಡುಗೆ ಮಾಡುವಾಗ ಅದಕ್ಕೆ ಹಾಕಬೇಕಾದ ಮಸಾಲೆಗಳು ಅಥವಾ ಒಂದು ಪದಾರ್ಥ ಮಾಡುವಾಗ ಅದನ್ನು ಹೇಗೆ ಮಾಡುವುದು ಎನ್ನುವ ವೀಡಿಯೋ ನೋಡಲು ಅವರಿಗೆ ಸುಲಭವಾಗುತ್ತದೆ.

English summary

Kitchen Decor For Bachelors

As more and more youth seem to go places to study or seek to start their career, there is a growing trend among the youth in setting up independent homes.
Story first published: Friday, December 13, 2013, 9:45 [IST]
X
Desktop Bottom Promotion