For Quick Alerts
ALLOW NOTIFICATIONS  
For Daily Alerts

ನೇಲ್ ಪಾಲಿಶ್‍ನ 12 ಸೌಂದರ್ಯೇತರ ಉಪಯೋಗಗಳು

By Super
|

ಉಗುರುಗಳು ನಮ್ಮ ಅಂದವನ್ನು ತೋರಿಸುವ ಒಂದು ಅಂಗ. ಇವುಗಳ ಅಂದದಲ್ಲಿ ನಮ್ಮ ಕೈಗಳ ಅಂದವು ಅಡಗಿರುತ್ತದೆ. ಅದಕ್ಕಾಗಿಯೇ ನೇಲ್ ಪಾಲಿಶನ್ನು ನಾವು ಬಳಸುವುದು. ಹಾಗೆಂದು ಈ ನೇಲ್ ಪಾಲಿಶ್ ಕೇವಲ ಉಗುರುಗಳ ಅಂದಕ್ಕೆ ಮಾತ್ರ ಸೀಮಿತವೆಂದು ತಿಳಿಯಬೇಡಿ. ಅದರಿಂದ ವಿವಿದೊದ್ದೇಶದ ಪ್ರಯೋಜನಗಳು ದೊರೆಯುತ್ತವೆ. ಇದನ್ನು ಬಳಕೆ ಮಾಡುವವರು ಇದರ ಗರಿಷ್ಠ ಪ್ರಯೋಜನಗಳನ್ನು ಪಡೆಯುತ್ತಾರೆ.

ನಿಮಗೆ ಅವುಗಳ ಮಾಹಿತಿ ಬೇಕೆಂದು ಅನಿಸುತ್ತಿದೆಯಲ್ಲವೇ? ಅದಕ್ಕಾಗಿ ನಾವು ನಿಮಗಾಗಿ ಆ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ ಓದಿ ಅರಿತುಕೊಳ್ಳಿ. ಹಳೆಯ ನೇಲ್ ಪಾಲಿಶ್ ಬಿಸಾಡುವ ಮೊದಲು ಅವುಗಳನ್ನು ಸದುಪಯೋಗ ಮಾಡಿಕೊಳ್ಳಿ.

1. ನಿಮ್ಮ ಬೀಗದ ಕೈಯನ್ನು ವರ್ಣಮಯಗೊಳಿಸಿ

1. ನಿಮ್ಮ ಬೀಗದ ಕೈಯನ್ನು ವರ್ಣಮಯಗೊಳಿಸಿ

ಯಾರ ಬಳಿ ತಾನೇ ಬೀಗದ ಕೈ ಇರುವುದಿಲ್ಲ? ನಿಮ್ಮ ಮನೆಯಲ್ಲಿ ಅದೇ ಸ್ಟೇಯಿನ್ ಲೆಸ್ ಸ್ಟೀಲ್ ಕೀಯನ್ನು ನೋಡಿ ನೋಡಿ ಬೇಸರವಾಗಿಲ್ಲವೆ? ಉತ್ತರ ಹೌದು ಆದಲ್ಲಿ, ನಿಮ್ಮ ಮನೆಯಲ್ಲಿನ ಬಣ್ಣ ಬಣ್ಣದ ನೇಲ್ ಪಾಲಿಶ್ ತೆಗೆದು ಕೀಗಳನ್ನು ವರ್ಣಮಯಗೊಳಿಸಿ.

2. ಮಸಾಲೆ ಪದಾರ್ಥಗಳನ್ನು ಗುರುತಿಸಲು

2. ಮಸಾಲೆ ಪದಾರ್ಥಗಳನ್ನು ಗುರುತಿಸಲು

ಸಾಸಿವೆ ಡಬ್ಬ, ಧನಿಯಾ ಡಬ್ಬ, ಮಸಾಲೆ, ಗರಂ ಮಸಾಲೆ, ಖಾರದ ಪುಡಿ ಯಾವುದು ಎಲ್ಲೆಲ್ಲಿದೆ? ಗೊಂದಲ ಏಕೆ, ಅವುಗಳನ್ನು ಸುಲಭವಾಗಿ ಗುರುತಿಸಲು ನೇಲ್ ಪಾಲಿಶಿನಿಂದ ಗುರುತು ಮಾಡಿ. ಗುರುತಿಸುವುದು ಸುಲಭ ಮಾಡಿಕೊಳ್ಳಿ.

3. ಪತ್ರವನ್ನು ಅಂಟಿಸಲು

3. ಪತ್ರವನ್ನು ಅಂಟಿಸಲು

ಒಂದು ಪ್ರಮುಖ ಪತ್ರವನ್ನು ಅಂಟಿಸಲು ಗ್ಲು ಸ್ಟಿಕ್ ಸಾಕೆ? ಒಮ್ಮೆ ನಿಮ್ಮ ಕ್ಲಿಯರ್ ನೇಲ್ ಪಾಲಿಶನ್ನು ಪತ್ರದ ಅಂಚಿಗೆ ಬಳಿಯಿರಿ. ಈಗ ನೋಡಿ ಅದು ಹೇಗೆ ಅಂಟಿಕೊಂಡಿರುತ್ತದೆಂದು!.

4. ಸೂಜಿಗೆ ದಾರ ಪೋಣಿಸಲು

4. ಸೂಜಿಗೆ ದಾರ ಪೋಣಿಸಲು

ಸೂಜಿ ದಾರಕ್ಕು ನೇಲ್ ಪಾಲಿಶಿಗು ಯಾವ ಸಂಬಂಧವೆಂದುಕೊಂಡಿರಾ? ಇನ್ನು ಮುಂದೆ ಸೂಜಿಗೆ ದಾರವನ್ನು ಪೋಣಿಸುವಾಗ, ದಾರವನ್ನು ನೇಲ್ ಪಾಲಿಶಿನಲ್ಲಿ ಅದ್ದಿ, ನಂತರ ಸೂಜಿಗೆ ಸೇರಿಸಿ. ನೋಡಿ ದಾರ ಎಷ್ಟು ಸಲೀಸಾಗಿ ಹೋಗುತ್ತದೆಂದು!

5. ನಿಮ್ಮ ಆಭರಣಗಳನ್ನು ಸುರಕ್ಷಿತವಾಗಿಡಲು

5. ನಿಮ್ಮ ಆಭರಣಗಳನ್ನು ಸುರಕ್ಷಿತವಾಗಿಡಲು

ಯಾರಿಗೆ ತಾನೇ ಆಭರಣಗಳು ಇಷ್ಟವಾಗುವುದಿಲ್ಲ. ಆದರೆ ಎಷ್ಟು ಜನ ಇದರ ಬಗ್ಗೆ ಜಾಗರೂಕತೆಯನ್ನು ತೆಗೆದುಕೊಳ್ಳುತ್ತಾರೆ ಹೇಳಿ ನೋಡೋಣ. ಒಮ್ಮೆಯಾದರು ಫ್ಯಾನ್ಸಿ ರಿಂಗ್ ಅಥವಾ ಚಂಕಿ ನೆಕ್ಲೇಸನ್ನು ಹಾಕಿಕೊಂಡಾಗ ನಿಮ್ಮ ತ್ವಚೆಯು ಏಕೆ ಹಸಿರು ಬಣ್ಣಕ್ಕೆ ಬಂದಿತು ಎಂದು ಗಮನಿಸಿದ್ದೀರಾ? ಈ ಸಮಸ್ಯೆಯನ್ನು ಇಂದೇ ಕೊನೆಗೊಳಿಸಿ. ನಿಮ್ಮ ಆಭರಣದ ಹಿಂಬದಿಗೆ ಅಂದರೆ ತ್ವಚೆಯ ಕಡೆ ಬರುವ ಭಾಗಕ್ಕೆ ಕ್ಲಿಯರ್ ಕೋಟ್ ನೇಲ್ ಪಾಲಿಶನ್ನು ಹಚ್ಚಿ. ಏಕೆಂದರೆ ಬಣ್ಣದ ನೇಲ್ ಪಾಲಿಶ್ ನಿಮ್ಮ ಬಟ್ಟೆಯ ಮೇಲೆ ಬಿದ್ದು ಅದನ್ನು ಹಾಳು ಮಾಡಬಹುದು ಅದಕ್ಕಾಗಿ. ಈ ಪರಿಹಾರವನ್ನು ನಿಮ್ಮ ಕಾಸ್ಟ್ಯೂಮ್ ಜ್ಯೂವೆಲ್ಲರಿಗೆ ಬೇಕಾದರು ಮಾಡಬಹುದು.

6. ಶೂ ಲೇಸ್‍ಗಳನ್ನು ಅಂಟಿಸಲು

6. ಶೂ ಲೇಸ್‍ಗಳನ್ನು ಅಂಟಿಸಲು

ನಿಮ್ಮ ಶೂ ಲೇಸ್‍ಗಳ ತುದಿಯು ತನ್ನ ಗಂಟನ್ನು ಬಿಟ್ಟು ಕೊಂಡು ಕಾಲಾನುಕ್ರಮದಲ್ಲಿ ಉಪಯೋಗಕ್ಕೆ ಬಾರದಂತಾಗುತ್ತದೆ. ಅದಕ್ಕಾಗಿ ಆ ಲೇಸ್ ಭಾಗವನ್ನು ಸುಟ್ಟು ಗಂಟು ಮಾಡಬಹುದು ಅಥವಾ ಅದರ ಮೇಲೆ ಒಂದು ಕೋಟ್ ನೇಲ್ ಪಾಲಿಶ್ ಹಚ್ಚಬಹುದು. ಅದಕ್ಕೆ ಸ್ವಲ್ಪ ಲುಕ್ ಕೊಡುವ ಸಲುವಾಗಿ ತುದಿಗೆ ಬಣ್ಣದ ನೇಲ್ ಪಾಲಿಶನ್ನು ಸಹ ಬಳಿಯಬಹುದು.

 7. ಸಡಿಲಗೊಂಡ ಸ್ಕ್ರೂಗಳನ್ನು ಬಿಗಿಗೊಳಿಸಲು

7. ಸಡಿಲಗೊಂಡ ಸ್ಕ್ರೂಗಳನ್ನು ಬಿಗಿಗೊಳಿಸಲು

ನಿಮ್ಮ ಟೂಲ್ ಬಾಕ್ಸಿನಲ್ಲಿರುವ ಸ್ಕ್ರೂಗಳು ಯಾವಾಗಲು ಲೂಸ್ ಆಗುತ್ತಿದೆಯೇ? ಬಿಡಿ, ಅದರ ಮೇಲೆ ಒಂದು ಕೋಟ್ ನೇಲ್ ಪಾಲಿಶ್ ಹಚ್ಚಿ, ಆ ಸ್ಕ್ರೂ ಬಿಗಿಯಾಗುವುದಲ್ಲದೆ, ಸಾಮಾನ್ಯವಾಗಿ ಲೂಸ್ ಆಗುವುದಿಲ್ಲ.

8. ನಿಮ್ಮ ಶೂಗಳ ಸೋಲ್‍ಗಳಿಗೆ ಬಣ್ಣ ಬಳಿಯಲು

8. ನಿಮ್ಮ ಶೂಗಳ ಸೋಲ್‍ಗಳಿಗೆ ಬಣ್ಣ ಬಳಿಯಲು

ನಿಮ್ಮ ಹಳೆಯ ಶೂಗಳ ಸೋಲ್‍ಗೆ ( ಹಟ್ಟೆ) ತಾಜಾತನವನ್ನು ಒದಗಿಸಲು ನಿಮ್ಮ ನೇಲ್ ಪಾಲಿಶನ್ನು ಬಳಸಬಹುದು. ಇದಕ್ಕೆ ನೀಲಿ ಮತ್ತು ನಿಯಾನ್ ಬಣ್ಣಗಳನ್ನು ಬಳಸಬೇಡಿ. ಬದಲಿಗೆ ಕೆಂಪು ಬಣ್ಣದ ನೇಲ್ ಪಾಲಿಶ್ ಬಳಸಿ.

9. ಮುದುಡಿದ ಬಟ್ಟೆ ಅರಳಲು

9. ಮುದುಡಿದ ಬಟ್ಟೆ ಅರಳಲು

ಒಮ್ಮೊಮ್ಮೆ ನಮ್ಮ ಬಟ್ಟೆಗಳು ಮರಕ್ಕೊ, ಪೀಠೋಪರಕರಣಕ್ಕೊ ಸಿಕ್ಕಿ ಎಳೆದಂತಾಗಿ ಮುದುರಿಕೊಳ್ಳುತ್ತವೆ. ಆಗ ಅವುಗಳ ಮೇಲೆ ಸ್ವಲ್ಪ ಪ್ರಮಾಣದ ಕ್ಲಿಯರ್ ನೇಲ್ ಪಾಲಿಶನ್ನು ಹಾಕಿ, ಇದರಿಂದ ನಿಮ್ಮ ದರ್ಜಿಯು ಅದನ್ನು ಸರಿ ಮಾಡುವವರಿಗು ನಿಮ್ಮ ಬಟ್ಟೆ ಉತ್ತಮ ಸ್ಥಿತಿಯಲ್ಲಿರುತ್ತದೆ.

10. ಹರಿಯುವುದನ್ನು ತಡೆಯಲು

10. ಹರಿಯುವುದನ್ನು ತಡೆಯಲು

ಮನೆಯಿಂದ ಹೊರಟ ಕೂಡಲೆ ನಿಮ್ಮ ಲೆಗ್ಗಿಂಗ್‍ನಲ್ಲಿ ಸಣ್ಣ ಸಣ್ಣ ರಂಧ್ರಗಳು ಅಥವಾ ಹರಿದು ಹೋದ ಭಾಗವನ್ನು ಗಮನಿಸಿದಿರಾ? ಅಯ್ಯೋ ಹೀಗಾ ಏನು ಮಾಡುವುದು? ಎಂದು ಯೋಚಿಸಬೇಡಿ. ನಿಮ್ಮ ಬ್ಯಾಗ್‍ನಿಂದ ನೇಲ್ ಪಾಲಿಶ್ ತೆಗೆಯಿರಿ. ಆ ರಂಧ್ರಗಳ ಮೇಲೆ ಸ್ವಲ್ಪ ಮಟ್ಟಿಗೆ ಲೇಪಿಸಿ. ಇದು ಆ ರಂಧ್ರಗಳು ಮತ್ತಷ್ಟು ದೊಡ್ಡದಾಗುವುದನ್ನು ತಡೆಯುತ್ತವೆ.

11. ಮಲಿನಗೊಳ್ಳುವುದನ್ನು ತಡೆಯಲು

11. ಮಲಿನಗೊಳ್ಳುವುದನ್ನು ತಡೆಯಲು

ನಿಮ್ಮ ಬೆಲ್ಟಿನ್ ನ ಬಕಲ್ ಮಲಿನಗೊಂಡು ಅಸಹ್ಯಗೊಳ್ಳುತ್ತಿದೆಯೇ, ಅದಕ್ಕಾಗಿ ಅದಕ್ಕೆ ಒಂದು ಕೋಟ್ ನೇಲ್ ಪಾಲಿಶ್ ಹಚ್ಚಿ ಸಾಕು.

12. ಬಟನ್‍ಗಳನ್ನು ಕಾಪಾಡಲು

12. ಬಟನ್‍ಗಳನ್ನು ಕಾಪಾಡಲು

ನಿಮ್ಮ ಬ್ಲೌಸ್ ನ ಗುಂಡಿಯು ಸರಿಯಾದ ಸಮಯದಲ್ಲಿ ಹಠಾತ್ ಆಗಿ ಹೊರಬಂದರೆ ನಿಮಗೆಷ್ಟು ನಾಚಿಕೆ ಹಾಗು ಸಂಕೋಚವಾಗುವುದಿಲ್ಲ ಹೇಳಿ. ಅದಕ್ಕಾಗಿ ಅವಕ್ಕೆ ಒಂದು ಕೋಟ್ ನೇಲ್ ಪಾಲಿಶ್ ಹಾಕಿ. ನಿಮ್ಮ ಬ್ಲೌಸ್‍ನ ಬಟನ್ ಸುರಕ್ಷಿತವಾಗಿರುತ್ತದೆ.

English summary

12 Non-Beauty Uses For Nail Polish

They are commonly applied to beautify your talons, but nail varnish can serve other purposes as well. Take a look...
 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more