For Quick Alerts
ALLOW NOTIFICATIONS  
For Daily Alerts

ಜಿಕಾ ವೈರಸ್: ಹರಡುವ ವಿಧಾನ, ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?

|

ಕೊರೊನಾ ಸಾಂಕ್ರಾಮಿಕ ಆತಂಕದ ನಡುವೆ ಈಗ ಜಿಕಾ ವೈರಸ್‌ ಭೀತಿ ಶುರುವಾಗಿದೆ. ಕೇರಳದಲ್ಲಿ 24 ವರ್ಷದ ಗರ್ಭಿಣಿಯಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ.

ಭಾರತದಲ್ಲಿ ಜಿಕಾ ವೈರಸ್ ಪತ್ತೆಯಾಗುತ್ತಿರುವುದು ಇದೇ ಮೊದಲಲ್ಲ, 2018ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌ನಲ್ಲಿ ಜಿಕಾ ವೈರಸ್‌ ಪತ್ತೆಯಾಗಿತ್ತು. 3 ರಾಜ್ಯಗಳಲ್ಲಿ 280ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿತ್ತು, ಎರಡು ಸಾವು ಕೂಡ ಸಂಭವಿಸಿತ್ತು.

ಜಿಕಾ ವೈರಸ್ ಎಂದರೇನು? ಮೊದಲಿಗೆ ಎಲ್ಲಿ ಪತ್ತೆಯಾಯಿತು, ಇದರ ಲಕ್ಷಣಗಳೇನು, ಯಾರಿಗೆ ಅಪಾಯಕಾರಿ ಎಂದು ನೋಡೋಣ ಬನ್ನಿ:

ಜಿಕಾ ವೈರಸ್ ಎಂದರೇನು? ಹರಡುವುದು ಹೇಗೆ

ಜಿಕಾ ವೈರಸ್ ಎಂದರೇನು? ಹರಡುವುದು ಹೇಗೆ

ಜಿಕಾ ವೈರಸ್‌ ಸೊಳ್ಳೆಗಳಿಂದ ಹರಡುವ ರೋಗವಾಗಿದೆ. ಈಡಿಸ್, ಈಜಿಪ್ಟಿ, ಪ್ಲೇವಿ ವೈರಸ್ ಇರುವ ಸೊಳ್ಳೆ ಮನುಷ್ಯನನ್ನು ಕಚ್ಚಿದಾಗ ಈ ರೋಗ ಹರಡುವುದು. ಹಗಲಿನಲ್ಲಿ ಕಚ್ಚುವ ಸೊಳ್ಳೆ ಈ ರೋಗವನ್ನು ಹರಡುತ್ತದೆ.

ಇನ್ನು ಜಿಕಾ ವೈರಸ್‌ ಸೋಂಕು ತಗುಲಿರುವ ವ್ಯಕ್ತಿಯ ರಕ್ತ ಪಡೆದರೆ, ಅ ಸುರಕ್ಷತೆ ಲೈಂಗಿಕ ಕ್ರಿಯೆ ನಡೆಸಿದಾಗ ಅಥವಾ ಸೋಂಕಿತರ ದೇಹದ ದ್ರವ ತಗುಲಿದರೂ ಹರಡುವುದು. ಗರ್ಭಿಣಿಗೆ ತಗುಲಿದರೆ ಜನಿಸುವ ಮಗುವಿಗೂ ಈ ವೈರಸ್‌ ತಗುಲುವುದು.

ಗರ್ಭಿಣಿಯರಿಗೆ ಜಿಕಾ ವೈರಸ್ ತಗುಲಿದರೆ ಉಂಟಾಗುವ ಅಪಾಯಗಳು

ಗರ್ಭಿಣಿಯರಿಗೆ ಜಿಕಾ ವೈರಸ್ ತಗುಲಿದರೆ ಉಂಟಾಗುವ ಅಪಾಯಗಳು

* ಅವಧಿಪೂರ್ವ ಜನನ

* ಭ್ರೂಣದ ಮೆದುಳಿಗೆ ಹಾನಿಯುಂಟಾಗುವುದು

* ಮೈಕ್ರೋಸೆಫಾಲಿ ಎಂಬ ಸಮಸ್ಯೆ ಉಂಟಾಗುವುದು

* ಜನಿಸಿದ ಮಗುವಿನಲ್ಲೂ ಜಿಕಾ ವೈರಸ್‌ ಲಕ್ಷಣಗಳು ಕಂಡು ಬರುವುದು

ಜಿಕಾ ವೈರಸ್ ಲಕ್ಷಣಗಳು

ಜಿಕಾ ವೈರಸ್ ಲಕ್ಷಣಗಳು

* ಜ್ವರ

* ಚರ್ಮದಲ್ಲಿ ಗುಳ್ಳೆಗಳು

* ಕಣ್ಣುಗಳು ಕೆಂಪಾಗುವುದು

* ಸ್ನಾಯು ಮತ್ತು ಕೀಲುನೋವು

* ತಲೆನೋವು

* ಸುಸ್ತು

* ಹೊಟ್ಟೆ ನೋವು

ಲಸಿಕೆ ಲಭ್ಯವಿದೆಯೇ?

ಲಸಿಕೆ ಲಭ್ಯವಿದೆಯೇ?

ಜಿಕಾ ವೈರಸ್‌ಗೆ ಯಾವುದೇ ಲಸಿಕೆಯಿಲ್ಲ.

ಚಿಕಿತ್ಸೆ

ಜಿಕಾವೈರಸ್‌ ತಗುಲಿದಾಗ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ರೋಗ ತಗುಲಿದವರು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು, ನಿರ್ಜಲೀಕರಣ ತಡೆಗಟ್ಟಲು ದ್ರವಾಹಾರ ಸೇವಿಸಬೇಕು. ವೈದ್ಯರು ಸೂಚಿಸಿದ ಚಿಕಿತ್ಸೆ ಪಡೆಯಿರಿ.

ಜಿಕಾ ವೈರಸ್‌ ತಡೆಗಟ್ಟುವುದು ಹೇಗೆ?

ಜಿಕಾ ವೈರಸ್‌ ತಡೆಗಟ್ಟುವುದು ಹೇಗೆ?

* ಜಿಕ ವೈರಸ್‌ ಪತ್ತೆಯಾದ ಕಡೆ ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಿ, ಅಂದ್ರೆ ತುಂಬು ತೋಳಿನ ಬಟ್ಟೆ ಧರಿಸಿ.

* ಮನೆಯ ಸುತ್ತ ನೀರು ನಿಲ್ಲಲು ಬಿಡಬೇಡಿ, ಬಾಗಿಲು, ಕಿಟಲಿಗಳಿಗೆ ಸೊಳ್ಳೆ ಪರದೆ ಹಾಕಿ. ಬೆಡ್‌ಗೆ ಸೊಳ್ಳೆ ಪರದೆ ಬಳಸಿ.

* ಸೊಳ್ಳೆ ನಿವಾರಕ ಔಷಧಿಗಳನ್ನು ಮನೆಯ ಸುತ್ತ ಸಿಂಪಡಿಸಿ

* ಮಕ್ಕಳು ಹಾಗೂ ಗರ್ಭಿಣಿಯರು ಸೊಳ್ಳೆಗಳು ಕಚ್ಚುವುದನ್ನು ತಡೆಗಟ್ಟಲು ತುಂಬು ತೋಳಿನ ಸಡಿಲವಾದ ಬಟ್ಟೆ ಧರಿಸಿ.

ಜಿಕಾ ವೈರಸ್‌ ಪ್ರದೇಶದಲ್ಲಿದ್ದರೆ ಗರ್ಭಧಾರಣೆ ಮುಂದೂಡಿ

ಜಿಕಾ ವೈರಸ್‌ ಪ್ರದೇಶದಲ್ಲಿದ್ದರೆ ಗರ್ಭಧಾರಣೆ ಮುಂದೂಡಿ

ನೀವಿರುವ ಪ್ರದೇಶದಲ್ಲಿ ಜಿಕಾ ವೈರಸ್‌ ಪ್ರಕರಣಗಳು ಪತ್ತೆಯಾಗಿದ್ದರೆ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಸ್ವಲ್ಪ ಸಮಯ ಮುಂದೂಡುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇನ್ನು ಗರ್ಭಿಣಿಗಳಿದ್ದರೆ ಸೊಳ್ಳೆ ಕಚ್ಚದಂತೆ ಎಲ್ಲಾ ಬಗೆಯ ಮುಂಜಾಗ್ರತೆ ವಹಿಸಿ.

English summary

Zika Virus: Symptoms, Treatment And How To Prevent in Kannada

zika virus: symptoms, treatment and how to prevent, read on...
X
Desktop Bottom Promotion