For Quick Alerts
ALLOW NOTIFICATIONS  
For Daily Alerts

ವಿಶ್ವ ರೇಬಿಸ್‌ ದಿನ: ರೇಬಿಸ್‌ ಬಂದರೆ ಗುಣವಾಗುವುದೇ? ರೇಬಿಸ್‌ ಕಾಯಿಲೆ ತಡೆಗಟ್ಟುವುದು ಹೇಗೆ?

|

ರೇಬಿಸ್ ಮಾರಾಣಾಂತಿಕ ಕಾಯಿಲೆ ರೇಬಿಸ್‌ ಇರುವ ಪ್ರಾಣಿ ಕಚ್ಚಿದಾಗ ಉಂಟಾಗುವುದು. ರೇಬಿಸ್‌ ವೈರಸ್‌ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುವುದು. ರೇಬೀಸ್‌ ಕಾಯಿಲೆ ಮನೆಯಲ್ಲಿರುವ ನಾಯಿ ಬೆಕ್ಕು, ಮೊಲಗಳಿಂದಲೂ ಹರಡಬಹುದು.

ರೇಬಿಸ್‌ ಇರುವ ಪ್ರಾಣಿ ಕಚ್ಚಿದಾಗ ಅಥವಾ ಪರಚಿದಾಗ ರೇಬಿಸ್‌ ವೈರಸ್‌ ಮನುಷ್ಯನ ದೇಹವನ್ನು ಸೇರಿ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡುತ್ತದೆ. ಸಿಡಿಸಿ ಪ್ರಕಾರ ವಿಶ್ವದಲ್ಲಿ ಪ್ರತೀವರ್ಷ ಸುಮಾರು 59,000 ಜನರು ರೇಬಿಸ್‌ನಿಂದಾಗಿ ಸಾವನ್ನಪ್ಪುತ್ತಿದ್ದಾರೆ.

ರೇಬಿಸ್ ರೋಗ ಲಕ್ಷಣಗಳೇನು?

ರೇಬಿಸ್ ರೋಗ ಲಕ್ಷಣಗಳೇನು?

ರೇಬಿಸ್‌ ವೈರಸ್‌ ತಗುಲಿರುವ ಪ್ರಾಣಿ ಕಚ್ಚಿದಾಗ ಅಥವಾ ಪರಚಿದಾಗ ಆ ವೈರಸ್‌ ಮನುಷ್ಯನ ದೇಹವನ್ನು ಹೊಕ್ಕುತ್ತದೆ. ಮನುಷ್ಯನ ದೇಹ ಹೊಕ್ಕಿದ ಮೇಲೆ ರೋಗ ಲಕ್ಷಣಗಳು ಕಂಡು ಬರಲು 3 ವಾರದಿಂದ 3 ತಿಂಗಳು ಸಮಯ ತೆಗೆದುಕೊಳ್ಳಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ರೋಗ ಲಕ್ಷಣಗಳು 1 ವಾರದಿಂದ ಒಂದು ವರ್ಷದೊಳಗೆ ಯಾವಾಗ ಬೇಕಾದರೂ ಕಂಡು ಬರಬಹುದು.

ರೇಬಿಸ್‌ ಪ್ರಾರಂಭದ ಲಕ್ಷಣಗಳೆಂದರೆ ಜ್ವರ, ಸ್ನಾಯುಗಳು ದುರ್ಬಲವಾಗುವುದು, ಕಚ್ಚಿರುವ ಜಾಗದಲ್ಲಿ ನೋವು ಅಥವಾ ಉರಿ ಕಂಡು ಬರುವುದು. ವೈರಸ್‌ ಮೆದುಳಿನ ನರದ ಮೇಲೆ ದಾಳಿ ಮಾಡಿದಾಗ ಎರಡು ಬಗೆಯೆ ರೇಬೀಸ್‌ ಕಂಡು ಬರುವುದು.

1. ಫ್ಯೂರಿಯಸ್‌ ರೇಬಿಸ್ (ಗಂಭೀರ ಸ್ವರೂಪದ ರೇಬಿಸ್)

2. ಪ್ಯಾರಾಲಿಟಿಕ್ ರೇಬಿಸ್

ಗಂಭೀರ ಸ್ವರೂಪದ ರೇಬಿಸ್‌ ಲಕ್ಷಣಗಳು

* ನಿದ್ರಾಹೀನತೆ

* ಒತ್ತಡ

* ಹಿಂಜರಿಕೆ

* ಗೊಂದಲ

* ಒಂಥರಾ ಭ್ರಮೆ

* ಬಾಯಲ್ಲಿ ನೊರೆ

* ನುಂಗಲು ಕಷ್ಟವಾಗುವುದು

* ನೀರನ್ನು ಕಂಡರೆ ಭಯ

ಪ್ಯಾರಾಲಿಟಿಕ್‌ ರೇಬಿಸ್

ಪ್ಯಾರಾಲಿಟಿಕ್‌ ರೇಬಿಸ್‌ನಲ್ಲಿ ಪರ್ಶ್ವವಾಯು ಉಂಟಾಗುವುದು, ವ್ಯಕ್ತಿ ಕೋಮಾಗೆ ಜಾರಿ ಸಾವು ಕೂಡ ಸಂಭವಿಸುವುದು.

ರೇಬಿಸ್‌ ಮನುಷ್ಯರಿಂದ-ಮನುಷ್ಯರಿಗೆ ಹರಡುವುದೇ?

ರೇಬಿಸ್‌ ಮನುಷ್ಯರಿಂದ-ಮನುಷ್ಯರಿಗೆ ಹರಡುವುದೇ?

ರೇಬಿಸ್‌ ಮನುಷ್ಯರಿಂದ-ಮನುಷ್ಯರಿಗೆ ಹರಡುವುದು ತುಂಬಾನೇ ಅಪರೂಪ, ರೇಬಿಸ್‌ ಹೆಚ್ಚಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ರೇಬೀಸ್‌ ವೈರಸ್‌ ಇರುವ ಪ್ರಾಣಿಗಳು ಮನುಷ್ಯನ ತಲೆ, ಕುತ್ತಿಗೆ ಭಾಗಕ್ಕೆ ಗಾಯ ಮಾಡಿದಾಗ ರೋಗ ಲಕ್ಷಣಗಳು ಬಹುಬೇಗನೆ ಕಾಣಿಸಿಕೊಳ್ಳುವುದು, ಆದ್ದರಿಂದ ಕುತ್ತಿಗೆಯ ಮೇಲ್ಭಾಗಕ್ಕೆ ಕಚ್ಚಿದಾಗ ಕೂಡಲೇ ಚಿಕಿತ್ಸೆ ಪಡೆಯಬೇಕು.

ಯಾವೆಲ್ಲಾ ಪ್ರಾಣಿಗಳಿಂದ ರೇಬಿಸ್‌ ಹರಡುವುದು

* ನಾಯಿ

* ಬಾವವಲಿ

* ಬೆಕ್ಕು

* ಹಸು

* ಆಡು

* ಕುದುರೆ

* ಮೊಲ

* ನರಿ

* ಮಂಗ

ಯಾರಿಗೆ ರೇಬಿಸ್‌ ಅಪಾಯ ಹೆಚ್ಚು?

ಯಾರಿಗೆ ರೇಬಿಸ್‌ ಅಪಾಯ ಹೆಚ್ಚು?

* ಬಾವಲಿ ಹೆಚ್ಚಾಗಿರುವ ಇರುವ ಕಡೆ ವಾಸಿಸುತ್ತಿರುವವರಲ್ಲಿ

* ಪ್ರಾಣಿಗಳಿಗೆ ಲಸಿಕೆ ಅಥವಾ ಚಿಕಿತ್ಸೆ ನೀಡದಿದ್ದ ಕಡೆ ಇರುವುದು

* ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕಡೆ ಪ್ರಯಾಣ

* ಕಾಡಿನಲ್ಲಿ ಕ್ಯಾಂಪ್‌ ಹಚ್ಚುವುದು

* 15 ವರ್ಷದ ಕೆಳಗಿನವರಲ್ಲಿ

ರೇಬಿಸ್‌ ಕಾಯಿಲೆ ಪತ್ತೆ ಹೇಗೆ?

ರೇಬಿಸ್‌ ಕಾಯಿಲೆ ಪತ್ತೆ ಹೇಗೆ?

ರೋಗಿ ರಕ್ತ, ಎಂಜಲು ತೆಗೆದು ಬಯೋಸ್ಪೈ ಮಾಡಿ ರೇಬಿಸ್‌ ರೋಗ ಇದೆಯೇ, ಇಲ್ಲವೇ ಎಂದು ಪತ್ತೆ ಹಚ್ಚಲಾಗುವುದು.

ರೇಬಿಸ್‌ ರೋಗವನ್ನು ಗುಣಪಡಿಸಬಹುದೇ?

ಒಮ್ಮೆ ವ್ಯಕ್ತಿಗೆ ರೇಬಿಸ್ ಬಂದರೆ ಗುಣಪಡಿಸುವುದು ತುಂಬಾನೇ ಕಷ್ಟ. ರೇಬಿಸ್‌ ವೈರಸ್‌ ತಗುಲಿದ ತಕ್ಷಣವೇ ಸರಣಿ ಚುಚ್ಚುಮದ್ದು ತೆಗೆದುಕೊಳ್ಳಬೇಕು. ರೇಬಿಸ್‌ ಇರುವ ಪ್ರಾಣಿ ಕಚ್ಚಿದ ತಕ್ಷಣವೇ ರೇಬಿಸ್‌ ಆ್ಯಂಟಿಬಾಡೀಸ್‌ ನೀಡುವುದರಿಂದ ಈ ವೈರಸ್‌ ದಾಳಿಯನ್ನು ತಡೆಗಟ್ಟಬಹುದು.

ಪ್ರಾಣಿಗಳು ಕಚ್ಚಿದಾಗ ಅವುಗಳಿಗೆ ರೇಬಿಸ್ ಇದೆಯೇ ಎಂದು ಪರೀಕ್ಷೆ ಮಾಡಿಸುವುದು ಒಳ್ಳೆಯದು, ಇದರಿಂದ ತುಂಬಾ ಚುಚ್ಚುಮದ್ದು ಪಡೆಯುವುದು ತಡೆಗಟ್ಟಬಹುದು, ಒಂದು ವೇಳೆ ಕಚ್ಚಿದ ಪ್ರಾಣಿ ಸಿಗದೇ ಹೋದರೆ ಬೇಗನೆ ಚುಚ್ಚು ಮದ್ದು ಪಡೆಯುವುದು ಒಳ್ಳೆಯದು.

ರೇಬಿಸ್‌ ತಡೆಗಟ್ಟುವುದು ಹೇಗೆ?

ರೇಬಿಸ್‌ ತಡೆಗಟ್ಟುವುದು ಹೇಗೆ?

* ಬೇರೆ ದೇಶಗಳಿಗೆ ಪ್ರಯಾಣಿಸುವ ಮುನ್ನ ರೇಬಿಸ್ ತಡೆಗಟ್ಟುವ ಚುಚ್ಚುಮದ್ದು ಪಡೆಯಿರಿ

* ನಿಮ್ಮ ಸಾಕು ಪ್ರಾಣಿಗಳಿಗೆ ಚುಚ್ಚುಮದ್ದು ಹಾಕಿಸಿ

* ನಿಮ್ಮ ಸಾಕುಪ್ರಾಣಿಗಳನ್ನು ಹೊರಡಗೆ ತಿರುಗಾಡಲು ಬಿಡಬೇಡಿ

* ಕಾಡುಪ್ರಾಣಿಗಳ ಸಂಪರ್ಕದಿಂದ ದೂರವಿರಿ

* ನೀವಿರುವ ಕಡೆ ಬಾವಲಿಗಳು ಇರದಂತೆ ನೋಡಿಕೊಳ್ಳಿ.

English summary

World Rabies Day: Rabies Symptoms, Cure, Vaccine, Prevention in Kannada

World Rabies Day: What are the symptoms, can we cure rabies, how we can prevent this disease, read on.....
Story first published: Wednesday, September 28, 2022, 12:10 [IST]
X
Desktop Bottom Promotion