For Quick Alerts
ALLOW NOTIFICATIONS  
For Daily Alerts

ವಿಶ್ವ ಜನಸಂಖ್ಯಾ ದಿನ 2022: ಚೀನಾವನ್ನು ಮೀರಿಸಲಿದೆ ಭಾರತ!

|

ಜುಲೈ 11 ವಿಶ್ವ ಜನಸಂಖ್ಯಾ ದಿನ. ಜನಸಂಖ್ಯಾ ಹೆಚ್ಚಳದಿಂದಾಗಿ ಉಂಟಾಗುತ್ತಿರುವ ಜಾಗತಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

world Population Day

ಲಿಂಗ ಅಸಮಾನತೆ, ಲೈಂಗಿಕ ಶಿಕ್ಷಣದ ಕೊರತೆ, ಆರೋಗ್ಯಕ್ಕಾಗಿ ಹಕ್ಕು, ಹುಟ್ಟಲಿರುವ ಮಗುವಿನ ಲಿಂಗ ಪತ್ತೆ, ಗರ್ಭನಿರೋಧಕ ವಸ್ತುಗಳ ಬಳಕೆ ಇವುಗಳ ಕುರಿತು ಕೂಡ ಈ ದಿನ ಬೆಳಕು ಚೆಲ್ಲಲಾಗುವುದು.

ವಿಶ್ವ ಜನಸಂಖ್ಯಾ ದಿನ ಆಚರಣೆಯ ಇತಿಹಾಸ

ವಿಶ್ವ ಜನಸಂಖ್ಯಾ ದಿನ ಆಚರಣೆಯ ಇತಿಹಾಸ

ಹೆಚ್ಚುತ್ತಿರುವ ಜನಸಂಖ್ಯಾ ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಂಸ್ಥೆ ಈ ದಿನವನ್ನು ಆಚರಿಸಲಾಯಿತು.

1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು. ಜನಸಂಖ್ಯೆ ಈ ರೀತಿ ಹೆಚ್ಚುತ್ತಾ ಹೋದರೆ ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ 'ವಿಶ್ವಸಂಸ್ಥೆ ಅಭಿವೃದ್ಧಿ ಕಾರ‍್ಯಕ್ರಮ (ಯುಎನ್‌ಡಿಪಿ ) ಮಂಡಳಿ'ಯ ಮೂಲಕ 1989 ಜುಲೈ 11ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಿತು. ಈಗ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸುತ್ತಾ ಜನರಲ್ಲಿ ಜನಸಂಖ್ಯಾ ಸ್ಫೋಟದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.

ವಿಶ್ವ ಜನಸಂಖ್ಯಾ ಸ್ಫೋಟ 2022ರ ಥೀಮ್

ವಿಶ್ವ ಜನಸಂಖ್ಯಾ ಸ್ಫೋಟ 2022ರ ಥೀಮ್

ವಿಶ್ವ ಜನಸಂಖ್ಯಾ ಸ್ಫೋಟ 2022ರ ಥೀಮ್ ಅಂದರೆ '8 ಬಿಲಿಯನ್‌ ಜನರಿರುವ ಈ ವಿಶ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಹಾಗೂ ನಿರ್ಧಾರದ ಗ್ಯಾರಂಟಿ ನೀಡುವುದು' ಎಂಬುವುದಾಗಿದೆ.

 ಆಚರಣೆಯ ಪ್ರಯೋಜನಗಳು

ಆಚರಣೆಯ ಪ್ರಯೋಜನಗಳು

  • ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಸಂತಾನೋತ್ಪತ್ತಿ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು.
  • ಲಿಂಗ ಅಸಮಾನತೆ ಹೋಗಲಾಡಿಸುವುದು
  • ಜನರಿಗೆ ಆರೋಗ್ಯ ಸೌಲಭ್ಯ ದೊರೆಯಲು ಅನೇಕ ಯೋಜನೆಗಳನ್ನು ರೂಪಿಸುವುದು
  • ಲೈಂಗಿಕ ಶಿಕ್ಷಣ ನೀಡುವ ಮೂಲಕ ಸಂತಾನೋತ್ಪತ್ತಿ ಹಾಗೂ ಲೈಂಗಿಕ ಕಾಯಿಲೆ ಕುರಿತು ಅರಿವು ಮೂಡಿಸುವುದು.
  • ಲೈಂಗಿಕವಾಗಿ ಹರಡುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು
  • ಹೆಣ್ಣು ಮಗುವಿನ ಆರೋಗ್ಯ ಹಾಗೂ ಆಕೆಯ ಹಕ್ಕುಗಳನ್ನು ರಕ್ಷಿಸುವುದು.
  • ಚೀನಾವನ್ನು ಮೀರಿಸಲಿದೆ ಭಾರತ

    ಚೀನಾವನ್ನು ಮೀರಿಸಲಿದೆ ಭಾರತ

    ಇದೀಗ ಭಾರತ ಜನಸಂಖ್ಯೆಯಲ್ಲಿ ನಂ. 2 ಸ್ಥಾನದಲ್ಲಿದ್ದು, ನಂ. 1 ಸ್ಥಾನದಲ್ಲಿ ಚೀನಾ ದೇಶವಿದೆ. ಆದರೆ ಭಾರತದಲ್ಲಿ ಜನಸಂಖ್ಯಾ ನಿಯಂತ್ರಿಸದೆ ಹೋದರೆ ಭಾರತವು 2027ರ ವೇಳೆಗೆ ಜನಸಂಖ್ಯೆಯಲ್ಲಿ ವಿಶ್ವದಲ್ಲಿ ನಂ.1 ಸ್ಥಾನಕ್ಕೆ ಏರಲಿದೆ. ಜೊತೆಗೆ 2019ರಿಂದ 2050ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ 2100ನೇ ಇಸವಿಗೆ ವಿಶ್ವದ ಜನಸಂಖ್ಯೆ 1100 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ತಿಳಿಸಿದೆ.

    2050ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಆಗಲಿರುವ ಒಟ್ಟು ಏರಿಕೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಪಾಲು ಕೇವಲ 9 ದೇಶಗಳಲ್ಲಿ ಇರಲಿದೆ. ಅವುಗಳೆಂದರೆ ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೊ, ಇಥಿಯೋಪಿಯಾ, ತಾಂಜೇನಿಯಾ, ಇಂಡೋನೇಷ್ಯಾ, ಈಜಿಪ್ತ್‌ ಮತ್ತು ಅಮೆರಿಕ ಎಂದು ವಿಶ್ವ ಸಂಸ್ಥೆ ವರದಿ ಹೇಳಿದೆ.

English summary

World Population Day 2022: Know About The History, Theme And Significance Of This Day

Every year 11 July is observed as World Population Day in order to raise awareness about the growing global population and the issues associated with it.
X
Desktop Bottom Promotion