Just In
- 14 min ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 2 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 4 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 6 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಉಡುಪಿಯಲ್ಲಿ ಶಿಕ್ಷಕಿ ಮೇಲೆ ಹಲ್ಲೆ; "zero tolerance" ಬಗ್ಗೆ ಹೇಳಿದ ಸುರೇಶ್ ಕುಮಾರ್
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Finance
ಡಿಸೆಂಬರ್ 14ರ ಚಿನ್ನ ಬೆಳ್ಳಿ ದರ ಹೀಗಿದೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Automobiles
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- Sports
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನಕ್ಕೆ ಕಣಕ್ಕಿಳಿಯಲಿರುವ ಭಾರತ ಪ್ಲೇಯಿಂಗ್ XI
- Technology
13 ಇಂಚಿನ ಎಚ್ಪಿ ಸ್ಪೆಕ್ಟರ್ x360 ಕನ್ವರ್ಟಿಬಲ್ ಲ್ಯಾಪ್ಟಾಪ್ ಲಾಂಚ್!
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ವಿಶ್ವ ನ್ಯುಮೋನಿಯಾ ದಿನಾಚರಣೆ 2019: ಮಹತ್ವ, ರೋಗ ಲಕ್ಷಣ, ಕಾರಣ ಹಾಗೂ ಚಿಕಿತ್ಸೆ
ವೈರಸ್ ಹಾಗೂ ಸೊಳ್ಳೆಗಳಿಂದ ಹರಡುವಂತಹ ಜ್ವರಗಳು ಹಲವಾರು. ಇವುಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಇದ್ದರೆ ಇದು ಪ್ರಾಣಕ್ಕೇ ಹಾನಿ ಉಂಟು ಮಾಡಬಹುದು. ಇಂತಹ ಪ್ರಾಣಾಂತಿಕವಾಗಿರುವಂತಹ ಜ್ವರಗಳಲ್ಲಿ ಒಂದಾಗಿರುವ ನ್ಯುಮೋನಿಯಾವು ಹೆಚ್ಚಾಗಿ ಸಣ್ಣ ಮಕ್ಕಳ ಪ್ರಾಣಕ್ಕೆರವಾಗುವುದು. ಐದರ ಕೆಳಹರೆಯದ ಮಕ್ಕಳ ಪ್ರಾಣ ಕಿತ್ತುಕೊಳ್ಳುವಂತಹ ವಿಶ್ವದ ಮಾರಕ ಸೋಂಕು ಇದಾಗಿದೆ.
ನ್ಯುಮೋನಿಯಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2009ರಿಂದ ಪ್ರತಿ ವರ್ಷ ನವೆಂಬರ್ 12ರಂದು ವಿಶ್ವ ನ್ಯುಮೋನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಕಾಯಿಲೆಯಿಂದ ರಕ್ಷಣೆ, ಬರದಂತೆ ತಡೆಯುವುದು ಮತ್ತು ನ್ಯುಮೋನಿಯಾಗೆ ಚಿಕಿತ್ಸೆ ನೀಡುವ ಬಗ್ಗೆ ಜಗ್ಗಗಾಗೃತಿ ಮೂಡಿಸಲು ಈ ದಿನ ಮಹತ್ವದ್ದಾಗಿದೆ. ಈ ದಿನದಂದು ದೇಣಿಗೆ ಸಂಗ್ರಹ, ನ್ಯುಮೋನಿಯಾ ವಿರುದ್ಧ ತೆಗೆದುಕೊಳ್ಳಬಹುದಾದ ಕ್ರಮಗಳು ಮತ್ತು ಮಕ್ಕಳಿಗೆ ಮಾರಣಾಂತಿಕವಾಗಿರುವಂತಹ ಇತರ ಕೆಲವು ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಪ್ರತೀ ವರ್ಷವು ನ್ಯುಮೋನಿಯಾ ದಿನಾಚರಣೆಗೆ ತನ್ನದೇ ಆದ ಧ್ಯೇಯ ವಾಕ್ಯವನ್ನಿಡಲಾಗುತ್ತದೆ.
ALSO READ: ಸ್ತ್ರೀರೋಗ ತಜ್ಞರು ಎಂದೂ ತಿಳಿಸದ ರೋಗಿಗಳ ವಿಚಿತ್ರ ಅಭ್ಯಾಸಗಳು

ಹಿನ್ನೆಲೆ
2009ರಲ್ಲಿ ಮೊದಲ ಬಾರಿಗೆ ವಿಶ್ವ ನ್ಯುಮೋನಿಯಾ ದಿನವನ್ನು ಆಚರಿಸಲಾಯಿತು. ವಿಶ್ವದೆಲ್ಲೆಡೆಯ ಸುಮಾರು 100ಕ್ಕೂ ಅಧಿಕ ಸಂಸ್ಥೆಗಳು ಮಕ್ಕಳ ನ್ಯುಮೋನಿಯಾ ವಿರುದ್ಧ ಕೈಜೋಡಿಸಿದವು. ಪ್ರಸಕ್ತ ವಿಶ್ವಮಟ್ಟದಲ್ಲಿ ಸುಮಾರು 140ಕ್ಕೂ ಅಧಿಕ ಸರಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಫೌಂಡೇಶನ್ ಗಳು ಇದರಲ್ಲಿ ಕೈಜೋಡಿಸಿವೆ.

ಈ ದಿನದ ಮಹತ್ವ
ಐದರ ಕಳೆಹರೆಯದ ಮಕ್ಕಳಲ್ಲಿ ಅತೀ ಹೆಚ್ಚು ಸಾವಿಗೆ ಕಾರಣವಾಗುವಂತಹ ಸೋಂಕು ಎಂದರೆ ಅದು ನ್ಯುಮೋನಿಯಾ. ಇದಕ್ಕೆ ಔಷಧಿ ಮತ್ತು ಇತರ ತಡೆ ವ್ಯವಸ್ಥೆಯು ಇರುವ ಕಾರಣದಿಂದಾಗಿ ಈ ಮಾರಣಾಂತಿಕ ಕಾಯಿಲೆಯ ಪರಿಣಾಮವು ಕಡಿಮೆ ಆಗಿದೆ. ಆದರೆ ಸಂಪೂರ್ಣವಾಗಿ ಇದನ್ನು ನಿರ್ಮೂಲನೆ ಮಾಡಲು ಇನ್ನಷ್ಟು ಶ್ರಮ ಬೇಕಾಗಿದೆ. ತುಂಬಾ ಕೊಳಚೆ ಪ್ರದೇಶಗಳಲ್ಲಿ ವಾಸಿಸುವಂತಹ ಮಕ್ಕಳಿಗೆ ನ್ಯುಮೋನಿಯಾವು ಕಾಡುವುದು ಹೆಚ್ಚು. ಮಕ್ಕಳು ಯಾರದ್ದೇ ಆಗಿದ್ದರೂ ಅವುಗಳಿಗೆ ಸರಿಯಾದ ಔಷಧಿ ಮತ್ತು ಚಿಕಿತ್ಸೆಯು ಸಿಗುವುದು ಮಕ್ಕಳ ಹಕ್ಕಾಗಿದೆ. ಆದ್ದರಿಂದ ನ್ಯುಮೋನಿಯಾ ವಿರುದ್ಧ ರಕ್ಷಣೆ, ತಡೆ ಮತ್ತು ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವುದು, ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಮತ್ತು ನ್ಯುಮೋನಿಯಾ ವಿರುದ್ಧ ಹೋರಾಡುವುದು ಈ ದಿನದ ಮಹತ್ವದ ಕಾರ್ಯಗಳಾಗಿದೆ.
ALSO READ: ಹಸಿ ಮೆಣಸಿನಕಾಯಿ ತಿಂದ್ರೆ ತೂಕ ಇಳಿಸಬಹುದಂತೆ!

ನ್ಯುಮೋನಿಯಾಗೆ ಕಾರಣಗಳು
ನ್ಯುಮೋನಿಯಾವು ವಿವಿಧ ರೀತಿಯ ಸೋಂಕನ್ನು ಹರಡುವಂತಹ ವೈರಸ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದಿಂದ ಬರಬಹುದು. ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ (ಮಕ್ಕಳಲ್ಲಿ ಹರಡುವ ಬ್ಯಾಕ್ಟೀರಿಯಾ ನ್ಯುಮೋನಿಯಾಗೆ ಪ್ರಮುಖ ಕಾರಣ), ಹೀಮೊಫಿಲಾಸ್ ಇನ್ಫ್ಲೂಯೆಂಜಾ ಟೈಪ್ ಬಿ(ಎಚ್ಐಬಿ) ಇದು ಮಕ್ಕಳಲ್ಲಿ ಹರಡುವ ನ್ಯುಮೋನಿಯಾಗೆ ಎರಡನೇ ಕಾರಣವಾಗಿದೆ. ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ ನ್ಯುಮೋನಿಯಾ ಹರಡುವ ಸಾಮಾನ್ಯ ವೈರಸ್ ಆಗಿದೆ.

ನ್ಯುಮೋನಿಯಾ ಹರಡುವ ಐದು ಪ್ರಮುಖ ವೈರಾಣುಗಳು
* ವೈರಸ್ಗಳು
* ಮೈಕೋಪ್ಲಾಸ್ಮಾ
* ಇತರ ಕೆಲವೊಂದು ಸೋಂಕುಕಾರಗಳಾಗಿರುವ ಶಿಲೀಂಧ್ರಗಳಾದ ನ್ಯುಮೋಸಿಸ್ಟಿಸ್
* ವಿವಿಧ ರಾಸಾಯನಿಕಗಳು
ALSO FEAD: ಕ್ಸೆರೋಸಿಸ್ ಗೆ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ

ನ್ಯುಮೋನಿಯಾಗೆ ಚಿಕಿತ್ಸೆ
ನ್ಯುಮೋನಿಯಾ ಹರಡುವಂತಹ ಕೆಲವು ಸಾಮಾನ್ಯ ಸೂಕ್ಷ್ಮಾಣುಗಳಿಗೆ ಕೆಲವೊಂದು ಲಸಿಕೆಗಳು ಲಭ್ಯವಿದೆ. ಆ್ಯಂಟಿಬಯೋಟಿಕ್ ನೀಡುವ ಜತೆಗೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಸೋಂಕನ್ನು ನಿಯಂತ್ರಿಸಿ ನ್ಯುಮೋನಿಯಾಗೆ ಚಿಕಿತ್ಸೆ ನೀಡಬಹುದು.

ನ್ಯುಮೋನಿಯಾದ ಕೆಲವು ಸಾಮಾನ್ಯ ಲಕ್ಷಣಗಳು
* ಜ್ವರ
* ತಲೆನೋವು
* ನಿಶ್ಯಕ್ತಿ
* ಉಸಿರಾಟದ ತೊಂದರೆ
* ಎದೆನೋವು
* ತೀವ್ರ ಕೆಮ್ಮು
* ಹಸಿವಿಲ್ಲದಿರುವುದು
ನ್ಯುಮೋನಿಯಾವು ತೀವ್ರ ರೀತಿಯ ಪರಿಸ್ಥಿತಿಯಾಗಿದ್ದು, ಇದಕ್ಕೆ ಯಾವುದೇ ಮನೆಮದ್ದನ್ನು ಬಳಸಿಕೊಂಡು ಚಿಕಿತ್ಸೆ ನೀಡುವಂತಿಲ್ಲ. ಅದಾಗ್ಯೂ, ಕೆಲವೊಂದು ನೈಸರ್ಗಿಕ ಚಿಕಿತ್ಸೆಗಳು ಇದರ ಲಕ್ಷಣಗಳನ್ನು ಕಡಿಮೆ ಮಾಡುವುದು.
ನ್ಯುಮೋನಿಯಾ ಲಕ್ಷಣ ಕಡಿಮೆ ಮಾಡಲು ಐದು ಮನೆಮದ್ದುಗಳು

1. ಹೆಚ್ಚಿನ ವಿಶ್ರಾಂತಿ
ಅನಾರೋಗ್ಯಕರ ದೇಹಕ್ಕೆ ಚೇತರಿಸಿಕೊಳ್ಳಲು ಹೆಚ್ಚಿನ ವಿಶ್ರಾಂತಿ ಬೇಕಾಗುವುದು. ಇದರಿಂದ ದೈಹಿಕ ಚಟುವಟಿಕೆಗಳಿಂದ ದೂರವಿರಬೇಕು ಮತ್ತು ದೇಹವು ಅದಾಗಿಯೇ ಚೇತರಿಸಲು ಹೆಚ್ಚು ವಿಶ್ರಾಂತಿ ಪಡೆಯಬೇಕು.

2. ಸರಿಯಾದ ಆಹಾರ ಕ್ರಮ
ಆಹಾರ ಕ್ರಮದಲ್ಲಿನ ಬದಲಾವಣೆಗಳು ನ್ಯುಮೋನಿಯಾಗೆ ಚಿಕಿತ್ಸೆ ನೀಡಲು ಪರಿಣಾಮಕಾರಿ. ಇಡೀ ಧಾನ್ಯ, ತರಕಾರಿಗಳು ಮತ್ತು ಹಣ್ಣುಗಳನ್ನು ಯಥೇಚ್ಛ ಪ್ರಮಾಣದಲ್ಲಿ ಸೇವಿಸಿದರೆ ಮತ್ತು ಸಾಕಷ್ಟು ನೀರು ಕುಡಿದರೆ ಅದರಿಂದ ದೇಹಕ್ಕೆ ಚೇತರಿಸಿಕೊಳ್ಳಲು ನೆರವಾಗುವುದು. ನೀರು, ಎಳನೀರು, ಹಣ್ಣುಗಳ ಜ್ಯೂಸ್, ಗಿಡಮೂಲಿಕೆ ಚಾ, ಸೂಪ್ ಇತ್ಯಾದಿಗಳನ್ನು ಸೇವಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ನೀರಿನಾಂಶವು ಸಿಗುವುದು. ಇದರಿಂದ ಬೇಗನೆ ನ್ಯುಮೋನಿಯಾದಿಂದ ಚೇತರಿಕೆಗೆ ಸಾಧ್ಯವಾಗುವುದು.

3. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ನ್ಯುಮೋನಿಯಾ ಸಂದರ್ಭದಲ್ಲಿ ಹೆಚ್ಚಾಗಿ ಕೆಮ್ಮು ಬರುವುದು ಸಹಜ. ಇದನ್ನು ತಡೆಯಲು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಬೇಕು. ಹೀಗೆ ಮಾಡಿದಾಗ ಗಂಟಲಿನ ಕಫವು ಹೊರಗೆ ಬಂದು ಕಿರಿಕಿರಿ ತಪ್ಪುವುದು. ಒಂದು ಲೋಟ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ. ದಿನದಲ್ಲಿ ಮೂರರಿಂದ ನಾಲ್ಕು ಸಲ ಹೀಗೆ ಮಾಡಿದರೆ ಆಗ ಖಂಡಿತವಾಗಿಯೂ ಉತ್ತಮ ಫಲಿತಾಂಶ ಸಿಗುವುದು.

4. ಉಗುರುಬೆಚ್ಚಗಿನ ಶಾಖ
ಜ್ವರವಿದ್ದರೆ ಆಗ ನೀವು ಉಗುರುಬೆಚ್ಚಗಿನ ಶಾಖ ನೀಡಿ ದೇಹವು ತಂಪಾಗುವಂತೆ ಮಾಡಬಹುದು. ತಂಪು ಶಾಖ ನೀಡಿದರೆ ಆಗ ದೇಹದಲ್ಲಿನ ತಾಪಮಾನವು ತಕ್ಷಣವೇ ಬದಲಾಗಿ ಅದರಿಂದ ಚಳಿ ಬರಬಹುದು. ಉಗುರುಬೆಚ್ಚಗಿನ ನೀರಿನಿಂದ ಶಾಖ ನೀಡಿದರೆ ಆಗ ತಾಪಮಾನವು ನಿಧಾನವಾಗಿ ಬದಲಾಗುವುದು.
ALSO READ: ಅಧ್ಯಯನ ವರದಿ: ನ್ಯುಮೋನಿಯಾ ತಡೆಗೆ ದಂತಪರೀಕ್ಷೆ ಅತ್ಯಗತ್ಯ!

5. ಗಿಡಮೂಲಿಕೆ ಚಾ
ಅಧಿಕ ಜ್ವರ, ಶೀತ ಮತ್ತು ಕೆಮ್ಮು ಇದ್ದರೆ ಆಗ ಗಿಡಮೂಲಿಕೆ ಚಾ ತುಂಬಾ ಪರಿಣಾಮಕಾರಿ ಆಗಿರುವುದು. ನೀವಾಗಿಯೇ ಒಂದು ಗಿಡಮೂಲಿಕೆ ಚಾ ತಯಾರು ಮಾಡಿ ಮತ್ತು ದಿನಕ್ಕೆ ಒಂದು ಸಲ ಕುಡಿಯಿರಿ. ತಾಜಾ ಶುಂಠಿ, ಅರಶಿನ, ಕೆಲವು ತುಳಸಿ ಎಲೆಗಳು ಮತ್ತು ಒಂದು ಎಸಲು ಕೇಸರಿ ಹಾಕಿಕೊಂಡು ಚಾ ತಯಾರಿಸಿಕೊಳ್ಳಿ. ಇನ್ನಷ್ಟು ಲಾಭ ಪಡೆಯಲು ಇದಕ್ಕೆ ನೀವು ಜೇನುತುಪ್ಪ ಬೆರೆಸಿಕೊಳ್ಳಿ.