For Quick Alerts
ALLOW NOTIFICATIONS  
For Daily Alerts

World Parkinson's Day 2022: ದೇಹದ ಬ್ಯಾಲೆನ್ಸ್ ತಪ್ಪುವುದು, ಮಾತಿನಲ್ಲಿ ಬದಲಾವಣೆ ನಿರ್ಲಕ್ಷ್ಯ ಮಾಡಬೇಡಿ, ಪಾರ್ಕಿನ್‌ಸನ್‌

|

ಏಪ್ರಿಲ್ 11ನ್ನು ವಿಶ್ವ ಪಾರ್ಕಿನ್‌ಸನ್ಸ್‌ ದಿನವನ್ನಾಗಿ ಆಚರಿಸಲಾಗುವುದು. ಪಾರ್ಕಿನ್‌ಸನ್ಸ್‌ ಎಂಬುವುದು ಅಪಾಯಕಾರಿಯಾದ ಆಹಾರವಾಗಿದ್ದು ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯದ ಸಾಧ್ಯತೆ ಹೆಚ್ಚು.ಈ ಕಾಯಿಲೆ ಬಗ್ಗೆ ಇದರ ಆರಂಭಿಕ ಲಕ್ಷಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪಾರ್ಕಿನ್‌ಸನ್ಸ್‌ ದಿನವನ್ನು ಆಚರಿಸಲಾಗುವುದು.

ಇದು ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ವಂಶವಾಹಿಯಾಗಿ ಬರಬಹುದು ಅಥವಾ ಪರಿಸರ ಮಾಲಿನ್ಯದಿಂದ ಉಂಟಾಗಬಹುದು.

ಪಾರ್ಕಿನ್‌ಸನ್ ಪ್ರಾರಂಭಿಕ ಲಕ್ಷಣಗಳೇನು? ಈ ಕಾಯಿಲೆ ಬರಲು ಕಾರಣವೇನು ಎಂಬುವುದನ್ನು ವಿವರವಾಗಿ ತಿಳಿಯೋಣ:

ಪಾರ್ಕಿನ್‌ಸನ್‌ ಪ್ರಾರಂಭಿಕ ಲಕ್ಷಣಗಳು:

ಪಾರ್ಕಿನ್‌ಸನ್‌ ಪ್ರಾರಂಭಿಕ ಲಕ್ಷಣಗಳು:

* ನಡೆದಾಡುವಾಗ ದೇಹದ ಸಮತೋಲನ ತಪ್ಪುವುದು

* ಬೀಳುವಂತೆ ಅನಿಸಬಹುದು, ಕೈಯಲ್ಲಿ ಹಿಡಿದ ವಸ್ತುಗಳು ಬೀಳಬಹುದು ಒಟ್ಟಿನಲ್ಲಿ ದೇಹದ ಸಮತೋಲನ ತಪ್ಪುವುದು

* ವಾಸನೆ ಗ್ರಹಿಕೆ ಇಲ್ಲವಾಗುವುದು.

* ನಡೆಯುವಾಗ ಮುಂದೆಕ್ಕೆ ವಾಲುವುದು

* ನರದ ವ್ಯತ್ಯಾಸದಿಂದಾಗಿ ಮುಖದಲ್ಲಿ ಬದಲಾವಣೆ ಕಂಡು ಬರುವುದು

* ಮಾತನಾಡುವಾಗ ಧ್ವನಿ ನಡಗುವುದು ಅಥಾವ ಧ್ವನಿ ತುಂಬಾ ಕಡಿಮೆಯಾಗುವುದು

* ನರ ಸೆಳೆತ, ಬರೆಯುವಾಗ ತೊಂದರೆಯಾಗುವುದು

* ನಿದ್ದೆಗೆ ತೊಂದರೆ ಉಂಟಾಗುವುದು ಅಲ್ಲದೆ ಕಾಲುಗಳಲ್ಲಿ ನರಸೆಳೆತ ಉಂಟಾಗುವುದು.

* ಕಣ್ರೆಪ್ಪೆ ತುಂಬಾ ಬಡೆಯುವುದು

 ಇತರ ಲಕ್ಷಣಗಳು

ಇತರ ಲಕ್ಷಣಗಳು

* ಮೂಡ್ ಬದಲಾವಣೆ, ಖಿನ್ನತೆ

* ಜಗಿಯಲು, ನಂಗಲು ಕಷ್ಟವಾಗುವುದು

* ತಲೆಸುತ್ತು

* ಮಲಬದ್ಧತೆ

* ತ್ವಚೆ ಸಮಸ್ಯೆ

* ಮರೆವು, ಒಂದು ರೀತಿಯ ಗೊಂದಲ

ಈ ಲಕ್ಷಣಗಳಿಂದ ಪಾರ್ಕಿನ್‌ಸನ್ಸ್‌ ಇದೆ ಎಂದು ಹೇಳಲು ಸಾಧ್ಯವಿಲ್ಲ, ಇತರ ಕಾಯಿಲೆಯಲ್ಲೂ ಈ ಬಗೆಯ ಲಕ್ಷಣಗಳು ಕಂಡು ಬರಬಹುದು:

* ಪಾರ್ಕಿನ್‌ಸನಿಸಮ್

* ತಲೆಯಲ್ಲಿ ಸಮಸ್ಯೆ

* ಪಾರ್ಶ್ವವಾಯು

* ಬಹು ಅಂಗಾಂಗ ವೈಫಲ್ಯ

ಪಾರ್ಕಿನ್‌ಸನ್ಸ್‌ಗೆ ಕಾರಣಗಳು

ಪಾರ್ಕಿನ್‌ಸನ್ಸ್‌ಗೆ ಕಾರಣಗಳು

ಪಾರ್ಕಿನ್‌ಸನ್‌ ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಇದಕ್ಕೆ ನಿಖರವಾದ ಕಾರಣವೇನು ಎಂಬುವುದು ವಿಜ್ಞಾನಿಗಳಿಗೂ ಗೊತ್ತಿಲ್ಲ, ಅವರು ಪಾರ್ಕಿನ್‌ಸನ್‌ಗೆ ಈ ಅಂಶಗಳು ಕಾರಣವಾಗಿದೆ ಎಂದು ಹೇಳಿದ್ದಾರೆ:

* ಡೊಪಾಮೈನ್‌ ಕಡಿಮೆಯಾಗುವುದು

ಡೊಪಾಮೈನ್ ಅಂಶ ಕಡಿಮೆಯಾದವರಲ್ಲಿ ಪಾರ್ಕಿನ್‌ಸನ್ ಕಂಡು ಬರುತ್ತಿದೆ. ಕಣಗಳು ಡೊಪಾಮೈನ್ ಉತ್ಪತ್ತಿ ಮಾಡಿದಾಗ ಅದು ಮೆದುಳಿನಲ್ಲಿ ಸಾಯುತ್ತದೆ. ಮೆದುಳಿಗೆ ಸಂದೇಶ ರವಾನೆ ಮಾಡುವ ಕೆಲಸವನ್ನು ಡೊಪಾಮೈನ್‌ ಮಾಡುತ್ತದೆ, ಡೊಪಾಮೈನ್‌ ಕಡಿಮೆಯಾದಾಗ ಮೆದುಳಿಗೆ ಸಂದೇಶ ರವಾನೆಯಾಗುವುದು ಕಡಿಮೆಯಾಗುವುದು.

ನೊರ್ಪೈನ್ಫ್ರಿನ್ ಪ್ರಮಾಣ ಕಡಿಮೆಯಾಗುವುದು

ನೊರ್ಪೈನ್ಫ್ರಿನ್ ಪ್ರಮಾಣ ಕಡಿಮೆಯಾಗುವುದು

ನೊರ್ಪೈನ್ಫ್ರಿನ್ ದೇಹದಲ್ಲಿ ರಕ್ತ ಸಂಚಾರವನ್ನು ನಿಯಂತ್ರಿಸಲು, ದೇಹದ ಅಂಗಾಂಗಗಳು ತನ್ನ ಕಾರ್ಯವನ್ನು ಸ್ವ ಮಾಡುವಂತೆ ಮಾಡಲು ಅವಶ್ಯಕ. ಈ ಅಂಶ ಕಡಿಮೆಯಾದಾಗ ಈ ಕೆಳಗಿನ ಲಕ್ಷಣಗಳು ಕಂಡು ಬರುವುದು

* ಮರಗಟ್ಟುವುದು, ಕೈ, ಕಾಲುಗಳು ಝುಂ ಅನಿಸುವುದು

* ನೀವು ಬಯಸಿದ ಭಂಗಿಯಲ್ಲಿ ನಿಲ್ಲಲು ಸಾಧ್ಯವಾಗದಿರುವುದು

* ನಡುಕ

* ಒತ್ತಡ

* ಗಮನ ಹರಿಸಲು ಕಷ್ಟವಾಗುವುದು

* ಮರೆವು

*ಖಿನ್ನತೆ

ಲೆವಿ ಬಾಡಿ

ಲೆವಿ ಬಾಡಿ

ಮೆದುಳಿನಲ್ಲಿ ಪ್ರೊಟೀನ್‌ ಗಂಟು ಕಟ್ಟುವುದನ್ನು ಲೆವಿ ಬಾಡಿಎಂದು ಕರೆಯಲಾಗುವುದು. ಇದರಿಂದ ನರಗಳ ಕಣಗಳಲ್ಲಿ ತೊಂದರೆ ಉಂಟಾಗುವುದು. ಇದರಿಂದ ಯೋಚನೆ, ಆಲೋಚನೆ ಸ್ವಭಾವದಲ್ಲಿ ಬದಲಾವಣೆ ಕಂಡು ಬರುವುದು, ಇದರಿಂದ ಮರೆವು ಕೂಡ ಉಂಟಾಗುವುದು.

ವಂಶವಾಹಿಯಾಗಿಯೂ ಬರುವುದು

ಕೆಲವರಲ್ಲಿ ಪಾರ್ಕಿನ್‌ಸನ್‌ ವಂಶವಾಹಿಯಾಗಿ ಬರುವುದು, ಆದರೆ ಈ ರೀತಿ ಶೇ.10ರಷ್ಟು ಜನರಲ್ಲಿ ಮಾತ್ರ ಕಂಡು ಬರುವುದು.

ಯಾರಲ್ಲಿ ಪಾರ್ಕಿನ್‌ಸನ್ ಅಪಾಯ ಹೆಚ್ಚು?

* ಮೆದುಳಿನ ಸರ್ಜರಿಯಾದ ಬಳಿಕ

* ತುಂಬಾ ರಾಸಾಯನಿಕಗಳಿಗೆ ಎಕ್ಸ್‌ಪೋಸ್ ಆದಾಗ

* ಲಿಂಗ: 2016ರಲ್ಲಿ ನಡೆಸಿದ ಅಧ್ಯಯನ ಪ್ರಕಾರ ಈ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ ಕಂಡು ಬರುವುದು.

* ಕೆಲವೊಂದು ಔಷಧಿಗಳು: ಕೆಲವೊಂದು ಬಗೆಯ ಔಷಧಗಳಿಂದಲೂ ಪಾರ್ಕಿನ್‌ಸನ್ ಉಂಟಾಗುವ ಸಾಧ್ಯತೆ ಇದೆ.

ಪಾರ್ಕಿನ್‌ಸನ್‌ ತಡೆಗಟ್ಟುವುದು ಹೇಗೆ?

ಪಾರ್ಕಿನ್‌ಸನ್‌ ತಡೆಗಟ್ಟುವುದು ಹೇಗೆ?

ರಾಸಾಯನಿಕ ವಸ್ತುಗಳು ತಾಗುವಂತಿದ್ದರೆ ಸುರಕ್ಷಿತ ಬಟ್ಟೆಗಳನ್ನು ಧರಿಸುವುದು

* ಕಾರಿನಲ್ಲಿ ಹೋಗುವಾಗ ಸೇಫ್ಟಿ ಬೆಲ್ಟ್ ಬಳಸುವುದು

* ಸೈಕ್ಲಿಂಗ್‌ ಅಥವಾ ಬೈಕ್‌ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸುವುದು.

* ಪ್ರತಿದಿನ ವ್ಯಾಯಾಮ ಮಾಡಿ.

* ಆಹಾರದಲ್ಲಿ ಸ್ವಲ್ಪ ಅರಿಶಿಣ ಬಳಸಿ.

* ಫ್ಲೇವೋನಾಯ್ಡ್ ಇರುವ ಆಹಾರ ಸೇವಿಸಿ. ಬೆರ್ರಿ, ಸೇಬು, ಕೆಲವೊಂದು ಬಗೆಯ ತರಕಾರಿಗಳು, ಟೀ, ಕಪ್ಪು ದ್ರಾಕ್ಷಿ ಇವುಗಳಲ್ಲಿ ಫ್ಲೇವೋನಾಯ್ಡ್ ಇರುತ್ತದೆ.

* ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ-ಮತ್ತೆ ಬಳಸಬಹುದು.

* ದೇಹದಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ತಕ್ಷಣ ಕೂಡಲೇ ವೈದ್ಯರನ್ನು ಕಾಣಿ.

English summary

World Parkinson's Day 2022: Know Parkinson's disease signs, symptoms, causes, and risk factors in kannada

World Parkinson's Day 2022: Know Parkinson's disease signs, symptoms, causes, and risk factors in kannada, read on...
X
Desktop Bottom Promotion