For Quick Alerts
ALLOW NOTIFICATIONS  
For Daily Alerts

ವಿಶ್ವ ಮಾನಸಿಕ ಸ್ವಾಸ್ಥ್ಯ ದಿನ 2021: ವ್ಯಕ್ತಿಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಬೇಡ

|

ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಸ್ವಾಸ್ಥ್ಯ ದಿನವನ್ನಾಗಿ ಆಚರಿಸಲಾಗುವುದು. ಮಾನಸಿಕ ಸ್ವಾಸ್ಥ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಅಚರಿಸಲಾಗುವುದು.

ನಮ್ಮಲ್ಲಿ ಹೆಚ್ಚಿನವರು ಮಾನಸಿಕ ಆರೋಗ್ಯದ ಬಗ್ಗೆ ಗಮನನೇ ಕೊಡುವುದಿಲ್ಲ. 1 ಬಿಲಿಯನ್‌ಗಿಂತಲೂ ಅಧಿಕ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತೀವರ್ಷ 30 ಲಕ್ಷಕ್ಕೂ ಹೆಚ್ಚು ಜನರು ಈ ಸಮಸ್ಯೆಗೆ ಬಲಿಯಾಗುತ್ತಾರೆ. ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಪ್ರತೀ 40 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾಮಾಜಿಕ ಅಂತರ, ಶೋಷಣೆ, ಬೇಧ ಭಾವ, ಪ್ರೀತಿಯಲ್ಲಿ ಕೊರತೆ ಹೀಗೆ ಅನೇಕ ಕಾರಣಗಳಿಂದ ಜನರು ಮಾನಸಿಕ ಸ್ವಾಸ್ಥ್ಯ ಕಳೆದುಕೊಮಡು ಖಿನ್ನತೆಗೆ ಜಾರುತ್ತಿದ್ದಾರೆ.

ನಮ್ಮ ಸುತ್ತ-ಮುತ್ತ ಈ ಸಮಸ್ಯೆಯಿಂದ ಬಳಲುತ್ತಿರುವವರು ಇರುತ್ತಾರೆ, ಕೆಲವೊಮ್ಮೆ ನಮ್ಮಲ್ಲಿ ಸಮಸ್ಯೆಯಿದ್ದು ಅದನ್ನು ಯಾರ ಬಳಿ ಹೇಳಿಕೊಳ್ಳದೆ ಮಾನಸಿಕ ನೆಮ್ಮದಿ ಎಂಬುವುದನ್ನು ಕಳೆದುಕೊಂಡಿರುತ್ತೇವೆ. ಇಂಥ ಆರೋಗ್ಯ ಸಮಸ್ಯೆ ಬಗ್ಗೆ ಪ್ರಾರಂಭದಲ್ಲಿ ಯಾರು ಗಮನ ಕೊಡುವುದೇ ಇಲ್ಲ, ಇದರಿಂದಾಗಿ ಅಪಾಯ ಹೆಚ್ಚಾಗುವುದು. ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಮಾನಸಿಕ ಸ್ವಾಸ್ಥ್ಯ ದಿನವನ್ನು ಆಚರಿಸಲಾಗುವುದು.

ಈ ವರ್ಷದ ಥೀಮ್‌ ಏನು? ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೇಗೆ ಜಾಗೃತಿವಹಿಸಬೇಕು ಎಂದು ನೋಡೋಣ ಬನ್ನಿ:

2021ರ ಥೀಮ್‌

2021ರ ಥೀಮ್‌

2020ರಲ್ಲಿ ಕೊರೊನಾ ಕಾರಣದಿಂದಾಗಿ ಎಷ್ಟೋ ಜನರ ಮಾನಸಿಕ ಸ್ವಾಸ್ಥ್ಯ ಮಲೆ ತುಂಬಾ ಕೆಟ್ಟ ಪರಿಣಾಮ ಬೀರಿತ್ತು. ಕೆಲವರು ತಮ್ಮ ಕೆಲಸ ಕಳೆದುಕೊಂಡರೆ, ಇನ್ನು ಕೆಲವರು ತಮ್ಮ ಆಪ್ತರನ್ನು, ಸಂಬಂಧಿಕರನ್ನು ಕಳೆದುಕೊಂಡರು, ಉದ್ಯೋಗ-ಉದ್ಯಮಗಳ ಮೇಲೆ ಹೊಡೆತ ಬಿತ್ತು.. ಇವೆಲ್ಲಾ ಜನರ ಮಾನಸಿಕ ಆರೋಗ್ಯದ ತುಂಬಾನೇ ಕೆಟ್ಟ ಪರಿಣಾಮ ಬೀರಿದೆ. 2021, ಮೇ ತಿಂಗಳಿನಲ್ಲಿ ನಡೆದ ವಿಶ್ವ ಆರೋಗ್ಯ ಸಭೆಯಲ್ಲಿ ವಿಶ್ವದ ಎಲ್ಲಾ ದೇಶದಲ್ಲಿರುವ ಅರ್ಕಾರಗಳು ಜನರ ಮಾನಸಿಕ ಸ್ವಾಸ್ಥ್ಯವನ್ನು ಎಲ್ಲಾ ಬಗೆಯಲ್ಲಿ ಮೇಲೆತ್ತಬೇಕು ಎಂದು ಹೇಳಿದೆ. ಇದುವೇ ಈ ವರ್ಷದ ಥೀಮ್ ಆಗಿದೆ.

ಯಾವ ಲಕ್ಷಣಗಳು ಕಂಡು ಬಂದರೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ಹರಿಸಬೇಕು?

ಯಾವ ಲಕ್ಷಣಗಳು ಕಂಡು ಬಂದರೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ಹರಿಸಬೇಕು?

ಮಾನಸಿಕ ಸ್ವಾಸ್ಥ್ಯ ಒಂದೇ ದಿನದಲ್ಲಿ ನಷ್ಟವಾಗುವುದು ಅಪರೂಪ, ಏನಾದರೂ ಆಘಾತಕಾರಿ ಘಟನೆ ನಡೆದಾಗ ಅದು ಮಾನಸಿಕ ಆರೋಗ್ಯ ನಷ್ಟವಾಗಬಹುದು, ಹೆಚ್ಚಿನವರಲ್ಲಿ ಮಾನಸಿಕ ಸ್ವಾಸ್ಥ್ಯ ಹಾಳಾಗುವಾಗ ಕೆಲವೊಂದು ಲಕ್ಷಣಗಳು ಕಂಡು ಬಂದಿರುತ್ತದೆ, ಆದರೆ ಅವುಗಳನ್ನು ನಿರ್ಲಕ್ಷ್ಯ ಮಾಡಿದಾಗ ಸಮಸ್ಯೆ ಹೆಚ್ಚಾಗಿ ಹುಚ್ಚರಾಗುವುದು, ಖಿನ್ನತೆಗೆ ಒಳಗಾಗುವುದು ಮುಂತಾದ ಗಂಭೀರ ಸಮಸ್ಯೆಗಳು ಉಂಟಾಗುವುದು.

ಈ 5 ಲಕ್ಷಣಗಳು ಮಾನಸಿಕಸ್ವಾಸ್ಥ್ಯ ಹಾಳಾದಾಗ ಕಂಡು ಬರುವುದು:

ಈ 5 ಲಕ್ಷಣಗಳು ಮಾನಸಿಕಸ್ವಾಸ್ಥ್ಯ ಹಾಳಾದಾಗ ಕಂಡು ಬರುವುದು:

* ತೀವ್ರ ದುಃಖ , ಚಿಂತೆ ಅಥವಾ ಒತ್ತಡ

* ಸದಾ ದುಃಖದಲ್ಲಿರುವುದು ಹಾಗೂ ಏನದರೂ ಕೇಳಿದರೆ ಅವರಿಗೆ ತಕ್ಷಣ ಕೋಪ ಬರುವುದು, ಸಿಡಿಮಿಡಿಗೊಳ್ಳುವರು

* ಮೂಡ್ ಬದಲಾವಣೆ, ಈಗ ಇದ್ದ ಹಾಗೆ ಮತ್ತೊಂದು ಕ್ಷಣದಲ್ಲಿ ಇರಲ್ಲ. ಖುಷಿಯಲ್ಲಿರುತ್ತಾರೆ, ಕೆಲವೇ ಕ್ಷಣದಲ್ಲಿ ಕಾರಣವಿಲ್ಲದೆ ಕೋಪಗೊಳ್ಳುವುದು, ಅಳುವುದು ಮಾಡುತ್ತಾರೆ.

* ಯಾರೊಂದಿಗೂ ಬೆರೆಯದೆ ಒಂಟಿಯಾಗಿರುವುದು

* ನಿದ್ದೆ ಹಾಗೂ ತಿನ್ನುವುದರಲ್ಲಿ ತುಂಬಾ ಬದಲಾವಣೆ. ಕೆಲವರು ತುಂಬಾ ನಿದ್ದೆ ಮಾಡಿದರೆ ಇನ್ನು ಕೆಲವರಲ್ಲಿ ನಿದ್ದೆ ಕಮ್ಮಿಯಾಗುವುದು. ತಿನ್ನುವುದರಲ್ಲೂ ಕೂಡ ತುಂಬಾ ಬದಲಾವಣೆ ಕಾಣುವುದು ಒಂದೋ ತುಂಬಾ ಕಡಿಮೆ ತಿನ್ನವುದು, ಇಲ್ಲ ತುಂಬಾ ಅಧಿಕ ತಿನ್ನುವುದು.

ಯಾವ ವ್ಯಕ್ತಿಯಲ್ಲಿ ಮಾನಸಿಕ ಸ್ವಾಸ್ಥ್ಯ ಹಾಳಾಗಿದೆ ಎಂದು ಸಂಶಯಿಸಬೇಕು?

ಯಾವ ವ್ಯಕ್ತಿಯಲ್ಲಿ ಮಾನಸಿಕ ಸ್ವಾಸ್ಥ್ಯ ಹಾಳಾಗಿದೆ ಎಂದು ಸಂಶಯಿಸಬೇಕು?

* ದುಃಖದಲ್ಲಿರುವುದು

* ಏಕಾಗ್ರತೆ ಕಡಿಮೆಯಾಗುವುದು

* ತುಂಬಾ ಭಯ

* ಅನವಶ್ಯಕವಾಗಿ ಪಶ್ಚಾತಾಪ ಪಡುವುದು

* ಬೇಗನೆ ಸಿಡಿಮಿಡಿಗೊಳ್ಳುವುದು ಅಥವಾ ಕಿರಿಕಿರಿಗೆ ಒಳಗಾಗುವುದು

* ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದು

* ಯಾವುದೇ ಕೆಲಸ ಅಥವಾ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು

* ಮಾತಿನಲ್ಲಿ ವ್ಯತ್ಯಾಸ

* ತುಂಬಾ ಸುಸ್ತಾದವರಂತೆ ಕಂಡು ಬರುವುದು

* ಯಾವುದರಲ್ಲೂ ಆಸಕ್ತಿ ತೋರದಿರುವುದು

* ನಿದ್ರಾಹೀನತೆ

* ವಾಸ್ತವದಿಂದ ದೂರವಿರುವುದು

* ಭ್ರಮೆ

* ದಿನನಿತ್ಯದ ಸಮಸ್ಯೆಗಳನ್ನು, ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗದಿರುವುದು

* ವಿಪರೀತ ಮದ್ಯಪಾನ

* ಡ್ರಗ್ಸ್ ತೆಗೆದುಕೊಳ್ಳುವುದು

* ಲೈಂಗಿಕ ಆಸಕ್ತಿ ಕಡಿಮೆಯಾಗುವುದು

* ಆತ್ಮಹತ್ಯೆಯ ಚಿಂತನೆ

ಮಾನಸಿಕ ಅಸ್ವಸ್ಥತೆ ಏಕೆ ಉಂಟಾಗುತ್ತದೆ?

ಮಾನಸಿಕ ಅಸ್ವಸ್ಥತೆ ಏಕೆ ಉಂಟಾಗುತ್ತದೆ?

* ವಂಶಪಾರಂಪರ್ಯವಾಗಿಯೂ ಕಾಡಬಹುದು: ಕುಟುಂಬದಲ್ಲಿ ಯಾರಿಗಾದರೂ ಮಾನಸಿಕ ಆರೋಗ್ಯದ ಸಮಸ್ಯೆಯಿದ್ದರೆ, ವ್ಯಕ್ತಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಈ ರೀತಿಯ ಸಮಸ್ಯೆ ಕಂಡು ಬರುವುದು.

* ಗರ್ಭಾವಸ್ಥೆಯಲ್ಲಿಯೇ ರಾಸಾಯನಿಕಗಳು, ಮದ್ಯ, ಡ್ರಗ್ಸ್‌ ಇವೆಲ್ಲಾ ಮಗುವಿನ ದೇಹ ಸೇರಿಸಿದರೆ ಆ ಮಗುವಿನ ನಂತರ ಜೀವಿತಾವಧಿಯಲ್ಲಿ ಈ ರೀತಿಯ ಸಮಸ್ಯೆ ಕಂಡು ಬರಬಹುದು.

* ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಯಲ್ಲಿ ಅಸಮತೋಲನ ಉಂಟಾದಾಗ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು.

* ತುಂಬಾ ಘೋರ ಘಟನೆ ಕಣ್ಣೆದುರು ನಡೆದಾಗ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು.

* ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಆರ್ಥಿಕ ಸಂಕಟ, ಕೆಲಸ ಇಲ್ಲವಾಗುವುದು, ಪ್ರೀತಿಸಿದ ವ್ಯಕ್ತಿ ಮೋಸ ಮಾಡಿದಾಗ ಅಥವಾ ಇಲ್ಲವಾದಾಗ ವ್ಯಕ್ತಿಯಲ್ಲಿ ಮಾನಸಿಕ ಸಮತೋಲನ ತಪ್ಪಬಹುದು.

* ಬಾಲ್ಯಾವಸ್ಥೆಯಲ್ಲಿ ತುಂಬಾ ನೋವು, ಅವಮಾನ , ಹಿಂಸೆ ಅನುಭವಿಸಿದ್ದರೆ ಅಂಥವರಲ್ಲಿ ಮಾನಸಿಕ ಸ್ವಾಸ್ಥ್ಯ ಇಲ್ಲವಾಗುವುದು.

ಗುಣಪಡಿಸುವುದು ಹೇಗೆ?

ಗುಣಪಡಿಸುವುದು ಹೇಗೆ?

ವ್ಯಕ್ತಿಯಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅವರಿಗೆ ಮಾನಸಿಕ ತಜ್ಞರಲ್ಲಿ ತೋರಿಸಿ ಚಿಕಿತ್ಸೆ ಪಡೆಯಬೇಕು, ಹೆಚ್ಚಿನವರು ಮಾನಸಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಲು ಹಿಂದೇಟು ಹಾಕುತ್ತಾರೆ, ಈ ಕಾರಣದಿಂದ ಸಮಸ್ಯೆ ಹೆಚ್ಚಾಗುವುದು. ತಮ್ಮ ಆಪ್ತರಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದರಿಂದ ಖಿನ್ನತೆ, ಆತ್ಮಹತ್ಯೆ ಮುಂತಾದ ಅಪಾಯ ತಪ್ಪಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಂಥ ವ್ಯಕ್ತಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಪ್ರೀತಿಯಿಂದ ನೋಡಿಕೊಂಡರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದು. ಇನ್ನು ಔಷಧಿಯ ಜೊತೆಗೆ ಯೋಗ, ಧ್ಯಾನ ಅಭ್ಯಾಸ ಮಾಡಿಸಬೇಕು. ಇವೆಲ್ಲಾ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದು. ಮಾನಸಿಕ ಒತ್ತಡ ಹೊರಹಾಕಲು ಪ್ರತಿದಿನ ಧ್ಯಾನ ಮಾಡಿ.

FAQ's
  • ಅತೀಯಾದ ಮಾನಸಿಕ ಒತ್ತಡ ಎಂದರೆ ಮಾನಸಿಕ ಸಮಸ್ಯೆಯೇ?

    ಅಲ್ಲ, ಅನೇಕ ಕಾರಣಗಳಿಂದ ವ್ಯಕ್ತಿ ಅತೀಯಾದ ಮಾನಸಿಕ ಒತ್ತಡಕ್ಕೆ ಒಳಗಾಗಬಹುದು, ಆದರೆ ಮಾನಸಿಕ ಒತ್ತಡವನ್ನು ಹೊರಹಾಕದಿದ್ದರೆ ಅದನ್ನು ನಿಭಾಯಿಸಲು ತಿಳಿಯದೇ ಹೋದರೆ ಅದು ಮಾನಸಿಕ ಸಮಸ್ಯೆಯಾಗಿ ಬದಲಾಗುವ ಸಾಧ್ಯತೆ ಇದೆ. ಇದರಿಂದ ಖಿನ್ನತೆ, ಆತ್ಮಹತ್ಯೆ ಆಲೋಚನೆ ಇವೆಲ್ಲಾ ಬರಬಹುದು. ಆದ್ದರಿಂದ ಮಾನಸಿಕ ಒತ್ತಡವನ್ನು ಧ್ಯಾನದ ಮೂಲಕ ಹೊರಹಾಕಿ.

  • ಮಾನಸಿಕ ಸ್ವಾಸ್ಥ್ಯ ಏಕೆ ಮುಖ್ಯ?

    ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ನಮ್ಮ ಚಿಂತನೆ, ನಡವಳಿಕೆ ಎಲ್ಲವೂ ಬದಲಾಗುವುದು. ನಮ್ಮಿಂದ ಯಾವ ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿ, ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೆ ಮಾನಸಿಕ ಸ್ವಾಸ್ಥ್ಯ ಮುಖ್ಯ.

  • ಮಾನಸಿಕ ಸಮಸ್ಯೆ ತಡೆಗಟ್ಟುವುದು ಹೇಗೆ?

    * ನಿಮ್ಮ ಭಾವನೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಿ.
    * ಆರೋಗ್ಯಕರ ಆಹಾರ ಸೇವಿಸಿ.
    * ವ್ಯಾಯಾಮ ಮಾಡಿ
    * ಫ್ರೆಂಡ್ಸ್‌ ಜೊತೆ ಬೆರೆಯಿರಿ
    * ನೋವು ಮರೆಯಲು ಹೊಸ ಕೌಶಲ್ಯ ಬೆಳೆಸಿಕೊಳ್ಳಿ
    * ನಿಮಗೆ ಇಷ್ಟವಾದ್ದದನ್ನು ಮಾಡಿ ಮಾನಸಿಕ ಆರೋಗ್ಯ ಕಡಿಮೆ ಮಾಡಿಕೊಳ್ಳಿ.

English summary

World Mental Health Day 2021: History, theme and significance

World Mental Health Day 2021: History, theme and significance, Read on...
Story first published: Thursday, October 7, 2021, 15:56 [IST]
X
Desktop Bottom Promotion