For Quick Alerts
ALLOW NOTIFICATIONS  
For Daily Alerts

ವಿಶ್ವ ಮಲೇರಿಯಾ ದಿನ 2022: ಮಲೇರಿಯಾ ಇರುವ ಕಡೆ ಹೋಗುವಾಗ ಈ ಮುನ್ನೆಚ್ಚರಿಕೆವಹಿಸಿ

|

ಇಂದು ವಿಶ್ವ ಮಲೇರಿಯಾ ದಿನ. ಮೇಲೇರಿಯಾ ಎಂಬುವುದು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಹೋದರೆ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಆದ್ದರಿಂದ ಡೆಂಗ್ಯೂವಿನಂತೆ ಮಲೇರಿಯಾ ಕೂಡ ಪಾಯಕಾರಿಯಾ ಕಾಯಿಲೆಯಾಗಿದೆ.

ಆದ್ದರಿಂದ ಸೊಳ್ಳೆ ಹೆಚ್ಚಿರುವ ಪ್ರದೇಶಕ್ಕೆ ಪ್ರಯಾಣಿಸುವಾಗ ತುಂಬಾನೇ ಜಾಗ್ರತೆವಹಿಸಬೇಕು, ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆವಹಿಸಬೇಕು. ಮಲೇರಿಯಾ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಏಪ್ರಿಲ್‌ 25ಕ್ಕೆ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುವುದು.

ಮಲೇರಿಯಾ ಹೇಗೆ ಬರುತ್ತದೆ, ಲಕ್ಷಣಗಳೇನು, ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ಮಲೇರಿಯಾ ರೋಗಕ್ಕೆ ಕಾರಣ:

ಮಲೇರಿಯಾ ರೋಗಕ್ಕೆ ಕಾರಣ:

ಮಲೇರಿಯಾ ರೋಗವು ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆಯ ಕಡಿತದಿಂದ ಬರುತ್ತದೆ. ಸೊಳ್ಳೆಯು ಮಲೇರಿಯಾ ಇರುವ ವ್ಯಕ್ತಿಯನ್ನು ಕಚ್ಚಿ ನಂತರ ಬೇರೊಬ್ಬ ವ್ಯಕ್ತಿಯನ್ನ ಕಚ್ಚಿದಾಗ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಯಾರಿಗೆ ಮಲೇರಿಯಾ ಹೆಚ್ಚು ಅಪಾಯಕಾರಿ:

ಯಾರಿಗೆ ಮಲೇರಿಯಾ ಹೆಚ್ಚು ಅಪಾಯಕಾರಿ:

* ಗರ್ಭಿಣಿಯರಿಗೆ

* ಚಿಕ್ಕ ಮಕ್ಕಳಿಗೆ

* ವಯಸ್ಸಾದವರಿಗೆ

* ದುರ್ಬಲ ರೋಗ ನಿರೋಧಕ ಶಕ್ತಿ ಇರುವವರಿಗೆ

* ಇತರ ಮಾರಕ ಕಾಯಿಲೆಯಿಂದ ಬಳಲುತ್ತಿರುವವರಿಗೆ

ಈ ಮಲೇರಿಯಾ ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ:

ಈ ಮಲೇರಿಯಾ ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ:

* ಮೈ ಬಿಸಿಯಾಗುವುದು, ಚಳಿ-ಜ್ವರ, ಬೆವರುವುದು

* ತುಂಬಾ ತಲೆನೋವು ಹಾಗೂ ಗೊಂದಲ-ಗೊಂದಲವಾಗುವುದು

* ತುಂಬಾ ಸುಸ್ತು (ಮಕ್ಕಳಲ್ಲಿ ತುಂಬಾನೇ ಸುಸ್ತು ಇರುತ್ತದೆ)

* ಹೊಟ್ಟೆನೋವು, ಬೇಧಿ

* ಸ್ನಾಯಗಳಲ್ಲಿ ನೋವು

* ತ್ವಚೆ ಬಿಳುಚಿಕೊಳ್ಳುವುದು , ಕಣ್ಣುಗಳು ಬಿಳುಚಿಕೊಂಡು ಕಾಣುವುದು

* ಗಂಟಲು ಕೆರೆತ, ಕೆಮ್ಮು , ಉಸಿರಾಟಕ್ಕೆ ತೊಂದರೆ

ಮಲೇರಿಯಾ ಇರುವ ಕಡೆ ನೀವು ಪ್ರಯಾಣ ಮಾಡುವುದಾದರೆ

* ಮಲೇರಿಯಾ ಹೆಚ್ಚಾಗಿ ಕಂಡು ಬರುತ್ತಿರುವ ಪ್ರದೇಶಕ್ಕೆ ನೀವು ಪ್ರಯಾಣ ಮಾಡುವುದಾದರೆ ಅಲ್ಲಿಗೆ ಹೋಗುವ ವಾರಕ್ಕೆ ಮುಂಚೆಯೇ ಮಲೇರಿಯಾ ತಡೆಗಟ್ಟುವ ಔಷಧಿ ಸೇವಿಸಿ.

*ಸೊಳ್ಳೆ ಕಚ್ಚದಿರಲು repellent ಬಳಸಿ

* ಸೊಳ್ಳೆ ಪರದೆಯೊಳಗೆ ಮಲಗಿ

* ಹೊರಗಡೆ ಓಡಾಡುವಾಗ ಉದ್ದ ತೋಳಿನ ಬಟ್ಟೆ ಧರಿಸಿ.

ಮನೆ ಸುತ್ತ-ಮುತ್ತ ಸೊಳ್ಳೆ ಮೊಟ್ಟೆ ಹಾಕದಂತೆ ಎಚ್ಚರಿಕೆವಹಿಸಿ

* ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಹಾಕುತ್ತವೆ. ಮುಚ್ಚಳ ಹಾಕದೆ ನೀರನ್ನು ಹಾಗೇಬಿಡಿಬೇಡಿ. ಇನ್ನು ನೀರು ಒಂದು ಕಡೆ ಕಟ್ಟಿ ನಿಲ್ಲಲು ಬಿಡಬೇಡಿ. ಪ್ಲಾಸ್ಟಿಕ್‌ ಬಾಟಲಿ, ತೆಂಗಿನಕಾಯಿ ಚಿಪ್ಪು, ಹಳೆಯ ಟೈರ್‌ಗಳು ಇವುಗಳಲ್ಲಿ ನೀರು ನಿಂತಾಗ ಅದರಲ್ಲಿ ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡುತ್ತವೆ. ಆದ್ದರಿಂದ ಆ ರೀತಿ ನೀರು ನಿಲ್ಲದಂತೆ ಎಚ್ಚರವಹಿಸಿ.

* ಮನೆಯೊಳಗಡೆ ಒಳ್ಳೆ ಬರದಂತೆ ಎಚ್ಚರವಹಿಸಿ. ಅಂದ್ರೆ ಸೊಳ್ಳೆ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಸೊಳ್ಳೆ ತುಂಬಾ ಬರುತ್ತದೆ. ಅಂಥ ಸಮಯದಲ್ಲಿ ಮನೆ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚುವುದರಿಂದ ಸೊಳ್ಳೆಗಳು ಮನೆಯೊಳಗಡೆ ಬರುವುದನ್ನು ತಡೆಗಟ್ಟಬಹುದು.

* ಕಿಟಕಿಗೆ ಸೊಳ್ಳೆ ಪರದೆ ಹಾಕಿ, ಮಂಚಕ್ಕೆ ಸೊಳ್ಳೆ ಪರದೆ ಹಾಕಿ ಅರೊಳಗಡೆ ಮಲಗುವುದರಿಂದ ಸೊಳ್ಳೆ ಕಾಟ ತಡೆಗಟ್ಟಬಹುದು.

* ಮಕ್ಕಳಿಗೆ ಸೊಳ್ಳೆ repellent ಬಳಸಿ, ತುಂಬು ತೋಳಿನ ಉಡುಪುಗಳನ್ನು ಧರಿಸಿ.

ಮಲೇರಿಯಾಗೆ ಚಿಕಿತ್ಸೆ

ಮಲೇರಿಯಾಗೆ ಚಿಕಿತ್ಸೆ

* ಮಲೇರಿಯಾ ಬಂದ್ರೆ ತಕ್ಷಣವೇ ಚಿಕಿತ್ಸೆ ಕೊಡಿಸಬೇಕು.

* ಮಲೇರಿಯಾ ಗುಣ ಪಡಿಸಲು ಚಿಕಿತ್ಸೆ ಇದೆ.

* ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು.

ಒಮ್ಮೆ ಮಲೇರಿಯಾ ಬಂದು ಗುಣಮುಖರಾದವರಲ್ಲಿ ಮತ್ತೆ ಮಲೇರಿಯಾ ಬಂದೆ ತುಂಬಾನೇ ಅಪಾಯಕಾರಿ.

English summary

World Malaria Day 2022: Know Malaria Causes, Symptoms, Treatment and Prevention in Kannada

World Malaria Day 2022: Know Malaria Causes, Symptoms, Treatment and Prevention in Kannada, read on...
X
Desktop Bottom Promotion