For Quick Alerts
ALLOW NOTIFICATIONS  
For Daily Alerts

ವಿಶ್ವ ಬೈಸೈಕಲ್‌ ದಿನಾಚರಣೆ 2022: ಮಂಡಿಗೆ ಹಾನಿಯಾಗದಂತೆ ಸೈಕಲ್‌ ತುಳಿಯುವ ಸರಿಯಾದ ಕ್ರಮ ಹೇಗೆ

|

ಜೂನ್‌ 3ರಂದು ವಿಶ್ವ ಬೈಸೈಕಲ್‌ ದಿನಾಚರಣೆ. ಪರಿಸರ ಸ್ನೇಹಿ ವಾಹನ ಸೈಕಲ್‌ ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜನತೆಗೆ ತಿಳಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ.

2022 ಈ ದಿನದ ವಿಶೇಷವಾಗಿ ಸೈಕ್ಲಿಂಗ್‌ ಮಾಡುವುದು ಮಂಡಿಗಳಿಗೆ ಹಾನಿಕರವೇ, ಮಂಡಿ ನೋವು ಬರದಂತೆ ಸೈಕಲ್‌ ತುಳಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

World Bicycle Day 2021: Is cycling good for knee pain

ದೈಹಿಕ ವ್ಯಾಯಾಮಗಳಲ್ಲಿ ಸೈಕ್ಲಿಂಗ್ ಒಂದು ಉತ್ತಮ ಕಸರತ್ತಾಗಿದೆ. ನೈಸರ್ಗಿಕವಾಗಿ ಉತ್ತಮ ಗಾಳಿ ಸೇವಿಸುತ್ತಾ, ದೇಹಕ್ಕೆ ಎಲ್ಲಾ ಸ್ನಾಯಗಳಿಗೂ ಕೆಲಸ ನೀಡುತ್ತಾ ನಾವು ಆರೋಗ್ಯವಾಗಿರಲು ನಿತ್ಯ ಸೈಕಲ್‌ ತುಳಿಯುವುದು ದೀರ್ಘಾಯುಷ್ಯದ ಲಕ್ಷಣವಾಗಿದೆ.

ಜಡ ಜೀವನಶೈಲಿಯಿಂದ ದೂರವಿರಲು, ಮನಸ್ಸು, ದೇಹ ಸದಾ ಚೈತನ್ಯಶೀಲವಾಗಿರಲು, ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು, ತೂಕ ನಿಯಂತ್ರಿಸಲು ಸೈಕ್ಲಿಂಗ್‌ ಮಾಡಲು ವೈದ್ಯರು ಸೂಚಿಸುತ್ತಾರೆ.

ಆದರೆ ಈಗಾಗಲೆ ಮಂಡಿ, ಕೀಲುಗಳ ನೋವಿನಿಂದ ಬಳಲುತ್ತಿರುವವರು ಸೈಕ್ಲಿಂಗ್‌ ಅನ್ನು ಹೆಚ್ಚು ಇಷ್ಟ ಪಡುವುದಿಲ್ಲ. ಬಹುತೇಕರಲ್ಲಿ ಸೈಕ್ಲಿಂಗ್‌ ಮಾಡುವುದರಿಂದ ಮೊಣಕಾಲು ನೋವು, ಬೆನ್ನು ನೋವು, ಮಣಿಕಟ್ಟಿನಂತಹ ಕೆಲವು ಸಾಮಾನ್ಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಕಲ್ಪನೆ ಇದೆ.

ನಿಜವಾಗಿಯೂ ಸೈಕ್ಲಿಂಗ್ ಮೊಣಕಾಲುಗಳಿಗೆ ಒಳ್ಳೆಯದೇ, ಕೀಲುಗಳಿಗೆ ನೋವಾಗದಂತೆ ಸೈಕ್ಲಿಂಗ್‌ ಮಾಡುವುದು ಹೇಗೆ ಮುಂದೆ ತಿಳಿಯೋಣ:

ನಿಜವಾಗಿಯೂ ಸೈಕ್ಲಿಂಗ್ ಮೊಣಕಾಲುಗಳಿಗೆ ಒಳ್ಳೆಯದೇ, ಕೀಲುಗಳಿಗೆ ನೋವಾಗದಂತೆ ಸೈಕ್ಲಿಂಗ್‌ ಮಾಡುವುದು ಹೇಗೆ ಮುಂದೆ ತಿಳಿಯೋಣ:

ಸೈಕ್ಲಿಂಗ್ ಕಡಿಮೆ-ಪರಿಣಾಮದ ವ್ಯಾಯಾಮ ಮತ್ತು ಅಸ್ಥಿಸಂಧಿವಾತದ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ದಿನನಿತ್ಯದ ಬೈಸಿಕಲ್ ಸವಾರಿ ನಿಮ್ಮ ಕಾಲುಗಳಲ್ಲಿನ ಚತುಷ್ಕೋನಗಳು ಮತ್ತು ಹ್ಯಾಮ್ ಸ್ಟ್ರಿಂಗ್‌ಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇವೆರಡೂ ನಿಮ್ಮ ಮೊಣಕಾಲುಗಳನ್ನು ಬೆಂಬಲಿಸುತ್ತವೆ. ಸೈಕ್ಲಿಂಗ್‌ನಲ್ಲಿ ಅನುಭವದ ಹೊರತಾಗಿಯೂ, ಹೆಚ್ಚಿನ ಸೈಕ್ಲಿಸ್ಟ್‌ಗಳು ಮೊಣಕಾಲು ನೋವನ್ನು ಹೊಂದಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಸೈಕ್ಲಿಂಗ್ ಮೊಣಕಾಲು ನೋವು ಮತ್ತು ಅಸ್ಥಿಸಂಧಿವಾತಕ್ಕೆ ಕಾರಣವಾಗಬಹುದು ಎಂದು ಇದರ ಅರ್ಥವಲ್ಲ ಏಕೆಂದರೆ ಬೈಕಿಂಗ್ ಮಾಡುವಾಗ ಮೊಣಕಾಲು ನೋವಿಗೆ ಹಲವಾರು ಅಂಶಗಳು ಕಾರಣವಾಗಬಹುದು.

ಸೈಕ್ಲಿಂಗ್‌ಗೂ ಮೊಣಕಾಲಿನ ನೋವಿಗೂ ಸಂಬಂಧವಿದೆಯೇ?

ಸೈಕ್ಲಿಂಗ್‌ಗೂ ಮೊಣಕಾಲಿನ ನೋವಿಗೂ ಸಂಬಂಧವಿದೆಯೇ?

ಸರಿಯಾದ ಕ್ರಮದಲ್ಲಿ ಸೈಂಕ್ಲಿಂಗ್ ಮಾಡಿದರೆ ಖಂಡಿತವಾಗಿಯೂ ಕೀಲುಗಳ ಸಮಸ್ಯೆ ಬರುವುದಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ಸೈಕಲ್‌ ತುಳಿಯುವುದು, ಸೈಕ್ಲಿಂಗ್ ಅಭ್ಯಾಸದಲ್ಲಿ ಹಠಾತ್ ಬದಲಾವಣೆಗಳು ನಿಮ್ಮ ಮಂಡಿ ನೋವಿನನ ಕಾರಣವಾಗಿರಬಹುದು. ಇವುಗಳ ಹೊರತಾಗಿ ನಿಮ್ಮ ಅನುವಂಶಿಕದಲ್ಲಿ ಏನಾದರೂ ಮಂಡಿನೋವಿನ ಸಮಸ್ಯೆ ಇದ್ದರೆ ಮಾತ್ರ ಸೈಕಲ್‌ ತುಳಿಯುವುದರಿಂದ ನಿಮಗೆ ಸಮಸ್ಯೆ ಎದುರಾಗಬಹುದು.

ಯು.ಎಸ್. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಸೈಕ್ಲಿಂಗ್‌ ಮಾಡಿದರೆ ಈ ಕಾರಣದಿಂದ ಮಂಡಿನೋವು ಎದುರಾಗುತ್ತದೆ:

* ಸೈಕ್ಲಿಂಗ್ ಅಭ್ಯಾಸದಲ್ಲಿ ತಪ್ಪು ಕ್ರಮ ಅನುಸರಣೆ

* ಅನುವಂಶಿಕತೆಯಿಂದ ತೀವ್ರವಾದ ಗಾಯಗಳ ಅಪಾಯ

* ಸರಿಯಾದ ಗೇರ್‌ ಬಳಸದೇ ಇರುವುದು

* ಅತಿ ಆಗದೇ ಹಾಗೂ ಕಡಿಮೆ ಆಗದೆ ನಿಯಮಿತವಾಗಿ ಸೈಕಲ್‌ ತುಳಿಯುವುದು

* ಮೊಣಕಾಲುಗಳ ಅತಿಯಾದ ಒತ್ತಡ ಹಾಕುವುದು

ಸೈಕ್ಲಿಂಗ್ ಮಾಡುವಾಗ ಮೊಣಕಾಲು ನೋವು ಮತ್ತು ಇತರ ಕೀಲುನೋವುಗಳನ್ನು ನಿವಾರಿಸಲು ಈ ಸಲಹೆ ಪಾಲಿಸಿ:

ಸೈಕ್ಲಿಂಗ್ ಮಾಡುವಾಗ ಮೊಣಕಾಲು ನೋವು ಮತ್ತು ಇತರ ಕೀಲುನೋವುಗಳನ್ನು ನಿವಾರಿಸಲು ಈ ಸಲಹೆ ಪಾಲಿಸಿ:

ಸರಿಯಾದ ಫಿಟ್

ನಿಮ್ಮ ಪ್ರಮಾಣಕ್ಕೆ ಸರಿಹೊಂದುವ, ಅಂದರೆ ಮೊಣಕಾಲು ನೋವನ್ನು ತಪ್ಪಿಸುವಂಥ ನಿಮ್ಮ ಎತ್ತರಕ್ಕೆ ಅನುಗುಣವಾದ ಸೈಕಲ್‌ ಅನ್ನು ಬಳಸಿ. ಉದಾಹರಣೆಗೆ, ತುಂಬಾ ಎತ್ತರ ಅಥವಾ ಗಿಡ್ಡದಾದ ಸೈಕಲ್‌ ಸೀಟ್‌ ಪೆಡಲ್ ಮಾಡಲು ಕಷ್ಟಕರ. ಇದು ನಿಮ್ಮ ಮೊಣಕಾಲು ಎಷ್ಟು ಬಾಗಬೇಕು ಮತ್ತು ವಿಸ್ತರಿಸಬೇಕು ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಸೈಕಲ್‌ ನಿಮ್ಮ ಮೊಣಕಾಲು 45 ಡಿಗ್ರಿ ಕೋನದಲ್ಲಿ ಇದ್ದು ಪೆಡಲ್ ಅಗುವಂತೆ ಇರುತ್ತದೆ.

ಕಾಲಿನ ಶಕ್ತಿ

ಕಾಲಿನ ಶಕ್ತಿ

ಸಾಕಷ್ಟು ಕಾಲಿನ ಶಕ್ತಿ ಇಲ್ಲದೆ, ಸೈಕಲ್ ಅನ್ನು ಪೆಡಲಿಂಗ್‌ ಮಾಡುವುದು ಮೊಣಕಾಲು ನೋವು ಮತ್ತು ಇತರ ಗಾಯಗಳಿಗೆ ಕಾರಣವಾಗಬಹುದು. ಆದ್ದರಿಂದ, ಸೈಕ್ಲಿಂಗ್‌ ಮಾಡುವಾಗ ಮೊಣಕಾಲು ನೋವನ್ನು ತಡೆಗಟ್ಟಲು ಸೂಕ್ತ ತರಬೇತಿ ಅತ್ಯಗತ್ಯ. ನಿಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಎಲ್ಲಾ ರೀತಿಯ ವ್ಯಾಯಾಮಗಳನ್ನು ಒಳಗೊಂಡಂತೆ, ದೇಹದ ಎಲ್ಲಾ ಸ್ನಾಯುಗಳು ಬಲಗೊಳ್ಳುವಂತೆ ಕಸರತ್ತು ಮಾಡಿ. ಇದು ನಿಮ್ಮ ಮೊಣಕಾಲಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ವಾರ್ಮ್‌ಅಪ್‌ಗಳು

ವಾರ್ಮ್‌ಅಪ್‌ಗಳು

ಯಾವುದೇ ವ್ಯಾಯಾಮ ಮಾಡುವ ಮೊದಲು ಕೆಲವು ವಾರ್ಮಪ್‌ ಕ್ರಿಯೆಗಳನ್ನು ಮಾಡಬೇಕು. ಸೈಕ್ಲಿಂಗ್ ಒಂದು ವ್ಯಾಯಾಮ, ಇದರರ್ಥ ನೀವು ಸವಾರಿ ಪ್ರಾರಂಭಿಸುವ ಮೊದಲು ನಿಮ್ಮ ಮೊಣಕಾಲುಗಳು ಮತ್ತು ನಿಮ್ಮ ದೇಹದ ಉಳಿದ ಭಾಗಗಳು ಮೊದಲು ಬೆಚ್ಚಗಾಗಬೇಕು. ಅಂದರೆ ಕೆಲವು ವಾರ್ಮಪ್‌ ನಂತರ ಸೈಕ್ಲಿಂಗ್‌ ಅನ್ನು ನಿಧಾನಗತಿಯಲ್ಲಿ ಪ್ರಾರಂಭಿಸಿ ನಂತರ ಅದನ್ನು ಕ್ರಮೇಣ ಹೆಚ್ಚಿಸಿಕೊಳ್ಳುವುದು ನಿಮ್ಮ ಮೊಣಕಾಲು ನೋವನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಬಹುದು.

ಆರಂಭದಲ್ಲಿ ಕಡಿಮೆ ಸಮಯದ ಸೈಕ್ಲಿಂಗ್‌

ಆರಂಭದಲ್ಲಿ ಕಡಿಮೆ ಸಮಯದ ಸೈಕ್ಲಿಂಗ್‌

ಸೈಕ್ಲಿಂಗ್‌ ಮೊದಲ ಬಾರಿಗೆ ಆರಂಭಿಸುವವರು ಮೊದಲ ದಿನ ಹತ್ತು ನಿಮಿಷದಿಂದ ಆರಂಭಿಸಿ ಪ್ರತಿ ನಿತ್ಯ ಐದು ನಿಮಿಷ ಹೆಚ್ಚಿಸುತ್ತಾ ಹೋಗಿ. ಆಗ ನಿಮಗೆ ಮಂಡಿ ನೋವು ಬಾಧಿಸುವುದಿಲ್ಲ. ಬದಲಾಗಿ ಮೊದಲನೇ ದಿನವೇ ಅರ್ಧ, ಒಂದು ಗಂಟೆ ಸೈಕಲ್‌ ತುಳಿದರೆ ಖಂಡಿತ ಮಂಡಿ ನೋವಿನ ಸಮಸ್ಯೆ ಎದುರಾಗುತ್ತದೆ.

ಮಂಡಿ ಸ್ಟ್ರೆಚ್‌ ಮಾಡುವ ವ್ಯಾಯಾಮ ಮಾಡಿ

ಮಂಡಿ ಸ್ಟ್ರೆಚ್‌ ಮಾಡುವ ವ್ಯಾಯಾಮ ಮಾಡಿ

ಸೈಕಲ್‌ ಮಾಡುವ ಮುನ್ನ ಮತ್ತು ನಂತರ ಮಂಡಿ ಹಾಗೂ ಕೀಲುಗಳನ್ನು ಉದ್ದದಾಗಿ ಸ್ಟ್ರೆಚ್‌ ಮಾಡಿ ಅವುಗಳಿಗೆ ಕಸರತ್ತು ನೀಡಿ. ಅದರಲ್ಲೂ ಸೈಕಲ್‌ ಮಾಡಿದ ನಂತರ ನೀವು ಸ್ಟ್ರೆಚ್ಚಿಂಗ್‌ ವ್ಯಾಯಾಮ ಮಾಡುವುದರಿಂದ ಮಂಡಿಗೆ ಆಗಿರುವ ಹಾನಿ ಅಥವಾ ಬರಬಹುದಾದ ನೋವು ಕಡಿಮೆ ಆಗುತ್ತದೆ. ಇದು ಉತ್ತಮ ರಕ್ತ ಪರಿಚಲನೆಗೆ ಸಹಕಾರಿ.

ಕೀಲುಗಳಿಗೆ ವಿಶ್ರಾಂತಿ

ಕೀಲುಗಳಿಗೆ ವಿಶ್ರಾಂತಿ

ನಾವು ಮಂಡಿಗೆ ಎಷ್ಟೇ ಪೌಷ್ಟಿಕಾಂಶ ನೀಡಿದರೂ, ಕಸರತ್ತು ಮಾಡಿದರೂ, ನಾವು ನಿತ್ಯ ಕೂರುವುದು, ಏಳುವುದು, ನಡೆದಾಡುವುದು, ಬಗ್ಗುವುದು ಹೀಗೆ ಸಾಕಷ್ಟು ಕೆಲಸ ಕೊಡುವುದರಿಂದ ಅದಕ್ಕೂ ವಯಸ್ಸಾಗುತ್ತದೆ. ಆದ್ದರಿಂದ ಅಗಾಗ್ಗೆ ವಿರಾಮ ಪಡೆಯಿರಿ, ಮಲಗುವಾಗ ಕೀಲುಗಳನ್ನು ಬಿಗಿಹಿಡಿಯುವಂತೆ ಮಲಗಬೇಡಿ.

English summary

World Bicycle Day 2022: Is cycling good for knee pain

Here we are discussing about on the special day of world Bicycle Day 2021: Is cycling good for knee pain. cycling is a great form of exercise that can provide a range of health benefits. Read more.
X
Desktop Bottom Promotion