Just In
Don't Miss
- News
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
- Movies
ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ವಿಶ್ವ ಏಡ್ಸ್ ದಿನ: ಹೆಚ್ಐವಿ ಬಗ್ಗೆ ಇರುವ 5 ತಪ್ಪು ಕಲ್ಪನೆಗಳು
ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಏಡ್ಸ್ ಎಂಬ ಮಹಾಮಾರಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 1988ರಿಂದ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಏಡ್ಸ್ ಎಂದರೇನು ಅದು ಹರಡುವುದು ಹೇಗೆ ಎಂಬ ಅರಿವು ಈಗ ಜನರಲ್ಲಿದೆ. ಮೊದಲೆಲ್ಲಾ ಏಡ್ಸ್ ರೋಗಿಗಳನ್ನು ಮುಟ್ಟಲು ಜನರು ಭಯ ಪಡುತ್ತಿದ್ದರು, ಅವರನ್ನು ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ವಿಶ್ವ ಆರೋಗ್ಯ ಸಂಶ್ಥೆಯು ಏಡ್ಸ್ ಕುರಿತು ಜಾಗೃತಿ ಪ್ರಾರಂಭಿಸಿದ ಮೇಲೆ ಏಡ್ಸ್ ರೋಗಿಗಳಿಗೆ ಜನ ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಾಗಿದೆ. ಅವರನ್ನು ಮುಟ್ಟುವುದರಿಂದ, ಅವರ ಜತೆ ಮಾತನಾಡುವುದರಿಂದ ಏಡ್ಸ್ ರೋಗ ಹರಡುವುದಿಲ್ಲ ಎಂಬ ಅರಿವು ಜನಸಾಮಾನ್ಯರಲ್ಲಿದೆ.
ಏಡ್ಸ್ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಸಮಾಜದ ಪಾತ್ರ ಬಹುಮುಖ್ಯವಾದದು ಆದ್ದರಿಂದ 2019ರ ಏಡ್ಸ್ ಜಾಗೃತಿಯ ವಿಷಯ 'ಸಮುದಾಯದಿಂದ ಬದಲಾವಣೆ ಸಾಧ್ಯ' ಎಂಬುವುದಾಗಿದೆ.
ಏಡ್ಸ್ ರೋಗದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ವಿಶ್ವದಲ್ಲಿ 7.7 ಲಕ್ಷ ಜನರು 2018ರಲ್ಲಿ ಏಡ್ಸ್ ರೋಗಕ್ಕೆ ಬಲಿಯಾಗಿದ್ದಾರೆ. ಜನರು ಏಡ್ಸ್ ರೋಗಕ್ಕೆ ರಕ್ತ ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತ್ತಾರೆ. ಏಡ್ಸ್ರೋಗಿ ಅಂತ ಗೊತ್ತಾದರೆ ಸಮಾಜ ನಮ್ಮನ್ನು ತಿರಸ್ಕಾರದ ಭಾವದಿಂದ ನೋಡುತ್ತದೆ ಎಂಬ ಭಯ ಜನರಲ್ಲಿದೆ. ಆದ್ದರಿಮದ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೆ ಸಾವನ್ನಪ್ಪುವವರ ಸಂಖ್ಯೆ ಹಚ್ಚಾಗಿದೆ.
ಏಡ್ಸ್ ರೋಗ ಎಂಬುವುದು ಅಪಾಯಕಾರಿಯಾದ ಕಾಯಿಲೆಯಾಗಿದ್ದರೂ ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ತುಂಬಾ ವರ್ಷಗಳ ಕಾಲ ಬದುಕಬಹುದು. ಇಲ್ಲಿ ಏಡ್ಸ್ ಕಾಯಿಲೆ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಹೇಳಲಾಗಿದೆ ನೋಡಿ:
ತಪ್ಪು ಕಲ್ಪನೆ 1: ಸಂಗಾತಿಗಳಿಬ್ಬರು ಏಡ್ಸ್ ಪೀಡಿತರಾಗಿದ್ದರೆ ಯಾವುದೇ ಸುರಕ್ಷಾಕ್ರಮ ಅನುಸರಿಸಬೇಕಾಗಿಲ್ಲ
ಹೆಚ್ಐವಿ ಪಾಸಿಟಿವ್ ಇರುವ ಸಂಗಾತಿಗಳಿಬ್ಬರು ಯಾವುದೇ ಸುರಕ್ಷಾ ವಿಧಾನಗಳನ್ನು ಅನುಸರಿಸದೆ ದೈಹಿಕ ಸಂಪರ್ಕ ಮಾಡಬಾರದು. ಏಕೆಂದರೆ ಏಡ್ಸ್ ಸೋಂಕಿರುವ ಆರೋಗ್ಯ ಸ್ಥಿತಿ ಭಿನ್ನವಾಗಿರುತ್ತದೆ. ಯಾವುದೇ ಸುರಕ್ಷಾಕ್ರಮ ಅನುಸರಿಸದಿದ್ದರೆ ಸೋಂಕಾಣುಗಳಿಂದ ಆರೋಗ್ಯ ಮತ್ತಷ್ಟು ಹದಗೆಡಬಹುದು. ಅಸುರಕ್ಷತೆ ಲೈಂಗಿಕ ಸಂಪರ್ಕದಿಂದ
ಹರ್ಪಿಸ್ ಮತ್ತು ಗೊನೊರಿಯಾ ಕೂಡ ಹರಡಬಹುದು.
ತಪ್ಪು ಕಲ್ಪನೆ 2: ಹೆಚ್ಐವಿ ನೆಗೆಟಿವ್ ಇರುವವರು ವ್ಯಕ್ತಿ ಹೆಚ್ಐವಿ ಪಾಸಿಟಿವ್ ಇರುವ ವ್ಯಕ್ತಿ ಲೈಂಗಿಕ ಕ್ರಿಯೆ ಮಾಡಬಾರದು
ಏಡ್ಸ್ ರೋಗಿಯ ದೈಹಿಕ ಸಂಪರ್ಕ ಮಾಡದಿದ್ದರೆ ಹೆಚ್ಐವಿ ಹರಡುವುದಿಲ್ಲ. ಆದರೆ ಆರೋಗ್ಯವಂತ ವ್ಯಕ್ತಿ ಸೂಕ್ತ ಸುರಕ್ಷಾಕ್ರಮ ಅನುಸರಿಸಿದರೆ ದೈಹಿಕ ಸಂಪರ್ಕ ಮಾಡಬಹುದು. ಕಾಂಡೋಮ್ ಹೆಚ್ಐವಿ ಸೋಂಕು ಆರೋಗ್ಯವಂತ ವ್ಯಕ್ತಿಗೆ ತಾಗದಂತೆ ತಡೆಗಟ್ಟುತ್ತದೆ. ಏಡ್ಸ್ ರೋಗಿಯೂ ದಿನಾ ARTತೆಗೆದುಕೊಳ್ಳುತ್ತಿದ್ದರೆ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವುದಿಲ್ಲ. ಅಲ್ಲದೆ ಆರೋಗ್ಯವಂತ ವ್ಯಕ್ತಿ ಏಡ್ಸ್ ರೋಗ ತಡೆಗಟ್ಟುವ ಮಾತ್ರೆ ತೆಗೆದುಕೊಂಡು ಲೈಂಗಿಕ ಸಂಪರ್ಕ ಮಾಡುವುದರಿಂದ ಶೇ.90ರಷ್ಟು ಹೆಚ್ಐವಿ ಅಪಾಯವನ್ನು ತಡೆಗಟ್ಟಬಹುದು.
ತಪ್ಪು ಕಲ್ಪನೆ 3: ಮೌಖಿಕ ಸೆಕ್ಸ್ನಲ್ಲಿ ಹೆಚ್ಐವಿ ಹರಡುವುದಿಲ್ಲ
ಮೌಖಿಕ ಸೆಕ್ಸ್ ಮೂಲಕ ಹೆಚ್ಐವಿ ಸೋಂಕಾಣು ಹರಡುವುದೇ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಬಾಯಲ್ಲಿ ಏನಾದರೂ ಗಾಯವಿದ್ದರೆ ಹೆಚ್ಐವಿ ಹರಡುವ ಸಾಧ್ಯತೆ ಇದೆ. ಇತರ ಲೈಂಗಿಕ ಕ್ರಿಯೆಯ ಭಂಗಿಗಳಿಗೆ ಹೋಲಿಸಿದರೆ ಅಪಾಯ ಕಡಿಮೆ ಇದ್ದರೂ ಮೌಖಿಕ ಲೈಂಗಿಕ ಕ್ರಿಯೆ ಮೂಲಕವೂ ಹೆಚ್ಐವಿ ಹರಡುತ್ತದೆ.
ತಪ್ಪು ಕಲ್ಪನೆ 4: ಹೆಚ್ಐವಿ ಏಡ್ಸ್ ಒಂದೇ ಅಲ್ಲ
ಇದೊಂದು ತಪ್ಪು ಕಲ್ಪನೆ ಹಲವರಲ್ಲಿದೆ. ಯಾರಿಗಾದರೂ ಹೆಚ್ಐವಿ ಪಾಸಿಟಿವ್ ಬಂದರೆ ಅವರಿಗೆ ಏಡ್ಸ್ ಇದೆ ಎಂದೇ ಭಾವಿಸಲಾಗುವುದು. ಏಡ್ಸ್ ಹಾಗೂ ಹೆಚ್ಐವಿ ಒಂದೇ ಅಲ್ಲ. ಏಡ್ಸ್ ಅಂದರೆ acquired immunodeficiency syndrome. ಯಾವಾಗ ಹೆಚ್ಐವಿ ಇರುವ ವ್ಯಕ್ತಿ ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲವೋ ಆಗ ಏಡ್ಸ್ ಆಗುತ್ತದೆ. ಹೆಚ್ಐವಿ ಇದ್ದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಇದರಿಂದ ಕಾಯಿಲೆಗಳು ಬರುತ್ತವೆ. ಆದರೆ ಹೆಚ್ಐವಿಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ ಇತರ ವ್ಯಕ್ತಿಗಳಂತೆ ಜೀವನ ನಡೆಸಬಹುದು.
ತಪ್ಪು ಕಲ್ಪನೆ 5: ತಾಯಿಗೆ ಹೆಚ್ಐವಿ ಇದ್ದರೆ ಮಗುವಿಗೂ ಬರುತ್ತದೆ
ತಾಯಿಗೆ ಹೆಚ್ಐವಿ ಇದ್ದರೆ ಮಗುವಿಗೆ ಹೆರಿಗೆಯಲ್ಲಿ ಹಾಗೂ ಎದೆ ಹಾಲು ಕುಡಿಸುವುದರಿಂದ ಬರುವುದು ನಿಜ. ಆದರೆ ತಾಯಿಂದ ಮಗುವಿಗೆ ಹೆಚ್ಐವಿ ಹರಡುವುದನ್ನು ತಡೆಗಟ್ಟಬಹುದು. ಗರ್ಭಾವಸ್ಥೆಯಲ್ಲಿ ಹೆಚ್ಐವಿ ಪರೀಕ್ಷೆಯನ್ನು ಮೊದಲೇ ಮಾಡಿಸಿದರೆ ಒಂದು ವೇಳೆ ತಾಯಿಗೆ ಹೆಚ್ಐವಿ ಇದ್ದರೆ ಸೂಕ್ತ ಚಿಕಿತ್ಸೆ ಮೂಲಕ ಮಗುವಿಗೆ ಹರಡುವುದನ್ನು ತಡೆಗಟ್ಟಬಹುದು. ಗರ್ಭಾವಸ್ಥೆಯಲ್ಲಿ ಒಂದು ಚುಚ್ಚುಮದ್ದಿನಿಂದ ಮಗುವನ್ನು ಹೆಚ್ಐವಿ ಅಪಾಯದಿಂದ ಕಾಪಾಡಬಹುದು.ಇನ್ನು ART ತೆಗೆದುಕೊಳ್ಳುವುದರಿಂದ ಎದೆಹಾಲಿನ ಮೂಲಕ ಹೆಚ್ಐವಿ ಹರಡದಂತೆ ತಡೆಗಟ್ಟಬಹುದು. ಎದೆ ಹಾಲು ನೀಡುವಷ್ಟು ಸಮಯ ಈ ಔಷಧಿಯನ್ನು ತೆಗೆದುಕೊಳ್ಳಬೇಕು.