For Quick Alerts
ALLOW NOTIFICATIONS  
For Daily Alerts

ಲಸಿಕೆ ಪಡೆದವರಲ್ಲಿಯೂ ಕೋವಿಡ್ 19 ಕೇಸ್‌ ಹೆಚ್ಚಾಗಲು ಕಾರಣವೇನು?

|

ಕೊರೊನಾ ಅಲೆ ತಗ್ಗಿತು, ದೇಶದಲ್ಲಿ ಬಹುತೇಕ ಜನರು ಲಸಿಕೆ ಪಡೆದಿದ್ದಾರೆ ಆದ್ದರಿಂದ ಇನ್ನೇನು ಭಯವಿಲ್ಲ ಎಂದು ಜನರು ಭಾವಿಸಿದ್ದರು. ನಿಧಾನಕ್ಕೆ ಶಾಲೆಗಳು ಪ್ರಾರಂಭವಾಗಿದೆ. ಕಾರ್ಯ-ಚಟುವಟಿಕೆಗಳು ಯಥಾ ಸ್ಥಿತಿಗೆ ಮರಳಿವೆ. ಇದೀಗ ಮತ್ತೆ ಕೊರೊನಾ ಪ್ರಕರಣಗಳು ಕೇಳಿ ಬರುತ್ತಿವೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ.

ಚೀನಾದಲ್ಲಿ ಮತ್ತೆ ಶಾಲೆಗಳನ್ನು ಮುಚ್ಚಿದೆ. ಯುಕೆಯಲ್ಲಿ ಕೇಸ್‌ಗಳು ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ. ಹಾಗಾದರೆ ಕೊರೊನಾ ಮತ್ತೆ ಹೆಚ್ಚಾಗುತ್ತಿರಲು ಕಾರಣವೇನು? ಕೋವಿಡ್‌ 19 ಡಬಲ್‌ ಡೋಸ್‌ ಪಡೆದವರಲ್ಲೂ ಕೊರೊನಾ ಹೆಚ್ಚುತ್ತಿರಲು ಕಾರಣವೇನು ಎಂದು ನೋಡುವುದಾದರೆ ಈ ಕಾರಣಗಳಿಂದಾಗಿ ಕೊರೊನಾ ಕೇಸ್‌ಗಳು ಮತ್ತೆ ಹೆಚ್ಚಾಗುತ್ತಿದೆ...

ಕೋವಿಡ್‌ 19 ಪಡೆದವರಲ್ಲಿ ಈಗ ಮತ್ತೆ ಕೊರೊನಾ ಕಾಣಿಸಿಕೊಳ್ಳುತ್ತಿರುವುದು ಏಕೆ?

ಕೋವಿಡ್‌ 19 ಪಡೆದವರಲ್ಲಿ ಈಗ ಮತ್ತೆ ಕೊರೊನಾ ಕಾಣಿಸಿಕೊಳ್ಳುತ್ತಿರುವುದು ಏಕೆ?

ವಾಷಿಂಗ್ಟನ್‌ನ ಐಹೆಚ್‌ಎಮ್‌ಇ (Institute for Health Metrics and Evaluation)ಪ್ರಕಾರ ಯುರೋಪ್‌ ದೇಶಗಳಲ್ಲಿ ಕೊರೊನಾ ಹೆಚ್ಚುತ್ತಿರಲು ಕಾರಣ ಚಳಿಗಾಲವಾಗಿದೆ ಎಂದು ಹೇಳಿದೆ. ಚಳಿಗಾಲದಲ್ಲಿ ಲಸಿಕೆ ಪಡೆದವರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಅಲ್ಲದೆ ಮಾಸ್ಕ್‌ ಬಳಕೆ ಕಡಿಮೆ ಮಾಡಿರುವುದು, ಹೆಚ್ಚಾದ ಜನರ ಓಡಾಟ ಇವೆಲ್ಲಾ ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ.

ಜನರ ನಿರ್ಲಕ್ಷ್ಯ

ಜನರ ನಿರ್ಲಕ್ಷ್ಯ

ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರಲು ಮತ್ತೊಂದು ಕಾರಣವೇನೆಂದರೆ ಜನರ ನಿರ್ಲಕ್ಷ್ಯ. ಜನರು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಮಾಸ್ಕ್‌ ಬಳಸುತ್ತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗಲೂ ಮಾಸ್ಕ್‌ ಬಳಸುತ್ತಿಲ್ಲ. ಜನರ ಈ ಬಗೆಯ ನಿರ್ಲಕ್ಷ್ಯ ಕೊರೊನಾ ಹೆಚ್ಚಾಗಲು ಕಾರಣವಾಗಿದೆ.

ಚಳಿಗಾಲ ಬರುತ್ತಿದೆ, ಕೋವಿಡ್ 19 ಬಗ್ಗೆ ಎಚ್ಚರ

ಚಳಿಗಾಲ ಬರುತ್ತಿದೆ, ಕೋವಿಡ್ 19 ಬಗ್ಗೆ ಎಚ್ಚರ

ಅಧ್ಯಯನಗಳ ಪ್ರಕಾರ ಚಳಿಗಾಲದಲ್ಲಿ ದೇಹದಲ್ಲಿ ಕೋವಿಡ್ 19 ಲಸಿಕೆಯ ಪರಿಣಾಮ ಕಡಿಮೆಯಾಗುತ್ತಿದೆ. ಆದ್ದರಿಂದ ಲಸಿಕೆ ಪಡೆದಿದ್ದೇವೆ, ಇನ್ನೇನು ತೊಂದರೆಯಿಲ್ಲ ಎಂಬ ನಿರ್ಲಕ್ಷ್ಯ ತೋರಬೇಡಿ. ಈ ಸಮಯದಲ್ಲಿ ಹೊರಗಡೆ ಹೋಗುವಾಗ ಕೋವಿಡ್ 19 ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ. ಹೊರಗಡೆ ಹೋಗುವಾಗ ಡಬಲ್ ಮಾಸ್ಕ್‌ ಧರಿಸಿ, ಕೈಗಳನ್ನು ಆಗಾಗ ತೊಳೆಯಿರಿ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲಿಸಿ.

2020ಕ್ಕೆ ಹೋಲಿಸಿದರೆ ಕೊರೊನಾ ಪ್ರಕರಣಗಳು ಕಡಿಮೆ ಇವೆ. ಆದರೆ ಕೊರೊನಾದಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ ಎಂಬುವುದನ್ನು ಮರೆಯದಿರಿ.

English summary

Winters Season and Waning Immunity For Vaccinated People Reason Behind Increasing Covid Cases

Winters Season and Waning Immunity For Vaccinated People Reason Behind Increasing Covid Cases...
Story first published: Monday, November 8, 2021, 9:22 [IST]
X
Desktop Bottom Promotion