For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕಾಡುವ ಪ್ರಮುಖ 6 ಸಮಸ್ಯೆಗಳು ಹಾಗೂ ತಡೆಗಟ್ಟುವುದು ಹೇಗೆ?

|

ಚುಮುಚುಮು ಚಳಿ ಶುರುವಾಗಿದೆ. ಕಾಲ ಬದಲಾದಂತೆ ಆಯಾ ಕಾಲಕ್ಕೆ ತಕ್ಕಂತೆ ಕೆಲವೊಂದು ಸಮಸ್ಯೆಗಳು ಕಂಡು ಬರುವುದು ಸಹಜ. ಈಗ ಚಳಿಗಾಲ ಈ ಸಮಯದಲ್ಲಿ ಅಸ್ತಮಾ ಇದ್ದವರು ತುಂಬಾನೇ ಎಚ್ಚರವಹಿಸಬೇಕು, ಇನ್ನು ಒಣ ತ್ವಚೆ ಇರುವವರಿಗೆ ಸಮಸ್ಯೆ ಹೇಳ ತೀರದು, ಮಕ್ಕಳನ್ನು ಈ ಕಾಲದಲ್ಲಿ ಹೆಚ್ಚು ಜೋಪಾನವಾಗಿ ನೋಡಿಕೊಳ್ಳಬೇಕು, ವಯಸ್ಸಾದವರು, ಆರೋಗ್ಯ ಸಮಸ್ಯೆ ಇರುವವರು ಬೆಚ್ಚಗೆ ಇರಬೇಕು.

ನಾವಿಲ್ಲಿ ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಆರೋಗ್ಯ ಸಮಸ್ಯೆ ಹಾಗೂ ಅದನ್ನು ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ.

 ತ್ವಚೆ ಒಣಗುವುದು ಮತ್ತು ತುರಿಕೆ

ತ್ವಚೆ ಒಣಗುವುದು ಮತ್ತು ತುರಿಕೆ

ಶುಷ್ಕ ಗಾಳಿಗೆ ತ್ವಚೆಯಲ್ಲಿರುವ ಮಾಯಿಶ್ಚರೈಸರ್ ಕಡಿಮೆಯಾಗಿ ತ್ವಚೆ ಒಣಗಲಾರಂಭಿಸುತ್ತದೆ, ಇದರಿಂದ ತ್ವಚೆ ಬಿಳಿ-ಬಿಳಿಯಾಗುವುದರ ಜೊತೆಗೆ ತುರಿಕೆ ಉಂಟಾಗುವುದು. ಇದನ್ನು ತಡೆಗಟ್ಟಲು ಏನುಮಾಡಬೇಕು ನೋಡೋಣ:

  • ಲೋಷನ್ ಬದಲಿಗೆ ಕ್ರೀಮ್ ಬಳಸಿ: ಕ್ರೀಮ್‌ ಲೋಷನ್‌ಗಿಂತ ಗಟ್ಟಿಯಾಗಿರುವುದರಿಂದ ಕ್ರೀಮ್‌ ಬಳಸಿ. ಇದನ್ನು ಪ್ರತಿದಿನ ಹಚ್ಚಿ.
  • ಚಳಿಯಲ್ಲಿ ಹೊರಗಡೆ ಹೋಗುವಾಗ ಮುಖದ ರಕ್ಷಣೆ ಮಾಡಿ: ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ ಹೊರಗಡೆ ಹೋಗಿ. ಇದರಿಂದ ವಿಂಡ್‌ಬರ್ನ್(ತ್ವಚೆ ಒಣಗುವುದು), ಫ್ರಾಸ್ಟ್‌ಬೈಟ್ ಈ ರೀತಿಯ ಸಮಸ್ಯೆ ತಡೆಗಟ್ಟಬಹುದು.
  • ತುಂಬಾ ತುರಿಕೆ ಇದ್ದರೆ ತಜ್ಞರ ಭೇಟಿ ಮಾಡಿ: ಮಾಯಿಶ್ಚರೈಸರ್ ಹಚ್ಚಿದರೂ ಕಡಿಮೆಯಾಗದಿದ್ದರೆ ಚರ್ಮ ರೋಗ ತಜ್ಞರ ಭೇಟಿ ನೀಡಿ.

    ನಿಮ್ಮದು ತುಂಬಾ ಒಣ ತ್ವಚೆಯಾಗಿದ್ದರೆ ತುಂಬಾ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಸ್ನಾನದ ಬಳಿಕ ಮೈತುಂಬಾ ಮಾಯಿಶ್ಚರೈಸರ್‌ ಹಚ್ಚಿ.

    ಸಂಧಿವಾತದ ನೋವು

    ಸಂಧಿವಾತದ ನೋವು

    ಸಂಧಿ ನೋವು ಇರುವವರಿಗೆ ಚಳಿಗಾಲ ಬರುತ್ತಿದೆ ಎಂದರೆ ಭಯ ಶುರುವಾಗುತ್ತೆ, ಏಕೆಂದರೆ ಈ ಸಮಯದಲ್ಲಿ ನೋವು ಉಲ್ಭಣವಾಗುವ ಸಮಯ. ಚಳಿ ಹೆಚ್ಚಾಗುತ್ತಿದ್ದಂತೆ ಮಂಡಿಗಳಲ್ಲಿ, ಕೈಗಳಲ್ಲಿ ನೋವು ಕಾಣಿಸಲಾರಂಭಿಸುತ್ತದೆ. ಸಂಧಿವಾತ ನೋವು ಕಡಿಮೆ ಮಾಡುವುದು ಹೇಗೆ?

    • ಮೈ ಪೂರ್ತಿ ಕವರ್‌ ಆಗಿರುವಂತೆ ಉಡುಪು ಧರಿಸಿ, ಉಣ್ಣೆಯ ಬಟ್ಟೆ ಮೈಯನ್ನು ಬೆಚ್ಚಗಿಡುತ್ತದೆ, ಅಲ್ಲದೆ ಮನೆಯೊಳಗೇ ವ್ಯಾಯಾಮ ಮಾಡುವುದು ಇವೆಲ್ಲಾ ಒಳ್ಳೆಯದು. ಬಿಸಿಲು ಬಂದ ಮೇಲೆ ಸ್ವಿಮ್ಮಿಂಗ್ ಮಾಡುವುದು ಕೂಡ ತುಂಬಾ ಒಳ್ಳೆಯದು.
    • ಅಲ್ಲದೆ ವಿಟಮಿನ್ ಡಿ ಸಪ್ಲಿಮೆಂಟ್‌ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಿ.

       ಖಿನ್ನತೆ

      ಖಿನ್ನತೆ

      ಚಳಿಗಾಲದಲ್ಲಿ ಒಂಥರಾ ಉದಾಸೀನ ಮೂಡುವುದು ಸಹಜ, ಆದರೆ ಕೆಲವರಲ್ಲಿ ಖಿನ್ನತೆ ಹೆಚ್ಚಿಸುತ್ತದೆ, ಯಾವುದೇ ಕೆಲಸ ಮಾಡಲು ಆಸಕ್ತಿ ಮೂಡುವುದಿಲ್ಲ, ಈ ಭಾವನೆ ಬೇಸಿಗೆ ಕಾಲ ಬಂದಾಗ ಇಲ್ಲವಾಗುವುದು.

      ಈ ಉದಾಸೀನ ಭಾವನೆ ಹೊರದುಡಲು ಬಿಸಿಲಿಗೆ ಮೈಯೊಡ್ಡಿ, ಈ ಥೆರಪಿ ಆರೋಗ್ಯ ವೃದ್ಧಿಸಲು ತುಂಬಾನೇ ಸಹಕಾರಿ. ನಿಮ್ಮನ್ನು ನೀವು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.

      ಶೀತ ಹಾಗೂ ಸೋಂಕಿನ ಸಮಸ್ಯೆ

      ಶೀತ ಹಾಗೂ ಸೋಂಕಿನ ಸಮಸ್ಯೆ

      ಚಳಿಗಾಲದಲ್ಲಿ ಶೀತ, ಕೆಮ್ಮು ಇತರ ಸೋಂಕಿನ ಸಮಸ್ಯೆ ಕಾಡುವುದು ಸಹಜ, ಉಸಿರಾಟದ ತೊಂದರೆ ಇರುವವರಿಗೆ ಈ ಸಮಯದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚುವುದು. ಇದನ್ನು ತಡೆಗಟ್ಟುವುದು ಹೇಗೆ?

      • ಬೆಚ್ಚಗಿನ ಉಡುಪು ಧರಿಸಿ
      • ಆರೋಗ್ಯಕರ ಆಹಾರ ಸೇವಿಸಿ
      • ಸೂಪ್ ಸೇವಿಸಿ
      • ಇವೆಲ್ಲಾ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಅಲ್ಲದೆ ಆರೋಗ್ಯ ಸಮಸ್ಯೆ ಕಾಣಿಸಿದರೆ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಿ.

         ತೂಕ ಹೆಚ್ಚುವುದು

        ತೂಕ ಹೆಚ್ಚುವುದು

        ನೀವು ಗಮನಿಸರಬಹುದು, ಮಳೆಗಾಲ ಹಾಗೂ ಚಳಿಗಾಲದಲ್ಲಿ ಮೈ ತೂಕ ಹೆಚ್ಚುವುದು. ಏಕೆಂದರೆ ಈ ಸಮಯದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಕಡಿಮೆ. ವ್ಯಾಯಾಮ ಮಾಡದೇ ಇರುವುದು ಅಲ್ಲದೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದು ಇವೆಲ್ಲಾ ಮೈ ತೂಕ ಹೆಚ್ಚಲು ಕಾರಣ. ಹೀಗಾದಿರಲು ಏನು ಮಾಡಬೇಕು?

        • ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಲೇಬೇಕು.
        • ಆಹಾರಕ್ರಮದ ಕಡೆಗೆ ಗಮನ ನೀಡಬೇಕು.
        • ಸಾಕಷ್ಟು ನೀರು ಕುಡಿಯಬೇಕು
        • ಫ್ರಾಸ್ಟ್‌ಬೈಟ್

          ಫ್ರಾಸ್ಟ್‌ಬೈಟ್

          ಈ ರೀತಿ ತುಂಬಾ ಹಿಮವಿರುವ ಪ್ರದೇಶದಲ್ಲಿ ನೀವಿದ್ದರೆ ಉಂಟಾಗುವುದು. ನಮ್ಮ ಸೈನಿಕರಿಗೆ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಾಡುವುದು. ಕೈ ಕಾಲುಗಳು ಎಲ್ಲಾ ಮರಗಟ್ಟಿದಂತೆ ಆಗುವುದು. ಇದರಿಂದ ಕೈ, ಕಾಲುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಉಂಟಾಗಬಹುದು. ತುಂಬಾ ಚಳಿ ಇರುವ ಕಡೆ ಜೀವಿಸುವವರು ಮೈಗೆ ಬೆಚ್ಚನೆಯ ಉಡುಪು ಧರಿಸಬೇಕು. ಕಣ್ಣು ಭಾಗ ಬಿಟ್ಟು ದೇಹದ ಉಳಿದೆಲ್ಲಾ ಭಾಗ ಉಣ್ಣೆ ಬಟ್ಟೆ, ಕ್ಯಾಪ್‌, ಗ್ಲೌಸ್‌ನಿಂದ ಮುಚ್ಚಿ.

English summary

Winter Health Hazards and How to Beat Them

Here are most common health hazards and how to beat them, read on,
Story first published: Saturday, November 7, 2020, 10:56 [IST]
X
Desktop Bottom Promotion