For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಮೇಲಿನ ಭಾಗದಲ್ಲಿ ಅಸ್ವಸ್ಥತೆ ಇದ್ದರೆ ಗ್ಯಾಸ್ ಅಥವಾ ಅಸಿಡಿಟಿ ಎಂದು ಗೊಂದಲಗೊಳ್ಳಬೇಡಿ : ಹೃದಯಾಘಾತವಾಗಿರಬಹುದು

|

ಹೊಟ್ಟೆಯ ಮೇಲೆ ಅಂದರೆ ಹೃದಯ ಭಾಗದಲ್ಲಿ ಹಲವರಿಗೆ ಸಾಮಾನ್ಯವಾಗಿ ಅನ್ ಈಸೀನೆಸ್ ಅಥವಾ ಅಸ್ವಸ್ಥೆತೆ ಕಾಡುತ್ತದೆ. ಅದಕ್ಕೆ ಹೃದಯದ ಕಾರಣಗಳು ಅಥವಾ ಹೃದಯ ಸಂಬಂಧಿತ ಕಾರಣಗಳು, ಹೃದಯವಲ್ಲದ ಕಾರಣಗಳು ಅಂದರೆ ನ್ಯುಮೋನಿಯಾ ಅಥವಾ ಪಲ್ಮನರಿ ಎಂಬಾಲಿಸಮ್ ಕಾರಣ ಇರಬಹುದು. ಬಾಹ್ಯ ಕಾರಣಗಳು ಮತ್ತು ಆತಂಕ ಅಥವಾ ಖಿನ್ನತೆಯಂತಹ ಮಾನಸಿಕ ಕಾರಣಗಳು ಇರಬಹುದು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಅನೇಕರು ಹೃದಯ ಭಾಗದಲ್ಲಿ ಉಂಟಾಗುವ ಅನ್ ಈಸೀನೆಸ್ ಅನ್ನು ತಳ್ಳಿಹಾಕೋದಿದೆ. ಈ ರೀತಿಯ ಸಮಸ್ಯೆ ಏನಾದರು ನೀವು ಎದುರಿಸುತ್ತಿದ್ದರೆ ಖಂಡಿತವಾಗಲೂ ಅಲ್ಲಗಳೆಯ ಬೇಡಿ.

ಹೌದು, ಅನ್ ಈಸೀನೆಸ್ ಅಥವಾ ಅಸ್ವಸ್ಥತೆ ಸಾಮಾನ್ಯವಾಗಿ ಆತಂಕದ ಜೊತೆಗೆ ಹೃದಯ ಬಡಿತದ ಪರಿಣಾಮವಾಗಿದೆ. ಇಂಗ್ಲೀಷ್ ನಲ್ಲಿ ಈ ಪ್ರಕ್ರಿಯೆಯನ್ನು ಪಾಲ್ಪಿಟೇಶನ್ ಎಂದು ಕರೆಯುತ್ತಾರೆ. ಅಂದರೆ ಆತಂಕದೊಂದಿಗೆ ಉಸಿರಾಟ ಉಂಟಾಗುವುದು ಎಂಬುವುದಾಗಿದೆ. ಈ ರೀತಿಯ ಹೃದಯ ಬಡಿತ ಅಸಹಜ ಸಂವೇದನೆಯಾಗಿದೆ, ಇದನ್ನು ಹೆಚ್ಚಿದ ಹೃದಯ ಬಡಿತ ಎಂದೂ ಕೂಡ ಕರೆಯಬಹುದು ಅಂದರೆ ಸಾಮಾನ್ಯ ಎದೆಬಡಿತಕ್ಕಿಂತ ವಿಭಿನ್ನವಾಗಿರುತ್ತದೆ.

ಇನ್ನು ಕೆಲವರಿಗೆ ಕಡಿಮೆಯಾದ ಹೃದಯ ಬಡಿತವು ಇರುತ್ತದೆ ಇದನ್ನು ಕೂಡ ಪಲ್ಪಿಟೇಶನ್ ಎಂದು ಕರೆಯುತ್ತಾರೆ. ವಾಸ್ತವವಾಗಿ, ಆರೋಗ್ಯವಂತ ವ್ಯಕ್ತಿಯು ವ್ಯಾಯಾಮದ ನಂತರ, ಹೊಸ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ನಂತರ, ಅತಿಯಾದ ಕಾಫಿ ಸೇವನೆ, ದೇಹದಲ್ಲಿ ಕಬ್ಬಿಣದ ಕೊರತೆ, ಕೆಲವು ಔಷಧಿಗಳಿಂದ, ಸಿಗರೇಟ್ ಸೇವನೆ ಮತ್ತು ಥೈರಾಯ್ಡ್ ಔಷಧಿಗಳ ನಂತರವೂ ಹೆಚ್ಚಿನ ಹೃದಯ ಬಡಿತವನ್ನು ಅನುಭವಿಸಬಹುದು ಅಥವಾ ಪಲ್ಪಿಟೇಶನ್ ಉಂಟಾಗಬಹುದು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.

ಈ ರೀತಿ ಆದರೆ ನೆಗ್ಲೇಟ್ ಮಾಡಬೇಡಿ!

ಈ ರೀತಿ ಆದರೆ ನೆಗ್ಲೇಟ್ ಮಾಡಬೇಡಿ!

ಪಾಲ್ಪಿಟೇಶನ್ ಅಥವಾ ಏದುಸಿರು ಅನ್ನೋದು ಸಾಮಾನ್ಯವಾಗಿದ್ದರು ಕೂಡ ಅಲ್ಲಗಳೆಯುವಂತೆ ಇಲ್ಲ. ಯಾಕೆಂದರೆ ಜನರು ನರ್ವಸ್, ಬೆವರುವಿಕೆ ಮತ್ತು ನಡುಗುವಿಕೆಯೊಂದಿಗೆ ಬಡಿತವನ್ನು ಅನುಭವಿಸಿದರೆ ನಿರ್ಲಕ್ಷಿಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಈ ರೀತಿಯ ಸಮಸ್ಯೆಗಳು ಕ 20 ಮತ್ತು 30 ರ ವಯಸ್ಸಿನ ಜನರಲ್ಲಿ ಹೆಚ್ಚಾಗಿ ಕಾಡುತ್ತಿದ್ದು ಇದು ಹೃದಯಾಘಾತಗಳು ಮತ್ತು ಇತರ ಹೃದಯ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಹೀಗಾಗಿ ಇದನ್ನು ನಿರ್ಲಕ್ಷಿಸಲು ಹೋಗಬೇಡಿ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಯಾಕೆಂದರೆ ಈ ರೀತಿಯ ಪಲ್ಪಿಟೇಶನ್ ಅಥವಾ ಉಸಿರಾಟದ ಸಮಸ್ಯೆಯನ್ನು ಅನೇಕರು ಅಸಿಡಿಟಿ ಎಂದು ನಿರ್ಲಕ್ಷಿಸುತ್ತಾರೆ. ಹೃದಯಾಘಾತ ಕೂಡ ಇದೇ ರೀತಿಯ ಲಕ್ಷಣ ಹೊಂದಿರುವುದರಿಂದ ಜನರು ಗೊಂದಲಕ್ಕೆ ಒಳಗಾಗಿ ನಿರ್ಲಕ್ಷಿಸುತ್ತಾರೆ. ಇದು ಪ್ರಾಣಕ್ಕೆ ಕುತ್ತುತರಬಹುದು ಎಂದು ವೈದ್ಯರು ಹೇಳುತ್ತಾರೆ. ಹೊಟ್ಟೆಯ ಮೇಲಿನ ಭಾಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಪಾಲ್ಪಿಟೇಶನ್ ಲಕ್ಷಣಗಳು ಏನು?

ಪಾಲ್ಪಿಟೇಶನ್ ಲಕ್ಷಣಗಳು ಏನು?

ಪಾಲ್ಪಿಟೇಶನ್ ನೋವು ಸಾಮಾನ್ಯವಾಗಿ ಎದೆಯ ಮಧ್ಯಭಾಗದಲ್ಲಿ ಕಂಡುಬರುತ್ತದೆ, ತೋಳುಗಳು, ಕುತ್ತಿಗೆ, ದವಡೆ ಮತ್ತು ಹೊಟ್ಟೆಗೆ ಈ ನೋವು ಹರಡುತ್ತದೆ ಮತ್ತು ಪಾಲ್ಪಿಟೇಶನ್ (ಬಡಿತ) ಮತ್ತು ಉಸಿರಾಟದ ತೊಂದರೆಯೊಂದಿಗೆ ಇರಬಹುದು. ರೋಗಲಕ್ಷಣಗಳು ಸಾಮಾನ್ಯವಾಗಿ ವಿಶ್ರಾಂತಿ ಅಥವಾ ಸೋರ್ಬಿಟ್ರೇಟ್ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಉತ್ತಮಗೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಹೃದಯಾಘಾತ ಎಂದರೇನು?

ಹೃದಯಾಘಾತ ಎಂದರೇನು?

ಹೃದಯಾಘಾತವೆಂದರೆ ರಕ್ತದ ಕೊರತೆಯಿಂದ ಕೆಲವು ಭಾಗಗಳನ್ನು ಕಳೆದುಕೊಳ್ಳುವುದು. ಇದಕ್ಕೆ ಹಲವು ಕಾರಣಗಳಿರಬಹುದು.ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ಲೂಬ್ರಿಕೇಶನ್ ಶೇಖರಣೆಗೊಂಡರೆ, ಅವುಗಳ ಮಾರ್ಗವು ನಿರ್ಬಂಧಿಸಲ್ಪಡುತ್ತದೆ, ಇದರಿಂದಾಗಿ ರಕ್ತವು ಸರಿಯಾಗಿ ಹೃದಯವನ್ನು ತಲುಪುವುದಿಲ್ಲ. ಈ ಅಡಚಣೆಯು ಹೃದಯದಲ್ಲಿ ರಕ್ತಹೀನತೆಯನ್ನು ಉಂಟುಮಾಡುತ್ತದೆ ಮತ್ತು ನೋವನ್ನು ಉಂಟುಮಾಡುತ್ತದೆ. ಇದನ್ನು ಆಂಜಿನಾ ಪೆಕ್ಟೋರಿಸ್ ಎಂದು ಕರೆಯಲಾಗುತ್ತದೆ, ಇದು ಕೆಲವೊಮ್ಮೆ ಆಮ್ಲಜನಕದ ಅಡಚಣೆಯಿಂದ ಉಂಟಾಗುತ್ತದೆ.ಹೃದಯದೊಳಗೆ ರಕ್ತ ಪರಿಚಲನೆ ನಿಂತರೆ, ಆ ಭಾಗವು ನಿಷ್ಕ್ರಿಯಗೊಳ್ಳುತ್ತದೆ. ದೇಹವು ಈ ಭಾಗವನ್ನು ಪುನಃ ಸಕ್ರಿಯಗೊಳಿಸಲು ಸಾಧ್ಯವಾಗದಿದ್ದರೆ, ಸ್ಥಿತಿಯನ್ನು ಹೃದಯಾಘಾತ ಎಂದು ಕರೆಯಲಾಗುತ್ತದೆ.

ಪಾಲ್ಪಿಟೇಶನ್ ಗೆ ತಡೆಯುವುದು ಹೇಗೆ?

ಪಾಲ್ಪಿಟೇಶನ್ ಗೆ ತಡೆಯುವುದು ಹೇಗೆ?

ಮನುಷ್ಯನ ಜೀವನಪದ್ದತಿ, ಆಹಾರ ಪದ್ದತಿ ಪಾಲ್ಪಿಟೇಶನ್ ಗೆ ಮುಖ್ಯ ಕಾರಣವಾಗಿದೆ. ಕೆಫೀನ್ ಯುಕ್ತ ಆಹಾರ ಅಥವಾ ಪಾನೀಯವನ್ನು ಸೀಮಿತಗೊಳಿಸುವುದು, ಆರೋಗ್ಯಕರ ಜೀವನಶೈಲಿ, ವ್ಯಾಯಾಮ, ಪ್ರಾಣಾಯಾಮ ಮತ್ತು ಯೋಗವನ್ನು ಮಾಡಿದರೆ ನಿಮ್ಮ ಪಾಲ್ಪಿಟೇಶನ್ ಸಮಸ್ಯೆಗೆ ಗುಡ್ ಬಾಯ್ ಹೇಳಬಹುದು. ಇನ್ನು ಎಲ್ಲಾದರೂ ಪಾಲ್ಪಿಟೇಶನ್ ಸಮಸ್ಯೆ ಜೋರಾಗಿದ್ದರೆ ಅಗತ್ಯವಿದ್ದಲ್ಲಿ ನಿಮ್ಮ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬಹುದು ಮತ್ತು ಔಷಧಿಗಳ ರೂಪದಲ್ಲಿ ನಿಮಗೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.

English summary

Why you must not confuse uneasiness in the upper part of the stomach with gas, acidity in kannada

Why you must not confuse uneasiness in the upper part of the stomach with gas, acidity, what are the complications read on...
X
Desktop Bottom Promotion