For Quick Alerts
ALLOW NOTIFICATIONS  
For Daily Alerts

ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಕಾಡುತ್ತಂತೆ ಕೋವಿಡ್‌ ನಂತರದ ರೋಗಲಕ್ಷಣ: ಅಧ್ಯಯನ

|

ಕೊರೊನಾ ವೈರಸ್‌ ರೋಗವು ದೇಶದಲ್ಲಿ ಸೃಷ್ಟಿಸಿರುವ ಗಂಡಾಂತರ ಇನ್ನೂ ಅಂತ್ಯವಾಗಿಲ್ಲ, ಕೊರೊನಾ ರೋಗಕ್ಕೆ ತುತ್ತಾಗುವವರ ಸಂಖ್ಯೆ ಪ್ರತಿ ದಿನ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಈಗಷ್ಟೇ ಕೊರೊನಾ ರೋಗಕ್ಕೆ ತುತ್ತಾಗಿ, ಗುಣಮುಖರಾದವರಿಗೆ ಈ ವೈರಸ್‌ ಹೊಸದೊಂದು ಆತಂಕ ಸೃಷ್ಟಿಸುತ್ತಿದೆ.

ಗುಣಮುಖರಾದ ಮೇಲೂ ದೀರ್ಘಕಾಲದ ಹಲವು ಸಮಸ್ಯೆಗಳನ್ನು ಈ ಕೊರೊನಾ ವೈರಸ್‌ ತಂದೊಡ್ಡಲಿದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತಿದೆ. ಆದರೆ ಇಲ್ಲಿ ಅಚ್ಚರಿಯೆಂದರೆ ಪುರುಷರಿಗೆ ಹೋಲಿಸಿದರೆ ಕೊರೊನಾ ನಂತರ ಸಮಸ್ಯೆಗಳಿಗೆ ತುತ್ತಾಗುತ್ತಿರುವವರು ಬಹುತೇಕ ಮಹಿಳೆಯರು ಎಂಬುದು.

ಈ ಬಗ್ಗೆ ಇನ್ನೂ ಸಂಪೂರ್ಣವಾಗಿ ಸಾಬೀತಾಗಿಲ್ಲವಾದರೂ, ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಆದರೂ ಕೆಲವು ಸಂಶೋಧನೆಗಳು ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಕೋವಿಡ್‌ ನಂತರ ಕೆಲವು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ.

ಕೋವಿಡ್‌ ಸಮಯದಲ್ಲಿ ಅಷ್ಟೇನೂ ಕಾಡಲ್ವಂತೆ ರೋಗಲಕ್ಷಣ ಏಕೆ?

ಕೋವಿಡ್‌ ಸಮಯದಲ್ಲಿ ಅಷ್ಟೇನೂ ಕಾಡಲ್ವಂತೆ ರೋಗಲಕ್ಷಣ ಏಕೆ?

ಕೋವಿಡ್- 19 ಜನರ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ ಎಂದು ಕಂಡುಬಂದಿದೆ. ಕೆಲವರಿಗೆ ಮಾರಕ, ಸೌಮ್ಯ ಮತ್ತು ಕೆಲವರಲ್ಲಿ ಗಮನಾರ್ಹವಾಗಿದೆ. ಮಹಿಳೆಯರ ಆನುವಂಶಿಕ ಗುಣ ಮತ್ತು ಹೆಚ್ಚು ಬಲವಾದ, ಸೂಕ್ತವಾದ ರೋಗನಿರೋಧಕ ವ್ಯವಸ್ಥೆಯಿಂದಾಗಿ ಮಹಿಳೆಯರಲ್ಲಿ ಕೋವಿಡ್‌ನಿಂದ ಎದುರಾಗುವ ತೀವ್ರ ಅಥವಾ ಗಂಭೀರ ಅನಾರೋಗ್ಯ ಫಲಿತಾಂಶಗಳಿಲ್ಲ ಎಂದು ಗಮನಿಸಲಾಗಿದೆ. ಅಲ್ಲದೇ ಮಹಿಳೆಯರ ಸಾವಿನ ಪ್ರಮಾಣ ಸಹ ಕಡಿಮೆ ಇದೆ.

ಆದರೂ, ದೀರ್ಘ ಕಾಲದಲ್ಲಿ ಅಂದರೆ ಕೋವಿಡ್‌ಗೆ ತುತ್ತಾದ ಮಹಿಳೆಯರು ಚಿಕಿತ್ಸೆಯ ನಂತರ ಗುಣಮುಖರಾದ ಮೇಲೆ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಅದರಲ್ಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಚ್ಚು ಪ್ರಭಾವ ಬೀರಬಹುದು, ಇದು ಆರೋಗ್ಯದ ಫಲಿತಾಂಶಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅನೇಕ ತಜ್ಞರು ಭಾವಿಸಿದ್ದಾರೆ.

ಮಹಿಳೆಯರೇ ಏಕೆ ಹೆಚ್ಚಿನ ಅಪಾಯದಲ್ಲಿದ್ದಾರೆ?

ಮಹಿಳೆಯರೇ ಏಕೆ ಹೆಚ್ಚಿನ ಅಪಾಯದಲ್ಲಿದ್ದಾರೆ?

ಕೋವಿಡ್‌ ನಿಂದ ಗುಣಮುಖರಾದ ಐವರಲ್ಲಿ ಒಬ್ಬರಿಗೆ ದೀರ್ಘ ಕಾಲದ ರೋಗಲಕ್ಷಣಗಳು ಕಂಡುಬಂದಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಸಂಶೋಧನೆಯೊಂದು ವರದಿ ಮಾಡಿದೆ. ಅನಾರೋಗ್ಯವನ್ನು ದುರ್ಬಲಗೊಳಿಸುವ ಇಂಥಾ ಸ್ಥಿತಿಗೆ ಮಹಿಳೆಯರೇ ಹೆಚ್ಚು ತುತ್ತಾಗುವ ಹೆಚ್ಚಿನ ಅಪಾಯವಿದೆ. ಕೋವಿಡ್‌ನಿಂದ ಗುಣಮುಖರಾದ ನಂತರ ಕಾಡುವ ದೀರ್ಘಕಾಲದ ಸಮಸ್ಯೆಗಳು ಹಾಗೂ ಸಂಕೀರ್ಣತೆಗಳ ಬಗ್ಗೆ ತಜ್ಞರು ಗಮನಿಸುತ್ತಲೇ ಇದ್ದೂ, ಇದಕ್ಕೆ ಕಾರಣವಾದ ಪ್ರಮುಖ 3 ಸಂಭವನೀಯ ಅಂಶಗಳನ್ನು ತಿಳಿಸಿದ್ದಾರೆ ಇಲ್ಲಿವೆ ನೋಡಿ...

ರೋಗನಿರೋಧಕ ವ್ಯವಸ್ಥೆಯು ದೀರ್ಘಕಾಲದ ರೋಗಲಕ್ಷಣಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ವ್ಯವಸ್ಥೆಯು ದೀರ್ಘಕಾಲದ ರೋಗಲಕ್ಷಣಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ

* ಹಿಂದಿನ ಅಧ್ಯಯನಗಳ ಪ್ರಕಾರ, ಮಹಿಳೆಯರಲ್ಲಿ ದೀರ್ಘಕಾಲದ ನೋವು ಮತ್ತು ದೈಹಿಕ ಆಯಾಸ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿದ್ದು, ಈ ಎರಡೂ ಸ್ಥಿತಿಗಳು ದೀರ್ಘ ಕಾಲದ ಕೋವಿಡ್‌ ರೋಗಲಕ್ಷಣಗಳಲ್ಲಿ ಕಂಡುಬರುವ ಪ್ರಮುಖ ಗುಣಲಕ್ಷಣವಾಗಿದೆ. ಇದೇ ಕಾರಣವು ಮಹಿಳೆಯರೇ ಹೆಚ್ಚು ದೀರ್ಘಕಾಲೀನ ಕೋವಿಡ್‌ ರೋಗಲಕ್ಷಣಗಳಿಗೆ ತುತ್ತಾಗಲು ಕಾರಣವಾಗಿರಬಹುದು ಎಂದು ಅಂದಾಜಿಲಾಗಿದೆ.

* ಬಹು ಮುಖ್ಯವಾಗಿ, ಈ ಪರಿಸ್ಥಿತಿಗಳಲ್ಲಿ ಹೆಚ್ಚಿನವು ದೇಹದಲ್ಲಿನ ರೋಗನಿರೋಧಕ ಕೋಶಗಳ ಅಧಿಕ ಸಕ್ರಿಯಗೊಳಿಸುವಿಕೆಗೆ ಹೇಗೆ ಸಂಬಂಧಿಸಿವೆ, ಇದು ರೋಗಕಾರಕವನ್ನು ತ್ವರಿತವಾಗಿ ಹೇಗೆ ಗುರುತಿಸುತ್ತದೆ, ರೋಗನಿರೋಧಕ ಪ್ರಕ್ರಿಯೆಯನ್ನು ಪ್ರೇರೇಪಿಸುತ್ತದೆ ಮತ್ತು ದೇಹದಲ್ಲಿ ವಿರಳವಾಗಿ ಬಿಡುಗಡೆಯಾಗುವ ಸೈಟೊಕಿನ್‌ಗಳು ನಮಗೆ ಅನಾರೋಗ್ಯವನ್ನುಂಟು ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಈ ಪುನರಾವರ್ತಿತ ಪ್ರಚೋದನೆ ಮತ್ತು ರೋಗನಿರೋಧಕ ಚಟುವಟಿಕೆಯು ದೀರ್ಘಕಾಲದ ನೋವು, ಆಯಾಸ ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡುವ ಒಂದು ಅಂಶವಾಗಿರಬಹುದು, ಇದು ಕೋವಿಡ್‌ನ ದೀರ್ಘಕಾಳದ ರೋಗಲಕ್ಷಣಕ್ಕೆ ಸಂಬಂಧಿಸಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಐಎಲ್ -6 ಮಟ್ಟ ಇರುವುದು ಕಂಡುಬಂದಿದೆ ಎಂದಿದ್ದಾರೆ.

* ಕ್ಲಿನಿಕಲ್ ಅಧ್ಯಯನಗಳು ಮಹಿಳೆಯರಲ್ಲಿ ಹೆಚ್ಚಾಗಿ ದೀರ್ಘಕಾಲದ ಕೋವಿಡ್‌ ರೋಗಲಕ್ಷಣಗಳ ಬಗ್ಗೆ ಮಾಹಿತಿ ನೀಡಿದೆ. 40 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಅಸಾಧಾರಣವಾಗಿ ಹೆಚ್ಚಿನ ಅಪಾಯವನ್ನು ಏಕೆ ನೀಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಆದರೆ ಇವುಗಳ ಬಗ್ಗೆ ಈವರೆಗೂ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಪುರುಷರಿಗಿಂತ ಮಹಿಳೆಯರಲ್ಲಿ ರೋಗಲಕ್ಷಣ ವರದಿ ಹೆಚ್ಚು

ಪುರುಷರಿಗಿಂತ ಮಹಿಳೆಯರಲ್ಲಿ ರೋಗಲಕ್ಷಣ ವರದಿ ಹೆಚ್ಚು

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲೇ ಏಕೆ ಕೋವಿಡ್‌ ನಂತರದ ದೀರ್ಘಕಾಲೀನ ರೋಗಲಕ್ಷಣ ಕಂಡುಬರುತ್ತದೆ ಎಂದರೆ, ಇವರಲ್ಲಿ ಕೋವಿಡ್‌ ರೋಗಲಕ್ಷಣಗಳು ಹೆಚ್ಚು ಕಂಡುಬರುತ್ತಿದೆ. ಅಂದರೆ ಪುರುಷರಿಗೆ ಕೋವಿಡ್‌ ಇದ್ದರೂ ರೋಗ ಲಕ್ಷಣ ಕಂಡುಬರದೆ ಇರಬಹುದು. ಅಲ್ಲದೇ ಮಹಿಳೆಯರಲ್ಲಿ ಕಂಡುಬರುವ ಇತರೆ ದೀರ್ಘಕಾಲದ ನೋವು ಮತ್ತು ಆಯಾಸವು ಇವರ ಸಾಮಾನ್ಯ ಜೀವಿತಾವಧಿಯ ಅವಧಿಯನ್ನು ಕಡಿಮೆ ಮಾಡುವ ಅಪಾಯವಿದೆ. ಇದು ಸಹ ಇವರಲ್ಲಿ ದೀರ್ಘಕಾಲದ ಕೋವಿಡ್‌ ರೋಗಲಕ್ಷಣಗಳನ್ನು ನಾವು ನೋಡುತ್ತೇವೆ.

ಹಾರ್ಮೋನುಗಳ ಏರಿಳಿತವು ರೋಗಲಕ್ಷಣದ ತೀವ್ರತೆ ಹೆಚ್ಚಿಸುತ್ತದೆ

ಹಾರ್ಮೋನುಗಳ ಏರಿಳಿತವು ರೋಗಲಕ್ಷಣದ ತೀವ್ರತೆ ಹೆಚ್ಚಿಸುತ್ತದೆ

ಮಹಿಳೆಯರಲ್ಲಿ ಸಾಮಾನ್ಯವಾಗಿಯೂ ಹಾಗೂ ವಿಶೇಷವಾಗಿ ಕೋವಿಡ್‌ ಲಸಿಕೆ ಪಡೆದ ನಂತರ ಉಂಟಾಗುವ ಹಾರ್ಮೋನುಗಳ ವ್ಯತ್ಯಾಸಗಳು ಗಮನಾರ್ಹವಾಗಿ ಬದಲಾವಣೆ ಕಂಡುಬರುತ್ತದೆ. ಇದು ಹೊಟ್ಟೆ ನೋವು, ಮುಟ್ಟಿನ ಅವಧಿಯ ದಿನಗಳಲ್ಲಿ ಬದಲಾವಣೆ ಮತ್ತು ತೀವ್ರವಾದ ಅಡ್ಡಪರಿಣಾಮಗಳಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂಬುದರ ಕುರಿತು ಇತ್ತೀಚಿನ ಮೌಲ್ಯಮಾಪನಗಳು ಸುಳಿವು ನೀಡಿವೆ.

ಹಾರ್ಮೋನುಗಳ ಬದಲಾವಣೆಯಂಥ ಕಾರಣಗಳು ಸಹ ಮಹಿಳೆಯರು ಕೋವಿಡ್‌ ನೆಗೆಟಿವ್‌ ವರದಿ ಪಡೆದ ವಾರ, ತಿಂಗಳುಗಳ ನಂತರವೂ ದೀರ್ಘಕಾಲದ ಕೋವಿಡ್ ಸಮಸ್ಯೆಗೆ ತುತ್ತಾಗಲೂ ಪ್ರಮುಖ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಕೋವಿಡ್‌ ನಂತರ ಬಾಧಿಸುವ ಸಾಮಾನ್ಯ ರೋಗಲಕ್ಷಣಗಳು ಯಾವುವು?

ಕೋವಿಡ್‌ ನಂತರ ಬಾಧಿಸುವ ಸಾಮಾನ್ಯ ರೋಗಲಕ್ಷಣಗಳು ಯಾವುವು?

ಈವರೆಗೂ ಕೋವಿಡ್‌ ನಂತರ ಬಾಧಿಸುವಂಥ ಒಟ್ಟು 55 ರೋಗಲಕ್ಷಣಗಳನ್ನು ಪತ್ತೆ ಮಾಡಲಾಗಿದೆ. ಇವುಗಳಲ್ಲಿ, ಉಸಿರಾಟದ ತೊಂದರೆ, ಎದೆ ನೋವು, ನಿರಂತರ ಕೆಮ್ಮು, ಆಯಾಸ, ದೈಹಿಕ ನೋವು, ಮುಟ್ಟಿನ ಅವಧಿಯ ಬದಲಾವಣೆಗಳು, ಆತಂಕ, ನಿದ್ರಾಹೀನತೆ, ಶಕ್ತಿ ಇಲ್ಲದಿರುವಿಕೆ, ಮೆದುಳಿನ ಮಂಜು ಇವುಗಳು ನಮ್ಮ ಮೇಲೆ ಪರಿಣಾಮ ಬೀರುವ ಅಥವಾ ಹೆಚ್ಚು ಕಾಲ ಉಳಿಯುವ ಲಕ್ಷಣಗಳಾಗಿವೆ.

ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದೇ ಈ ರೋಗಲಕ್ಷಣಗಳನ್ನು ನಿಭಾಯಿಸಲು ಮತ್ತು ಎದುರಿಸಲು ಉತ್ತಮ ಮಾರ್ಗವಾಗಿದೆ. ಇಂಥಾ ಸಮಸ್ಯೆಗಳಿಂದ ಸಂಪೂರ್ಣ ಗುಣಮುಖರಾಗಲು ಸೂಕ್ತ ಆರೈಕೆ ಜತೆಗೆ ಕೆಲವು ಸಮಯಾವಕಾಶವನ್ನು ಬಯಸುತ್ತದೆ ಎನ್ನಲಾಗಿದೆ.

English summary

Why women have a higher risk of long COVID-19 Symptoms than men

Here we are discussing about Why women have a higher risk of long COVID-19 Symptoms than men. COVID-19 has been seen to impact people differently-being fatal for some, mild or barely noticeable in some, it has been observed that women were less likely to be impacted by severe outcomes. Read more.
Story first published: Tuesday, July 13, 2021, 17:25 [IST]
X
Desktop Bottom Promotion