For Quick Alerts
ALLOW NOTIFICATIONS  
For Daily Alerts

ವಿಟಮಿನ್ ಬಿ ಕಾಂಪ್ಲೆಕ್ಸ್‌ ಮಾತ್ರೆಯ ಪ್ರಯೋಜನ ಮತ್ತು ಅಡ್ಡಪರಿಣಾಮಗಳು

|

"ಇತ್ತೀಚೆಗೆ ನನಗೆ ಯಾಕೋ ವಿಪರೀತ ಸುಸ್ತು ಅನ್ಸತ್ತೆ, ದಿನದ ಮಾಮೂಲಿ ಕೆಲಸಗಳನ್ನ ಮಾಡೋದಕ್ಕೂ ತುಂಬಾನೇ ಕಷ್ಟ ಆಗತ್ತೆ, ಸಾಲದ್ದಕ್ಕೆ ಆಗಾಗ್ಗೆ ಬಾಯಲ್ಲಿ ಕಾಣಿಸಿಕೊಳ್ಳೋ ಹುಣ್ಣುಗಳಂತೂ ಊಟ ಮಾಡೋದೇ ಬೇಡ ಅನ್ನೋ ಭಾವನೇನಾ ಹುಟ್ಟುಹಾಕುತ್ವೆ, ಯಾಕೆ ಹೀಗೆ ಅಂತಾ ಗೊತ್ತಾಕ್ತಿಲ್ಲ" ಎಂದು ನೀವು ನಿಮ್ಮ ಆಪ್ತರ ಬಳಿ ಅಲವತ್ತುಕೊಂಡಿರಬಹುದು. ಅವರಲ್ಲಿ ಕೆಲವರಾದರೂ ನಿಮಗೆ "ನೀವೇಕೆ ವಿಟಮಿನ್ ಬಿ ಕಾಂಪ್ಲೆಕ್ಸ್‌ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ?" ಎಂದು ಪ್ರಶ್ನಿಸಿರಲೂಬಹುದು. ಆದರೆ, ನಿಜಕ್ಕೂ ಈ ವಿಟಮಿನ್ ಬಿ ಕಾಂಪ್ಲೆಕ್ಸ್ ಎಂದರೇನು ? ಅದನ್ನು ಯಾವ ಮೂಲಗಳಿಂದ ಪಡೆಯಬಹುದು? ಎಷ್ಟು ಪಡೆಯಬೇಕು?, ಈ ಪೋಷಕ ತತ್ತ್ವಗಳು ನಿಮಗೆ ಹೇಗೆ ಪ್ರಯೋಜನಕಾರಿಯಾಗಿವೆ, ಇವುಗಳ ಅಗತ್ಯವು ನಿಮಗೆ ಯಾವ ಪ್ರಮಾಣದಲ್ಲಿದೆ, ಗುಳಿಗೆಗಳ ರೂಪದಲ್ಲಿ ಇವುಗಳನ್ನು ಸೇವಿಸಬೇಕಾದ ಅಗತ್ಯವು ನಿಮಗಿದೆಯೇ ? ಎಂಬಿತ್ಯಾದಿ ಮಾಹಿತಿಯನ್ನೆಲ್ಲಾ ಆ ನಿಮ್ಮ ಆಪ್ತೇಷ್ಟರು ನೀಡಿರುವ ಸಾಧ್ಯತೆಯಂತೂ ಕಡಿಮೆಯೇ. ಹಾಗಿದ್ದಲ್ಲಿ ಬನ್ನಿ, ಬಿ ವಿಟಮಿನ್ ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಲೇಖನದ ಮೂಲಕ ಅರಿತುಕೊಳ್ಳೋಣ.

ಏನಿದು ವಿಟಮಿನ್ ಬಿ ಕಾಂಪ್ಲೆಕ್ಸ್‌ ?

ಏನಿದು ವಿಟಮಿನ್ ಬಿ ಕಾಂಪ್ಲೆಕ್ಸ್‌ ?

ಬಿ ಕಾಂಪ್ಲೆಕ್ಸ್‌ ಮಾತ್ರೆಯಲ್ಲಿರುವ ಪ್ರತಿಯೊಂದು ಅತ್ಯಾವಶ್ಯಕ ವಿಟಮಿನ್ ಕೂಡಾ ನಿಮ್ಮ ಶರೀರದ ಒಟ್ಟಂದದ ಕಾರ್ಯಾಚರಣೆಯ ವಿಚಾರದಲ್ಲಿ ತನ್ನದೇ ಆದ ಕೊಡುಗೆಯನ್ನು ಸಲ್ಲಿಸುತ್ತದೆ. ಇದರಲ್ಲಿರುವ ಎಂಟು ಬಗೆಯ ಬಿ ವಿಟಮಿನ್ ಗಳು ವಿಟಮಿನ್ ಬಿ ಕಾಂಪ್ಲೆಕ್ಸ್ ನಲ್ಲಿ ಅಡಕವಾಗಿವೆ:

ಬಿ-1 (ಥೈಅಮೈನ್)

ಬಿ-2 (ರೈಬೋಫ್ಲಾವಿನ್)

ಬಿ-3 (ನಿಯಾಸಿನ್)

ಬಿ-5 (ಪ್ಯಾಂಟೋಥೆನಿಕ್ ಆಮ್ಲ)

ಬಿ-6 (ಪಿರಿಡಾಕ್ಸಿನ್)

ಬಿ-7 (ಬಯೋಟಿನ್)

ಬಿ-9 (ಫೋಲಿಕ್ ಆಮ್ಲ)

ಬಿ- 12 (ಕೊಬಾಲಮಿನ್)

ವಿಟಮಿನ್ ಬಿ ಕಾಂಪ್ಲೆಕ್ಸ್ ನಿಂದ ನಮಗಾಗುವ ಪ್ರಯೋಜನಗಳೇನೇನು ?

ವಿಟಮಿನ್ ಬಿ ಕಾಂಪ್ಲೆಕ್ಸ್ ನಿಂದ ನಮಗಾಗುವ ಪ್ರಯೋಜನಗಳೇನೇನು ?

ಉತ್ತಮ ಆರೋಗ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ಹಾಗೂ ಆರೋಗ್ಯವಂತರಾಗಿ ಬಾಳುವ ದಿಶೆಯಲ್ಲಿ ಬಿ ವಿಟಮಿನ್ ಗಳು ಅತೀ ಮಹತ್ವದ ಪಾತ್ರವಹಿಸುತ್ತವೆ. ಆರೋಗ್ಯವಂತ ಶರೀರವೊಂದರ ನಿರ್ಮಾಣ ಘಟಕಗಳ ರೂಪದಲ್ಲಿ, ಬಿ ವಿಟಮಿನ್ ಗಳು ನಿಮ್ಮ ಶರೀರದ ಚೈತನ್ಯ ಮಟ್ಟಗಳ ಮೇಲೆ, ಮೆದುಳಿನ ಕಾರ್ಯಾಚರಣೆಯ ಮೇಲೆ ಮತ್ತು ಕೋಶಗಳ ಮಟ್ಟದ ಚಯಾಪಚಯ ಕ್ರಿಯೆಯ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ.

ವಿಟಮಿನ್ ಬಿ ಕಾಂಪ್ಲೆಕ್ಸ್ ಈ ಆರೋಗ್ಯ-ಸಂಬಂಧೀ ಅಂಶಗಳಿಗೆ ಪೂರಕ

* ಜೀವಕೋಶಗಳ ಆರೋಗ್ಯ

* ಕೆಂಪು ರಕ್ತಕಣಗಳ ಬೆಳವಣಿಗೆ

* ಚೈತನ್ಯ ಮಟ್ಟಗಳು

* ಕಣ್ಣಿನ ಉತ್ತಮ ದೃಷ್ಟಿ

* ಮೆದುಳಿನ ಆರೋಗ್ಯಯುತ ಕಾರ್ಯಾಚರಣೆ

* ಉತ್ತಮ ಜೀರ್ಣಶಕ್ತಿ

* ಆರೋಗ್ಯಯುತ ಹಸಿವು

* ನರವ್ಯೂಹದ ಸಮರ್ಪಕ ಕಾರ್ಯಾಚರಣೆ

* ಚೋದಕಗಳು ಮತ್ತು ಕೊಲೆಸ್ಟೆರಾಲ್ ನ ಉತ್ಪಾದನೆ

* ಹೃದಯದ ಮತ್ತು ರಕ್ತನಾಳಗಳ ಆರೋಗ್ಯ

* ಮಾಂಸಖಂಡಗಳ/ಸ್ನಾಯುಗಳ ಶಕ್ತಿ

* ಸೋಂಕುಗಳನ್ನು ತಡೆಗಟ್ಟುತ್ತದೆ

ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಬಿ ವಿಟಮಿನ್ ಗಳ ಮಹತ್ವ ಮತ್ತು ಅವುಗಳ ಪಾತ್ರ

ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಬಿ ವಿಟಮಿನ್ ಗಳ ಮಹತ್ವ ಮತ್ತು ಅವುಗಳ ಪಾತ್ರ

ಮಹಿಳೆಯರಿಗೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ವಿಟಮಿನ್ ಬಿ ಗಳು ಬಹಳ ಮುಖ್ಯವಾದವುಗಳು. ಈ ವಿಟಮಿನ್ ಗಳು ಭ್ರೂಣದ ಮೆದುಳಿನ ಬೆಳವಣಿಗೆಗೆ ನೆರವಾಗುತ್ತವೆ ಹಾಗೂ ಜೊತೆಗೆ ಜನನ ನ್ಯೂನತೆಗಳ ಅಪಾಯವನ್ನು ತಗ್ಗಿಸುತ್ತವೆ. ಹೆರಿಗೆಯ ನಿರೀಕ್ಷೆಯಲ್ಲಿರುವ ತಾಯಂದಿರ ಚೈತನ್ಯ ಮಟ್ಟಗಳನ್ನು ವಿಟಮಿನ್ ಬಿ ಗಳು ವರ್ಧಿಸುತ್ತವೆ, ವಾಕರಿಕೆ ಬರುವಂತಾಗುವ ಕಿರಿಕಿರಿಯನ್ನು ಸುಲಭಗೊಳಿಸುತ್ತವೆ ಹಾಗೂ ಜೊತೆಗೆ ಪ್ರೀ-ಎಕ್ಲಾಂಪ್ಸಿಯಾದ ಪರಿಸ್ಥಿತಿ ತಲೆದೋರುವ ಅಪಾಯವನ್ನು ತಗ್ಗಿಸುತ್ತವೆ.

ಪುರುಷರ ಆರೋಗ್ಯದ ವಿಚಾರದಲ್ಲಿ ಬಿ ವಿಟಮಿನ್ ಗಳ ಮಹತ್ವ ಮತ್ತು ಅವುಗಳ ಪಾತ್ರ

ಪುರುಷರ ಆರೋಗ್ಯದ ವಿಚಾರದಲ್ಲಿ ಬಿ ವಿಟಮಿನ್ ಗಳ ಮಹತ್ವ ಮತ್ತು ಅವುಗಳ ಪಾತ್ರ

ವಯಸ್ಸಾದಂತೆಲ್ಲಾ ಪುರುಷರಲ್ಲಿ ಸಹಜವಾಗಿ ಕುಂಠಿತಗೊಳ್ಳುವ ಟೆಸ್ಟೊಸ್ಟಿರೋನ್ ನ ಮಟ್ಟಗಳನ್ನು ಬಿ ವಿಟಮಿನ್ (ಜೀವಸತ್ವ) ಗಳು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಪುರುಷರಲ್ಲಿ ಮಾಂಸಖಂಡಗಳನ್ನು ನಿರ್ಮಾಣಗೊಳಿಸುವ ಹಾಗೂ ಶಕ್ತಿಯನ್ನು ವರ್ಧಿಸುವ ದಿಶೆಯಲ್ಲಿಯೂ ಬಿ ವಿಟಮಿನ್ ಗಳು ನೆರವಾಗಬಲ್ಲವು. ಆದರೂ, ಮಾನವ ಶರೀರದ ಕುರಿತಾದ ಅಧ್ಯಯನಗಳು ಈ ಅಂಶಗಳನ್ನು ಅಷ್ಟೇನೂ ಪುಷ್ಟೀಕರಿಸಿಲ್ಲ.

ನಿಮ್ಮ ಶರೀರದಲ್ಲಿ ಬಿ ವಿಟಮಿನ್ ಗಳ ಕೊರತೆಯನ್ನು ಪತ್ತೆಹಚ್ಚುವುದು ಹೇಗೆ ?

ನಿಮ್ಮ ಶರೀರದಲ್ಲಿ ಬಿ ವಿಟಮಿನ್ ಗಳ ಕೊರತೆಯನ್ನು ಪತ್ತೆಹಚ್ಚುವುದು ಹೇಗೆ ?

ಸಂತುಲಿತ ಆಹಾರಕ್ರಮವನ್ನು ಅನುಸರಿಸುವುದರ ಮೂಲಕ ಬಹುತೇಕ ಮಂದಿ ತಮ್ಮ ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ಬಿ ವಿಟಮಿನ್ ಗಳನ್ನು ಪೂರೈಸಿಕೊಳ್ಳಬಲ್ಲರು. ಇಷ್ಟಾದರೂ ಸಹ, ಕೆಲವು ಸಂದರ್ಭಗಳಲ್ಲಿ ಬಿ ವಿಟಮಿನ್‌ಗಳ ಕೊರತೆ ಕಾಡುವ ಸಾಧ್ಯತೆ ಇರುತ್ತದೆ.

ಬಿ ವಿಟಮಿನ್ ಕೊರತೆ ಇದ್ದರೆ ಈ ರೋಗಲಕ್ಷಣಗಳು ಖಂಡಿತಾ:

* ತ್ವಚೆಯ ಮೇಲುಂಟಾಗುವ ಬೊಕ್ಕೆಗಳು

* ಬಾಯಿಯ ಸುತ್ತಲೂ ಉಂಟಾಗುವ ಬಿರುಕುಗಳು

* ತುಟಿಗಳ ಮೇಲೆ ಚಪ್ಪಟೆಯಾಕಾರದ ಚರ್ಮ

* ಊದಿಕೊಂಡ ನಾಲಗೆ

* ತಲೆ ಸುತ್ತಿದಂತಾಗುವುದು

* ನಿತ್ರಾಣ

* ರಕ್ತಹೀನತೆ

* ಗಲಿಬಿಲಿ/ಗೊಂದಲ

* ಉದ್ವಿಗ್ನತೆ ಅಥವಾ ಖಿನ್ನತೆ

* ವಾಕರಿಕೆ ಬರುವಂತಾಗುವುದು

* ಹೊಟ್ಟೆಯ ಸೆಳೆತಗಳು

* ಆಮಶಂಕೆ

* ಮಲಬದ್ಧತೆ

* ಪಾದಗಳಿಗೆ ಮತ್ತು ಕೈಗಳಿಗೆ ಜೋಮು ಹಿಡಿದಂತಾಗುವುದು ಅಥವಾ ಚುಚ್ಚಿದಂತಾಗುವ ಅನುಭವ

ಇಂತಹ ಅನಾರೋಗ್ಯಕರ ಲಕ್ಷಣಗಳಿಗೆ ಕಾರಣವು ವಿಟಮಿನ್ ಬಿ ಯ ಕೊರತೆಯು ಆಗಿರಬಹುದಾಗಿದ್ದರೂ ಕೂಡಾ, ಈ ಲಕ್ಷಣಗಳು ಅದಾಗಲೇ ನಿಮ್ಮಲ್ಲಿ ಇರಬಹುದಾದ ಇನ್ನಿತರ ಅನೇಕ ಪರಿಸ್ಥಿತಿಗಳೊಂದಿಗೆ ಮಿಳಿತಗೊಂಡಿರಲೂ ಬಹುದು. ಈ ಬಗ್ಗೆ ನಿಮ್ಮ ವೈದ್ಯರು ರೋಗನಿರ್ಣಯವೊಂದನ್ನು ಮಾಡಬಲ್ಲರು ಹಾಗೂ ಯಾವುದೇ ಮುಂದಿನ ಹೆಜ್ಜೆಗಳ ಕುರಿತು ನಿಮಗೆ ಸಲಹೆ ನೀಡಬಲ್ಲರು.

ಬಿ ವಿಟಮಿನ್‌ಗಳ ಕೊರತೆಯಿಂದ ಎದುರಾಗುವ ಸಮಸ್ಯೆ

ಬಿ ವಿಟಮಿನ್‌ಗಳ ಕೊರತೆಯಿಂದ ಎದುರಾಗುವ ಸಮಸ್ಯೆ

ಒಂದು ವೇಳೆ ಬಿ ವಿಟಮಿನ್ ಗಳ ಕೊರತೆಯು ನಿಮ್ಮ ಶರೀರವನ್ನು ಬಾಧಿಸುತ್ತಿದ್ದಲ್ಲಿ, ಎಂಟು ಬಗೆಯ ಬಿ ವಿಟಮಿನ್ ಗಳ ಪೈಕಿ ಯಾವ ವಿಟಮಿನ್ ನ/ವಿಟಮಿನ್ ಗಳ ಕೊರತೆಯನ್ನು ನೀವು ಎದುರಿಸುತ್ತಿರುವಿರಿ ಎಂಬುದರ ಮೇಲೆ ನೀವು ವಿವಿಧ ಬಗೆಯ ಅನಾರೋಗ್ಯಕರ ಲಕ್ಷಣಗಳನ್ನು ಅನುಭವಿಸುವಿರಿ. ಇವುಗಳನ್ನು ಉಪಚರಿಸದೇ ಉದಾಸೀನ ಮಾಡಿದಲ್ಲಿ, ನೀವು ಈ ಕೆಳಕಂಡ ಅನಾರೋಗ್ಯಕರ ಪರಿಸ್ಥಿತಿಗಳಿಗೆ ಒಳಾಗುವ ಅಪಾಯವು ಹೆಚ್ಚಾಗುತ್ತದೆ:

* ರಕ್ತಹೀನತೆ

* ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು

* ತ್ವಚೆಯ ಅನಾರೋಗ್ಯಕರ ಪರಿಸ್ಥಿತಿ

* ಸೋಂಕುಗಳು

ವಿಟಮಿನ್ ಬಿ- 12 ರ ಕೊರತೆಯು ನಿಮ್ಮಲ್ಲಿ ನರ ಹಾಗೂ ಮಾನಸಿಕ ರೋಗಗಳ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಸಂಶೋಧಕರು ಹೈಪರ್ ಹೋಮೋ ಸಿಸ್ಟೇನೀಮಿಯಾ ಹಾಗೂ ಅಥೆರೋಸ್ಕ್ಲೆರೋಸಿಸ್ ಗಳಲ್ಲಿ ಬಿ ವಿಟಮಿನ್ ಗಳ ಪಾತ್ರದ ಕುರಿತು ಸಂಶೋಧನೆಯನ್ನು ಇಂದಿಗೂ ನಡೆಸುತ್ತಿದ್ದಾರೆ.

ಅಂತೆಯೇ, ಗರ್ಭಾವಸ್ಥೆಯಲ್ಲಿರುವಾಗ ಪೋಲಿಕ್ ಆಮ್ಲದ ಕೊರತೆಯಿರುವ ಗರ್ಭಿಣಿಯರಿಗೆ ಜನಿಸಿದ ಮಕ್ಕಳು ಜನನ ಸಂಬಂಧೀ ಊನಗಳನ್ನು ಹೊಂದುವ ಸಾಧ್ಯತೆಯು ಹೆಚ್ಚಾಗಿರುತ್ತದೆ.

ಬಿ ವಿಟಮಿನ್ ಗಳನ್ನು ಒಳಗೊಂಡಿರುವ ಆಹಾರವಸ್ತುಗಳು ಯಾವುವು ?

ಬಿ ವಿಟಮಿನ್ ಗಳನ್ನು ಒಳಗೊಂಡಿರುವ ಆಹಾರವಸ್ತುಗಳು ಯಾವುವು ?

ಬಹಳಷ್ಟು ಆಹಾರವಸ್ತುಗಳು ಬಿ ವಿಟಮಿನ್ ಗಳನ್ನೊಳಗೊಂಡಿವೆ. ಹೀಗಾಗಿ, ಈ ಆಹಾರವಸ್ತುಗಳನ್ನೊಳಗೊಂಡ ಆಹಾರಕ್ರಮವನ್ನು ಅನುಸರಿಸಿದರೂ ಸಾಕು, ಸುಲಭವಾಗಿ ದೇಹಕ್ಕೆ ಬೇಕಾದ ಬಿ ವಿಟಮಿನ್ ಗಳನ್ನು ಪಡೆದುಕೊಳ್ಳಬಹುದು. ವೈವಿಧ್ಯಮಯ ಆಹಾರ ಮೂಲಗಳಿಂದ ನಿಮ್ಮ ಶರೀರಕ್ಕೆ ಅಗತ್ಯವಾಗಿರುವ ಬಿ ವಿಟಮಿನ್ ಗಳನ್ನು ಪಡೆದುಕೊಳ್ಳುವುದೇ ಅತ್ಯುತ್ತಮ ಮಾರ್ಗೋಪಾಯವಾಗಿದೆ. ಪ್ರತಿಯೊಂದು ಬಗೆಯ ಬಿ ವಿಟಮಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ನೀವು ಪಡೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.

ಈ ಕೆಳಗೆ ಹೆಸರಿಸಲಾಗಿರುವ ಆಹಾರವಸ್ತುಗಳು ಬಿ ವಿಟಮಿನ್ ಗಳನ್ನು ಒಳಗೊಂಡಿವೆ:

* ಹಾಲು

* ಗಿಣ್ಣು

* ಮೊಟ್ಟೆ

* ಮಾಂಸ

* ಟ್ಯುನಾ, ಮಕೆರೆಲ್ ಹಾಗೂ ಸಾಲ್ಮನ್ ನಂತಹ ಮೀನುಗಳು

* ಓಯೆಸ್ಟರ್ ಗಳು ಮತ್ತು ಕ್ಲಾಮ್ ಗಳಂತಹ ಚಿಪ್ಪುಮೀನುಗಳು

* ಪಾಲಕ್ ಮತ್ತು ಕಾಲೆಗಳಂತಹ ದಟ್ಟ ಹಸಿರು ತರಕಾರಿಗಳು

* ಗೆಡ್ಡೆಗಳು, ಅವೊಕಾಡೊಗಳು ಮತ್ತು ಆಲೂಗಡ್ಡೆಗಳಂತಹ ತರಕಾರಿಗಳು

* ಬಹುಧಾನ್ಯಗಳು ಮತ್ತು ಧಾನ್ಯಗಳು

* ಕಿಡ್ನಿ ಬೀನ್ ಗಳು, ಕಪ್ಪು ಬೀನ್ ಗಳು ಮತ್ತು ಕಾಳುಗಳಂತಹ ಹುರುಳಿಗಳು

* ಕಾಳುಗಳು ಮತ್ತು ಬೀಜಗಳು

* ಸಿಟ್ರಸ್ ಹಣ್ಣುಗಳು, ಬಾಳೆಹಣ್ಣು ಮತ್ತು ಕಲ್ಲಂಗಡಿಗಳಂತಹ ಹಣ್ಣುಗಳು

* ಸೋಯಾ ಹಾಲು ಮತ್ತು ತೆಂಪೇಹ್ ಗಳಂತಹ ಸೋಯಾ ಉತ್ಪನ್ನಗಳು

* ಬ್ಲ್ಯಾಕ್ ಸ್ಟ್ಯಾಪ್ ಮೊಲಾಸ್ ಗಳು

* ಯೀಸ್ಟ್ ಮತ್ತು ಪೌಷ್ಟಿಕ ಯೀಸ್ಟ್

* ವ್ಹೀಟ್ ಜೆರ್ಮ್

ಔಷಧ ರೂಪದ ಬಿ ವಿಟಮಿನ್ ಗಳ ಅಗತ್ಯವಿದೆಯೇ ?

ಔಷಧ ರೂಪದ ಬಿ ವಿಟಮಿನ್ ಗಳ ಅಗತ್ಯವಿದೆಯೇ ?

ಬಹುತೇಕ ಮಂದಿ ತಾವು ಸೇವಿಸುವ ದೈನಂದಿನ ಆಹಾರವಸ್ತುಗಳಿಂದಲೇ ಸಾಕಷ್ಟು ಪ್ರಮಾಣದಲ್ಲಿ ಬಿ ವಿಟಮಿನ್ ಗಳನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ, ನಿಮ್ಮ ದೇಹಕ್ಕಾಗಿ ಈ ವಿಟಮಿನ್ ಗಳನ್ನು ಪಡೆದುಕೊಳ್ಳುವ ದಿಶೆಯಲ್ಲಿ ನಿಮ್ಮ ಆಹಾರಪದ್ಧತಿಯೂ ಕೂಡಾ ಒಂದು ಅತ್ಯುತ್ತಮ ಮಾರ್ಗೋಪಾಯವೇ ಆಗಿದೆ.

ಒಂದು ನಿರ್ದಿಷ್ಟ ಬಗೆಯ ಬಿ ವಿಟಮಿನ್ ನ ಕೊರತೆಯನ್ನು ನಿಮ್ಮ ಶರೀರವು ಅನುಭವಿಸುತ್ತಿದೆ ಎಂದು ನಿಮ್ಮ ವೈದ್ಯರು ನಿಮಗೆ ಖಚಿತಪಡಿಸುವವರೆಗೂ ನೀವು ಗುಳಿಗೆಯ ರೂಪದಲ್ಲಿ ಅಥವಾ ಔಷಧದ ರೂಪದಲ್ಲಿ ಬಿ ವಿಟಮಿನ್ ಅನ್ನು ಸೇವಿಸಬಾರದು. ನೀವು ಒಂದು ನಿರ್ಧಿಷ್ಟ ಬಗೆಯ ಬಿ ವಿಟಮಿನ್ ಸಪ್ಲಿಮೆಂಟ್ ಅನ್ನು ತೆಗೆದುಕೊಳ್ಳಬೇಕೇ ಅಥವಾ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ನ ಸಪ್ಲಿಮೆಂಟ್ ಒಂದನ್ನು ಸೇರಿಸಿಕೊಳ್ಳಬೇಕೇ ಎಂಬುದರ ಕುರಿತು ನಿಮ್ಮ ವೈದ್ಯರು ನಿಮಗೆ ಸಲಹೆ ನೀಡುವರು.

ಈ ಸಂದರ್ಭಗಳಲ್ಲಿ ಬಿ ವಿಟಮಿನ್ ಅತ್ಯವಶ್ಯಕ

ಈ ಸಂದರ್ಭಗಳಲ್ಲಿ ಬಿ ವಿಟಮಿನ್ ಅತ್ಯವಶ್ಯಕ

* ನಿಮ್ಮ ವಯಸ್ಸು 50 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಾಗಿದ್ದಲ್ಲಿ

* ನೀವು ಗರ್ಭಿಣಿಯಾಗಿದ್ದಲ್ಲಿ

* ಕೆಲನಿರ್ದಿಷ್ಟ ದೀರ್ಘಕಾಲೀನ ಅನಾರೋಗ್ಯಕರ ಪರಿಸ್ಥಿತಿಗಳನ್ನು ಹೊಂದಿದ್ದಲ್ಲಿ

* ನಿತ್ಯ ಸಸ್ಯಾಹಾರೀ ಆಹಾರಪದ್ಧತಿಯು ನಿಮ್ಮದಾಗಿದ್ದಲ್ಲಿ

* ನಿತ್ಯ ಶಾಖಾಹಾರೀ ಆಹಾರಪದ್ಧತಿಯು ನಿಮ್ಮದಾಗಿದ್ದಲ್ಲಿ

ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಅತಿಯಾಗಿ ಸೇವಿಸಿದಲ್ಲಿ ಏನಾಗುತ್ತದೆ ?

ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಅತಿಯಾಗಿ ಸೇವಿಸಿದಲ್ಲಿ ಏನಾಗುತ್ತದೆ ?

ನಿಮ್ಮ ಆಹಾರಕ್ರಮದಿಂದಾಗಿ ನೀವು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವಂತಾಗುವ ಸಂದರ್ಭವು ತೀರಾ ವಿರಳ. ಏಕೆಂದರೆ ಬಿ ಕಾಂಪ್ಲೆಕ್ಸ್ ವಿಟಮಿನ್ ಗಳು ನೀರಿನಲ್ಲಿ ಕರಗುತ್ತವೆ. ಇದರರ್ಥವೇನೆಂದರೆ ಹೆಚ್ಚಾದ ಬಿ ವಿಟಮಿನ್ ಗಳು ದೇಹದಲ್ಲಿ ಸಂಚಯಗೊಳ್ಳುವ ಬದಲು ಅವು ಪ್ರತಿದಿನ ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ.

ವಿಟಮಿನ್ ಬಿ ಕಾಂಪ್ಲೆಕ್ಸ್ ನ ಓವರ್ಡೋಸ್‌ನ ರೋಗಲಕ್ಷಣಗಳು:

* ವಿಪರೀತ ನೀರಡಿಕೆಯಾಗುವುದು

* ತ್ವಚೆಯ ಅನಾರೋಗ್ಯಕರ ಸ್ಥಿತಿಗತಿ

* ದೃಷ್ಟಿ ಮಾಂದ್ಯತೆ

* ಹೊಟ್ಟೆ ಕಿವುಚಿದಂತಾಗಿ ನೋವು

* ವಾಕರಿಕೆ ಬರುವಂತಾಗುವುದು

* ಅಧಿಕ ಪ್ರಮಾಣದಲ್ಲಿ ಮೂತ್ರವಿಸರ್ಜನೆ

* ಆಮಶಂಕೆ

* ತ್ವಚೆಯ ಶಾಖವೇರಿ ಕೆಂಪಗಾಗುವುದು

ಇಂತಹ ಯಾವುದೇ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ಭೇಟಿ ಮಾಡಿ.

ಎಚ್ಚರ

ಎಚ್ಚರ

ಬಿ ವಿಟಮಿನ್ ಗಳ ಕೊರತೆಯ ಬಗ್ಗೆ ತಜ್ಞ ವೈದ್ಯರಿಂದ ರೋಗನಿರ್ಣಯವೊಂದನ್ನು ಕೈಗೊಳ್ಳದೇ ಒಂದು ವೇಳೆ ನೀವು ಹಾಗೇನೇ ಸಂಪ್ಲಿಮೆಂಟ್ ಗಳನ್ನು ಸೇವಿಸುತ್ತಿದ್ದರೆ ಇದು ಸೂಕ್ತ ಕ್ರಮವಲ್ಲ. ಕೂಡಲೇ ವೈದ್ಯರೊಂದಿಗೆ ಸಮಾಲೋಚಿಸಬೇಕಾಗುತ್ತದೆ. ದೀರ್ಘಕಾಲದವರೆಗೆ ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಅತಿಯಾಗಿ ಸೇವಿಸಿದಲ್ಲಿ, ಅದು ನರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದರ ಪರಿಣಾಮವಾಗಿ ನಿಮ್ಮ ದೈಹಿಕ ಚಲನವಲನಗಳ ಮೇಲಿನ ನಿಮ್ಮ ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆ.

ಯಾವುದೇ ಪ್ರಶ್ನಾರ್ಹ ಸೇರ್ಪಡೆಗಳು ಇಲ್ಲದ ರೀತಿಯಲ್ಲಿ, ಉನ್ನತ ಗುಣಮಟ್ಟದ ಉತ್ಪನ್ನವೊಂದನ್ನು ನೀವು ಬಳಸುತ್ತಿರುವುದನ್ನು ಖಚಿತಪಡಿಸುವ ದಿಶೆಯಲ್ಲಿ ಇದು ನೆರವಾಗುತ್ತದೆ. ಒಂದು ಗೊತ್ತಾದ, ನಿರ್ಧಿಷ್ಟ ಬ್ರ್ಯಾಂಡ್ ಅನ್ನು ಪರಿಗಣಿಸುವಂತೆ ನಿಮಗೆ ಸಲಹೆ ನೀಡಲು ನಿಮ್ಮ ವೈದ್ಯರಿಂದ ಸಾಧ್ಯವಾಗಬಹುದು. ಸಪ್ಲಿಮೆಂಟ್ ನ ಪೊಟ್ಟಣದ ಮೇಲೆ ಲೇಪಿಸಲಾಗಿರುವ ಎಲ್ಲಾ ಚೀಟಿ/ಲೇಬಲ್ ಗಳನ್ನೂ ನೀವು ಯಾವಾಗಲೂ ಜಾಗರೂಕತೆಯಿಂದ ಓದಬೇಕು ಮತ್ತು ಉತ್ಪಾದಕರಿಂದ ನೀಡಲ್ಪಟ್ಟಿರುವ ಯಾವುದೇ ಸೂಚನೆಯನ್ನು ನೀವು ಚಾಚೂ ತಪ್ಪದೇ ಪಾಲಿಸಬೇಕು. ಸಪ್ಲಿಮೆಂಟ್ ಸೇವನೆಯ ಪ್ರಮಾಣದ ಕುರಿತು ಪ್ರಶ್ನೆಗಳೇನಾದರೂ ಇದ್ದಲ್ಲಿ, ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ.

English summary

Why Vitamin B Complex Important And How It Helps Us

Here we are discussing about why vitamin B complex important and how it helps us. Read on to learn more about how these vitamin B complex nutrients benefit you, how much you need, whether you should take supplements and more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X