For Quick Alerts
ALLOW NOTIFICATIONS  
For Daily Alerts

ಕೊರೊನಾ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ಈ ಗಿಡವೇ ಮದ್ದು

|

ಈಗ ಅಂತೂ ಕೊರೊನಾ ಭಯ ಮನುಷ್ಯರ ಜೀವವನ್ನು ಹಿಂಡುತ್ತಿದೆ. ಇವುಗಳ ಜೊತೆಗೆ ಮಳೆಗಾಲವಾಗಿರುವುದರಿಂದ ಡೆಂಗ್ಯೂ, ಚಿಕನ್‌ ಗುನ್ಯಾಗಳ ಆರ್ಭಟವೂ ಹೆಚ್ಚಾಗಿಯೇ ಇದೆ. ಮನುಷ್ಯ ಒಂಥರಾ ಭಯಭೀತನಾಗಿದ್ದಾನೆ.

These Diseases Can Avoid By Using Tulasi Leaf

ಈಗ ನಾವೆಲ್ಲಾ ಭಯಪಟ್ಟು ಕೂರುವುದಕ್ಕಿಂತ ಈ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವುದು ಹೇಗೆ ಎಂದು ಕಲಿಯಬೇಕಾಗಿದೆ. ಮೊದಲಿಗೆ ಭಯ ಬಿಡಬೇಕಾಗಿದೆ. ಇನ್ನು ನಮ್ಮ ಸುತ್ತ ಮುತ್ತ ಇರುವ ಔಷಧೀಯ ಗಿಡಗಳನ್ನು ಬಳಸಿಕೊಳ್ಳುವುದನ್ನು ತಿಳಿದುಕೊಳ್ಳಬೇಕಾಗಿದೆ.

ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಪರಿಸರದಲ್ಲಿ ಅದನ್ನು ಮೊದಲು ನಾವು ಅರಿತುಕೊಳ್ಳಬೇಕು. ಆಯುರ್ವೇದ ಹಾಗೂ ಆಯುಷ್‌ ಇಲಾಖೆ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಕಾಯಿಲೆ ಬರುವುದನ್ನು ತಡೆಗಟ್ಟಲು ಗಿಡ ಮೂಲಿಕೆ ಬಳಸುವಂತೆ ಸಲಹೆ ನೀಡಿದೆ. ಇಲ್ಲಿ ನಾವು ಕೊರೊನಾವೈರಸ್‌ ತಡೆಗಟ್ಟುವುದರ ಜೊತೆಗೆ ಸೊಳ್ಳೆಯಿಂದ ಹರಡುವ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಮುಂತಾದ ರೋಗಗಳನ್ನು ತಡೆಗಟ್ಟುವಲ್ಲಿ ತುಳಸಿ ಹೇಗೆ ಸಹಕಾರಿ ಹಾಗೂ ತುಳಸಿಯ ಇತರ ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ ನೋಡಿ:

ನೆಗಡಿ, ಕೆಮ್ಮಿಗೆ ಮನೆಮದ್ದು

ನೆಗಡಿ, ಕೆಮ್ಮಿಗೆ ಮನೆಮದ್ದು

ತುಳಸಿ ನೆಗಡಿ, ಕೆಮ್ಮು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾದ ಮನೆಮದ್ದಾಗಿದೆ, ಕೆಮ್ಮು-ಶೀತ ಉಂಟಾದಾಗ ಇದರ ಅರ್ಧ ಚಮಚ ರಸಕ್ಕೆ ಸ್ವಲ್ಪ ಜೇನು ಹಾಗೂ ಕಾಳು ಮೆಣಸಿನಪುಡಿ ಮಿಕ್ಸ್ ಮಾಡಿ ಸೇವಿಸಿ. ಈ ರೀತಿ ದಿನದಲ್ಲಿ 3 ಬಾರಿ ಸೇವಿಸಿದರೆ ಒಂದೆರಡು ದಿನದಲ್ಲಿ ನೆಗಡಿ, ಕೆಮ್ಮು ಮಾಯ.

H1N1/ ಹಂದಿ ಜ್ವರ ತಡೆಗಟ್ಟುತ್ತದೆ

H1N1/ ಹಂದಿ ಜ್ವರ ತಡೆಗಟ್ಟುತ್ತದೆ

ಹೆಚ್‌1ಎನ್‌1 ತಡೆಗಟ್ಟುವಲ್ಲಿಯೂ ತುಳಸಿ ಪರಿಣಾಮಕಾರಿ. ಪ್ರತಿದಿನ 4-5 ತುಳಸಿ ಎಲೆಗಳನ್ನು ತಿನ್ನುವುದರಿಂದ ಹಂದಿ ಜ್ವರ ಬಾರದಂತೆ ತಡೆಗಟ್ಟುವುದರ ಜೊತೆಗೆ ರೋಗ ಪೀಡಿತರು ಬೇಗನೆ ಗುಣಮುಖರಾಗಲೂ ಸಹಾಯ ಮಾಡುತ್ತದೆ.

ಕೊರೊನಾ, ಡೆಂಗ್ಯೂ, ಚಿಕನ್‌ ಗುನ್ಯಾ ತಡೆಗಟ್ಟುವ ತುಳಸಿ

ಕೊರೊನಾ, ಡೆಂಗ್ಯೂ, ಚಿಕನ್‌ ಗುನ್ಯಾ ತಡೆಗಟ್ಟುವ ತುಳಸಿ

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಈ ಕಾಯಿಲೆಗಳು ಬಾಧಿಸುವುದೇ ಇಲ್ಲ. ಆದ್ದರಿಂದ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಗಿರಿಧರ್‌ ಕಜೆಯವರು ಹೇಳಿರುವ ಪ್ರಕಾರ ಒಬ್ಬ ವ್ಯಕ್ತಿ ಒಂದು ಲೀಟರ್ ನೀರಿಗೆ 4-5 ತುಳಸಿ ಎಲೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ರೋಗ ನಿರೋಧಕ ಶಕ್ತಿ ಹೆಚ್ಚಿರುವವರಿಗೆ ಕೊರೊನಾವೈರಸ್ ಏನೂ ಮಾಡಲು ಸಾಧ್ಯವಾಗುವುದಿಲ್ಲ.

ಮಧುಮೇಹ ಕೂಡ ನಿಯಂತ್ರಣದಲ್ಲಿಡಬಹುದು

ಮಧುಮೇಹ ಕೂಡ ನಿಯಂತ್ರಣದಲ್ಲಿಡಬಹುದು

ಇನ್ನು ಮಧುಮೇಹಿಗಳು ಈ ಸಮಯದಲ್ಲಿ ಆರೋಗ್ಯದ ಕಡೆಗೆ ಮತ್ತಷ್ಟು ಗಮನ ನೀಡಬೇಕು. 3-4 ತುಳಸಿ ಎಲೆ ಪ್ರತಿದಿನ ತಿಂದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡುತ್ತದೆ.

 ಬ್ಯಾಕ್ಟಿರಿಯಾ ಮತ್ತು ವೈರಸ್‌ ನಾಶ ಪಡಿಸುತ್ತದೆ

ಬ್ಯಾಕ್ಟಿರಿಯಾ ಮತ್ತು ವೈರಸ್‌ ನಾಶ ಪಡಿಸುತ್ತದೆ

ತುಳಸಿಗೆ ಬ್ಯಾಕ್ಟಿರಿಯಾ ಹಾಗೂ ವೈರಸ್ ನಾಶ ಪಡಿಸುವ ಗುಣವಿದೆ. ಇದಕ್ಕೆ ವಾಂತಿ, ಬೇಧಿ, ಕ್ಷಯಾ ರೋಗಗಳನ್ನು ಗುಣೊಡಿಸುವ ಶಕ್ತಿಯನ್ನು ಹೊಂದಿದೆ. ಅಲ್ಲದೆ ಇದು ತ್ವಚೆ ಅಲರ್ಜಿ ಅಂಥ ಸಮಸ್ಯೆ ಕೂಡ ಹೋಗಲಾಡಿಸುತ್ತೆ.

ಜ್ಞಾಪಕ ಶಕ್ತಿ ಹೆಚ್ಚುವುದು, ಮಾನಸಿಕ ಒತ್ತಡ ಕಡಿಮೆಯಾಗುವುದು

ಜ್ಞಾಪಕ ಶಕ್ತಿ ಹೆಚ್ಚುವುದು, ಮಾನಸಿಕ ಒತ್ತಡ ಕಡಿಮೆಯಾಗುವುದು

ಇದನ್ನು ಪ್ರತಿದಿನ ತಿನ್ನುವುದರಿಂದ ವಯಸ್ಸಾದಾಗ ಕಾಡುವ ಮರೆವು ಸಮಸ್ಯೆ ಉಂಟಾಗುವುದಿಲ್ಲ. ಜ್ಞಾಪಕ ಶಕ್ತಿ ಚೆನ್ನಾಗಿ ಇರುತ್ತದೆ ಹಾಗೂ ಇದರ ಕಷಾಯ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿಯೂ ಸಹಕಾರಿ.

ತಲೆ ಹೇನು ಸಮಸ್ಯೆ ಕೂಡ ಇರಲ್ಲ

ತಲೆ ಹೇನು ಸಮಸ್ಯೆ ಕೂಡ ಇರಲ್ಲ

ಮಕ್ಕಳ ತಲೆ ಹೇನಾಗಿದ್ದರೆ ಕೊಬ್ಬರಿ ಎಣ್ಣೆಗೆ ಸ್ವಲ್ಪ ತುಳಸಿ ಹಾಕಿ ಕುದಿಸಿ, ಆ ಎಣ್ಣೆಯನ್ನು ಹಚ್ಚುವುದರಿಂದ ಹೇನು ಇಲ್ಲವಾಗುವುದು, ಇನ್ನು ತ್ವಚೆ ಅಲರ್ಜಿಗೂ ಇದನ್ನು ಮನೆಮದ್ದಾಗಿ ಬಳಸಬಹುದು.

ಸೊಳ್ಳೆ ತಡೆಗಟ್ಟುತ್ತದೆ

ಸೊಳ್ಳೆ ತಡೆಗಟ್ಟುತ್ತದೆ

ತುಳಸಿ ಗಿಡ ಮನೆ ಮುಂದೆ ಇದ್ದರೆ ಸೊಳ್ಳೆ ಕಾಟ ಕಡಿಮೆಯಾಗುವುದು. ಇದರ ಎಲೆಯನ್ನು ನೀರಿಗೆ ಹಾಕಿ ಕುದಿಸಿ, ಅದನ್ನು ಕೋಣೆಗೆ ಸ್ಪ್ರೇ ಮಾಡಿದರೆ ಸೊಳ್ಳೆ ಬರುವುದಿಲ್ಲ. ಹೀಗೆ ತುಳಸಿಯಿಂದ ಹತ್ತಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

English summary

Why Tulsi May Be the Best Ayurvedic Medicine to Fight Cold, Flu: Home Remedies for Viral Infections

These diseases can avoid by using basil or tulsi leaf, have a look,
X
Desktop Bottom Promotion