For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್ ಏಕೆ ಕೆಲವರಲ್ಲಿ ಮೈಲ್ಡ್, ಇನ್ನು ಕೆಲವರಲ್ಲಿ ಡೆಡ್ಲಿ?

|

ಕೊರೊನಾ ರೂಪ ಒಬ್ಬೊಬ್ಬರಲ್ಲಿ ಒಂದೊಂದು ತರ. ಒಬ್ಬರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಮೈಲ್ಡ್ ಆಗಿದ್ರೆ ಅಂದರೆ ಕೆಮ್ಮು, ಜ್ವರ ಈ ರೀತಿಯ ಲಕ್ಷಣಗಳಷ್ಟೇ ಇದ್ದರೆ ಇನ್ನು ಕೆಲವರಿಗೆ ಉಸಿರಾಡಲೇ ಕಷ್ಟವಾಗುವಷ್ಟು ಗಂಭೀರವಾಗುವುದು. ಇನ್ನು ಕೆಲವರಿಗೆ ಕೊರೊನಾ ಬಂದಿದ್ದು ಗೊತ್ತಾಗುವುದಿಲ್ಲ, ಹೋದದ್ದು ಗೊತ್ತಾಗುವುದಿಲ್ಲ, ಅಂದ್ರೆ ಸೋಂಕಿನ ಲಕ್ಷಣಗಳೇ ಕಂಡು ಬಂದಿರುವುದಿಲ್ಲ.

ಏಕೆ ಕೆಲವರಿಗೆ ಸಣ್ಣ-ಪುಟ್ಟ ಲಕ್ಷಣಗಳು ಕಂಡು ಬಂದರೆ ಇನ್ನು ಕೆಲವರಿಗೆ ಗಂಭೀರವಾಗುತ್ತದೆ, ಏಕೆ ಕೆಲವರಿಗೆ ಸೋಂಕು ಇದ್ದರೂ ಅದರ ಲಕ್ಷಣಗಳೇ ಕಂಡು ಬರುವುದಿಲ್ಲ, ಏಕೆ ಹೀಗಾಗುತ್ತದೆ, ಯಾರಲ್ಲಿ ಸೋಂಕಿನ ಲಕ್ಷಣಗಳು ಗಂಭೀರವಾಗಿರುತ್ತದೆ, ಯಾರಿಗೆ ಸೋಂಕು ತಗುಲಿದರೂ ಕೆಲವೊಮ್ಮೆ ಯಾವ ಲಕ್ಷಣಗಳೂ ಕಂಡು ಬರುವುದಿಲ್ಲ ಎಂದು ನೋಡೋಣ ಬನ್ನಿ:

ವಯಸ್ಸಾದವರು vs ಚಿಕ್ಕ ಪ್ರಾಯದವರು

ವಯಸ್ಸಾದವರು vs ಚಿಕ್ಕ ಪ್ರಾಯದವರು

ಕೊರೊನಾ ವಯಸ್ಸಾದವರಿಗೆ ತುಂಬಾನೇ ಅಪಾಯಕಾರಿ. ಗಂಭೀರ ಸೋಂಕಿಗೆ ತುತ್ತಾದವರಲ್ಲಿ ವಯಸ್ಸಾದವರು ಹಾಗೂ ಮಧ್ಯ ವಯಸ್ಕರ ಸಂಖ್ಯೆ ಅಧಿಕ. ಕೊರೊನಾ ವೈರಸ್‌ ಎಂಬುವುದು ಬರೀ ಜೀವ ಕಣಗಳನ್ನು ನಾಶ ಮಾಡುವ ವೈರಸ್‌ ಅಲ್ಲ, ಬದಲಿಗೆ ಅದು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ. ವಯಸ್ಸಾದವರಲ್ಲಿ ಹಾಗೂ ಮಧ್ಯವಯಸ್ಕರಲ್ಲಿ ವಯೋಸಹಜ ಕಾಯಿಲೆಗಳಿದ್ದರೆ ಅಂಥವರಿಗೆ ಕೊರೊನಾ ಸೋಂಕು ತಗುಲಿದರೆ ಆರೋಗ್ಯ ಸ್ಥಿತಿ ಗಂಭೀರವಾಗುವುದು.

ಕೊರೊನಾ ಎರಡನೇ ಅಲೆ ಚಿಕ್ಕ ಪ್ರಾಯದವರನ್ನೂ ಬಲಿ ತೆಗೆದುಕೊಂಡಿದಿದೆ, ಏನಾದರೂ ಆರೋಗ್ಯ ಸಮಸ್ಯೆ ಇದ್ದಿದ್ದರೆ ಅಥವಾ ಆರಂಭದ ಹಂತದಲ್ಲಿ ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಕೂಡ ಸೋಂಕು ಗಂಭೀರವಾಗಿ ಸಾವನ್ನಪ್ಪುವವರು.

ಇನ್ನು ಕೆಲವರಿಗೆ ಸೋಂಕು ತಗುಲಿದರೂ ಅವರಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ರೋಗ ಲಕ್ಷಣಗಳೇ ಕಂಡು ಬರುವುದಿಲ್ಲ, ಆದವರೆ ಸೋಂಕು ಹರಡುವುದರಲ್ಲಿ ಇಂಥವರೇ ಅಪಾಯಕಾರಿ. ಏಕೆಂದರೆ ಸೋಂಕಿನ ಲಕ್ಷಣಗಳು ಇರದಿರುವ ಕಾರಣ ಹೊರಗಡೆ ಸುತ್ತಾಡುತ್ತಾರೆ, ಆಗ ಮತ್ತೊಬ್ಬರಿಗೆ ಇವರಿಂದ ರೋಗ ಹರಡುವ ಸಾಧ್ಯತೆ ಅಧಿಕ.

ಪುರುಷ vs ಮಹಿಳೆ

ಪುರುಷ vs ಮಹಿಳೆ

ಕೊರೊನಾವೈರಸ್‌ ಸೋಂಕಿತರ ಅಂಕಿ ಅಂಶ ನೋಡಿದಾಗ ಇ ಸೋಂಕು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಿಗೆ ಹೆಚ್ಚು ಗಂಭೀರವಾಗುತ್ತಿದೆ. ಉದಾಹರಣೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ನೋಡಿದಾಗ ಶೇ.70ರಷ್ಟು ಪುರುಷರೇ ಆಗಿದ್ದಾರೆ.

ಏಕೇ ಪುರುಷರೇ ಹೆಚ್ಚು ಕೊರೊನಾಗೆ ಬಲಿಯಾಗುತ್ತಿದ್ದಾರೆ ಎಂದು ನೋಡಿದಾಗ ಅಧಿಕ ಪುರುಷರಲ್ಲಿ ಮದ್ಯಪಾನ ಹಾಗೂ ಧೂಮಪಾನ ಅಭ್ಯಾಸವಿರುತ್ತದೆ. ಈ ಚಟ ಇರುವವರಿಗೆ ಕೊರೊನಾ ಸೋಂಕು ತಗುಲಿದಾಗ ಮೊದಲೇ ಹಾಳಾಗಿದ್ದ ಶ್ವಾಸಕೋಶದ ಮೇಲೆ ವೈರಸ್ ದಾಳಿ ಮಾಡಿದಾಗ ಬೇಗನೆ ಅಸ್ವಸ್ಥರಾಗುತ್ತಾರೆ.

 ಕೆಲ ಆರೋಗ್ಯ ಸಮಸ್ಯೆಗಳು

ಕೆಲ ಆರೋಗ್ಯ ಸಮಸ್ಯೆಗಳು

ಕೋವಿಡ್ 19 ಲಕ್ಷಣಗಳು ಗಂಭೀರವಾಗಿರುವ ಕೊರೊನಾ ಸೋಂಕಿತರಿಗೆ ಮಧುಮೇಹ, ಒಬೆಸಿಟಿ, ಹೃದಯ ಸಂಬಂಧಿ ಸಮಸ್ಯೆ, ಅಸ್ತಮಾ, ಕಿಡ್ನಿ ಸಂಬಂಧಿಸಿದ ಸಮಸ್ಯೆ ಅಥವಾ ಮತ್ತಿತರ ಆರೋಗ್ಯ ಸಮಸ್ಯೆಗಳಲ್ಲಿ ಏನಾದರೂ ಒಂದು ಇದ್ದೇ ಇರುತ್ತದೆ.

ಈಗಾಗಲೇ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಅಂಥವರಿಗೆ ಕೊರೊನಾ ಸೋಂಕು ತಗುಲಿದರೆ ಪರಿಸ್ಥಿತಿ ತುಂಬಾ ದುರ್ಬಲವಾಗುವುದು. ಆದ್ದರಿಂದ ಇಂಥವರು ಈ ಸಂದರ್ಭದಲ್ಲಿ ತುಂಬಾನೇ ಮುನ್ನಚ್ಚರಿಕೆವಹಿಸಬೇಕು.

 ಇಮ್ಯೂನೆ ಸಿಸ್ಟಮ್ ಗ್ಯಾಪ್

ಇಮ್ಯೂನೆ ಸಿಸ್ಟಮ್ ಗ್ಯಾಪ್

ಕೆಲವರು ನೋಡಲು ತುಂಬಾ ಆರೋಗ್ಯವಂತರಾಗಿ ಕಾಣುತ್ತಾರೆ. ಆದರೆ ಕೆಲವೊಂದು ಸೋಂಕು ತಗುಲಿದಾಗ ಅವರ ರೋಗ ನಿರೋಧಕ ವ್ಯವಸ್ಥೆಗೆ ಅದನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಪರಿಸ್ಥಿತಿ ಗಂಭೀರವಾಗುವುದು.

ವೈರಲ್ ಡೋಸ್‌

ವೈರಲ್ ಡೋಸ್‌

ತಜ್ಞರ ಪ್ರಕಾರ ಸೋಂಕು ಯಾವ ಪ್ರಮಾಣದಲ್ಲಿ ತಗುಲಿದೆ ಎಂಬುವುದರ ಮೇಲೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲೋ ವೈರಲ್ ಡೋಸ್‌ ಆಗಿದ್ದರೆ ಸಣ್ಣ-ಪುಟ್ಟ ಲಕ್ಷಣಗಳು ಕಾಣುತ್ತವೆ, ಅದೇ ಹೈ ವೈರಲ್ ಡೋಸ್ ಆಗಿದ್ದರೆ ರೋಗ ಲಕ್ಷಣಗಳು ಗಂಭೀರವಾಗಿರುತ್ತದೆ.

 ವೈರಸ್ ತಳಿ

ವೈರಸ್ ತಳಿ

ಕೆಲವೊಂದು ವೈರಸ್ ತಳಿ ಅಷ್ಟೇನು ಭಯಾನಕವಾಗಿರುವುದಿಲ್ಲ, ಆದರೆ ಇನ್ನು ಕೆಲ ತಳಿ ಭೀಕರವಾಗಿರುತ್ತದೆ. ತಜ್ಞರ ಪ್ರಕಾರ ಕೊರೊನಾವೈರಸ್ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಕೊರೊನಾವೈರಸ್ ರೂಪಾಂತರ ತಳಿ ಹೆಚ್ಚು ಅಪಾಯಕಾರಿಯಾಗಿದೆ. ಡಬಲ್ ಮ್ಯೂಟೆಂಟ್ ತಳಿ, ಕೊರೊನಾ ವೈರಸ್ 3ನೇ ರೂಪಾಂತರ ತಳಿ ಹೆಚ್ಚು ಅಪಾಯಕಾರಿಯಾಗಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

English summary

Why is COVID-19 Mild For Some Deadly For Others In Kannada

Why is COVID-19 mild for some, deadly for others, Have a look.
X