For Quick Alerts
ALLOW NOTIFICATIONS  
For Daily Alerts

ಹೆಚ್ಚಾಗಿ ಹೃದಯಾಘಾತವಾಗೋದು ಚಳಿಗಾಲದಲ್ಲೇ.. ಏಕೆ? ಅದನ್ನು ಕಡಿಮೆ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ಅತ್ಯಂತ ಸಾಮಾನ್ಯವಾಗಿದ್ದು, ಎಳೆವಯಸ್ಸಿನ ತರುಣರೇ ಇದಕ್ಕೆ ಬಲಿಯಾಗುತ್ತಿರುವುದು ವಿಷಾದದ ಸಂಗತಿ. ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಅನೇಕ ಅಪಾಯಕಾರಿ ಅಂಶಗಳಿದ್ದರೂ, ತಡವಾಗಿ ಗುರುತಿಸುವುದು, ಕಾಲೋಚಿತ ಬದಲಾವಣೆಗಳು ಸಹ ನಿಮ್ಮ ಹೃದಯವನ್ನು ಹಾನಿಗೊಳಿಸಬಹುದು.

ಚಳಿಗಾಲ ಎಲ್ಲರೂ ಇಷ್ಟಪಡುವ ಋತುವಾಗಿದೆ, ಆದರೆ ಹೆಚ್ಚಿನ ಹೃದಯಾಘಾತಗಳು ಸಂಭವಿಸುವ ಕಾಲವೂ ಇದೇ ಎಂಬುದನ್ನು ಮರೆಯಬಾರದು. ಹೌದು, ಕೇವಲ ಉಸಿರಾಟದ ಕಾಯಿಲೆಗಳು ಮತ್ತು ವೈರಸ್ಗಳ ಮಾತ್ರವಲ್ಲ, ಹೃದ್ರೋಗಗಳು ಕೂಡ ಚಳಿಗಾಲದಲ್ಲಿ ಹೆಚ್ಚಾಗಿ ಕಾಡುತ್ತವೆ. ಹವಾಮಾನದಲ್ಲಿ ಹಠಾತ್ ಕುಸಿತವು ಇದಕ್ಕೆ ಕಾರಣ. ಆದ್ದರಿಂದ ಚಳಿಗಾಲವು ಎಂದಿಗಿಂತಲೂ ಹೆಚ್ಚು ಎಚ್ಚರಿಕೆ ವಹಿಸಬೇಕಾದ ಸಮಯವಾಗಿದೆ.

ಚಳಿಗಾಲದಲ್ಲಿ ಹೃದಯಾಘಾತ ಸಾಮಾನ್ಯ ಏಕೆ?:

ಚಳಿಗಾಲದಲ್ಲಿ ಹೃದಯಾಘಾತ ಸಾಮಾನ್ಯ ಏಕೆ?:

ಇದು ಏಕೆ ಸಂಭವಿಸುತ್ತದೆ ಎಂಬುದಕ್ಕೆ ಯಾವುದೇ ನಿಖರವಾದ ಕಾರಣಗಳಿಲ್ಲದಿದ್ದರೂ, ಬಹಳಷ್ಟು ತಜ್ಞರು ಹೃದಯಾಘಾತದ ಹೆಚ್ಚಳವು ನಮ್ಮ ಶರೀರಶಾಸ್ತ್ರದ ಕಾರಣದಿಂದಾಗಿ ಎಂದು ಭಾವಿಸುತ್ತಾರೆ. ತಾಪಮಾನದಲ್ಲಿನ ಕುಸಿತವು ಹೃದಯದ ಮೇಲೆ ಪರಿಣಾಮ ಬೀರುವುದರಿಂದ, ಹೃದಯಾಘಾತದ ಜೊತೆಗೆ ಚಳಿಗಾಲದಲ್ಲಿ ಪಾರ್ಶ್ವವಾಯು, ಹೃದಯ ವೈಫಲ್ಯ, ಹೃದಯರಕ್ತನಾಳದ ಸಮಸ್ಯೆಗಳು, ಆರ್ಹೆತ್ಮಿಯಾ ಮತ್ತು ಅಸ್ವಸ್ಥತೆಗಳ ಹೆಚ್ಚಿನ ಅಪಾಯವಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ.

ಚಳಿಗಾಲದಲ್ಲಿ, ನರಮಂಡಲದ ಕ್ರಿಯಾಶೀಲತೆಯು ಹೆಚ್ಚಾಗುತ್ತದೆ, ಇದು ರಕ್ತನಾಳಗಳನ್ನು ಕಿರಿದಾಗಿಸುತ್ತದೆ, ಇದನ್ನು 'ವಾಸೋಕನ್ಸ್ಟ್ರಿಕ್ಷನ್' ಎಂದೂ ಕರೆಯಲಾಗುತ್ತದೆ. ಹೀಗಾದಾಗ, ರಕ್ತದೊತ್ತಡ ಮಟ್ಟವು ಹೆಚ್ಚಾಗುತ್ತದೆ. ಆಗ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸುತ್ತದೆ. ಇದಲ್ಲದೆ, ಚಳಿಗಾಲದ ತಿಂಗಳುಗಳಲ್ಲಿ, ದೇಹ ಶಾಖವನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು. ಇದು ಹೃದಯದ ರಕ್ತನಾಳಗಳಿಗೆ ಕಷ್ಟಕರವಾಗಿ ಹಾನಿಯನ್ನುಂಟುಮಾಡುತ್ತದೆ.

ಚಳಿಗಾಲವು ಹೃದಯ ಸಮಸ್ಯೆ ಇರುವವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ?:

ಚಳಿಗಾಲವು ಹೃದಯ ಸಮಸ್ಯೆ ಇರುವವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ?:

ಚಳಿಗಾಲದಲ್ಲಿ, ಶೀತವನ್ನು ನಿಭಾಯಿಸಲು ಬಹಳ ಕಷ್ಟವಾಗುತ್ತದೆ. ತಾಪಮಾನ ಕಡಿಮೆಯಾದಾಗ, ದೇಹವು ಶಾಖವನ್ನು ನಿಯಂತ್ರಿಸಲು ದುಪ್ಪಟ್ಟು ಕೆಲಸ ಮಾಡುತ್ತದೆ . ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಹೃದ್ರೋಗಿಯಾಗಿರುವ ಅಥವಾ ಹೃದಯಾಘಾತದ ಇತಿಹಾಸ ಹೊಂದಿರುವವರಿಗೆ ಅಪಾಯವು ತುಂಬಾ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ, ದೇಹಕ್ಕೆ ಆಮ್ಲಜನಕದ ಅವಶ್ಯಕತೆಗಳು ಸಹ ಹೆಚ್ಚಾಗಿರುತ್ತವೆ. ರಕ್ತನಾಳಗಳ ಸಂಕೋಚನವು ಈಗಾಗಲೇ ಸಂಭವಿಸುವುದರೊಂದಿಗೆ, ಕಡಿಮೆ ಪ್ರಮಾಣದ ಆಮ್ಲಜನಕವು ಹೃದಯವನ್ನು ತಲುಪುತ್ತದೆ, ಇದು ಹೃದಯಾಘಾತದ ಅಪಾಯಗಳನ್ನು ಉಂಟುಮಾಡುತ್ತದೆ.

ಇತರ ಯಾವ ಅಂಶಗಳು ಸಮಸ್ಯೆಗಳನ್ನು ಉಂಟುಮಾಡುತ್ತವೆ?

ಇತರ ಯಾವ ಅಂಶಗಳು ಸಮಸ್ಯೆಗಳನ್ನು ಉಂಟುಮಾಡುತ್ತವೆ?

ಚಳಿಗಾಲದ ಆರಂಭದೊಂದಿಗೆ, ಹೃದಯಾಘಾತದ ಅಪಾಯಗಳಿಗೆ ಕಾರಣವಾಗುವ ಅಂಶಗಳಲ್ಲೂ ಏರಿಕೆ ಕಂಡುಬರಬಹುದು. ತಂಪಾದ ತಾಪಮಾನದಿಂದ ಜನರು ಹೊರಬರಲು ಮತ್ತು ದೈಹಿಕವಾಗಿ ಸಕ್ರಿಯವಾಗಿರಲು ಕಷ್ಟಪಡುತ್ತಾರೆ. ಇದು ಹೃದಯಕ್ಕೆ ಒಳ್ಳೆಯದಲ್ಲ. ಆಹಾರ ಸೇವನೆ ಮತ್ತು ಅಭ್ಯಾಸಗಳು ಸಹ ಬದಲಾಗಬಹುದು. ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳ ಅತಿಯಾದ ಸೇವನೆಯು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದಲ್ಲದೆ, ಹೆಚ್ಚುತ್ತಿರುವ ಹೊಗೆ ಮತ್ತು ಮಾಲಿನ್ಯದ ಮಟ್ಟಗಳೊಂದಿಗೆ, ಗಾಳಿಯಲ್ಲಿನ ಕಣಗಳ (PM) ಮಟ್ಟಗಳು ಉರಿಯೂತವನ್ನು ಉಲ್ಬಣಗೊಳಿಸಬಹುದು ಮತ್ತು ಹೃದಯದ ತೊಂದರೆಯನ್ನು ಉಂಟುಮಾಡಬಹುದು. ಈ ಎಲ್ಲಾ ಅಂಶಗಳು, ಚಳಿಗಾಲದಲ್ಲಿ ಹೃದಯಾಘಾತದ ಅಪಾಯಗಳನ್ನು ಹೆಚ್ಚಿಸುವುದು.

ಅಪಾಯವನ್ನು ನೀವು ಹೇಗೆ ಕಡಿಮೆ ಮಾಡಬಹುದು ?:

ಚಳಿಗಾಲದಲ್ಲಿ ಹೆಚ್ಚಿನ ಅಪಾಯವಿರುವುದರಿಂದ ಆರೋಗ್ಯವನ್ನು ಸರಿಯಾದ ಟ್ರ್ಯಾಕ್ನಲ್ಲಿ ಕೊಂಡ್ಯೊಯುವುದು ತುಂಬಾ ಮುಖ್ಯವಾಗಿದೆ. ನಿಮ್ಮ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸಲು ಕೆಲವು ತಜ್ಞರು-ಅನುಮೋದಿತ ವಿಧಾನಗಳು ಇಲ್ಲಿವೆ:
- ಸರಿಯಾದ ಬೆಚ್ಚಗಿನ ಬಟ್ಟೆ ಧರಿಸಿರುವಿರಿ ಎಂದು ಖಚಿತಪಡಿಸಿಕೊಳ್ಳಿ: ಹವಾಮಾನದಲ್ಲಿನ ಬದಲಾವಣೆಯು ಬೇಗನೇ ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡುತ್ತದೆ. ಮಾಲಿನ್ಯ ಮಟ್ಟಗಳೊಂದಿಗೆ ಬರುವ ಋತುಮಾನದ ತೊಂದರೆಗಳನ್ನು ನಿಭಾಯಿಸಲು ಇದು ಉತ್ತಮ ಮಾರ್ಗವಾಗಿದೆ.

- ದೈಹಿಕವಾಗಿ ಸಕ್ರಿಯರಾಗಿರುವುದು ಬಹಳ ಮುಖ್ಯ. ಚಳಿಯ ಉಷ್ಣತೆಯು ನಿಮ್ಮನ್ನು ಹೊರಗೆ ಹೋಗಲು ಬಿಡದಿದ್ದರೆ, ವ್ಯಾಯಾಮ ಮಾಡಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಿ. ನಿಯಮಿತ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಮನೆಯ ವ್ಯಾಯಾಮಗಳು. ಹೃದಯ ಸ್ನೇಹಿ ಏರೋಬಿಕ್ ಚಲನೆಗಳು, ಯೋಗ ಮತ್ತು ಧ್ಯಾನ ಕೂಡ ಅದ್ಭುತಗಳನ್ನು ಮಾಡುತ್ತದೆ.

-ಹೃದ್ರೋಗ ಮತ್ತು ಹಠಾತ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು, ಮಧುಮೇಹ, ರಕ್ತದೊತ್ತಡದ ಮಟ್ಟಗಳು ಮತ್ತು ಇತರ ನಾಳೀಯ ಸಮಸ್ಯೆಗಳು ಸೇರಿದಂತೆ ಇತರ ಅಪಾಯಕಾರಿ ಅಂಶಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಹ ಅಗತ್ಯವಾಗಿದೆ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸದೇ, ಅದು ನಿಮ್ಮನ್ನು ಅಪಾಯಗಳಿಗೆ ಹೆಚ್ಚು ಒಳಗಾಗುವಂತೆ ಮಾಡಬಹುದು.
- ಚಳಿಗಾಲವು ಹಸಿವನ್ನು ಹೆಚ್ಚಿಸಬಹುದು ಮತ್ತು ಹೆಚ್ಚು ಕರಿದ, ಸಿಹಿಯಾದ ಆಹಾರವನ್ನು ಸೇವಿಸುವ ಪ್ರವೃತ್ತಿಯನ್ನೂ ಅತಿಯಾಗಿಸಬಹುದು. ಅವುಗಳಲ್ಲಿ ಕೆಲವು ಕೊಲೆಸ್ಟ್ರಾಲ್, ಸಕ್ಕರೆಗಳು ಮತ್ತು ಕೊಬ್ಬಿನಂಶಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿರಬಹುದು. ಆದ್ದರಿಂದ ನಿಮ್ಮ ಆಹಾರ ಪದ್ಧತಿಯನ್ನು ಆರೋಗ್ಯಕರವಾಗಿಡಿ, ಮಿತಿಯೊಳಗೆ ಇರಿ. ಅಲ್ಲದೆ ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯನ್ನು ಮಿತಿಗೊಳಿಸಿ.

-ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಮತ್ತು ಹಠಾತ್ ಹೃದಯಾಘಾತವನ್ನು ತಡೆಯಲು, ಪ್ರತಿಯೊಬ್ಬ ವ್ಯಕ್ತಿಯು ಸಕಾಲಿಕ ತಪಾಸಣೆಗೆ ಹೋಗುವುದು, ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.
- ಹೃದಯಾಘಾತದ ಸಂದರ್ಭದಲ್ಲಿ ಸನ್ನಿಹಿತವಾದ, ತುರ್ತು ಆರೈಕೆಯ ಅಗತ್ಯವಿರುತ್ತದೆ. ಎಚ್ಚರಿಕೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸಿ, ಆದಷ್ಟು ಬೇಗ ವೈದ್ಯಕೀಯ ಸಹಾಯವನ್ನು ಪಡೆಯಿರಿ ಮತ್ತು ಯಾವುದೇ ರೋಗಲಕ್ಷಣಗಳನ್ನು ಮುಂದೂಡಬೇಡಿ. ಯಾವುದೇ ಕಿರಿಕಿರಿ, ಎದೆಯಲ್ಲಿ ಭಾರ, ಬೆವರುವಿಕೆ, ಭುಜದ ನೋವು, ದವಡೆ ನೋವು, ತಲೆತಿರುಗುವಿಕೆ ಅಥವಾ ವಾಕರಿಕೆಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು.

English summary

Why Heart Attacks are more Common during Winter Season; tips to Reduce in Kannada

Here we talking about Why heart attacks are more common during winter season; tips to reduce in kannada, read on
Story first published: Monday, November 22, 2021, 16:30 [IST]
X