For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಕೊರೊನಾ 3ನೇ ಅಲೆ: ಕೊರೊನಾ ಯಾವಾಗ ಹೆಚ್ಚಾಗಲಿದೆ? ಯಾವಾಗ ಕಡಿಮೆಯಾಗಲಿದೆ?

|

ಭಾರತದಲ್ಲಿ ಕೊರೊನಾ ಅತ್ಯಂತ ವೇಗವಾಗಿ ಹಡರುತ್ತಿದೆ. ಡೆಲ್ಟಾ ಹಾಗೂ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿ ಹೊಸದಾಗಿ 2 ಲಕ್ಷದ 68 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2021 ಡಿಸೆಂಬರ್‌ ಕೊನೆಯ ವಾರದಲ್ಲಿ ಸುಮಾರು 7000 ಇದ್ದ ಕೋವಿಡ್ 19 ಸೋಂಕಿತರ ಸಂಖ್ಯೆ ಈ ವರ್ಷ ಜನವರಿ 13 ಆಗುವಷ್ಟರಲ್ಲಿ ಲಕ್ಷಗಳ ಸಂಖ್ಯೆಯನ್ನು ದಾಟಿದೆ ಎಂದ ಮೇಲೆ ಕೋವಿಡ್ 19 ಎಷ್ಟು ವೇಗವಾಗಿ ಹರಡುತ್ತಿದೆ ಎಂಬುವುದನ್ನು ಊಹಿಸಿ.

ಡೆಲ್ಟಾಗಿಂತ ಒಮಿಕ್ರಾನ್ ಹೆಚ್ಚಾಗಿ ಹರಡುತ್ತಿರುವುದರಿಂದ ಭಾರತದಲ್ಲಿ ಕೊರೊನಾ 3ನೇ ಅಲೆ ಶುರುವಾಗಿದೆ. ಕೋವಿಡ್ 19 ಯಾವಾಗ ಹೆಚ್ಚಾಗಲಿದೆ, ಯಾವಾಗ ಕಡಿಮೆಯಾಗಲಿದೆ ಎಂಬ ಸಾಧ್ಯತೆಗಳ ಬಗ್ಗೆ ತಜ್ಞರು ಹೇಳಿದ್ದು ಅದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

 ಜನವರಿ ಕೊನೆಯ ವಾರದಿಂದ ಹೆಚ್ಚಾಗಲಿದೆ ಕೊರೊನಾ

ಜನವರಿ ಕೊನೆಯ ವಾರದಿಂದ ಹೆಚ್ಚಾಗಲಿದೆ ಕೊರೊನಾ

ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬಯಿ ಮುಂತಾದ ಕಡೆ ಜನವರಿ 20ರಷ್ಟರಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ದೇಶದಲ್ಲಿ ಕೊರೊನಾ ಕೇಸ್‌ 3 ಲಕ್ಷ ಸಮೀಪಕ್ಕೆ ಬಂದಿದ್ದು ಇನ್ನೊಂದು ವಾರದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಈಗ ಕಂಡು ಬರುತ್ತಿರುವ ಕೊರೊನಾ ಕೇಸ್‌ಗಳ ಸಂಖ್ಯೆಯನ್ನು 15 ದಿನಗಳ ಹಿಂದೆಕ್ಕೆ ಹೋಲಿಸಿದಾಗ ಶೇ. 30ರಷ್ಟು ಹೆಚ್ಚಾಗಿದೆ. ಜನವರಿ 20ರ ಬಳಿಕ ಈ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಫೆಬ್ರವರಿಯಲ್ಲಿ ಕೊರೊನಾ ಮತ್ತಷ್ಟು ಹೆಚ್ಚಾಗಲಿದೆ.

ಮುಂಬಯಿಯಲ್ಲಿ ಈಗಾಗಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಿದ್ದಾರೆ. ಆದರೆ ಈಗ ಸ್ವಲ್ಪ ಸೊಂಕು ಕಡಿಮೆ ಕಂಡು ಬರುತ್ತಿದೆ ಎಂದು ಸಿಟಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ ದೆಹಲಿಯಲ್ಲಿ ಬುಧವಾರ 27, 500 ಪ್ರಕರಣಗಳು ಪತ್ತೆಯಾಗಿದ್ದು ಇದುವರೆಗೆ ಕಂಡು ಬಂದಿರುವುದಕ್ಕಿಂತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿರುವುದು ಇದೇ ಆಗಿದೆ.

ವರದಿ ಏನು ಹೇಳುತ್ತದೆ?

ವರದಿ ಏನು ಹೇಳುತ್ತದೆ?

IISc (Indian Institute of Science) ಮತ್ತು(ISI (Indian Statistical Institute)ನ ಸಂಶೋಧಕರ ಕೋವಿಡ್‌ 19 ಕುರಿತು ಸಂಶೋಧನೆ ನಡೆಸಿದ್ದು ಸಂಶೋಧಕ ಪ್ರೊ. ಅಗರ್‌ವಾಲ್‌ ಕೊರೊನಾ ಹೆಚ್ಚಳ ಹಾಗೂ ಕಡಿಮೆಯಾಗುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಅಧ್ಯಯನ ವರದಿ ಪ್ರಕಾರ ಈ ತಿಂಗಳು ಕೊನೆಯಲ್ಲಿ ಹಾಗೂ ಮುಂದಿನ ತಿಂಗಳು ಭಾರತದಲ್ಲಿ ಅತೀ ಹೆಚ್ಚು ಕೋವಿಡ್‌ 19 ಪ್ರಕರಣಗಳು ಕಂಡು ಬರಬಹುದು.

ಒಂದು ಅಂದಾಜು ಪ್ರಕಾರ ದಿನದಲ್ಲಿ 4 ಲಕ್ಷ ಕೋವಿಡ್ 19 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಬಹುದು, ದಿನದಲ್ಲಿ ಸುಮಾರು 20,000 ಜನರಿಗೆ ICU ಚಿಕಿತ್ಸೆ ಬೇಕಾಗಬಹುದು.

ಭಾರತದಲ್ಲಿ 3ನೇ ಅಲೆ

ಭಾರತದಲ್ಲಿ 3ನೇ ಅಲೆ

ಇಂಟರ್‌ನ್ಯಾಷನಲ್‌ ಹೆಲ್ತ್‌ಕೇರ್‌ ಡೆವಲಪ್‌ಮೆಂಟ್ ಕನ್ಸಲ್ಟೆಂನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಮಾನ್‌ಶು ಸಿಕ್ಕಾ ಮೀಡಿಯಾದೊಂದಿಗೆ ಕೋವಿಡ್‌ 19 ಪರಿಸ್ಥಿತಿ ಕುರಿತು ಹೇಳುವಾಗ ಭಾರತದಲ್ಲಿ 3ನೇ ಅಲೆಯಲ್ಲಿ ಕೋವಿಡ್‌ 19 ಕೇಸ್‌ಗಳು ತುಂಬಾ ಹೆಚ್ಚಾಗಲಿದೆ. ದಿನದಲ್ಲಿ ಮಿಲಿಯನ್ ಕೇಸ್‌ಗಳು ಕಂಡು ಬರುವ ಸಾಧ್ಯತೆ ಇದೆ ಎಂದಿದ್ದಾರೆ.

2ನೇ ಅಲೆಯಷ್ಟು ಪರಿಸ್ಥಿತಿ ಗಂಭೀರವಾಗಲ್ಲ

2ನೇ ಅಲೆಯಷ್ಟು ಪರಿಸ್ಥಿತಿ ಗಂಭೀರವಾಗಲ್ಲ

ಭಾರತದಲ್ಲಿ ಈಗಾಗಲೇ ಸಾಕಷ್ಟು ಜನರು ಲಸಿಕೆ ಪಡೆದಿದ್ದಾರೆ. ಅದರ ಜೊತೆಗೆ ಈಗ ಬೂಸ್ಟರ್ ಸಿಗುತ್ತಿದೆ. 15-18 ವರ್ಷದ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಒಮಿಕ್ರಾನ್‌ ಹೆಚ್ಚಿನ ಪರಿಣಾಮ ಬೀರಲ್ಲ ಎಂದು ಹೇಳಲಾಗುತ್ತದೆ. ಆದರೂ ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ಸಿದ್ಧತೆ ಮಾಡಬೇಕಾಗಿದೆ.

ಕೊರೊನಾ ಕೇಸ್‌ಗಳು ಯಾವಾಗ ಕಡಿಮೆಯಾಗಲಿದೆ?

ಕೊರೊನಾ ಕೇಸ್‌ಗಳು ಯಾವಾಗ ಕಡಿಮೆಯಾಗಲಿದೆ?

ಫೆಬ್ರವರಿ ಕೊನೆಯ ವಾರದಿಂದ ಕೊರೊನಾ ಕೇಸ್‌ಗಳಲ್ಲಿ ಇಳಿಮುಖ ಕಂಡು ಬರುವುದು. ಮಾರ್ಚ್-ಏಪ್ರಿಲ್‌ನಲ್ಲಿ ಕಡಿಮೆಯಾಗುತ್ತಾ ಬರುವುದಾಗಿ ತಜ್ಞರು ಹೇಳುತ್ತಿದ್ದಾರೆ. ಕೋವಿಡ್ 19 ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರದಿರಲು ಎರಡು ಡೊಸ್‌ ಲಸಿಕೆ ತೆಗೆದುಕೊಳ್ಳಿ, ಅಗ್ಯತ ಕೊರೊನಾ ಮುನ್ನೆಚ್ಚರಿಕೆ ಪಾಲಿಸಿ.

English summary

When Will India's COVID-19 Third Wave Goes Peak And End? What experts Say in Kannada

When will India's COVID-19 third wave Goes Peak and End? What experts say in Kannada...
X