For Quick Alerts
ALLOW NOTIFICATIONS  
For Daily Alerts

ಕೋವಿಡ್ 19: ಆರೋಗ್ಯ ಇಲಾಖೆ ಹೇಳಿದ ಈ ಲಕ್ಷಣಗಳಿದ್ದರೆ ಆಸ್ಪತ್ರೆಗೆ ದಾಖಲಾಗಿ

|

ಕೊರೊನಾ ಪಾಸಿಟಿವ್ ಬಂದ್ರೆ ಎಲ್ಲರೂ ಆಸ್ಪತ್ರೆಗೆ ಬರಬೇಕಾಗಿಲ್ಲ, ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಿರಿ ಎಂದು ಆರೋಗ್ಯ ಇಲಾಖೆಯವರು ಹೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಇರುವುದರಿಂದ ತುಂಬಾ ಗಂಭೀರವಾದ ರೋಗಿಗಳಿಗಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಉಳಿದವರಿಗೆ ಔಷಧ ನೀಡಿ ಮನೆಗೆ ಕಳುಹಿಸಲಾಗುತ್ತಿದೆ.

ಆದರೆ ಈಗೀನ ಪರಿಸ್ಥಿತಿಯಿಂದಾಗಿ ಜನರಲ್ಲಿ ಒಂದು ರೀತಿಯ ಆತಂಕ ಉಂಟಾಗಿದೆ. ಕೊರೊನಾ ಸಣ್ಣ ಪುಟ್ಟ ಲಕ್ಷಣಗಳಿದ್ದರೂ ಜನರು ಆಸ್ಪತ್ರೆಗೆ ದಾಖಲಾಗಲು ಬಯಸುತ್ತಿದ್ದಾರೆ, ಆದರೆ ಈ ಆತಂಕ ಬೇಡ, ಕೋವಿಡ್ 19 ಲಕ್ಷಣಗಳು ಅಷ್ಟೇನು ಗಂಭೀರವಾಗಿಲ್ಲ ಎಂದಾದರೆ ಯಾವುದೇ ಆತಂಕ ಬೇಡ, ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಿರಿ. ಮನೆಯಲ್ಲಿಯೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರು ಯಾವಾಗ ಮತ್ತು ಯಾವ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗಬೇಕೆಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ ನೋಡಿ:

 ಹೋಂ ಐಸೋಲೇಷನ್‌ ಇರುವವರು ಯಾವ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗಬೇಕು?

ಹೋಂ ಐಸೋಲೇಷನ್‌ ಇರುವವರು ಯಾವ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗಬೇಕು?

* ಆಕ್ಸಿಜನ್ ಸ್ಯಾಚುರೇಷನ್ 93ಕ್ಕಿಂತ ಕಡಿಮೆ ಬಂದ್ರೆ

* ತುಂಬಾ ಸುಸ್ತು ಹಾಗೂ ತಲೆ ತಿರುಗುವುದು

* ಎದೆಯಲ್ಲಿ ನೋವು

ಇಂಥ ಲಕ್ಷಣಗಳು ಕಂಡು ಬಂದ್ರೆ ಆಸ್ಪತ್ರೆಗೆ ದಾಖಲಾಗಬೇಕು.

ಇತರ ಆರೋಗ್ಯ ಸಮಸ್ಯೆಗಳಿದ್ದರೆ

ಇತರ ಆರೋಗ್ಯ ಸಮಸ್ಯೆಗಳಿದ್ದರೆ

ಒಂದು ವೇಳೆ ಮಧುಮೇಹ, ಕೊಲೆಸ್ಟ್ರಾಲ್, ಒಬೆಸಿಟಿ ಮತ್ತಿತರ ಆರೋಗ್ಯ ಸಮಸ್ಯೆಯಿದ್ದರೆ ಅವರು ತಮ್ಮ ಆರೋಗ್ಯ ಸ್ಥಿತಿಯ ಕುರಿತು ವೈದ್ಯರಿಗೆ ಮಾಹಿತಿ ನೀಡುತ್ತಾ ಇರಬೇಕು. ಒಂದು ವೇಳೆ ಏನಾದರೂ ರೋಗ ಲಕ್ಷಣಗಳು ಅಧಿಕವಾದರೆ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬಂದರೆ ಕೂಡಲೇ ಆಕ್ಸಿಜನ್ ವ್ಯವಸ್ಥೆ ಇರುವ ಆಸ್ಪತ್ರೆಗೆ ದಾಖಲಾಗಬೇಕು.

ದೇಶದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್‌ ಹಾಗೂ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ, ಇದರ ಕುರಿತು ಮಾತನಾಡಿರುವ ಏಮ್ಸ್ ನಿರ್ದೇಶಕ ಈ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಯುತ್ತಿವೆ ಎಂದಿದ್ದಾರೆ.

ಹೋಂ ಐಸೋಲೇಷನ್‌ನಲ್ಲಿರುವವರು ಏನನ್ನು ಗಮನಿಸಬೇಕು?

ಹೋಂ ಐಸೋಲೇಷನ್‌ನಲ್ಲಿರುವವರು ಏನನ್ನು ಗಮನಿಸಬೇಕು?

ಕೊರೊನಾ ಪಾಸಿಟಿವ್ ಬಂದು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಇದ್ದರೆ ದೇಹದ ಉಷ್ಣತೆ, ಹಾರ್ಟ್ ರೇಟ್ ಹಾಗೂ ಆಕ್ಸಿಜನ್ ಲೆವಲ್ ಪರೀಕ್ಷಿಸುತ್ತಿರಬೇಕು. ಇದರಲ್ಲಿ ಏನಾದರೂ ವ್ಯತ್ಯಾಸ ಬಂದರೆ ಆಸ್ಪತ್ರೆಗೆ ದಾಖಲಾಗಬೇಕು.

5 ದಿನಕ್ಕಿಂತ ಅಧಿಕ ಜ್ವರವಿದ್ದರೆ ಆಸ್ಪತ್ರೆಗೆ ದಾಖಲಾಗಿ

5 ದಿನಕ್ಕಿಂತ ಅಧಿಕ ಜ್ವರವಿದ್ದರೆ ಆಸ್ಪತ್ರೆಗೆ ದಾಖಲಾಗಿ

5 ದಿನವಾದರೂ ಜ್ವರ ಕಡಿಮೆಯಾಗದಿದ್ದರೆ, ತುಂಬಾ ಕೆಮ್ಮು, ಉಸಿರಾಟಕ್ಕೆ ತೊಂದರೆ ಈ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗಿ.

ಈ ಸಮಯದಲ್ಲಿ ಜಾಗ್ರತೆ ಮುಖ್ಯ, ನಿರ್ಲಕ್ಷ್ಯ ಬೇಡ. ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗಬೇಡಿ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸೋಣ, ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯೋಣ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ.

English summary

When Does a COVID-19 Patient Need to Get Hospitalised: Govt Lists Warning Signs and Symptoms

The Union health ministry lists warning signs and symptoms of when covid-19 infected patients need to get hospitalised. Read on.
X
Desktop Bottom Promotion