For Quick Alerts
ALLOW NOTIFICATIONS  
For Daily Alerts

ಮಂಕಿಪಾಕ್ಸ್‌ ಸಾಂಕ್ರಾಮಿಕವೇ? WHO ಪ್ರಕಾರ ಇದಕ್ಕೆ ಚಿಕಿತ್ಸೆ ಏನು?

|

ಇತ್ತೀಚೆಗೆ ವಿದೇಶದಿಂದ ಬಂದಿದ್ದ ಕೇರಳದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ (ಮಂಕಿಪಾಕ್ಸ್‌) ಪ್ರಥಮ ಪ್ರಕರಣ ಕಂಡುಬಂದಿತ್ತು. ಅಲ್ಲದೆ ಇದರ ಶಂಕಿತ ಪ್ರಕರಣಗಳು ಇನ್ನಷ್ಟು ಹೆಚ್ಚಾಗುತ್ತಿದ್ದು, ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಅಲ್ಲದೆ, WHO ಪ್ರಕಾರ ಮಂಕಿಪಾಕ್ಸ್‌ ಕಾಯಿಲೆಗೆ ಈವರೆಗೂ ಯಾವುದೇ ಚಿಕಿತ್ಸೆ ಲಭ್ಯವಿಲ್ಲ.

ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, UK ಈಗಾಗಲೇ ಮಂಕಿಪಾಕ್ಸ್‌ನ ಏಳು ಪ್ರಕರಣಗಳು ದಾಖಲಾಗಿದೆ, ಇಲ್ಲಿಂದ ಪ್ರಯಾಣಿಸಿದ್ದ ಹಲವು ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಇಷ್ಟೆಲ್ಲಾ ಆತಂಕ ಹುಟ್ಟಿಸಿರುವ ಮಂಕಿಪಾಕ್ಸ್‌ ಕಾಯಿಲೆ ಎಲ್ಲಿಂದ ಬಂತು, ಇದರ ರೋಗ ಲಕ್ಷಣಗಳೇನು, ಇದು ಹೇಗೆ ಹರಡುತ್ತದೆ, ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ:

1. ಸಿಡುಬಿನಂಥ ವೈರಸ್‌ನಿಂದ ಉಂಟಾಗುತ್ತದೆ

1. ಸಿಡುಬಿನಂಥ ವೈರಸ್‌ನಿಂದ ಉಂಟಾಗುತ್ತದೆ

ಮಂಕಿಪಾಕ್ಸ್ ಸಿಡುಬಿಗೆ ನಿಕಟ ಸಂಬಂಧ ಹೊಂದಿರುವ ಅದೇ ಹೆಸರಿನ ವೈರಸ್‌ನಿಂದ ಉಂಟಾಗುತ್ತದೆ. ಮಂಕಿಪಾಕ್ಸ್ ಅನ್ನು ಮೊದಲ ಬಾರಿಗೆ 1958ರಲ್ಲಿ ಕಂಡುಹಿಡಿಯಲಾಯಿತು, ಸಂಶೋಧನೆಗಾಗಿ ಸೆರೆಯಲ್ಲಿದ್ದ ಕೋತಿಗಳಲ್ಲಿ ಮೊದಲ ಬಾರಿಗೆ ಈ ರೋಗ ಕಂಡುಬಂದಿತ್ತು. ಇದು ಮೊದಲು 1970ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (DRC) ಮಾನವರಲ್ಲಿ ಕಾಣಿಸಿಕೊಂಡಿತು ಮತ್ತು ಇದು ಈಗ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿದೆ.

2020 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) 4,594 ಮಂಕಿಪಾಕ್ಸ್‌ನ ಶಂಕಿತ ಪ್ರಕರಣಗಳನ್ನು ವರದಿ ಮಾಡಿದೆ, ಇದರಲ್ಲಿ 171 ಸಾವುಗಳು ಸೇರಿವೆ (ಪ್ರಕರಣದ ಸಾವಿನ ಪ್ರಮಾಣ 3.7%). ಅವುಗಳನ್ನು ಶಂಕಿತ ಎಂದು ವಿವರಿಸಲಾಗಿದೆ ಏಕೆಂದರೆ ದೃಢೀಕರಣಕ್ಕೆ PCR ಪರೀಕ್ಷೆಯ ಅಗತ್ಯವಿರುತ್ತದೆ, ಇದು ಸ್ಥಳೀಯ ಪ್ರದೇಶಗಳಲ್ಲಿ ಸುಲಭವಾಗಿ ಲಭ್ಯವಿಲ್ಲ.

2. ದೇಹದಾದ್ಯಂತ ದದ್ದುಗಳನ್ನು ಉಂಟುಮಾಡುತ್ತದೆ

2. ದೇಹದಾದ್ಯಂತ ದದ್ದುಗಳನ್ನು ಉಂಟುಮಾಡುತ್ತದೆ

ಸೋಂಕಿನ ನಂತರ ಐದರಿಂದ 13 ದಿನಗಳ ನಡುವೆ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ, ಕೆಲವರಲ್ಲಿ ಇದು ಕಾಣಿಸಿಕೊಳ್ಳಲು 21 ದಿನಗಳವರೆಗೆ ತೆಗೆದುಕೊಳ್ಳಬಹುದು. ಆರಂಭಿಕ ಲಕ್ಷಣಗಳು ಜ್ವರ, ತಲೆನೋವು, ಸ್ನಾಯು ನೋವು, ಬೆನ್ನುನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ ಮತ್ತು ಬಳಲಿಕೆ.

ಜ್ವರ ಕಾಣಿಸಿಕೊಂಡ ನಂತರ, ದದ್ದುಗಳು ಹೊರಹೊಮ್ಮುತ್ತವೆ, ದೇಹದ ಇತರ ಪ್ರದೇಶಗಳಿಗೆ ಹರಡುವ ಮೊದಲು ಮುಖ, ಕೈ ಮತ್ತು ಪಾದಗಳ ಮೇಲೆ ಆರಂಭವಾಗುತ್ತವೆ. ಇದು ಬಾಯಿಯ ಒಳಭಾಗಕ್ಕೆ, ಜನನಾಂಗಗಳಿಗೆ ಮತ್ತು ಕಾರ್ನಿಯಾಕ್ಕೆ ಹರಡಬಹುದು. ಇದು ಉದುರಿಹೋಗುವಂಥ ಗಡ್ಡೆಗಳು ರೂಪಿಸುವವರೆಗೆ ದದ್ದು ಮುಂದುವರಿಯುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಚರ್ಮದ ದೊಡ್ಡ ಭಾಗಗಳು ದೇಹದಿಂದ ಬೀಳಬಹುದು.

ರೋಗಲಕ್ಷಣಗಳು ಸಾಮಾನ್ಯವಾಗಿ ಒಂದು ತಿಂಗಳೊಳಗೆ ಸರಾಗವಾಗಿದ್ದರೂ, ಹತ್ತು ಪ್ರಕರಣಗಳಲ್ಲಿ ಒಂದು ಮಾರಕವಾಗಬಹುದು. ಮಕ್ಕಳು ವಿಶೇಷವಾಗಿ ಒಳಗಾಗುತ್ತಾರೆ.

 3. ರೋಗನಿರ್ಣಯಕ್ಕೆ PCR ಪರೀಕ್ಷೆಗಳ ಅಗತ್ಯವಿದೆ

3. ರೋಗನಿರ್ಣಯಕ್ಕೆ PCR ಪರೀಕ್ಷೆಗಳ ಅಗತ್ಯವಿದೆ

ಚಿಕನ್‌ಪಾಕ್ಸ್‌ ಮತ್ತು ದಡಾರದಂತಹ ಅನೇಕ ಇತರ ಕಾಯಿಲೆಗಳಲ್ಲಿ ದದ್ದುಗಳು ಕಂಡುಬರುವುದರಿಂದ, ಮಂಕಿಪಾಕ್ಸ್‌ ಅನ್ನು ಗುರುತಿಸಲು WHO ರೋಗನಿರ್ಣಯವನ್ನು ಶಿಫಾರಸು ಮಾಡುತ್ತದೆ. WHO ಪ್ರಕಾರ ಈ ರೋಗ ನಿರ್ಣಯದ ಬಗ್ಗೆ ಖಚಿತಗೊಳ್ಳಲು ಪಿಸಿಆರ್ ಪರೀಕ್ಷೆ ಕಡ್ಡಾಯ.

4. ನಿಕಟ ಸಂಪರ್ಕದ ಮೂಲಕ ಮಂಕಿಪಾಕ್ಸ್‌ ಹರಡಬಹುದು

4. ನಿಕಟ ಸಂಪರ್ಕದ ಮೂಲಕ ಮಂಕಿಪಾಕ್ಸ್‌ ಹರಡಬಹುದು

ವೈರಸ್ ಸಾಮಾನ್ಯವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಮಳೆಕಾಡುಗಳಲ್ಲಿ ಕಂಡುಬರುವ ದಂಶಕಗಳು ಮತ್ತು ಪ್ರೈಮೇಟ್‌ಗಳಂತಹ ಸೋಂಕಿತ ಕಾಡು ಪ್ರಾಣಿಗಳಿಂದ ಜನರಿಗೆ ಹರಡುತ್ತದೆ. ಅಲ್ಲದೆ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಂಭವವಿರಬಹುದು. ಎಬೋಲಾದಂತಹ ವೈರಸ್‌ಗಳಂತೆಯೇ, ಮಂಕಿಪಾಕ್ಸ್‌ ಸಹ ರೋಗ ಲಕ್ಷಣದ ವ್ಯಕ್ತಿಯ ಜತೆಗಿನ ನಿಕಟ ಸಂಪರ್ಕದಿಂದ ಗಾಯಗಳು, ದೇಹದ ದ್ರವಗಳು ಅಥವಾ ಬಟ್ಟೆಗಳಂತಹ ಕಲುಷಿತ ವಸ್ತುಗಳ ಸಂಪರ್ಕದ ಮೂಲಕ ಹರಡುತ್ತದೆ.

5. ಸದ್ಯ ಮಂಕಿಪಾಕ್ಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ!

5. ಸದ್ಯ ಮಂಕಿಪಾಕ್ಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ!

ಪ್ರಸ್ತುತ WHO ನಿಂದ ಮಂಕಿಪಾಕ್ಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗಿಲ್ಲ, ಆದರೆ ಟೆಕೊವಿರಿಮಾಟ್‌ನಂತಹ ಆರ್ಥೋಪಾಕ್ಸ್‌ವೈರಸ್‌ಗಳನ್ನು ಎದುರಿಸಲು ಪರವಾನಗಿ ಪಡೆದ ಆಂಟಿವೈರಲ್‌ಗಳಿವೆ. ಸದ್ಯ ಇದನ್ನೇ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ.

English summary

What You Need to Know About Monkeypox in Kannada

Here we are discussing about What You Need to Know About Monkeypox in Kannada. Read more.
Story first published: Friday, July 15, 2022, 14:23 [IST]
X
Desktop Bottom Promotion